2022ರ ಏಷ್ಯಾ ಕಪ್ ಗ್ರೂಪ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿತ್ತು. ಆದರೆ, ಕೊನೆಯವರೆಗೂ ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಒಂದು ಹಂತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ, ಹಾರ್ದಿಕ್ ರನ್ ಗಳಿಸಲು ಪ್ರಯತ್ನಿಸದೇ. ನಾನ್-ಸ್ಟ್ರೈಕರ್ ಎಂಡ್ ನಲ್ಲಿರುವ ದಿನೇಶ್ ಕಾರ್ತಿಕ್ ಅವರನ್ನು ನೋಡಿ, ‘ಟೆನ್ಷನ್ ಆಗಬೇಡಿ, ಗೆಲ್ಲಿಸುವುದು ನನ್ನ ಜವಾಬ್ದಾರಿ’ ಎಂದು ಸನ್ನೆ ಮಾಡಿ, ಹೇಳಿದಂತೆ, ಅವರು ಫೋರ್ ಬಾರಿಸಿ ಒಂದು ಚೆಂಡು ಬಾಕಿ ಇರುವಾಗ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು.