Last Updated:
ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯನ್ನು ಸೋಲಿಸಿದಂತೆ, ಟೀಮ್ ಇಂಡಿಯಾ ಕೂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನ ವಾಷ್ಔಟ್ ಮಾಡಿದೆ. ಟೀಮ್ ಇಂಡಿಯಾ ಆಟಗಾರರ ಈ ನಡೆ, ಪಾಕಿಗಳಿಗೆ ಖಡಕ್ ಸಂದೇಶದಂತೆ ಕಂಡಿದೆ.
ದುಬೈ (ಸೆ.15): ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ “ಎ” ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯನ್ನು ಸೋಲಿಸಿದಂತೆ, ಟೀಮ್ ಇಂಡಿಯಾ ಕೂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನ ವಾಷ್ಔಟ್ ಮಾಡಿದೆ. ಭಾರತವು ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ. ಇಂಡಿಯಾ-ಪಾಕ್ ಮ್ಯಾಚ್ ವೇಳೆ ನಮ್ಮ ಭಾರತೀಯ ಆಟಗಾರರ ಈ ವರ್ತನೆ ಪಾಕಿಗಳಿಗೆ ಖಡಕ್ ಸಂದೇಶ ನೀಡಿದಂತಿದೆ.
ಪಂದ್ಯದ ನಂತರ, ಭಾರತೀಯ ತಂಡದ ಆಟಗಾರರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಕೈಕುಲುಕಲಿಲ್ಲ. ಪಂದ್ಯ ಗೆದ್ದ ತಕ್ಷಣ, ಭಾರತೀಯ ತಂಡದ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ತೆರಳಿದ್ರು. ಇತ್ತ ಪಾಕಿಸ್ತಾನಿ ಆಟಗಾರರು ಶೇಕ್ ಹ್ಯಾಂಡ್ ಗಳಿಗಾಗಿ ಕಾಯುತ್ತಿದ್ದಾಗ, ಭಾರತೀಯ ತಂಡದ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಹೋಗಿ ಬಾಗಿಲು ಮುಚ್ಚಿದ್ದಾರೆ. ಇದು ಪಾಕ್ ಆಟಗಾರರ ಮುಖದಲ್ಲಿ ನಿರಾಸೆ ಮೂಡಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾವು ಎಂದು ನಿಮ್ಮನ್ನ ಕ್ಷಮಿಸಲ್ಲ ಅನ್ನೋ ಖಡಕ್ ಸಂದೇಶವನ್ನು ಟೀಮ್ ಇಂಡಿಯಾ ಆಟಗಾರರು ನೀಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಗೆಲುವಿನ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ಮುಂದಾಗಲಿಲ್ಲ. ಇದಕ್ಕೂ ಮೊದಲು, ಟಾಸ್ ಸಮಯದಲ್ಲಿಯೂ ಸಹ, ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಸಲ್ಮಾನ್ ಅಗಾ ಕೈಕುಲುಕಲಿಲ್ಲ.
ಪಂದ್ಯದ ನಂತರ ಪಾಕಿಸ್ತಾನ ತಂಡವು ಕೈಕುಲುಕಲು ಎದುರು ನೋಡುತ್ತಿತ್ತು. ಆದ್ರೆ ಭಾರತ ಅವರನ್ನು ನಿರ್ಲಕ್ಷಿಸಿದೆ ಎಂದು ಪಾಕಿಸ್ತಾನ ತರಬೇತುದಾರ ಮೈಕ್ ಹೆಸ್ಸನ್ ಹೇಳಿದ್ದಾರೆ ಎನ್ನಲಾಗ್ತಿದೆ. ಈ ಕಾರಣದಿಂದಾಗಿ, ನಾಯಕ ಸಲ್ಮಾನ್ ಪಂದ್ಯದ ನಂತರ ಟಿವಿ ಸಂದರ್ಶನದಲ್ಲಿ ಭಾಗವಹಿಸಲಿಲ್ಲ. ಈ ಘಟನೆಗಳ ಬಗ್ಗೆ ಪಾಕಿಸ್ತಾನದ ಅಸಮಾಧಾನವು ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತಲುಪಿದೆ ಎನ್ನಲಾಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಟೀಮ್ ಇಂಡಿಯಾ ಮಾಡಿದ್ದೆ ಸರಿ ಎಂದು ಅನೇಕರು ಕಮೆಂಟ್ ಮಾಡ್ತಿದ್ದಾರೆ. ಭಾರತೀಯ ತಂಡ ಸರಿಯಾದ ಕೆಲಸ ಮಾಡಿದೆ ಎಂದು ಅಂತಿದ್ದಾರೆ.
ಟಾಸ್ ಸಮಯದಲ್ಲಿಯೂ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಿ ನಾಯಕನೊಂದಿಗೆ ಕೈಕುಲುಕಲಿಲ್ಲ. ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಭಾರತೀಯ ತಂಡದ ಆಟಗಾರರು “ನಾವು ಪಂದ್ಯ ಆಡಲು ಬಂದಿದ್ದೇವೆ. ನಾವು ಆಡುತ್ತೇವೆ, ನಾವು ಗೆಲ್ಲುತ್ತೇವೆ, ಹೋಗುತ್ತೇವೆ” ಎಂಬ ಮನೋಭಾವದಲ್ಲಿಯೇ ಆಟವಾಡಿದಂತೆ ಕಾಣ್ತಿದೆ. ಫಲಿತಾಂಶ ಏನೇ ಇರಲಿ, ಭಾರತ ಈಗಾಗಲೇ ಸೂಪರ್ 4 ತಲುಪಿದೆ.
September 15, 2025 8:10 AM IST