Hardik Pandya: ಏಷ್ಯಾಕಪ್​​ ಬಹುಮಾನ ಮೊತ್ತಕ್ಕಿಂತಲೂ 8 ಪಟ್ಟು ದುಬಾರಿ ಹಾರ್ದಿಕ್ ಪಾಂಡ್ಯರ ಈ ವಾಚ್! ರಾಫೆಲ್ ನಡಾಲ್​ಗೂ ಆ ವಾಚ್​​ಗೂ ಇದೆ ಲಿಂಕ್! | Asia Cup Prize Money Can’t Buy Hardik Pandya’s Luxury Watch: Rafael Nadal’s Connection Revealed | ಕ್ರೀಡೆ

Hardik Pandya: ಏಷ್ಯಾಕಪ್​​ ಬಹುಮಾನ ಮೊತ್ತಕ್ಕಿಂತಲೂ 8 ಪಟ್ಟು ದುಬಾರಿ ಹಾರ್ದಿಕ್ ಪಾಂಡ್ಯರ ಈ ವಾಚ್! ರಾಫೆಲ್ ನಡಾಲ್​ಗೂ ಆ ವಾಚ್​​ಗೂ ಇದೆ ಲಿಂಕ್! | Asia Cup Prize Money Can’t Buy Hardik Pandya’s Luxury Watch: Rafael Nadal’s Connection Revealed | ಕ್ರೀಡೆ

Last Updated:

ರಿಚರ್ಡ್ ಮಿಲ್ RM 27-04 ವಾಚ್ ಅತ್ಯಂತ ಅತ್ಯಾಧುನಿಕ ಹಾಗೂ ಲೈಟ್​ವೇಟ್​ ವಾಚ್ ಆಗಿದೆ. ಸ್ಟ್ರ್ಯಾಪ್ ಸೇರಿದಂತೆ ಕೇವಲ 30 ಗ್ರಾಂ ತೂಕವಿದೆ. 12,000 ಗ್ರಾಂ ಗಿಂತ ಹೆಚ್ಚಿನ ಬಲವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಬ್ರ್ಯಾಂಡ್‌ಗೆ ಹೊಸ ದಾಖಲೆಯಾಗಿದೆ.

ಹಾರ್ದಿಕ್ ಪಾಂಡ್ಯಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಏಷ್ಯಾ ಕಪ್ 2025 (Asia Cup) ಟೂರ್ನಮೆಂಟ್ ಸೆಪ್ಟೆಂಬರ್ 9ರಂದು ಅಬು ಧಾಬಿಯಲ್ಲಿ ಆರಂಭವಾಗಿದ್ದು, ಭಾರತ ತಂಡ ಸೂರ್ಯಕುಮಾರ್ ಯಾದವ್ (Surya Kumar Yadav) ಅವರ ನಾಯಕತ್ವದಲ್ಲಿ ಸೆಪ್ಟೆಂಬರ್ 10ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿರುದ್ಧ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ. ಈ ಮಧ್ಯೆ ಮೈದಾನದಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಸ್ಟಾರ್ ಆಲ್​​ರೌಂಡರ್​ ಧರಿಸಿದ ಐಷಾರಾಮಿ ಗಡಿಯಾರ ಕ್ರೀಡಾ ಲೋಕದಲ್ಲಿ ಸಖತ್ ಚರ್ಚೆಗೀಡಾಗುತ್ತಿದೆ. ಈ ವಾಚ್​ ಈ ರೀತಿ ಸದ್ದು ಮಾಡಲು ಪ್ರಮುಖ ಕಾರಣವೆಂದರೆ ಅದರ ಬೆಲೆ. ಆ ವಾಚ್​​ ಬೆಲೆ ಎಷ್ಟಿದೆ ಎಂದರೆ ಏಷ್ಯಾಕಪ್​​ ವಿಜೇತರಿಗೆ ನೀಡುವ ಪ್ರಶಸ್ತಿ ಮೊತ್ತದ 9ರಿದ 10 ಪಟ್ಟಿದೆ.

ಏಷ್ಯಾಕಪ್​​ಗೂ ಮುನ್ನ ತರಬೇತಿ ಸೆಷನ್‌ನಲ್ಲಿ ಹಾರ್ದಿಕ್ ಪಾಂಡ್ಯಾ ರಿಚರ್ಡ್ ಮಿಲ್ RM 27-04 ವಾಚ್​ ಧರಿಸಿದ್ದರು. ವಾಚ್ ಸ್ಪಾಟರ್ ಪ್ರಕಾರ, ಈ ಗಡಿಯಾರಂಗೆ ಬೆಲೆ ಸುಮಾರು 20 ಕೋಟಿ ರೂಪಾಯಿ! ಎಂದು ತಿಳಿದುಬಂದಿದೆ. ಟೆನ್ನಿಸ್ ಸ್ಟಾರ್ ರಾಫೆಲ್ ನಡಾಲ್‌ರೊಂದಿಗಿನ ಸಹಭಾಗಿತ್ವದಲ್ಲಿ ತಯಾರಿಸಿದ ವಿಶೇಷ ಆವೃತ್ತಿ ಇದು. ವಿಶ್ವಾದ್ಯಂತ ಕೇವಲ 50 ವಾಚ್​ ಮಾತ್ರ ಲಭ್ಯವಿವೆ, ಇದು ಅತ್ಯಂತ ಅಪೂರ್ವ ಮತ್ತು ಐಷಾರಾಮಿ ಕೈಗಡಿಯಾರಗಳಲ್ಲಿ ಒಂದಾಗಿದೆ.

ಈ ವಾಚ್​ ವಿಶೇಷತೆಗಳೇನು?

ರಿಚರ್ಡ್ ಮಿಲ್ RM 27-04 ವಾಚ್ ಅತ್ಯಂತ ಅತ್ಯಾಧುನಿಕ ಹಾಗೂ ಲೈಟ್​ವೇಟ್​ ವಾಚ್ ಆಗಿದೆ. ಸ್ಟ್ರ್ಯಾಪ್ ಸೇರಿದಂತೆ ಕೇವಲ 30 ಗ್ರಾಂ ತೂಕವಿದೆ. 12,000 ಗ್ರಾಂ ಗಿಂತ ಹೆಚ್ಚಿನ ಬಲವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಬ್ರ್ಯಾಂಡ್‌ಗೆ ಹೊಸ ದಾಖಲೆಯಾಗಿದೆ.  ಮೂವ್​ಮೆಂಟ್​ ಸ್ಟೀಲ್ ಕೇಬಲ್‌ನಿಂದ ಮಾಡಿದ ಸಣ್ಣ ಮೆಸ್​​ ಬೆಂಬಲಿಸಲಾಗಿದ್ದು, ಗೋಲ್ಡ್ ಟೆನ್ಷನರ್‌ಗಳೊಂದಿಗೆ ಸ್ಥಿರಗೊಳಿಸಲಾಗಿದೆ. ಟೆನ್ನಿಸ್ ಸ್ಟಾರ್ ರಾಫೇಲ್ ನಡಾಲ್‌ರೊಂದಿಗಿನ ಸಹಭಾಗಿತ್ವದಿಂದ ತಯಾರಿಸಲ್ಪಟ್ಟಿದ್ದು, ಈ ರೀತಿಯ ಸ್ಪೋರ್ಟ್ಸ್ ವ್ಯಕ್ತಿಗಳು ಒಬ್ಬರಿಗೊಬ್ಬರು ಮಧ್ಯೆಯ ಆಳವಾದ ನಂಬಿಕೆ ಮತ್ತು ಗೌರವದ ಸಂಬಂಧವನ್ನು ಹೊಂದಿದ್ದಾರೆ.

ಏಷ್ಯಾ ಕಪ್ ಪ್ರಶಸ್ತಿ ಮೊತ್ತವೆಷ್ಟು?

ಏಷ್ಯಾ ಕಪ್ 2025 ಸೆಪ್ಟೆಂಬರ್ 28ರವರೆಗೆ ನಡೆಯಲಿದ್ದು, ವರದಿಗಳ ಪ್ರಕಾರ, ಗೆಲ್ಲುವ ತಂಡಕ್ಕೆ ಸುಮಾರು 3 ಲಕ್ಷ ಅಮೆರಿಕನ್ ಡಾಲರ್‌ಗಳು (ಸುಮಾರು 2.6 ಕೋಟಿ ರೂಪಾಯಿ) ಸಿಗುವ ನಿರೀಕ್ಷೆ ಇದೆ, ರನ್ನರ್‌-ಅಪ್‌ಗೆ 1.5 ಲಕ್ಷ ಡಾಲರ್‌ಗಳು (ಸುಮಾರು 1.3 ಕೋಟಿ ರೂಪಾಯಿ). ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ, ಆದರೆ ಈ ಮೊತ್ತಗಳು ಹಿಂದಿನ ಆವೃತ್ತಿಗಿಂತ ಹೆಚ್ಚಿವೆ ಎಂದು ನಂಬಲಾಗಿದೆ.

ಭಾರತ ತಂಡದ ಆಟಗಾರರು

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (ನಾಯಕ), ಉಪನಾಯಕ ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯಾ, ಶಿವಮ್ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಜಸ್‌ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ ರಿಂಕು ಸಿಂಗ್

ಈ ಟೂರ್ನಮೆಂಟ್ T20 ಫಾರ್ಮ್ಯಾಟ್‌ನಲ್ಲಿ ನಡೆಯುತ್ತದ್ದು, ಭಾರತ ತಂಡವು ಹಿಂದಿನ ಚಾಂಪಿಯನ್ ಆಗಿ ಟೈಟಲ್ ರಕ್ಷಿಸಲು ಸಿದ್ಧವಾಗಿದೆ. ಭಾರತ vs ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14ರಂದು ನಡೆಯಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Hardik Pandya: ಏಷ್ಯಾಕಪ್​​ ಬಹುಮಾನ ಮೊತ್ತಕ್ಕಿಂತಲೂ 8 ಪಟ್ಟು ದುಬಾರಿ ಹಾರ್ದಿಕ್ ಪಾಂಡ್ಯರ ಈ ವಾಚ್! ರಾಫೆಲ್ ನಡಾಲ್​ಗೂ ಆ ವಾಚ್​​ಗೂ ಇದೆ ಲಿಂಕ್!