Azmatullah Omarzai Breaks Suryakumar Yadav’s Record: Fastest Fifty in Asia Cup T20 | ಕ್ರೀಡೆ

Azmatullah Omarzai Breaks Suryakumar Yadav’s Record: Fastest Fifty in Asia Cup T20 | ಕ್ರೀಡೆ

Last Updated:

ಹಾಂಗ್​ ಕಾಂಗ್​​ ವಿರುದ್ಧ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅಫ್ಘಾನ್ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಅವರು ಕೇವಲ ಇಪ್ಪತ್ತು ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 21 ಎಸೆತಗಳನ್ನು ಎದುರಿಸಿದ ಈ ಬಲಗೈ ಬ್ಯಾಟ್ಸ್‌ಮನ್ 53 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ ಸೇರಿದ್ದವು.

ಅಜ್ಮತ್​ವುಲ್ಲಾ ಒಮರ್ಝೈಅಜ್ಮತ್​ವುಲ್ಲಾ ಒಮರ್ಝೈ
ಅಜ್ಮತ್​ವುಲ್ಲಾ ಒಮರ್ಝೈ

2025ರ ಏಷ್ಯಾ ಕಪ್ (Asia Cup) ಟೂರ್ನಿಯನ್ನು ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ತಂಡ ಅದ್ಭುತ ಗೆಲುವಿನೊಂದಿಗೆ ಆರಂಭಿಸಿತು. ಹಾಂಗ್ ಕಾಂಗ್ (Hong Kong) ತಂಡವನ್ನು 94 ವಿಕೆಟ್‌ಗಳಿಂದ ಸೋಲಿಸಿ ಈ ಟೂರ್ನಿಯಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿತ್ತು. ಮಂಗಳವಾರ ಅಬುಧಾಬಿಯಲ್ಲಿ ಪ್ರಾರಂಭವಾದ ಈ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ, ಗ್ರೂಪ್- ‘ಬಿ’ ಭಾಗವಾಗಿರುವ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ (AFG vs Hong Kong) ಪರಸ್ಪರ ಮುಖಾಮುಖಿಯಾದವು.

ಟಾಸ್ ಗೆದ್ದ ನಂತರ, ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು. ಆರಂಭಿಕ ಸೆದಿಕುಲ್ಲಾ ಅಜೇಯ ಅರ್ಧಶತಕ (52 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳು) ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು, ಆದರೆ ನಾಲ್ಕನೇ ಸ್ಥಾನದಲ್ಲಿ ಬಂದ ಮೊಹಮ್ಮದ್ ನಬಿ (26 ಎಸೆತಗಳಲ್ಲಿ 33) ಉತ್ತಮ ಪ್ರದರ್ಶನ ನೀಡಿದ್ದರು.

ಆದರೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅಫ್ಘಾನ್ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಅವರು ಕೇವಲ ಇಪ್ಪತ್ತು ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 21 ಎಸೆತಗಳನ್ನು ಎದುರಿಸಿದ ಈ ಬಲಗೈ ಬ್ಯಾಟ್ಸ್‌ಮನ್ 53 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ ಸೇರಿದ್ದವು.

ಸೂರ್ಯಕುಮಾರ್ ದಾಖಲೆ ಬ್ರೇಕ್

ಈ ಅನುಕ್ರಮದಲ್ಲಿ, ಒಮರ್‌ಝೈ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನಲ್ಲಿ ಅವರು ಅತ್ಯಂತ ವೇಗವಾಗಿ ಅರ್ಧಶತಕ ಗಳಿಸಿದ ದಾಖಲೆಯನ್ನು ಸಾಧಿಸಿದರು. ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿದ್ದ ಆಲ್​ಟೈಮ್ ದಾಖಲೆ ಈಗ ಒಮರ್ಝೈ ಪಾಲಾಯಿತು.

2022ರ ಏಷ್ಯಾಕಪ್​​ನಲ್ಲಿ, ಸೂರ್ಯ ಹಾಂಗ್ ಕಾಂಗ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಮರ್‌ಜೈ ಇತ್ತೀಚೆಗೆ ಈ ದಾಖಲೆಯನ್ನು ಮುರಿದರು. ಇದಲ್ಲದೆ, ಅವರು ಅಫ್ಘಾನಿಸ್ತಾನದ ಪರ ಟಿ20ಯಲ್ಲಿ ಅತಿ ವೇಗದ ಐವತ್ತು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಕೇವಲ 94 ರನ್ ಗಳಿಸಿದರು

ಅಫ್ಘಾನಿಸ್ತಾನ ನಿಗದಿಪಡಿಸಿದ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹಾಂಗ್ ಕಾಂಗ್ ಕೇವಲ 94 ರನ್​ಗಳಿಸಿ ಹೀನಾಯ ಸೋಲು ಕಂಡಿತು. ಆರಂಭಿಕರಾದ ಜೀಶನ್ ಅಲಿ (5) ಮತ್ತು ಅಂಶುಮಾನ್ ರಾತ್ (0) ನಿರಾಶಾದಾಯಕ ಪ್ರದರ್ಶನ ನೀಡಿದರು. ನಂತರ ಬಂದ ನಿಜಾಮ್ ಖಾನ್ (0), ಕಿಂಚಿತ್ ಶಾ (6), ಐಜಾಜ್ ಖಾನ್ (6) ಮತ್ತು ಎಶಾನ್ ಖಾನ್ (6) ಸಂಪೂರ್ಣವಾಗಿ ವಿಫಲರಾದರು. ಒನ್ ಡೌನ್ ನಲ್ಲಿ ಬಂದ ಬಾಬರ್ ಹಯಾತ್ 39 ರನ್ ಗಳಿಸಿ ಹಾಂಗ್ ಕಾಂಗ್ ಪರ ಗರಿಷ್ಠ ರನ್ ಗಳಿಸಿದರೆ, ನಾಯಕ ಯಾಸಿಮ್ ಮೊರ್ತಾಜಾ 16 ರನ್ ಗಳಿಸಿ ಎರಡಂಕಿ ದಾಟಿದ ಆಟಗಾರರರೆನಿಸಿಕೊಂಡರು.

ಅಫ್ಘಾನ್ ಬೌಲರ್ ಗಳಲ್ಲಿ, ಫಜಲ್ಹಕ್ ಫಾರೂಕಿ ಮತ್ತು ಗುಲ್ಬಾದಿನ್ ನೈಬ್ ತಲಾ ಎರಡು ವಿಕೆಟ್ ಪಡೆದರೆ, ಅಜ್ಮತ್​ವುಲ್ಲಾ ಒಮರ್ಜೈ, ನಾಯಕ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಆಲ್​ರೌಂಡ್ ಪದರ್ಶನಕ್ಕಾಗಿ ಪ್ರದರ್ಶನಕ್ಕಾಗಿ ಅಜ್ಮತ್​ವುಲ್ಲಾ ಒಮರ್‌ಝೈ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಗೆದ್ದರು.

ಏಷ್ಯನ್ ಟಿ20 ಟೂರ್ನಮೆಂಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ

ಅಜ್ಮತುಲ್ಲಾ ಒಮರ್‌ಜೈ (ಅಫ್ಘಾನಿಸ್ತಾನ) – ಹಾಂಗ್ ಕಾಂಗ್ ವಿರುದ್ಧ 20 ಎಸೆತಗಳು

ಸೂರ್ಯಕುಮಾರ್ ಯಾದವ್ (ಭಾರತ) – ಹಾಂಗ್ ಕಾಂಗ್ ವಿರುದ್ಧ 22 ಎಸೆತಗಳು

ರಹಮಾನಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) – ಶ್ರೀಲಂಕಾ ವಿರುದ್ಧ 22 ಎಸೆತಗಳು

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asia Cup 2025: ಏಷ್ಯಾಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಅಫ್ಘಾನ್ ಪ್ಲೇಯರ್! ಸೂರ್ಯಕುಮಾರ್​ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆ ಬ್ರೇಕ್!