Team India: ಆತ 20 ಓವರ್ ಆಡಿದ್ರೆ ಒಬ್ಬನೇ 200 ರನ್​ ಸಿಡಿಸಬಲ್ಲ: ಭಾರತದ ಯುವ ಆಟಗಾರನನ್ನ ಪ್ರಶಂಸಿಸಿದ ಯೋಗರಾಜ್ | Yuvraj Singh’s Big Prediction: Abhishek Sharma Can Score Double Century if He Plays for 20 Overs | ಕ್ರೀಡೆ

Team India: ಆತ 20 ಓವರ್ ಆಡಿದ್ರೆ ಒಬ್ಬನೇ 200 ರನ್​ ಸಿಡಿಸಬಲ್ಲ: ಭಾರತದ ಯುವ ಆಟಗಾರನನ್ನ ಪ್ರಶಂಸಿಸಿದ ಯೋಗರಾಜ್ | Yuvraj Singh’s Big Prediction: Abhishek Sharma Can Score Double Century if He Plays for 20 Overs | ಕ್ರೀಡೆ

Last Updated:

ಹೈವೋಲ್ಟೆಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 172 ರನ್‌ಗಳ ಗುರಿಯನ್ನು 16.4 ಓವರ್‌ಗಳಲ್ಲಿ 4 ವಿಕೆಟ್‌ಗೆ ಚೇಸ್ ಮಾಡಿತು. ಈ ಗೆಲುವಿನಲ್ಲಿ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಅವರ 105 ರನ್‌ಗಳ ಆರಂಭಿಕ ಜೊತೆಯಾಟ ನಿರ್ಣಾಯಕವಾಯಿತು.

ಅಭಿಷೇಕ್ ಶರ್ಮಾಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ಏಷ್ಯಾ ಕಪ್ 2025ರ (Asia Cup) ಸೂಪರ್-4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ (ಸೆಪ್ಟೆಂಬರ್ 21) ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ (Abhishek Sharma and Shubman Gill) ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಅವರ ಪ್ರದರ್ಶನವನ್ನು ಕಂಡು ಮಾಜಿ ಕ್ರಿಕೆಟಿಗ ಮತ್ತು ಯುವರಾಜ್ ಸಿಂಗ್ (Yuvraj Singh) ಅವರ ತಂದೆಯಾದ ಯೋಗರಾಜ್ ಸಿಂಗ್ ಇಬ್ಬರೂ ಯುವ ಆಟಗಾರರನ್ನ ಭರಪೂರ ಪ್ರಶಂಸಿಸಿದ್ದಾರೆ. ಅವರ ಫಾರ್ಮ್‌ನ್ನು ಗಮನಿಸಿ, ಈ ಜೋಡಿಯು 250 ರನ್‌ಗಳ ಗುರಿಯನ್ನೂ ಬೆನ್ನಟ್ಟಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈವೋಲ್ಟೆಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 172 ರನ್‌ಗಳ ಗುರಿಯನ್ನು 16.4 ಓವರ್‌ಗಳಲ್ಲಿ 4 ವಿಕೆಟ್‌ಗೆ ಚೇಸ್ ಮಾಡಿತು. ಈ ಗೆಲುವಿನಲ್ಲಿ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಅವರ 105 ರನ್‌ಗಳ ಆರಂಭಿಕ ಜೊತೆಯಾಟ ನಿರ್ಣಾಯಕವಾಯಿತು. ಅಭಿಷೇಕ್ ಶರ್ಮಾ 47 ಎಸೆತಗಳಲ್ಲಿ 74 ರನ್ (7 ಫೋರ್, 4 ಸಿಕ್ಸ್, ಸ್ಟ್ರೈಕ್ ರೇಟ್ 157.45) ಗಳಿಸಿದರೆ, ಶುಭ್​ಮನ್ ಗಿಲ್ 35 ಎಸೆತಗಳಲ್ಲಿ 47 ರನ್ (5 ಫೋರ್, 1 ಸಿಕ್ಸ್, ಸ್ಟ್ರೈಕ್ ರೇಟ್ 134.29) ಗಳಿಸಿದರು. ಅಭಿಷೇಕ್‌ರ ಇನ್ನಿಂಗ್ಸ್‌ನಲ್ಲಿ ಶಹೀನ್ ಶಾ ಆಫ್ರಿದಿಯ ಮೊದಲ ಎಸೆತದ ಸಿಕ್ಸರ್ ದಾಖಲೆಯಾಗಿತ್ತು, ಇದು ಟಿ20ಯಲ್ಲಿ ಭಾರತೀಯರಿಂದ ಎರಡನೇ ಬಾರಿಗೆ ಮೊದಲ ಎಸೆತದಲ್ಲಿ ಸಿಕ್ಸರ್ ಆಗಿತ್ತು.

ಯೋಗರಾಜ್ ಸಿಂಗ್‌ರಿಂದ ಪ್ರಶಂಸೆ

ಯೋಗರಾಜ್ ಸಿಂಗ್ ಅವರು ಈ ಜೋಡಿಯ ಬಗ್ಗೆ ಮಾತನಾಡುತ್ತಾ, “ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಈಗಿನ ಫಾರ್ಮ್‌ನಲ್ಲಿದ್ದರೆ, ಅವರಿಗೆ 250 ರನ್‌ಗಳ ಗುರಿಯನ್ನೂ ನೀಡಿದರೂ ಅದನ್ನು ಚೇಸ್ ಮಾಡಬಹುದು. ಆದರೆ, ಇದಕ್ಕಾಗಿ ಅವರು ಕನಿಷ್ಠ 12-15 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಇರಬೇಕು. ತಂಡವು ಈ ಇಬ್ಬರ ಮೇಲೆ ಹೆಚ್ಚು ಅವಲಂಬಿತವಾಗಿದೆ” ಎಂದು ಹೇಳಿದರು. ಅವರ ಈ ವಿಶ್ವಾಸವು ಯುವ ಆಟಗಾರರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಶುಭ್​ಮನ್ ಗಿಲ್‌ಗೆ ಸಲಹೆ

ಯೋಗರಾಜ್ ಸಿಂಗ್ ಶುಭ್​ಮನ್ ಗಿಲ್‌ಗೆ ತಮ್ಮ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಸೂಚಿಸಿದರು. ” ಗಿಲ್ ಒಂದೇ ರೀತಿಯ ಎಸೆತಕ್ಕೆ ಎರಡು ಬಾರಿ ಬೌಲ್ಡ್ ಆಗಿದ್ದಾರೆ. ಇದರಲ್ಲಿ ಅವರು ಸುಧಾರಣೆ ಮಾಡಿಕೊಳ್ಳಬೇಕು. ಎಷ್ಟೇ ದೊಡ್ಡ ಆಟಗಾರರಾದರೂ, ಆಟಕ್ಕಿಂತ ದೊಡ್ಡವರಿಲ್ಲ. ಆಟಗಾರರು ಯಾವಾಗಲೂ ವಿದ್ಯಾರ್ಥಿಗಳಂತೆ ಇರಬೇಕು” ಎಂದು ಸಲಹೆ ನೀಡಿದರು. ಗಿಲ್‌ರ ಈ ತಪ್ಪುಗಳು, ವಿಶೇಷವಾಗಿ ಒಳಗಿನ ಎಸೆತಗಳಲ್ಲಿ ಔಟ್ ಆಗುವುದು, ಚರ್ಚೆಗೆ ಕಾರಣವಾಗಿತ್ತು.

ಅಭಿಷೇಕ್ ಶರ್ಮಾ ಬಗ್ಗೆ ಭವಿಷ್ಯ

ಯೋಗರಾಜ್ ಸಿಂಗ್ ಅಭಿಷೇಕ್ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ” ಅಭಿಷೇಕ್ ಶರ್ಮಾ 20 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಇದ್ದರೆ, ಖಂಡಿತವಾಗಿಯೂ ಒಬ್ಬರೇ 200 ರನ್ ಗಳಿಸಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭಿಷೇಕ್‌ರ ಆಕ್ರಮಣಕಾರಿ ಬ್ಯಾಟಿಂಗ್, ವಿಶೇಷವಾಗಿ ಪಾಕ್ ವಿರುದ್ಧದ 74 ರನ್, ಅವರ ಸಾಮರ್ಥ್ಯವನ್ನು ತೋರಿಸಿದೆ ಎಂದು ತಿಳಿಸಿದ್ದಾರೆ.

ಕಪಿಲ್ ದೇವ್​ಗೆ ಮಾರ್ಗದರ್ಶನ

ಯೋಗರಾಜ್ ಸಿಂಗ್, ಭಾರತದ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಉಲ್ಲೇಖಿಸಿ, “ಕಪಿಲ್ ದೇವ್ ನನ್ನ ಬಾಲ್ಯದ ಗೆಳೆಯ. ಅವರು ಮಹಾನ್ ಕ್ರಿಕೆಟಿಗ, ಮತ್ತು ಕ್ರಿಕೆಟ್ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಅವರಂತಹ ದಂತಕಥೆಗಳು ಕನಿಷ್ಠ ಒಬ್ಬ ಅಥವಾ ಇಬ್ಬರು ಯುವ ಆಟಗಾರರನ್ನು ಬೆಳೆಸಬೇಕು” ಎಂದು ಸಲಹೆ ನೀಡಿದರು.