Last Updated:
Team India: ಓವರ್‌ನ ಮೂರನೇ ಎಸೆತದಲ್ಲಿ ಬ್ಯಾಟ್ಸ್‌ಮನ್ ಅಘಾ ಸಲ್ಮಾನ್ ರನ್‌ಗಾಗಿ ಓಡಿದರು. ಫೀಲ್ಡರ್ ಎಸೆದ ಚೆಂಡು ಸ್ಟ್ರೈಕರ್ ತುದಿಯ ವಿಕೆಟ್‌ಗೆ ತಾಗಲಿಲ್ಲ. ಈ ಗೊಂದಲದಲ್ಲಿ, ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಮೊಹಮ್ಮದ್ ನವಾಜ್ ಕ್ರೀಸ್‌ಗೆ ಮರಳಲು ಸ್ವಲ್ಪ ಸೋಮಾರಿತನ ತೋರಿದರು.
ಚಿರತೆಯ ನಡೆ, ಗಿಡುಗನ ಕಣ್ಣು, ಸೂರ್ಯನ ಆಟದ ಮೇಲೆ ಅನುಮಾನವೇ ಬೇಡ ಈ ಮಾತು ಮತ್ತೊಮ್ಮೆ ನಿಜವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮಾಡಿದ ಒಂದು ರನೌಟ್, ಇಡೀ ಪಂದ್ಯದ ಹೈಲೈಟ್ ಅಂದ್ರೆ ತಪ್ಪಾಗಲ್ಲ. ಅವರ ಅದ್ಭುತ ಫೀಲ್ಡಿಂಗ್ ಚಾಕಚಕ್ಯತೆಗೆ ಪಾಕ್ ಆಟಗಾರ ಕ್ರೀಸ್‌ನಲ್ಲೇ ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟಿದ್ದ.
172 ರನ್ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಅಮೋಘ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಇಬ್ಬರು ಮೊದಲ 10 ಓವರ್ಗಳಲ್ಲಿ ಪಾಕಿಸ್ತಾನ ಬೌಲರ್ಗಳನ್ನ ಧೂಳೀಪಟ ಮಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್ಗಳ ಜೊತೆಯಾಟ ನೀಡಿದರು. ಗಿಲ್ 28 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 47 ರನ್‌ಗಳಿಸಿ ಫಹೀಮ್ ಅಶ್ರಫ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಹಾರಿಸ್ ರೌಫ್ ಬೌಲಿಂಗ್ನಲ್ಲಿ ಅಬ್ರಾರ್ ಅಹ್ಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಮುರಿಯದ 5ನೇ ವಿಕೆಟ್‌ಗೆ ಜೊತೆಯಾಟದಲ್ಲಿ 26 ರನ್‌ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 30 ರನ್‌ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಹಾರ್ದಿಕ್ ಅಜೇಯ 7 ರನ್ಗಳಿಸಿದರು.
ಪಾಕಿಸ್ತಾನದ ಪರವಾಗಿ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಕೇವಲ 58 ರನ್‌ಗಳಿಸಿ ಭರ್ಜರಿ ಅರ್ಧಶತಕ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ದೈತ್ಯ ಸಿಕ್ಸರ್‌ಗಳು ಮತ್ತು 5 ಬೌಂಡರಿಗಳಿದ್ದವು. ಕೊನೆಯ ಹಂತದಲ್ಲಿ, ಫಹೀಮ್ ಅಶ್ರಫ್ ಕೇವಲ 8 ಎಸೆತಗಳಲ್ಲಿ 20 ರನ್ ಚಚ್ಚಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಪಾಕ್ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಿದ್ದರೂ, ಭಾರತದ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಅಲ್ಲಲ್ಲಿ ಯಶಸ್ವಿಯಾದರು. ಭಾರತದ ಪರ ಶಿವಂ ದುಬೆ 2 ಪ್ರಮುಖ ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಪಾಕಿಸ್ತಾನದ ರನ್ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಲು ಪ್ರಯತ್ನಿಸಿದರು.
ಜಸ್ಪ್ರೀತ್ ಬುಮ್ರಾ 19ನೇ ಓವರ್ ಬೌಲ್ ಮಾಡುತ್ತಿದ್ದರು. ಓವರ್‌ನ ಮೂರನೇ ಎಸೆತದಲ್ಲಿ ಬ್ಯಾಟ್ಸ್‌ಮನ್ ಅಘಾ ಸಲ್ಮಾನ್ ರನ್‌ಗಾಗಿ ಓಡಿದರು. ಫೀಲ್ಡರ್ ಎಸೆದ ಚೆಂಡು ಸ್ಟ್ರೈಕರ್ ತುದಿಯ ವಿಕೆಟ್‌ಗೆ ತಾಗಲಿಲ್ಲ. ಈ ಗೊಂದಲದಲ್ಲಿ, ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಮೊಹಮ್ಮದ್ ನವಾಜ್ ಕ್ರೀಸ್‌ಗೆ ಮರಳಲು ಸ್ವಲ್ಪ ಸೋಮಾರಿತನ ತೋರಿದರು.
ಇದೆಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ ಸೂರ್ಯಕುಮಾರ್ ಯಾದವ್, ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ಎಲ್ಲರ ಗಮನ ಸ್ಟ್ರೈಕರ್ ತುದಿಯಲ್ಲಿದ್ದರೆ, ಸೂರ್ಯನ ಕಣ್ಣುಗಳು ಮಾತ್ರ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ನವಾಜ್‌ನ ಚಲನೆಯನ್ನು ಗಮನಿಸುತ್ತಿತ್ತು. ಕೂಡಲೇ ಚೆಂಡನ್ನು ಹಿಡಿದು, ರಾಕೆಟ್ ವೇಗದಲ್ಲಿ ನಾನ್-ಸ್ಟ್ರೈಕರ್ ತುದಿಯ ವಿಕೆಟ್‌ಗೆ ಗುರಿಯಿಟ್ಟು ಎಸೆದರು.
ಸೂರ್ಯ ಎಸೆದ ಚೆಂಡು ಬುಲೆಟ್‌ನಂತೆ ನೇರವಾಗಿ ಬಂದು ವಿಕೆಟ್‌ಗಳಿಗೆ ಬಡಿಯಿತು. ಅಷ್ಟರಲ್ಲಿ ನವಾಜ್ ಕ್ರೀಸ್‌ನಿಂದ ಬಹಳ ದೂರ ಉಳಿದಿದ್ದರು. ಈ ಅನಿರೀಕ್ಷಿತ ರನೌಟ್‌ನಿಂದಾಗಿ ನವಾಜ್ (21 ರನ್) ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದರು. ಅವರ ಮುಖದಲ್ಲಿನ ಆಘಾತವೇ ಸೂರ್ಯನ ಫೀಲ್ಡಿಂಗ್ ಎಷ್ಟು ಚಾಣಾಕ್ಷತನದಿಂದ ಕೂಡಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.
September 22, 2025 12:25 PM IST