Last Updated:
ದಕ್ಷಿಣ ಕನ್ನಡದಲ್ಲಿ ನವಿಲುಗಳು ಮನೆ ಬಾಗಿಲವರೆಗೂ ಬರುತ್ತಿವೆ, ಕೃಷಿಭೂಮಿ ವಿಸ್ತರಣೆ ಕಾರಣ ಕಾಡು ನಾಶವಾಗಿ ನವಿಲುಗಳ ಹಿಂಡುಗಳು ಕೃಷಿತೋಟಗಳಲ್ಲಿ ಆಹಾರ ಹುಡುಕುತ್ತಿವೆ.
ದಕ್ಷಿಣ ಕನ್ನಡ: ಕಾಡು (Forest) ನಾಶವೋ, ಸಂತತಿಯ ವೃದ್ಧಿಯೋ ಏನೋ, ಇಂದು ಎಲ್ಲೆಡೆ ನವಿಲುಗಳ (Peacock) ಓಡಾಟ ಹೆಚ್ಚಾಗಿದೆ. ಕೆಲವು ವರ್ಷಗಳ ಹಿಂದೆ ನವಿಲುಗಳನ್ನು ನೋಡಲು ಯಾವುದೋ ಪ್ರಾಣಿ ಸಂಗ್ರಹಾಲಯಕ್ಕೆ (Zoo) ಹೋಗಬೇಕಾಗಿತ್ತು. ಆದರೆ ಇಂದು ಬಹುತೇಕ ಎಲ್ಲಾ ಕಡೆಗಳಲ್ಲಿ ನವಿಲುಗಳು ಕಾಣಸಿಗೋದು ಸಾಮಾನ್ಯವಾಗಿದೆ. ಮನುಷ್ಯ ತನ್ನ ಕೃಷಿಭೂಮಿ ವಿಸ್ತರಣೆಯ ಪೈಪೋಟಿಯಲ್ಲಿ ಇದ್ದಬದ್ದ ಗುಡ್ಡ-ಕಾಡುಗಳನ್ನು ನೆಲಸಮ ಮಾಡಲಾಗುತ್ತಿದ್ದು, ಗುಡ್ಡಗಳ ಕುರುಚಲು ಕಾಡುಗಳ ಮಧ್ಯೆ ಇದ್ದ ನವಿಲುಗಳು ಇಂದು ಮನೆ ಬಾಗಿಲವರೆಗೂ ಬರಲಾರಂಭಿಸಿವೆ. ಇನ್ನು ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲುಗಳ ನರ್ತನದ (Dance) ಅಪರೂಪದ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಇಲ್ಲಿ ನೋಡಿ ನವಿಲಣ್ಣನ ನೃತ್ಯ.
ತನ್ನ ಸಂಗಾತಿಯನ್ಮು ತನ್ನತ್ತ ಆಕರ್ಷಿಸಲು ಗಂಡು ನವಿಲುಗಳು ಹುಲುಸಾಗಿ ಬೆಳೆದ ಗರಿಗಳನ್ನು ಚದುರಿ, ನರ್ತಿಸುವ ದೃಶ್ಯ ಕಣ್ಮನ ಸೆಳೆಯುತ್ತದೆ. ಕಣ್ಣುಗಳ ಆಕಾರ ಹೊದಿರುವ ಗರಿಗಳನ್ನು ಹಿಂದೆಯೊಮ್ಮೆ, ಮುಂದೆಯೊಮ್ಮೆ ತೂಗಾಡಿಸುವ ನವಿಲು ಒಂದು ಕ್ಷಣ ಎಲ್ಲರನ್ನೂ ತನ್ನತ್ತ ಸೆಳೆಯುತ್ತವೆ. ಸಂಘ ಜೀವಿಗಳಾಗಿ ಬದುಕುವ ಈ ನವಿಲುಗಳ ಹಿಂಡಿನಲ್ಲಿ ಹತ್ತಕ್ಕೂ ಮಿಕ್ಕಿದ ನವಿಲುಗಳು ಜೊತೆಯಾಗಿಯೇ ಬದುಕುತ್ತವೆ.
ಹಿಂದೆ ಕಾಡಿನಲ್ಲಿ ಸಿಕ್ಕ ಹುಳ-ಹಾವುಗಳನ್ನು ತಿಂದು ಬದುಕುತ್ತಿದ್ದ ನವಿಲುಗಳು ಇಂದು ಕೃಷಿತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಲ್ಲಿ ಸಿಗುವ ಆಹಾರವನ್ನು ತಿಂದು ಬದುಕುತ್ತಿವೆ.
Dakshina Kannada,Karnataka
September 12, 2025 9:20 AM IST