Asia Cup: ಶ್ರೀಲಂಕಾ ಮಣಿಸಿ ಮತ್ತೆ ಫೈನಲ್ ರೇಸ್​ಗೆ ಮರಳಿದ ಪಾಕ್! ಮತ್ತೊಂದು ಭಾರತ-ಪಾಕ್ ಹಣಾಹಣಿಗೆ ವೇದಿಕೆ ಸಜ್ಜು? | Pakistan Keeps Asia Cup Hopes Alive with Thrilling 5-Wicket Win Over Sri Lanka | ಕ್ರೀಡೆ

Asia Cup: ಶ್ರೀಲಂಕಾ ಮಣಿಸಿ ಮತ್ತೆ ಫೈನಲ್ ರೇಸ್​ಗೆ ಮರಳಿದ ಪಾಕ್! ಮತ್ತೊಂದು ಭಾರತ-ಪಾಕ್ ಹಣಾಹಣಿಗೆ ವೇದಿಕೆ ಸಜ್ಜು? | Pakistan Keeps Asia Cup Hopes Alive with Thrilling 5-Wicket Win Over Sri Lanka | ಕ್ರೀಡೆ

ಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 134 ರನ್​ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ಪಾಕಿಸ್ತಾನ 45 ರನ್​ಗಳ ಜೊತೆಯಾಟ ಸಾಧಿಸಿತು. ಸಾಹಿಬ್ಜಾದಾ ಫರ್ಹಾನ್ 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 24 ಹಾಗೂ ಫಖರ್ ಜಮಾನ್ 19 ಎಸೆತಗಳಲ್ಲಿ 17 ರನ್​ಗಳಿಸಿದರು. ತೀಕ್ಷಣ ಇಬ್ಬರನ್ನಒಂದೇ ಓವರ್​ನಲ್ಲಿ ಔಟ್ ಮಾಡಿ ಶ್ರೀಲಂಕಾಗೆ ಬಿಗ್ ಬ್ರೇಕ್ ತಂದುಕೊಟ್ಟರು.

ನಂತರದ ಓವರ್​ನಲ್ಲೇ ಟೂರ್ನಿಯಲ್ಲಿ ಕಳಪೆ ಫಾರ್ಮ್​ನಲ್ಲಿರುವ ಸೈಮ್ ಆಯುಬ್ ಕೇವಲ 2 ರನ್​ಗಳಿಸಿ ಹಸರಂಗ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಮತ್ತೆ ಹಸರಂತ ತಮ್ಮ 2ನೇ ಓವರ್​ನಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ (5) ರನ್ನ ಕೂಡ ಪೆವಿಲಿಯನ್​ಗಟ್ಟು ಮೂಲಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಕಮ್​ಬ್ಯಾಕ್ ಮಾಡುವಂತೆ ಮಾಡಿದರು. ನಂತರ ಬಂದ ವಿಕೆಟ್ ಕೀಪರ್ ಮೊಹಮ್ಮದ್ ಹಾರಿಸ್ 11 ಎಸೆತಗಳಲ್ಲಿ 13 ರನ್​ಗಳಿಸಿ ಚಮೀರಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಶ್ರೀಲಂಕಾ ಪರ ವನಿಂದು ಹಸರಂಗ 27ಕ್ಕೆ 2, ಮಹೀಶ್ ತೀಕ್ಷಣ 24ಕ್ಕೆ2, ದುಷ್ಮಂತ ಚಮೀರಾ 31ಕ್ಕೆ1 ವಿಕೆಟ್ ಪಡೆದರಾದರೂ ಅವರ ಬೌಲಿಂಗ್​ ಗೆಲುವಿಗೆ ಸಾಕಾಗಲಿಲ್ಲ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರೀ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ ಓವರ್​ನ 2ನೇ ಎಸೆತದಲ್ಲೇ ಕುಸಾಲ್ ಮೆಂಡಿಸ್ (0) ವಿಕೆಟ್ ಕಳೆದುಕೊಂಡಿತು. ಮೆಂಡಿಸ್ ಖಾತೆ ತೆರೆಯದೇ ಶಾಹೀನ್ ಅಫ್ರಿದಿ ಬೌಲಿಂಗ್​​ನಲ್ಲಿ ಗೋಲ್ಡನ್ ಡಕ್ ಆದರು. ನಂತರ ಮತ್ತೊಬ್ಬ ಆರಂಭಿಕ ಬ್ಯಾಟರ್ ಪಾತುಮ್ ನಿಸ್ಸಾಂಕ ಕೇವಲ 8 ರನ್​ಗಳಿಸಿ 3ನೇ ಓವರ್​ನಲ್ಲಿ ಅಫ್ರಿದಿಗೆ 2ನೇ ಬಲಿಯಾದರು. 3ನೇ ವಿಕೆಟ್ಗೆ ಒಂದಾದ ಕುಸಾಲ್ ಪೆರೆರಾ ಹಾಗೂ ನಾಯಕ ಚರಿತ್ ಅಸಲಂಕಾ 25 ರನ್​ ಸೇರಿಸಿದರು. ಆದರೆ 15 ರನ್​ಗಳ ಅಂತರದಲ್ಲಿ ಇಬ್ಬರು ಔಟ್ ಆದರು.

ಪೆರೆರಾ 12 ಎಸೆತಗಳಲ್ಲಿ 15 ರನ್​ಗಳಿಸಿ ಹ್ಯಾರಿಸ್ ರೌಫ್​ಗೆ ವಿಕೆಟ್ ಒಪ್ಪಿಸಿದರೆ, ಚರಿತ್ ಅಸಲಂಕಾ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್​ಗಳಿಸಿ ಹುಸೇನ್ ತಲತ್​ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಶನಕ ಖಾತೆ ತೆರೆಯದೇ ತಲತ್​ ಬೌಲ್ಡ್ ಆದರು.

ನಂತರ ಬಂದ ವನಿಂದು ಹಸರಂಗ 13 ಎಸೆತಗಳಲ್ಲಿ 15 ರನ್ಗಳಿಸಿದರು. ಚಮಿಕಾ ಕರುಣರತ್ನೆ ಹಾಗೂ ಕಮಿಂದು ಮೆಂಡಿಸ್ 7ನೇ ವಿಕೆಟ್​ ಜೊತೆಯಾಟದಲ್ಲಿ 43 ರನ್​ಗಳಿಸಿಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಮೆಂಡಿಸ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್​ಗಳಿಸಿದರು. ಆದರೆ ಕರುಣರತ್ನೆ 21 ಎಸೆತಗಳಲ್ಲಿ 2 ಬೌಂಡರಿ ಸಹಿತ ಕೇವಲ 17 ರನ್​ಗಳಿಸಿದರು.

ಹುಸೇನ್ ತಲಾತ್ 18ಕ್ಕೆ2, ಅಬ್ರಾರ್ ಅಹ್ಮದ್ 4 ಓವರ್​ಗಳಲ್ಲಿ 8 ರನ್ ನೀಡಿ 1 ವಿಕೆಟ್, ಹ್ಯಾರಿಸ್ ರೌಫ್ 37ಕ್ಕೆ2, ಶಾಹೀನ್ ಅಫ್ರಿದಿ 28ಕ್ಕೆ3 ವಿಕೆಟ್ ಪಡೆದು ಮಿಂಚಿದರು.

 ಮತ್ತೆ ಭಾರತ-ಪಾಕ್ ಮುಖಾಮುಖಿ

ಭಾರತದ ವಿರುರ್ಧ ಲೀಗ್ ಹಾಗೂ ಸೂಪರ್ 4 ಹಂತದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಈ ಪಂದ್ಯದ ಗೆಲುವಿನೊಂದಿಗೆ ಮತ್ತೆ ಫೈನಲ್ ಪ್ರವೇಶಿಸುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಮಣಿಸಿದರೆ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವನ್ನ ಎದುರಿಸಲಿದೆ.  ಇನ್ನು ಶ್ರೀಲಂಕಾ ತಂಡ ಈ ಸೋಲಿನೊಂದಿಗೆ ಟೂರ್ನಿಯಿಂದಲೇ ಹೊರಬಿದ್ದಿದೆ.

ನಾಳೆ ಭಾರತ-ಬಾಂಗ್ಲಾದೇಶದ ವಿರುದ್ಧ ಮತ್ತೊಂದು ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನ ಭಾರತ ಗೆದ್ದರೆ ಫೈನಲ್ ಸ್ಥಾನವನ್ನ ಬಹುತೇಕ ಖಚಿತಪಡಿಸಿಕೊಳ್ಳಲಿದೆ.