Asia Cup 2025: ಹಾಂಕ್​ಕಾಂಗ್​ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ! | Bangladesh Wins Toss, Eyes Big Win Over Struggling Hong Kong in Asia Cup | ಕ್ರೀಡೆ

Asia Cup 2025: ಹಾಂಕ್​ಕಾಂಗ್​ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ! | Bangladesh Wins Toss, Eyes Big Win Over Struggling Hong Kong in Asia Cup | ಕ್ರೀಡೆ

Last Updated:

ಅಬುಧಾಬಿ: ಏಷ್ಯಾ ಕಪ್ 2025 ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಹಾಂಗ್‌ಕಾಂಗ್ ತಂಡಗಳು ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬೌಲಿಂಗ್ ಆಯ್ಕೆ ಮಾಡಿದೆ. ಹಾಂಗ್‌ಕಾಂಗ್ ತಂಡ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸೋತ ನಂತರ ಕಮ್​ಬ್ಯಾಕ್ ಮಾಡುವ ಪ್ರಯತ್ನದಲ್ಲಿದೆ.

ಹಾಂಕ್​ ಕಾಂಗ್​ vs ಬಾಂಗ್ಲಾದೇಶಹಾಂಕ್​ ಕಾಂಗ್​ vs ಬಾಂಗ್ಲಾದೇಶ
ಹಾಂಕ್​ ಕಾಂಗ್​ vs ಬಾಂಗ್ಲಾದೇಶ

ಅಬುಧಾಬಿ: ಏಷ್ಯಾ ಕಪ್ 2025 (Asia Cup) ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಹಾಂಗ್‌ಕಾಂಗ್ (Bangladesh vs Hong Kong) ತಂಡಗಳು ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬೌಲಿಂಗ್ ಆಯ್ಕೆ ಮಾಡಿದೆ. ಹಾಂಗ್‌ಕಾಂಗ್ ತಂಡ  ಹಾಂಗ್‌ಕಾಂಗ್ ಮಂಗಳವಾರ ಸೆಪ್ಟೆಂಬರ್ 9ರಂದು ಇದೇ ಸ್ಥಳದಲ್ಲಿ ಅಫ್ಘಾನಿಸ್ತಾನ ವಿರುದ್ಧ 94 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು, ಇಂದು ಸೋತರೆ ಸೂಪರ್ 4ಕ್ಕೆ ಹೊರಹೊಮ್ಮುವ ಸಾಧ್ಯತೆ ಅಂತ್ಯವಾಗಲಿದೆ. ಇದರಿಂದ ಹಾಂಗ್‌ಕಾಂಗ್ ತಂಡದ ಬಾಂಗ್ಲಾದೇಸದ ವಿರುದ್ಧ ತಿರುಗಿ ಬೀಳುವ ಆಲೋಚನೆಯಲ್ಲಿದೆ.

ಇನ್ನೊಂದೆಡೆ, ಬಾಂಗ್ಲಾದೇಶ ತಂಡ ಶ್ರೀಲಂಕಾ, ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧದ ಕಡೆಯ ಮೂರು T20I ಸರಣಿಗಳನ್ನು ಗೆದ್ದ ಆತ್ಮವಿಶ್ವಾಸದಲ್ಲಿ  ಏಷ್ಯಾ ಕಪ್‌ನಲ್ಲಿ ಉತ್ತಮ ಆರಂಭ ಮಾಡಲು ಉತ್ಸುಕವಾಗಿದೆ. ಈ ಪಂದ್ಯ ಗುಂಪು Bಯಲ್ಲಿ ಮುಖ್ಯವಾಗಿದ್ದು, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿವೆ.  

ಶುಭಾರಂಭದ ನಿರೀಕ್ಷೆಯಲ್ಲಿ ಬಾಂಗ್ಲಾ

ಬಾಂಗ್ಲಾದೇಶದ ಗೆಲುವಿನ ಜೋರುಬಾಂಗ್ಲಾದೇಶ ತಂಡ ನಾಯಕ ಲಿಟ್‌ಟನ್ ದಾಸ್ ನೇತೃತ್ವದಲ್ಲಿ ಇದು ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದು, ಕಡೆಯ ಮೂರು T20I ಸರಣಿಗಳ ಗೆಲುವಿನಿಂದ ಆತ್ಮವಿಶ್ವಾಸದಲ್ಲಿದೆ.  ಗುಂಪು Bಯಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಸಹ ಇದ್ದು, ಬಾಂಗ್ಲಾದೇಶ ಹಾಂಗ್‌ಕಾಂಗ್ ವಿರುದ್ಧ ದೊಡ್ಡ ಮಾರ್ಜಿನ್‌ನ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್‌ನಲ್ಲಿ ಮುಂದೆ ಸ್ಥಾನ ಪಡೆಯಲು ಬಯಸುತ್ತಿದೆ.  ಲಿಟ್‌ಟನ್ ದಾಸ್, ತೌಹಿದ್ ಹೃದಯ್, ಮತ್ತು ರಿಶಾದ್ ಹೊಸೈನ್‌ರಂತಹ ಆಟಗಾರರು ತಂಡದ ಬಲವಾಗಿದ್ದಾರೆ. 

ಹಾಂಗ್‌ಕಾಂಗ್‌ನ ಸೋಲಿನ ಒತ್ತಡ

ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯಿಂದ ತತ್ತರಿಸಿದ್ದ ಹಾಂಗ್‌ಕಾಂಗ್ ತಂಡ  ಇದೀಗ ಅವರು ಬಾಂಗ್ಲಾದೇಶದ ವಿರುದ್ಧ  ಕಮ್​ಬ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಬಾಬರ್ ಹಯಾತ್ ಮತ್ತು ನಿಜಾಕತ್ ಖಾನ್‌ರಂತಹ ಅನುಭವಿ ಆಟಗಾರರು ತಂಡದ ಹೋಪ್, ಆದರೆ ಬಾಂಗ್ಲಾದೇಶದ ಶಕ್ತಿಶಾಲಿ ತಂಡದ ಮುಂದೆ ಸವಾಲು ದೊಡ್ಡದು. ಹಾಂಗ್‌ಕಾಂಗ್ 2014ರ T20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು, ಆ ದಾಖಲೆಯನ್ನು ಮರುಸೃಷ್ಟಿಸಲು ಬಯಸುತ್ತದೆ.

ಪ್ಲೇಯಿಂಗ್ ಇಲೆವೆನ್

ಬಾಂಗ್ಲಾದೇಶ (ಪ್ಲೇಯಿಂಗ್ XI): ಪರ್ವೇಜ್ ಹೊಸೈನ್ ಎಮನ್, ತಂಜಿದ್ ಹಸನ್ ತಮೀಮ್, ಲಿಟ್ಟನ್ ದಾಸ್ (w/c), ತೌಹಿದ್ ಹೃದೋಯ್, ಶಮೀಮ್ ಹೊಸೈನ್, ಜೇಕರ್ ಅಲಿ, ಮಹೇದಿ ಹಸನ್, ರಿಶಾದ್ ಹೊಸೈನ್, ತಂಝಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್

ಹಾಂಗ್ ಕಾಂಗ್ (ಪ್ಲೇಯಿಂಗ್ XI): ಜೀಶನ್ ಅಲಿ (ವಿಕೀ), ಅಂಶುಮಾನ್ ರಾತ್, ಬಾಬರ್ ಹಯಾತ್, ನಿಜಾಕತ್ ಖಾನ್, ಕಲ್ಹನ್ ಚಲ್ಲು, ಕಿಂಚಿತ್ ಶಾ, ಯಾಸಿಮ್ ಮುರ್ತಾಜಾ (ನಾಯಕ), ಐಜಾಜ್ ಖಾನ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್