Last Updated:
ಸೂರ್ಯ ಸಾಮಾನ್ಯವಾಗಿ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಒಮಾನ್ ಪಂದ್ಯದಲ್ಲಿ ಸೂರ್ಯ ಬ್ಯಾಟಿಂಗ್ ಮಾಡದಿರುವ ಹಿಂದಿನ ಕಾರಣಗಳನ್ನ ಲೆಜೆಂಡರಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 2025 ರ ಏಷ್ಯಾ ಕಪ್ನ (Asia Cup) ಕೊನೆಯ ಲೀಗ್ ಪಂದ್ಯದಲ್ಲಿ ಒಮಾನ್ 21 ರನ್ಗಳಿಂದ ಗೆದ್ದು ಅಗ್ರಸ್ಥಾನದೊಂದಿಗೆ ಸೂಪರ್ 4ಗೆ ಎಂಟ್ರಿಕೊಟ್ಟಿದೆ. ಟಾಸ್ ಗೆದ್ದ ನಂತರ, ಭಾರತವು ತನ್ನ ನಿಗದಿತ 20 ಓವರ್ಗಳಲ್ಲಿ 188/8 ಗಳಿಸಿತು. ನಂತರ ಒಮಾನ್ ತಂಡವನ್ನ 167/4 ಕ್ಕೆ ಸೀಮಿತಗೊಳಿಸಿತು. ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ಮತ್ತೊಮ್ಮೆ ಸೂರ್ಯಕುಮಾರ್ ಯಾದವ್ (Surya Kumar Yadav) ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದರು, ಆದರೆ ಅವರು ಬ್ಯಾಟಿಂಗ್ ಬಾರದೆ ಅಚ್ಚರಿ ಮೂಡಿಸಿದರು. ಬೌಲರ್ಗಳು ಕೂಡ ಬ್ಯಾಟಿಂಗ್ ಮಾಡಿದರಾದರೂ, ಸೂರ್ಯ ಬ್ಯಾಟಿಂಗ್ ಮಾಡಿರಲಿಲ್ಲ. ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಈ ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ.
ಸೂರ್ಯ ಸಾಮಾನ್ಯವಾಗಿ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಒಮಾನ್ ಪಂದ್ಯದಲ್ಲಿ ಸೂರ್ಯ ಬ್ಯಾಟಿಂಗ್ ಮಾಡದಿರುವ ಹಿಂದಿನ ಕಾರಣಗಳನ್ನ ಲೆಜೆಂಡರಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.
ಸೋನಿ ಸ್ಪೋರ್ಟ್ಸ್ನಲ್ಲಿ ಇರ್ಫಾನ್ ಪಠಾಣ್ ಅವರೊಂದಿಗೆ ಮಾತನಾಡುತ್ತಾ, ” ಅವರು ಒಂದು ಓವರ್ ಬ್ಯಾಟಿಂಗ್ ಮಾಡಿದ್ದರೆ, ಅವರು ಎರಡು ಅಥವಾ ಮೂರು ಸಿಕ್ಸರ್ಗಳು ಅಥವಾ ಎರಡು ಅಥವಾ ಮೂರು ಬೌಂಡರಿಗಳನ್ನು ಹೊಡೆಯುತ್ತಿದ್ದರು. ಅದು ತಂಡಕ್ಕೆ ತುಂಬಾ ಒಳ್ಳೆಯದಾಗುತ್ತಿತ್ತು. ಆದರೆ ಅವರು ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ ಮಾಡಿದ ರೀತಿ (37 ಎಸೆತಗಳಲ್ಲಿ 47 ಔಟಾಗದೆ) ಅವರಿಗೆ ಅಭ್ಯಾಸದ ಅಗತ್ಯವಿಲ್ಲ ಎಂದು ಸೂಚಿಸುತ್ತದೆ. ಪಂದ್ಯದ ಆರಂಭದಲ್ಲಿ ಭಾರತ ವಿಕೆಟ್ ಕಳೆದುಕೊಂಡರೆ, ಕೆಳಕ್ರಮಾಕದ ಬ್ಯಾಟರ್ಗಳಿಂದ ಉಪಯುಕ್ತ ಕೊಡುಗೆ ಪಡೆಯಬಹುದು ಎಂದು ಅವರು ಭಾವಿಸಿರಬಹುದು. ಬಹುಶಃ ಅದಕ್ಕಾಗಿಯೇ ಅವರು ಕುಲದೀಪ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸಿದ್ದಾರೆ, ಅವರು ತುಂಬಾ ಅಸಾಂಪ್ರದಾಯಿಕ ಮನಸ್ಥಿತಿಯ ನಾಯಕ” ಎಂದು ಗವಾಸ್ಕರ್ ತಿಳಿಸಿದ್ದಾರೆ.
ಯುಎಇ ಮತ್ತು ಪಾಕಿಸ್ತಾನವನ್ನು ಸೋಲಿಸಿದ ನಂತರ ಭಾರತ ತಂಡ ಟೂರ್ನಮೆಂಟ್ನ ಸೂಪರ್ 4 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ. ಆದ್ದರಿಂದ, ಒಮಾನ್ ವಿರುದ್ಧದ ಪಂದ್ಯದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಆಡಲು ಅವಕಾಶ ನೀಡಲು ಭಾರತ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿತು. ಹಾರ್ದಿಕ್ ಪಾಂಡ್ಯ (1) ನಾಲ್ಕನೇ ಕ್ರಮಾಂಕದಲ್ಲಿ ಮತ್ತು ಅಕ್ಷರ್ ಪಟೇಲ್ (26) ಐದನೇ ಕ್ರಮಾಂಕದಲ್ಲಿ ಬಂದರು.
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (56) ಒಂದು ಡೌನ್ನಲ್ಲಿ ಬಂದರು. ಸೂರ್ಯಕುಮಾರ್ ಯಾದವ್ ಎಲ್ಲಾ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳನ್ನು ಬಳಸಿಕೊಂಡು ಅವರಿಗೆ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ಸಿಗುವಂತೆ ಮಾಡಿದರು ಎಂದು ಗವಾಸ್ಕರ್ ಸೂರ್ಯಕುಮಾರ್ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆಗಳನ್ನು ಮಾಡಿತ್ತು. ಹರ್ಷಿತ್ ಮತ್ತು ಅರ್ಷದೀಪ್ ಸಿಂಗ್ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲಿಗೆ ತಂಡ ಸೇರಿಕೊಂಡಿದ್ದರು. ಇಬ್ಬರು ತಲಾ 1 ವಿಕೆಟ್ ಪಡೆದರು. ಭಾರತ ಭಾನುವಾರ ಸೂಪರ್ 4 ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮತ್ತೆ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
September 20, 2025 5:47 PM IST