Asia Cup: ಭಾರತ vs ಪಾಕ್​ ಪಂದ್ಯಕ್ಕೆ IPL ತಂಡದಿಂದ ಬಹಿಷ್ಕಾರ! ಬಿಸಿಸಿಐ ವಿರುದ್ಧ ಫ್ಯಾನ್ಸ್, ಮಾಜಿ ಕ್ರಿಕೆಟಿಗನಿಂದಲೂ ಆಕ್ರೋಶ | India vs Pakistan: Punjab Kings and Leading Publications Boycott Asia Cup 2025 Match | ಕ್ರೀಡೆ

Asia Cup: ಭಾರತ vs ಪಾಕ್​ ಪಂದ್ಯಕ್ಕೆ IPL ತಂಡದಿಂದ ಬಹಿಷ್ಕಾರ! ಬಿಸಿಸಿಐ ವಿರುದ್ಧ ಫ್ಯಾನ್ಸ್, ಮಾಜಿ ಕ್ರಿಕೆಟಿಗನಿಂದಲೂ ಆಕ್ರೋಶ | India vs Pakistan: Punjab Kings and Leading Publications Boycott Asia Cup 2025 Match | ಕ್ರೀಡೆ

Last Updated:

ಹಲವು ಅಭಿಮಾನಿಗಳು, ಕೆಲವು ಮಾಧ್ಯಮಗಳು ಮತ್ತು ಸೆಲೆಬ್ರಿಟಿಗಳು ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡುವುದಿಲ್ಲ ಎಂದು ಘೋಷಿಸಿದ್ದಾರೆ. ಅವರು ಪಹಾಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಮತ್ತು ಅವರ ಕುಟುಂಬಗಳಿಗೆ ನೋವುಂಟು ಮಾಡಲು ಬಯಸಲ್ಲ ಎಂದು ತಿಳಿಸಿದ್ದಾರೆ.

ಭಾರತ vs ಪಾಕಿಸ್ತಾನ್ಭಾರತ vs ಪಾಕಿಸ್ತಾನ್
ಭಾರತ vs ಪಾಕಿಸ್ತಾನ್

2025 ಏಷ್ಯಾ ಕಪ್‌ನಲ್ಲಿ (Asia Cup) ಭಾರತ ಮತ್ತು ಪಾಕಿಸ್ತಾನದ (India vs Pakistan) ನಡುವಿನ ಪ್ರಮುಖ ಪಂದ್ಯ  ಹಲವು ಕಾರಣಗಳಿಂದ ಸುದ್ದಿಯಾಗಿದೆ. ಆಟದ ಬಗ್ಗೆ ಚರ್ಚೆಗಿಂತ, ಈ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಭಾರತ ಸರ್ಕಾರ ಮತ್ತು BCCI ಈ 8 ತಂಡಗಳ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದೊಂದಿಗೆ ಆಟವಾಡಲು ಒಪ್ಪಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಪಂದ್ಯವನ್ನು ಕವರ್ ಮಾಡಬಾರದು ಎಂದು ಆಕ್ರೋಶ ವ್ಯಕ್ತವಾಗಿದೆ. ಹಲವು ಮುಂಚೂಣಿ ಕ್ರೀಡಾ ಅಪ್ಡೇಟ್ ಮಾಡುವ ಸಾಮಾಜಿಕ ಜಾಲತಾಣದ ಖಾತೆಗಳು ಮತ್ತು IPL ತಂಡಗಳು ಈ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಈ ಪಂದ್ಯ ಗ್ರೂಪ್ Aನಲ್ಲಿ ಸೆಪ್ಟೆಂಬರ್ 14ರ ಭಾನುವಾರ ದುಬೈಯಲ್ಲಿ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಪಹಾಲ್ಗಾಂ ಭಯೋತ್ಪಾದನಾ ದಾಳಿಯನ್ನು ಮರೆತಿಲ್ಲ ಎಂದು ಸಂದೇಶ ನೀಡುತ್ತಿದ್ದಾರೆ.

ಪಹಾಲ್ಗಾಮ್ ಭಯೋತ್ಪಾದನಾ ದಾಳಿ

ಈ ವರ್ಷದ ಏಪ್ರಿಲ್ 22ರಂದು ಭಾರತದ ಕಾಶ್ಮೀರದ ಪಹಾಲ್ಗಾಂನಲ್ಲಿ ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು 26 ಮಂದಿ ಮುಗ್ದ ಪ್ರವಾಸಿಗಳನ್ನು ಕೊಂದಿದ್ದರು. ಇದು 2019ರ ಪುಲ್ವಾಮಾ ಬಾಂಬ್ ಸ್ಫೋಟದ ನಂತರ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ದಾಳಿಯಾಗಿತ್ತಯ. ಈ ಘಟನೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮೇ ತಿಂಗಳ ಮೊದಲ ವಾರದಲ್ಲಿ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಪ್ರತಿದಾಳಿ ನಡೆಸಿತು. PoK (ಪಾಕ್ ಆಕ್ರಮಿತ ಕಾಶ್ಮೀರ) ಮತ್ತು ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳ ಮೇಲೆ  ವಾಯು ದಾಳಿ ನಡೆಸಿ ಅನೇಕ ಭಯೋತ್ಪಾದಕರನ್ನು ಕೊಂದು ಹಾಕಿತ್ತು. ಇದರಿಂದ ಗಡಿಯಾಚೆಗಿನ ಯುದ್ಧದಂತಹ ಸ್ಥಿತಿ ಉಂಟಾಗಿ, ಎರಡು ದೇಶಗಳು ಭಾರಿ ಒಂದೆರಡು ದಿನ ದಾಳಿ -ಪ್ರತಿದಾಳಿ ನಡೆಸಿದವು. ಯುದ್ಧದ ವಾತಾವರಣ ದೊಡ್ಡದಾಗುತ್ತಿದ್ದ  ಪಾಕಿಸ್ತಾನದ ಮನವಿ ಮೇರೆಗೆ ಭಾರತ ಶಾಂತಿ ಒಪ್ಪಂದ ಮಾಡಿಕೊಂಡಿತ್ತು.

ಈ ಘಟನೆಯ ನಂತರ ಕೆಲವು ತಿಂಗಳುಗಳ ಕಾಲ ಸ್ಪೋರ್ಟ್ಸ್‌ನಲ್ಲಿ ಎರಡು ದೇಶಗಳ ನಡುವಿನ ಸಹಭಾಗಿತ್ವದ ಬಗ್ಗೆ ಸ್ಥಗಿತಗೊಂಡಿತ್ತು. ಬಿಸಿಸಿಐ, ಕ್ರೀಡಾ ಸಚಿವಾಲಯ ಪಾಕಿಸ್ತಾನದೊಂದಿಗೆ ಶಾಶ್ವತ ದ್ವಿಪಕ್ಷೀಯ ಸರಣಿಗಳನ್ನ ನಿಷೇಧ ಮಾಡಲಾಗಿತ್ತು. ಆದರೆ BCCI  ಸೆಪ್ಟೆಂಬರ್ 9ರಂದು ಆರಂಭವಾದ ಏಷ್ಯಾಕಪ್​ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಟವಾಡಲು ಒಪ್ಪಿದ್ದು ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿದೆ. ಹಿಂದಿನ ಘಟನೆಗಳ ಹೊರತಾಗಿಯೂ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳು ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಭಾರತ-ಪಾಕ್ ಭಹಿಷ್ಕರಣ

ಬಿಸಿಸಿಐ ನಡೆಯನ್ನ ಹಲವು ಅಭಿಮಾನಿಗಳು  ಮತ್ತು ಸೆಲೆಬ್ರಿಟಿಗಳು ಈ ಪಂದ್ಯವನ್ನು ನೋಡುವುದಿಲ್ಲ ಎಂದು ಘೋಷಿಸಿದ್ದಾರೆ. ಅವರು ಪಹಾಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಮತ್ತು ಅವರ ಕುಟುಂಬಗಳಿಗೆ ನೋವುಂಟು ಮಾಡಲು ಬಯಸಲ್ಲ ಎಂದು ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿಚಿತ್ರ ಪೋಸ್ಟ್

IPL ತಂಡಗಳಲ್ಲಿ ಪಂಜಾಬ್ ಕಿಂಗ್ಸ್ (PBKS) ಮೊದಲು ಈ ಪಂದ್ಯವನ್ನು ಬಹಿಷ್ಕರಿಸಿದೆ. ಸೆಪ್ಟೆಂಬರ್ 11ರಂದು ತಮ್ಮ X (ಟ್ವಿಟರ್) ಖಾತೆಯಲ್ಲಿ ಪಂದ್ಯದ ಬಗ್ಗೆ ಪೋಸ್ಟ್ ಮಾಡಿದ್ದರೂ, ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿಲ್ಲ. “ಗೇಮ್ 2 for the defending champions. Let’s goooo 💪 #AsiaCup2025 #INDv” ಎಂದು ಬರೆದು, ಪಂದ್ಯ ಕಾರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಧ್ವಜವನ್ನೂ ತೋರಿಸಿದೇ ಪೋಸ್ಟ್ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ..

ಸಾಮಾಜಿಕ ಜಾಲತಾಣದ ಖಾತೆಗಳಿಂದ ಭಹಿಸ್ಕಾರ

ಹಲವು ಮುಖ್ಯ ಕ್ರಿಕೆಟ್ ಅಪ್​ಡೇಟ್ ಖಾತೆಗಳು ಈ ಪಂದ್ಯವನ್ನು ಕವರ್ ಮಾಡುವುದಿಲ್ಲ ಎಂದು ನಿರ್ಧರಿಸಿವೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಏಷ್ಯಾಕಪ್ ಪ್ರಚಾರ ವೀಡಿಯೋ ವೈರಲ್ ಆಗುತ್ತಿದ್ಧಂತೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ಅನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.  ವಿಡಿಯೋದಲ್ಲಿ ಕಾಣಿಸಿಕೊಂಡ ಸೆಹ್ವಾಗ್ ಅವರನ್ನು “ಶೇಮ್ ಆನ್ ಯೂ” ಎಂದು ಟೀಕಿಸಲಾಗಿದೆ.

ಮನೋಜ್ ತಿವಾರಿ ಆಕ್ರೋಶ

ಮಾಜಿ ಕ್ರಿಕೆಟರ್ ಮತ್ತು ಪಶ್ಚಿಮ ಬಂಗಾಳ ಸಚಿವ ಮನೋಜ್ ತಿವಾರಿ ಪ್ರತಿಕ್ರಿಯಿಸಿ, “ಪಾಕಿಸ್ತಾನದೊಂದಿಗಿನ ಪಂದ್ಯವನ್ನು ಬಹಿಷ್ಕರಿಸಬೇಕು. ಲೀಗ್​​ನಲ್ಲಿ ಎಲ್ಲಾ ಪಂದ್ಯಗಳನ್ನ ಆಡಲಿ, ಆದರೆ ಪಾಕಿಸ್ತಾನದ ವಿರುದ್ಧ ಮಾತ್ರ ಬೇಡ” ಎಂದು ಹೇಳಿದ್ದಾರೆ. “ಇಂತಹ ಸಂದರ್ಭದಲ್ಲಿ ಆಟವನ್ನ ಆನಂದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ವೈಯಕ್ತಿಕವಾಗಿ ಆ ಪಂದ್ಯವನ್ನ ನೋಡುವುದಿಲ್ಲ ಎಂದು ಹೇಳಿದ್ದಾರೆ.