ಉಡುಪಿ ಉತ್ಸವದಲ್ಲಿ ವಿರಾಟ್ ಕೊಹ್ಲಿ! ವಿಟ್ಲ ಪಿಂಡಿಯಲ್ಲಿ ಐಪಿಎಲ್‌ ಕಪ್ ಎತ್ತಿ ಹಿಡಿದಿದ್ದು ಅವ್ರೇನಾ? ವೈರಲ್ ವಿಡಿಯೋ ಇಲ್ಲಿದೆ | Virat Kohli at Udupi Vitla Pindi festival goes viral | ರಾಜ್ಯ

ಉಡುಪಿ ಉತ್ಸವದಲ್ಲಿ ವಿರಾಟ್ ಕೊಹ್ಲಿ! ವಿಟ್ಲ ಪಿಂಡಿಯಲ್ಲಿ ಐಪಿಎಲ್‌ ಕಪ್ ಎತ್ತಿ ಹಿಡಿದಿದ್ದು ಅವ್ರೇನಾ? ವೈರಲ್ ವಿಡಿಯೋ ಇಲ್ಲಿದೆ | Virat Kohli at Udupi Vitla Pindi festival goes viral | ರಾಜ್ಯ

Last Updated:

ಇನ್ನು ಈ ಮೆರವಣಿಗೆಯಲ್ಲಿ ಹುಲಿವೇಷ ಸೇರಿ ನಾನಾ ರೀತಿಯ ವೇಷಗಳನ್ನು ಹಾಕಿ ಜನರು ಪಾಲ್ಗೊಳ್ಳುತ್ತಾರೆ. ಈ ಬಾರಿ ವಿಟ್ಲ ಪಿಂಡಿ ಉತ್ಸವದಲ್ಲಿ ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್‌ ಕೊಹ್ಲಿ ಕೂಡಾ ಭಾಗವಹಿಸಿದ್ದಾರೆ. 

ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ವಿರಾಟ್ ಕೊಹ್ಲಿ!ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ವಿರಾಟ್ ಕೊಹ್ಲಿ!
ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ವಿರಾಟ್ ಕೊಹ್ಲಿ!

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ದೇಶಾದ್ಯಂತ ಈಗಾಗಲೇ ಜನ್ಮಾಷ್ಟಮಿ ನಡೆದಿದೆ. ಆದರೆ ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಮಾತ್ರ ಇಂದು ಅಷ್ಟಮಿ ಆಚರಣೆ ನಡೆದಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ಪ್ರಮುಖ ಆಚರಣೆಯೆಂದರೆ ಅದು ವಿಟ್ಲ ಪಿಂಡಿ ಉತ್ಸವ. ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ‌ ಕಿಕ್ಕಿರಿದು ಭಕ್ತರು ಸೇರುತ್ತಾರೆ. ಕೃಷ್ಣಮಠದ ಸಿಬ್ಬಂದಿಗಳು ಹಾಗೂ ಗೊಲ್ಲರು ರಥಬೀದಿ ಸುತ್ತಲೂ ಹಾಕಲಾದ ಗುರ್ಜಿಗಳಲ್ಲಿ ಇಡಲಾದ ಮಡಿಕೆ ಒಡೆದು ವಿಟ್ಲಪಿಂಡಿಗೆ ಚಾಲನೆ ನೀಡುತ್ತಾರೆ. ಇದಾದ‌ ಬಳಿಕ ಪರ್ಯಾಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸೇರಿದಂತೆ ಅಷ್ಟಮಠದ ಯತಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನು ಈ ಮೆರವಣಿಗೆಯಲ್ಲಿ ಹುಲಿವೇಷ ಸೇರಿ ನಾನಾ ರೀತಿಯ ವೇಷಗಳನ್ನು ಹಾಕಿ ಜನರು ಪಾಲ್ಗೊಳ್ಳುತ್ತಾರೆ. ಈ ಬಾರಿ ವಿಟ್ಲ ಪಿಂಡಿ ಉತ್ಸವದಲ್ಲಿ ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್‌ ಕೊಹ್ಲಿ ಕೂಡಾ ಭಾಗವಹಿಸಿದ್ದಾರೆ. 

ಹೌದು, ಥೇಟ್‌ ವಿರಾಟ್‌ ಕೊಹ್ಲಿಯಂತೆಯೇ ಕಾಣುವ ಯುವಕನೊಬ್ಬ ಆರ್‌ಸಿಬಿ ಟೀಶರ್ಟ್, ಐಪಿಎಲ್‌ ಕಪ್‌ ಹಿಡಿದುಕೊಂಡು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ವಿರಾಟ್‌ ಕೊಹ್ಲಿಯೇ ವಿಟ್ಲ ಪಿಂಡಿಗೆ ಬಂದಿದ್ದಾರೆ ಎಂದು ವೈರಲ್ ಆಗುತ್ತಿದೆ.

ಉಡುಪಿಯಲ್ಲಿ ವಿರಾಟ್ ಕೊಹ್ಲಿ!?

ಉಡುಪಿಯ ವಿಟ್ಲ ಪಿಂಡಿ ಉತ್ಸವ ಅಂದ್ರೆನೇ ಹಾಗೆ, ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೇ ವಿಶೇಷ ಆಕರ್ಷಣೆಯ ವೇಷಗಳನ್ನು ಹಾಕಿ ಮೆರವಣಿಗೆ ನಡೆಸಲಾಗುತ್ತದೆ. ಕರಾವಳಿ ಅಂದಾಗ ಹುಲಿವೇಷ, ಯಕ್ಷಗಾನಗಳು ಬಹಳ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ.

ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ವಿರಾಟ್ ಕೊಹ್ಲಿ!

ಇದರ ಜೊತೆಗೆ ಹಲವಾರು ವಿಭಿನ್ನ ರೀತಿಯಲ್ಲಿ ವೇಷಗಳನ್ನು ಹಾಕಿಕೊಂಡು ಜನ ಬರುತ್ತಾರೆ. ಅದೇ ರೀತಿಯಲ್ಲಿ ವಿರಾಟ್ ಕೊಹ್ಲಿಯ ತದ್ರೂಪಿಯೊಬ್ಬ ವಿಟ್ಲ ಪಿಂಡಿ ಉತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ರಥದಲ್ಲಿ ಕೊಹ್ಲಿ, ಗೇಲ್, ದಾನಿಶ್‌ ಸೇಠ್‌ ನಿಂತಿರುವುದನ್ನು ಕಾಣಬಹುದು. ಆದ್ರೆ ಇವರ್ಯಾರು ರಿಯಲ್‌ ಸ್ಟಾರ್‌ಗಳಲ್ಲ, ರೀಲ್‌ ಸ್ಟಾರ್‌‌ಗಳು. ಅಂದ್ರ ವಿರಾಟ್‌ ಕೊಹ್ಲಿಯಂತೆಯೇ ಕಾಣುವವರು. ಏನೇ ಆಗಲಿ ಥೇಟ್‌ ವಿರಾಟ್ ಕೊಹ್ಲಿಯಂತೆಯೇ ಕಾಣುವ ಈ ಯುವಕರ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ಕೃಷ್ಣ ಜನ್ಮಾಷ್ಟಮಿಯ 2 ದಿನಗಳು ಅನ್ನೋದು ಕೃಷ್ಣಮಠದ ರಥಬೀದಿಯಲ್ಲದೇ ಇಡೀ ಉಡುಪಿ ನಗರವನ್ನು ಸಂಭ್ರಮದಲ್ಲಿ ತೇಲುವಂತೆ ಮಾಡುತ್ತದೆ. ಉಡುಪಿಯ ಮಟ್ಟಿಗೆ 2 ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಹೊರತುಪಡಿಸಿದರೆ ವರ್ಷಂಪ್ರತಿ ನಡೆಯುವ ಕೃಷ್ಣಜನ್ಮಾಷ್ಟಮಿಯ ವಿಟ್ಲ ಪಿಂಡಿ ಉತ್ಸವವು ಭಾರೀ ವೈಭವಪೂರ್ಣವಾಗಿ ನಡೆಯುತ್ತದೆ.

ಕನ್ನಡ ಸುದ್ದಿ/ ನ್ಯೂಸ್/ರಾಜ್ಯ/

Udupi-Virat Kohli: ಉಡುಪಿ ಉತ್ಸವದಲ್ಲಿ ವಿರಾಟ್ ಕೊಹ್ಲಿ! ವಿಟ್ಲ ಪಿಂಡಿಯಲ್ಲಿ ಐಪಿಎಲ್‌ ಕಪ್ ಎತ್ತಿ ಹಿಡಿದಿದ್ದು ಅವ್ರೇನಾ? ವೈರಲ್ ವಿಡಿಯೋ ಇಲ್ಲಿದೆ