PAK vs SL: ಶ್ರೀಲಂಕಾ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯ! ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್ | Pakistan vs Sri Lanka Live Score: Salman Agha Wins Toss, Chooses to Bowl First in Crucial Asia Cup 2025 Match | ಕ್ರೀಡೆ

Last Updated:

ಶ್ರೀಲಂಕಾವನ್ನು ಜಯಿಸುವುದು ಪಾಕಿಸ್ತಾನ ತಂಡಕ್ಕೆ ಸುಲಭದ ಮಾತಲ್ಲ. ಶ್ರೀಲಂಕಾ ತಂಡವು ಬಲಿಷ್ಠವಾಗಿ ಕಾಣುತ್ತದೆ, ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡಕ್ಕೆ ಮತ್ತೊಂದು ಶುಭ ಸುದ್ದಿ ಎಂದರೆ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ 2019ರಿಂದ ಸೋಲೇ ಕಂಡಿಲ್ಲ. ಕಳೆದ ಆರು ವರ್ಷಗಳಲ್ಲಿ ಆಡಿರುವ ಐದೂ ಪಂದ್ಯಗಳಲ್ಲೂ ಶ್ರೀಲಂಕಾ ತಂಡ ಜಯ ಸಾಧಿಸಿದೆ.

ಪಾಕಿಸ್ತಾನ vs ಶ್ರೀಲಂಕಾ ಪಾಕಿಸ್ತಾನ vs ಶ್ರೀಲಂಕಾ
ಪಾಕಿಸ್ತಾನ vs ಶ್ರೀಲಂಕಾ

ಏಷ್ಯಾ ಕಪ್ 2025ರ ಸೂಪರ್ 4 ಸುತ್ತಿನಲ್ಲಿ ಮಂಗಳವಾರ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿವೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡೂ ತಂಡಕ್ಕೂ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ಮೊದಲ ಸೂಪರ್ 4 ಪಂದ್ಯಗಳನ್ನಾಡಿದ್ದು, ಇಂದು ಯಾವ ತಂಡ ಸೋತರೂ ಫೈನಲ್ ತಲುಪುವ ಭರವಸೆಯನ್ನು ಕಳೆದುಕೊಳ್ಳಲಿವೆ. ಸಲ್ಮಾನ್ ಅಘಾ ನೇತೃತ್ವದ ಪಾಕಿಸ್ತಾನ ತಂಡವು ಹಿಂದಿನ ಪಂದ್ಯದಲ್ಲಿ ಭಾರತ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತು. ಇನ್ನೂ ಚರಿತ್ ಅಸಲಂಕಾ ನೇತೃತ್ವದ ಶ್ರೀಲಂಕಾ ತಂಡವು ತಮ್ಮ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋಲು ಕಂಡಿದೆ.

ಶ್ರೀಲಂಕಾವನ್ನು ಜಯಿಸುವುದು ಪಾಕಿಸ್ತಾನ ತಂಡಕ್ಕೆ ಸುಲಭದ ಮಾತಲ್ಲ. ಶ್ರೀಲಂಕಾ ತಂಡವು ಬಲಿಷ್ಠವಾಗಿ ಕಾಣುತ್ತದೆ, ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡಕ್ಕೆ ಮತ್ತೊಂದು ಶುಭ ಸುದ್ದಿ ಎಂದರೆ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ 2019ರಿಂದ ಸೋಲೇ ಕಂಡಿಲ್ಲ. ಕಳೆದ ಆರು ವರ್ಷಗಳಲ್ಲಿ ಆಡಿರುವ ಐದೂ ಪಂದ್ಯಗಳಲ್ಲೂ ಶ್ರೀಲಂಕಾ ತಂಡ ಜಯ ಸಾಧಿಸಿದೆ.

 ಹೆಡ್-ಟು-ಹೆಡ್ ದಾಖಲೆ

ಪಾಕಿಸ್ತಾನ ಮತ್ತು ಶ್ರೀಲಂಕಾ ಇಲ್ಲಿಯವರೆಗೆ 23 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದ್ದು, 13 ಪಂದ್ಯಗಳಲ್ಲಿ ಗೆದ್ದರೆ,  ಶ್ರೀಲಂಕಾ 10 ಪಂದ್ಯಗಳಲ್ಲಿ ಗೆದ್ದಿದೆ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೀ), ಕುಸಲ್ ಪೆರೆರಾ, ಚರಿತ್ ಅಸಲಂಕಾ(ನಾಯಕ), ದಸುನ್ ಶನಕ, ಕಮಿಂದು ಮೆಂಡಿಸ್, ಚಮಿಕಾ ಕರುಣಾರತ್ನೆ, ವನಿಂದು ಹಸರಂಗ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ನುವಾನ್ ತುಷಾರ

ಪಾಕಿಸ್ತಾನ (ಪ್ಲೇಯಿಂಗ್ XI): ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಅಘಾ(ನಾಯಕ), ಹುಸೇನ್ ತಲಾತ್, ಮೊಹಮ್ಮದ್ ಹ್ಯಾರಿಸ್(w), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್