Last Updated:
ಯುಎಇ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಪರದಾಡಿದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ವಾದದ ಮಧ್ಯೆ ನಡೆಯುತ್ತಿರುವ ಏಷ್ಯಾಕಪ್ನ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಮಂಗಳವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಯುಎಇ ಬೌಲರ್ಗಳ ದಾಳಿಗೆ ಧೂಳೀಪಟವಾಯಿತು. ಆರಂಭದಿಂದ 20 ಓವರ್ ಮುಗಿಯುವವರೆಗೀ ಯುಎಇ ತಂಡ ಪ್ರಾಬಲ್ಯ ಸಾಧಿಸಿತು. ಆದರೆ ಫಖರ್ ಜಮಾನ್ (50) ಅರ್ಧಶತಕ ಹಾಗೂ ಶಾಹೀನ್ ಅಫ್ರಿದಿ ಅಜೇಯ 29 ರನ್ ಸಿಡಿಸಿ ಪಾಕಿಸ್ತಾನ ತಂಡ 146 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಯುಎಇ ಪರ ಭಾರತೀಯ ಮೂಲಕ ಪಂಜಾಬ್ ಮೂಲದ ಸಿಮ್ರಾನ್ಜಿತ್ ಸಿಂಗ್ 3 ವಿಕೆಟ್ ಹಾಗೂ ಜುನೈದ್ ಸಿದ್ದಿಕ್ 4 ವಿಕೆಟ್ ಪಡೆದು ಪಾಕಿಸ್ತಾನವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ ಓವರ್ನಲ್ಲೇ ಕಳಪೆ ಫಾರ್ಮ್ನಲ್ಲಿರುವ ಸೈಮ್ ಅಯೂಬ್ ವಿಕೆಟ್ ಕಳೆದುಕೊಂಡಿತು. ಸತತ 3ನೇ ಪಂದ್ಯದಲ್ಲಿ ಸೈಮ್ ಅಯೂಬ್ ಖಾತೆ ತೆರೆಯದೇ ಜುನೈದ್ ಸಿದ್ದಿಕ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆಗಿ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಫರ್ಹಾನ್ ಸಹಿಬ್ಝಾದಾ ಫರ್ಹಾನ್ ಕೂಡ 3ನೇ ಓವರ್ಲ್ಲಿ ಸಿದ್ದಿಕ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. 12 ಎಸೆತಗಳಲ್ಲಿ ಕೇವಲ 5 ರನ್ಗಳಿಸಿದರು.
3ನೇ ಕ್ರಮಾಂಕದಲ್ಲಿ ಬಂದ ಫಖರ್ ಜಮಾನ್ ಹಾಗೂ ನಾಯಕ ಸಲ್ಮಾನಿ ಅಲಿ 3ನೇ ವಿಕೆಟ್ ಜೊತೆಯಾಟದಲ್ಲಿ 51 ಎಸೆತಗಳಲ್ಲಿ 61 ರನ್ಗಳ ಜೊತೆಯಾಟ ನೀಡಿದರು. ಸಲ್ಮಾನ್ ಅಲಿ 27 ಎಸೆತಗಳನ್ನಾಡಿದರಾದರೂ ಗಳಿಸಿದ್ದು ಕೇವಲ 20 ರನ್. ಅವರ ಇನ್ನಿಂಗ್ಸ್ನಲ್ಲಿ 2 ಬೌಂಡರಿ ಮಾತ್ರ ಇದ್ದವು. ಸಲ್ಮಾನ್ ಭಾರತೀಯ ಮೂಲದ ಧ್ರುವ್ ಪರಾಶರ್ ಬೌಲಿಂಗ್ನಲ್ಲಿ ಅಲಿಗೆ ಕ್ಯಾಚ್ ನೀಡಿ ಔಟ್ ಆದರು. ಇವರ ಬೆನ್ನಲ್ಲೇ 36 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 50 ರನ್ಗಳಿಸಿದ್ದ ಫಖರ್ ಜಮಾನ್ ಕೂಡ ಪೆವಿಲಿಯನ್ ಸೇರಿಕೊಂಡರು. ಫಖರ್ರನ್ನ ಭಾರತದ ಪಂಜಾಬ್ ಮೂಲದ ಸಿಮ್ರಾನ್ಜಿತ್ ಸಿಂಗ್ ಕಾಂಗ್ ಔಟ್ ಮಾಡಿ ಬಿಗ್ ಬ್ರೇಕ್ ತಂದುಕೊಂಟ್ಟರು. ಈ ವಿಕೆಟ್ನೊಂದಿಗೆ ಪಾಕಿಸ್ತಾನದ ದೊಡ್ಡ ಮೊತ್ತದ ಆಸೆಯೂ ಕಮರಿತು.
ನಂತರ ಬಂದ ಹಸನ್ ನವಾಜ್ 3 ರನ್, ಕುಷ್ದಿಲ್ ಶಾ 4 ರನ್ಗಳಿಸಿದ ಸಿಮ್ರಾನ್ಜಿತ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಪವರ್ಪ್ಲೇನಲ್ಲಿ ಆರಂಭಿಕರಿಗೆ ಆಘಾತ ನೀಡಿದ್ದ ಸಿದ್ದಿಕ್ ಕೊನೆಯಲ್ಲೂ ಪಾಕಿಸ್ತಾನಕ್ಕೆ ಆಘಾತಕ ನೀಡಿದರು. 4 ರನ್ಗಳಿಸಿದ್ದ ಮೊಹಮ್ಮದ್ ನವಾಜ್ ಹಾಗೂ 14 ಎಸೆತಗಳಲ್ಲಿ 18 ರನ್ಗಳಿಸಿದ್ದ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪಡೆದು ದೊಡ್ಡ ಆಘಾತ ನೀಡಿದರು. ಕೊನೆಯಲ್ಲಿ ನಿರೀಕ್ಷೆಯಂತೆ ಅತ್ಯುತ್ತಮ ಫಾರ್ಮ್ನಲ್ಲಿರುವ ಶಾಹೀನ್ ಶಾ ಅಫ್ರಿದಿ ಕೊನೆಯ ಓವರ್ನಲ್ಲಿ 2 ಸಿಕ್ಸರ್, 1 ಬೌಂಡರಿ ಸಹಿತ18 ರನ್ ಸಿಡಿಸಿ ತಂಡದ ಮೊತ್ತವನ್ನ 128ರಿಂದ 146ಕ್ಕೆ ಏರಿಸಿದರು. 14 ಎಸೆತಗಳನ್ನೆದುರಿಸಿ ಅಫ್ರಿದಿ ಅಜೇಯ 29 ರನ್ಗಳಿಸಿದರು.
September 17, 2025 10:56 PM IST