ಕಾರ್ಯನಿರ್ವಹಣೆಯ ದೃಷ್ಟಿಯಿಂದ ನೋಡಿದರೆ, ಇಂದಿನ ಫೋನ್ಗಳು ಬಹಳ ಉತ್ತಮವಾಗಿವೆ. ಆದರೆ ಬಾಳಿಕೆ? ಒಮ್ಮೆ ಕೆಳಗೆ ಬೀಳಿಸಿ ನೋಡಿ, ಸ್ಕ್ರೀನ್ ಮೇಲೆ ಚಿತ್ರವಿಚಿತ್ರ ಗೆರೆಗಳು ಮೂಡಿರುತ್ತವೆ. ಮಳೆಯಲ್ಲಿ ಸಿಕ್ಕಿಹಾಕಿಕೊಂಡರೆ? ಟಚ್ಸ್ಕ್ರೀನ್ ಸ್ಪಂದಿಸುವುದೇ ಇಲ್ಲ. ಅಷ್ಟೆಲ್ಲ ಯಾಕೆ, ಸ್ವಲ್ಪ ಗ್ರೀಸ್ ತಾಗಿರುವ ಕೈಗಳಿಂದ ಅಪ್ಲಿಕೇಶನ್ಗಳ ನಡುವೆ ಫ್ಲಿಪ್ ಮಾಡಲು ನೋಡಿ, ನಿಮ್ಮ ದುಬಾರಿ ಸಾಧನವು ವಿಚಿತ್ರವಾಗಿ ವರ್ತಿಸುತ್ತದೆ ಮತ್ತು ತಲೆಬಿಸಿಗೆ ಕಾರಣವಾಗುತ್ತದೆ.
ಇದರಿಂದ ಕೇವಲ ಅನಾನುಕೂಲತೆಯಷ್ಟೇ ಅಲ್ಲ, ಆರ್ಥಿಕ ಹೊರೆಯೂ ಆಗುತ್ತದೆ ಮತ್ತು ತಲೆಬಿಸಿಯೂ ಆಗುತ್ತದೆ. ಭಾರತದಲ್ಲಿ 45 ಕೋಟಿಯಷ್ಟಿರುವ ವೃತ್ತಿಪರ ಕೆಲಸಗಾರರು, ಗಿಗ್ ಕೆಲಸಗಾರರಲ್ಲಿ ಅಥವಾ ವಿದ್ಯಾರ್ಥಿಗಳಲ್ಲಿ ನೀವೂ ಒಬ್ಬರಾಗಿದ್ದರೆ ಮತ್ತು ನಿಮ್ಮ ಪ್ರಾಥಮಿಕ ಸಾಧನವಾಗಿರುವ ಫೋನ್ ಹಾಳಾದರೆ ನಿಮ್ಮ ಪರಿಸ್ಥಿತಿ ಅಯೋಮಯವಾಗುವುದು ನಿಶ್ಚಿತ.
ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಚಯಿಸುತ್ತಿದ್ದೇವೆ, OPPO F31 ಸಿರೀಸ್ 5G: ಭಾರತದ ನೈಜ ಪ್ರಪಂಚದ ಅಡೆತಡೆಗಳನ್ನು ಸೂಕ್ತವಾಗಿ ನಿಭಾಯಿಸಿ ಯಶಸ್ವಿಯಾಗಿ ಮುನ್ನಡೆಯಲೆಂದೇ ವಿನ್ಯಾಸಗೊಳಿಸಲಾದ ಮೂರು ಸ್ಮಾರ್ಟ್ಫೋನ್ಗಳ ಸಂಗ್ರಹ. ನೀವು ಫ್ಲ್ಯಾಗ್ಶಿಪ್ ದರ್ಜೆಯ OPPO F31 Pro+ 5G ಆಯ್ಕೆ ಮಾಡಿಕೊಳ್ಳಲಿ ಅಥವಾ ದೈನಂದಿನ ಬಳಕೆಗೆ ಅತ್ಯುತ್ತಮ ಮತ್ತು ಬಜೆಟ್ ಸ್ಮಾರ್ಟ್ ಆದ OPPO F31 5G ಆಯ್ಕೆ ಮಾಡಿಕೊಳ್ಳಲಿ, ಪ್ರತಿಯೊಂದು ಮಾದರಿಯೂ ಮಿಲಿಟರಿ–ದರ್ಜೆಯ ಗಟ್ಟಿತನ, ಟ್ರಿಪಲ್ IP ರಕ್ಷಣೆ, 18-ದ್ರವ ಪ್ರತಿರೋಧ, 5-ವರ್ಷದ ಬ್ಯಾಟರಿ ಭರವಸೆ ಮತ್ತು ಸುಗಮವಾದ, ಲ್ಯಾಗ್–ರಹಿತ ಕಾರ್ಯಾಚರಣೆಯನ್ನು ಒದಗಿಸುತ್ತದೆ. ಇವು ಕೇವಲ ಥಳಕು ಬಳುಕಿನ ಫೋನ್ಗಳಲ್ಲ. ಪ್ರತಿದಿನವೂ ನಿಮ್ಮೊಟ್ಟಿಗೆ ಕೆಲಸ ಮಾಡುವ ಮತ್ತು ಪೆಟ್ಟು ತಿಂದರೂ ತಲೆಕೆಡಿಸಿಕೊಳ್ಳದ ಫೋನ್ಗಳು.
ಆದರೆ, ಇಷ್ಟು ಶಕ್ತಿಶಾಲಿಯಾಗಿದ್ದರೂ ಇವು ದಪ್ಪನಾಗಿ ಭಾರವಾಗಿಲ್ಲ. ವಾಸ್ತವವಾಗಿ, ಇವು OPPO ಇದುವರೆಗೆ ಬಿಡುಗಡೆ ಮಾಡಿರುವ ಫೋನ್ಗಳಲ್ಲಿ ಅತ್ಯಂತ ಸ್ಟೈಲಿಶ್ ಸಾಧನಗಳಾಗಿವೆ.
ಭಾರತದಲ್ಲಿನ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತದೆ
OPPO ಹೇಳುವಂತೆ OPPO F31 ಸಿರೀಸ್ 5G ಯನ್ನು “ಭಾರತಕ್ಕಾಗಿಯೇ ನಿರ್ಮಿಸಲಾಗಿದೆ,” ಅಂದರೆ ನಮ್ಮಲ್ಲಿನ ಹವಾಮಾನ, ನಮ್ಮ ರಸ್ತೆಗಳು ಮತ್ತು ಅಸ್ತವ್ಯಸ್ತ ಪರಿಸ್ಥಿತಿಗಳಿಗಾಗಿಯೇ ತಯಾರಿಸಲಾಗಿದೆ, ಈ ಫೋನ್ಗಳು ಅಸಾಧಾರಣ ಶಕ್ತಿಶಾಲಿಗಳಾಗಿದ್ದು – ಬಹುಪಾಲು ಫೋನ್ಗಳು ತಡೆದುಕೊಳ್ಳಲಾರದ ಸವಾಲುಗಳನ್ನು ಇವು ಸಲೀಸಾಗಿ ನಿಭಾಯಿಸುತ್ತವೆ.
IP66, IP68 ಮತ್ತು IP69. ಇದರರ್ಥ, ಧೂಳಿನ ಗಾಳಿಯಲ್ಲಿ ಸಿಲುಕಿದರೂ, 80°C ಬಿಸಿನೀರಿನ ಹೈ ಪ್ರೆಶರ್ ಜೆಟ್ಗಳ ನೀರು ಬಡಿದರೂ ಮತ್ತು 1.5 ಮೀಟರ್ಗಳವರೆಗೆ ಸಂಪೂರ್ಣವಾಗಿ ನೀರಿಗೆ ಮುಳುಗಿದರೂ – ಈ ಫೋನ್ಗೆ ಯಾವ ಸಮಸ್ಯೆಯೂ ಆಗುವುದಿಲ್ಲ.
ನೀರಷ್ಟೇ ಅಲ್ಲ. F31 ಸಿರೀಸ್ ಫೋನ್ಗಳು – ಚಹಾ, ಕಾಫಿ, ಎಳನೀರು, ಬಿಯರ್, ಡಿಟರ್ಜೆಂಟ್, ಉಗಿ, ಕೆಸರು ನೀರು – ಹೀಗೆ ಸಾಮಾನ್ಯ ಫೋನ್ಗಳನ್ನು ಹಾನಿಮಾಡುವ ಪ್ರತಿಯೊಂದು ದ್ರವವನ್ನೂ ಸಮರ್ಥವಾಗಿ ನಿಭಾಯಿಸುತ್ತದೆ.
ಫೋನ್ನ ಶಕ್ತಿಶಾಲಿಯಾಗಿ ರೂಪುಗೊಂಡಿರುವುದಕ್ಕೆ ನಿಜವಾದ ಕಾರಣ ಇದೇ ಆಗಿದೆ. ಮಿಲಿಟರಿ–ಟೆಸ್ಟೆಡ್ (MIL-STD-810H-2022) ಆಗಿರುವ ಈ ಫೋನ್, ಏರ್ಬ್ಯಾಗ್ ಮಾದರಿಯ ಬಹು–ಪದರದ ಕುಶನ್ ವ್ಯವಸ್ಥೆಯನ್ನು ಹೊಂದಿದ್ದು, ಈ ವ್ಯವಸ್ಥೆಯು ಬ್ಯಾಟರಿಯಿಂದ ಹಿಡಿದು ಕ್ಯಾಮೆರಾವರೆಗಿನ ಎಲ್ಲ ಆಂತರಿಕ ಭಾಗಗಳನ್ನು ರಕ್ಷಿಸುತ್ತದೆ.
ಇದನ್ನು ಫೋನಿನ ರೋಲ್ ಕೇಜ್ ಎಂದು ಭಾವಿಸಬಹುದು. OPPO ಮದರ್ಬೋರ್ಡ್ ಕವರ್ ಅನ್ನು AM04 ಅಲ್ಯೂಮಿನಿಯಂಗೆ ಅಪ್ಗ್ರೇಡ್ ಮಾಡಿದ್ದು, ಇದು ಹಿಂದಿನ ಜನರೇಶನ್ (AM03) ಗಿಂತ 10% ಬಲಿಷ್ಠವಾಗಿದೆ ಮತ್ತು ಶಾಖವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಇದರರ್ಥ: ಫೋನ್ ಕೈಜಾರಿ ಬಿದ್ದಾಗ ಹಾನಿಯಾಗದಂತೆ ತಡೆಯುವ ಹೆಚ್ಚಿನ ಸಾಮರ್ಥ್ಯ, ಮತ್ತು ಬೇಸಿಗೆಯ ತೀವ್ರ ಸೆಕೆಯಲ್ಲಿ ನೀವು ಕ್ಯಾಮರಾ ಬಳಸುವಾಗ, ಸ್ಟ್ರೀಮ್ ಮಾಡುವಾಗ ಅಥವಾ ನ್ಯಾವಿಗೇಟ್ ಮಾಡುವಾಗ ಸ್ಥಿರವಾದ ಕಾರ್ಯಕ್ಷಮತೆ.
ಅಂದರೆ ಅಮಿತಾಬ್ ಬಚ್ಚನ್ ಅವರ (ಅಥವಾ, ಥೋರ್ನ) ಮೂಗಿನಷ್ಟು ಎತ್ತರ. ಅದು ಮಾರ್ಬಲ್ ಮೇಲೆ ಬೀಳಲಿ, ಗ್ರಾನೈಟ್ ಮೇಲೆ ಬೀಳಲಿ ಅಥವಾ ಸ್ಟೀಲ್ ಡ್ರಮ್ ಮೇಲೆ ಬೀಳಲಿ, F31 ಸಿರೀಸ್ಗೆ ಅದೊಂದು ವಿಷಯವೇ ಅಲ್ಲ, ಏನೂ ಆಗಲೇ ಇಲ್ಲ ಎಂಬ ರೀತಿ ಕಾರ್ಯನಿರ್ವಹಿಸುತ್ತದೆ. ಇದು ಹೇಗೆ ಸಾಧ್ಯ? ಬಹು–ಪದರದ “ಏರ್ಬ್ಯಾಗ್” ವಿನ್ಯಾಸವು ಪ್ರಮುಖ ಭಾಗಗಳನ್ನು (ಕ್ಯಾಮೆರಾ, ಸ್ಪೀಕರ್ಗಳು, ಬ್ಯಾಟರಿ ಮತ್ತು ವೈಬ್ರೇಶನ್ ಮೋಟಾರ್ಗಳು) ಫೋಮ್ ಮತ್ತು ಸಿಲಿಕಾನ್ ಪ್ಯಾಡ್ಗಳಿಂದ ರಕ್ಷಿಸುತ್ತದೆ. ಈ ಪ್ಯಾಡ್ಗಳು ಶಾಕ್ ಅಬ್ಸಾರ್ಬರ್ಗಳಾಗಿ ಕೆಲಸ ಮಾಡಿ ಫೋನ್ಗೆ ಹಾನಿಯಾಗದಂತೆ ಕಾಪಾಡುತ್ತವೆ.
ಸೂಪರ್ ಹೀರೋ ವೈಬ್ಸ್? ಖಂಡಿತ ಇದೆ.
ಜಲ-ನಿರೋಧಕ ಘಟಕಗಳು ಮತ್ತು ಸ್ಪೀಕರ್ ಡ್ರೈನೇಜ್ ಸಿಸ್ಟಂ: ಮೈಕ್, ಸ್ಪೀಕರ್ಗಳು ಮತ್ತು ಸಿಮ್ ಟ್ರೇಗಳನ್ನು ಕೂಡಾ ಏರೋಸ್ಪೇಸ್ ತಂತ್ರಜ್ಞಾನ–ಪ್ರೇರಿತ ತೆಳು ಪದರಗಳು ಮತ್ತು ಸಿಲಿಕೋನ್ ಪದರಗಳನ್ನು ಬಳಸಿ ಸೀಲ್ ಮಾಡಲಾಗಿದ್ದು – ಇವು ಗಾಳಿಯನ್ನು ಹಾದುಹೋಗಲು ಬಿಡುತ್ತವೆ, ಆದರೆ ದ್ರವಗಳಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ನಿಮ್ಮ ಸ್ಪೀಕರ್ನಲ್ಲಿ ನೀರು ಸೇರಿಕೊಂಡಿದೆಯೇ? ಬಿಲ್ಟ್-ಇನ್ ಸ್ಪೀಕರ್ ಡ್ರೈನೇಜ್ ವ್ಯವಸ್ಥೆಯು ಕಂಪಿಸುವ ಧ್ವನಿ ತರಂಗಗಳನ್ನು ಹೊರಡಿಸಿ ಅದನ್ನು ಹೊರಹಾಕುತ್ತದೆ.
ಜಲನಿರೋಧಕತೆ ಎಂಬುದು ಕೇವಲ ಒಂದು ವೈಶಿಷ್ಟ್ಯವಲ್ಲ. ನಮ್ಮ ದೈನಂದಿನ ಜೀವನಕ್ಕೆ ರಕ್ಷಾಕವಚವಾಗಿದೆ.
ಫ್ಲ್ಯಾಗ್ಶಿಪ್ ಲುಕ್ಸ್, ಬಲಿಷ್ಠ ವಿನ್ಯಾಸ
ಈ ರೀತಿ ಗಟ್ಟಿಮುಟ್ಟಾಗಿರುವ ಫೋನ್ಗಳು ಸಾಮಾನ್ಯವಾಗಿ ಟ್ಯಾಂಕ್ಗಳಂತೆ ಕಾಣಿಸುತ್ತವೆ. ಆದರೆ OPPO F31 ಸಿರೀಸ್ 5G ಹಾಗಲ್ಲ. ಈ ಸಿರೀಸ್ನಲ್ಲಿ, OPPO ಒಂದು ಅದ್ಭುತ ಸಾಧನೆಯನ್ನು ಮಾಡಿದ್ದು: ಗಟ್ಟಿಮುಟ್ಟಾದ ವಿನ್ಯಾಸವೂ ಇದೆ, ಪ್ರೀಮಿಯಂ ವೈಶಿಷ್ಟ್ಯಗಳೂ ಇವೆ.
OPPO F31 Pro+ 5G ಜೆಮ್ಸ್ಟೋನ್ ಬ್ಲೂ, ಹಿಮಾಲಯನ್ ವೈಟ್, ಮತ್ತು ಫೆಸ್ಟಿವ್ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ. ಎಲ್ಲ ಮಾದರಿಗಳನ್ನೂ OPPO ದ ವಿಶಿಷ್ಟ ವಿನ್ಯಾಸದಿಂದ ಸಿದ್ಧಪಡಿಸಲಾಗಿದ್ದು, ಮನಸೂರೆಗೊಳ್ಳುವ ಹೊಳಪನ್ನು ಹೊಂದಿವೆ. ಇದರ ತೂಕ 195 ಗ್ರಾಂಗಿಂತ ಕಡಿಮೆಯಿದ್ದು, 7.8mm ಅಥವಾ ಅದಕ್ಕಿಂತ ತೆಳುವಾಗಿ ಅತ್ಯಾಕರ್ಷಕವಾಗಿದೆ. OPPO F31 Pro 5G, ಡೆಸರ್ಟ್ ಗೋಲ್ಡ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲಿ ಲಭ್ಯವಿದ್ದು, ಎರಡೂ ಮಾದರಿಗಳು ಸೊಗಸಾಗಿದ್ದು, 8mm ಗಿಂತ ತೆಳ್ಳಗಿವೆ. OPPO F31 5G ಮಿಡ್ನೈಟ್ ಬ್ಲೂ, ಕ್ಲೌಡ್ ಗ್ರೀನ್ ಮತ್ತು ಬ್ಲೂಮ್ ರೆಡ್ ಬಣ್ಣಗಳಲ್ಲಿ ಲಭ್ಯವಿದ್ದು, 185g ಗಿಂತ ಕಡಿಮೆ ತೂಗುವ ಇವುಗಳು ಆಕರ್ಷಕ ಮತ್ತು ವಿಶಿಷ್ಟವಾಗಿವೆ.
ಸಿರೀಸ್ನಾದ್ಯಂತ, ನೀವು ಪಡೆಯುವುದು ದೀರ್ಘಕಾಲದ ಬಾಳಿಕೆ ಮಾತ್ರವಲ್ಲ, ನಿಜವಾದ ಫ್ಲ್ಯಾಗ್ಶಿಪ್–ದರ್ಜೆಯ ಡಿಸ್ಪ್ಲೇಗಳನ್ನು. F31 ಸಿರೀಸ್ನ ಪ್ರತಿಯೊಂದು ಫೋನ್ ಕೂಡ FHD+ ರೆಸಲ್ಯೂಶನ್ ಹೊಂದಿರುವ ಮತ್ತು 1.07 ಶತಕೋಟಿ ಬಣ್ಣಗಳನ್ನು ಪ್ರದರ್ಶಿಸಬಲ್ಲ 120Hz AMOLED ಸ್ಕ್ರೀನ್ ಅನ್ನು ಹೊಂದಿದೆ. ಹಾಗಾಗಿ ಕಂಟೆಂಟ್ಗಳು ಸುಂದರ, ಸುಸ್ಪಷ್ಟವಾಗಿ ಮತ್ತು ಜೀವಂತವಾಗಿ ಕಾಣಿಸುತ್ತವೆ. OPPO F31 Pro+ 5G, 6.8-ಇಂಚಿನ ಫ್ಲ್ಯಾಟ್ AMOLED ಡಿಸ್ಪ್ಲೇ ಅನ್ನು ಹೊಂದಿದ್ದರೆ, OPPO F31 Pro 5G ಮತ್ತು OPPO F31 5G, 6.5-ಇಂಚಿನ ಫ್ಲ್ಯಾಟ್ AMOLED ಡಿಸ್ಪ್ಲೇ ಅನ್ನು ಹೊಂದಿವೆ. ನಿಮ್ಮ ವೀಕ್ಷಣೆಯನ್ನು ಗರಿಷ್ಠಗೊಳಿಸುವುದಕ್ಕಾಗಿ 93.5% ಸ್ಕ್ರೀನ್–ಟು–ಬಾಡಿ ಅನುಪಾತವನ್ನು ನೀಡಲಾಗಿದ್ದು, ಇದರ ಸ್ಕ್ರ್ಯಾಚ್–ನಿರೋಧಕ ಗ್ಲಾಸ್ ಈ ಸಾಧನಗಳನ್ನು ಎಂದೆಂದಿಗೂ ಹೊಚ್ಚಹೊಸದರಂತೆಯೇ ಇರಿಸುತ್ತದೆ.
OPPO F31 Pro+ 5G, 1600 ನಿಟ್ಸ್ ಗರಿಷ್ಠ ಬ್ರೈಟ್ನೆಸ್ನೊಂದಿಗೆ ಮತ್ತೊಂದು ಹೆಜ್ಜೆ ಮುಂದಿರಿಸಿದ್ದು, ಪ್ರಖರ ಸೂರ್ಯನ ಬೆಳಕಿನಲ್ಲೂ ಓದುವುದು ಅತಿ ಸುಲಭ. OPPO F31 Pro 5G ಮತ್ತು OPPO F31 5G 1400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದ್ದು, ಈ ವೈಶಿಷ್ಟ್ಯವು ಇವುಗಳ ವರ್ಗದ ಬಹುಪಾಲು ಫೋನ್ಗಳಿಗಿಂತ ಬಹಳ ಉತ್ತಮವಾಗಿದೆ. OPPO ದೀರ್ಘಾವಧಿಯ ಬಗ್ಗೆ ಯೋಚಿಸುವುದರಿಂದ, ಎಲ್ಲ ಮಾದರಿಗಳು 2160Hz ಹೈ–ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಒಳಗೊಂಡಿವೆ – ಇದು ನಡುರಾತ್ರಿಯ ಸ್ಕ್ರೋಲಿಂಗ್ನಲ್ಲಿ ಅಥವಾ ದೀರ್ಘಕಾಲದ ಅಧ್ಯಯನದ ಸಮಯದಲ್ಲಿ ಕಡಿಮೆ ಬ್ರೈಟ್ನೆಸ್ನಲ್ಲಿ ಆಗುವ ಫ್ಲಿಕ್ಕರ್ (ಸ್ಕ್ರೀನ್ ಮಿನುಗುವುದು) ಅನ್ನು ಕಡಿಮೆ ಮಾಡಿ ಕಣ್ಣಿನ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ.
ವಿನ್ಯಾಸದಲ್ಲಿನ ಈ ನಾವೀನ್ಯತೆ ಕೇವಲ ದೃಶ್ಯಗಳಿಗಷ್ಟೇ ಸೀಮಿತವಾಗಿಲ್ಲ. OPPO F31 ಸಿರೀಸ್ 5G, ಅಲ್ಟ್ರಾ ವಾಲ್ಯೂಮ್ ಮೋಡ್ನಿಂದ ಚಾಲಿತವಾದ ಸ್ಟೀರಿಯೋ ಡ್ಯುಯಲ್ ಸ್ಪೀಕರ್ಗಳನ್ನು ಹೊಂದಿದ್ದು, ಇದು ಸಾಮಾನ್ಯಕ್ಕಿಂತ 300% ಹೆಚ್ಚು ಜೋರಾಗಿ ಧ್ವನಿಯನ್ನು ಹೊರಹಾಕುತ್ತದೆ, ಅದು ಕೂಡ ಧ್ವನಿಯ ಗುಣಮಟ್ಟವು ಸ್ವಲ್ಪವೂ ಹಾಳಾಗದಂತೆ. ನೀವು ರೀಲ್ಸ್ ವೀಕ್ಷಿಸುತ್ತಿರಲಿ, ಪ್ಲೇಲಿಸ್ಟ್ಗಳನ್ನು ಆಲಿಸುತ್ತಿರಲಿ, ಅಥವಾ ಗದ್ದಲಮಯ ರಸ್ತೆಯಲ್ಲಿ ಕರೆಗಳನ್ನು ಸ್ವೀಕರಿಸುತ್ತಿರಲಿ, ಧ್ವನಿಯು ಸುಸ್ಪಷ್ಟವಾಗಿ, ಇಂಪಾಗಿ ಮತ್ತು ನಿರೀಕ್ಷೆಗೂ ಮೀರಿ ಉತ್ತಮವಾಗಿ ಕೇಳಿಸುತ್ತದೆ.
ಇದುವರೆಗೆ ಇಷ್ಟು ತೆಳುವಾದ, ಸ್ಟೈಲಿಶ್ ಆದ ಮತ್ತು ಇಷ್ಟು ಗಟ್ಟಿಮುಟ್ಟಾದ ಫೋನ್ಗಳು ತೀರಾ ವಿರಳವಾಗಿದ್ದವು. ಈಗ ಬಂದಿದೆ OPPO F31 ಸಿರೀಸ್ 5G, ಈಗ ಗಟ್ಟಿತನ ಮತ್ತು ಆಕರ್ಷಕತೆಯ ನಡುವೆ ಯಾವುದೇ ಒಂದನ್ನು ಆಯ್ಕೆ ಮಾಡಬೇಕಾದ ಅಗತ್ಯವಿಲ್ಲ.
ಯಾವುದೇ ಪರಿಸ್ಥಿತಿಯಲ್ಲೂ ಕಡಿಮೆಯಾಗದ ಕಾರ್ಯಕ್ಷಮತೆ
ಹಾಗಾದರೆ, ಅವು ಗಟ್ಟಿಮುಟ್ಟಾಗಿವೆ ಎಂದು ನಮಗೆ ಗೊತ್ತು. ಅವು ಸುಂದರವಾಗಿವೆ ಎಂದೂ ನಮಗೆ ಗೊತ್ತು. ಆದರೆ ಅವು ಕಾರ್ಯನಿರ್ವಹಣೆಯಲ್ಲಿನ ಸವಾಲುಗಳನ್ನು ಎದುರಿಸಬಲ್ಲವೇ?
OPPO F31 Pro+ 5G ಯಿಂದ ಪ್ರಾರಂಭಿಸೋಣ, ಇದು ಈ ಸಿರೀಸ್ನ ಅತ್ಯಂತ ಶಕ್ತಿಶಾಲಿ ಫೋನ್. ಇದನ್ನು Snapdragon 7 Gen 3 ಚಿಪ್ಸೆಟ್ನಿಂದ ಚಾಲಿತ 4nm ಫ್ಲ್ಯಾಗ್ಶಿಪ್ ಪ್ರಕ್ರಿಯೆಯನ್ನು ಆಧರಿಸಿ ನಿರ್ಮಿಸಲಾಗಿದೆ. ಈ ಪ್ಲಾಟ್ಫಾರ್ಮ್ 8-core Kryo CPU, ನೆಕ್ಸ್ಟ್ ಜೆನ್ Adreno GPU, ಮತ್ತು Hexagon NPU ಅನ್ನು ಸಂಯೋಜಿಸಿ, ಅದರ ವರ್ಗದ ಒಂದು ಅತ್ಯಂತ ಬುದ್ಧಿವಂತ ಮತ್ತು ಇಂಧನದಕ್ಷ ಪ್ರೊಸೆಸರ್ ಅನ್ನು ಸೃಷ್ಟಿಸಿದೆ. OPPOದ ಡ್ಯುಯಲ್ ಎಂಜಿನ್ ಸ್ಮೂತ್ನೆಸ್ ಸಿಸ್ಟಂನೊಂದಿಗೆ ಒಂದುಗೂಡಿ, ಇದು ದೈನಂದಿನ ಕಾರ್ಯಾಚರಣೆಯನ್ನು ವೇಗವಾಗಿಸುತ್ತದೆ – ಉದಾಹರಣೆಗೆ 26% ವೇಗವಾಗಿ ಆ್ಯಪ್ ಇನ್ಸ್ಟಾಲ್ಗಳು ಮತ್ತು ಅತಿಯಾದ ಲೋಡ್ ಇದ್ದಾಗಲೂ ಸುಗಮವಾಗಿ ಸಾಗುವ UI ಬದಲಾವಣೆಗಳು.
ಬಳಕೆದಾರರ ದೃಷ್ಟಿಯಲ್ಲಿ, ಇದರರ್ಥ ವೇಗವಾದ ಬೂಟ್–ಅಪ್ಗಳು, ತ್ವರಿತ ಸ್ಪಂದನೆಯ ಮಲ್ಟಿಟಾಸ್ಕಿಂಗ್, ಮತ್ತು ಕನ್ಸೋಲ್–ದರ್ಜೆಯ ದೃಶ್ಯಗಳು. ನಿಮ್ಮ ಫೋನ್ನಲ್ಲಿ 4K ವೀಡಿಯೋ ಎಡಿಟ್ ಮಾಡಬೇಕೇ? ಸರಿ. ಲ್ಯಾಗ್ ಇಲ್ಲದೆ ಹೈ ಫ್ರೇಮ್ ರೇಟ್ನಲ್ಲಿ ಗೇಮ್ ಆಡಬೇಕೆ? ಸುಲಭ. Adreno Frame Motion Engine ಹೆಚ್ಚಿನ ಬ್ಯಾಟರಿಯನ್ನು ಬಳಸದೆ ಫ್ರೇಮ್ ರೇಟ್ ಅನ್ನು ದ್ವಿಗುಣಗೊಳಿಸಿದರೆ, Qualcomm AI Engine ಪ್ರತಿ ವ್ಯಾಟ್ಗೆ 60% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ – ಇದು ರಿಯಲ್–ಟೈಮ್ನ ಫೋಟೋ ಗುಣಮಟ್ಟ ವರ್ಧನೆಯಿಂದ ಹಿಡಿದು ಸ್ಮಾರ್ಟರ್ ಬ್ಯಾಕ್ಗ್ರೌಂಡ್ ಪ್ರೊಸೆಸಿಂಗ್ ವರೆಗೆ ಎಲ್ಲದಕ್ಕೂ ಶಕ್ತಿ ತುಂಬುತ್ತದೆ. ಇದೆಲ್ಲವೂ ಅಸಾಮಾನ್ಯ 2.63GHz ವೇಗದಲ್ಲಿ ನಡೆಯುತ್ತದೆ, ಮತ್ತು ಹಿಂದಿನ ಜನರೇಶನ್ಗೆ ಹೋಲಿಸಿದರೆ ಇದು 15% ಹೆಚ್ಚಿನ ವೇಗ ಮತ್ತು 50% ಉತ್ತಮ ಫ್ರೇಮ್ ರೇಟ್ ಅನ್ನು ನೀಡುತ್ತದೆ.
ಅಷ್ಟೇ ಅಲ್ಲದೆ, ನೀವು ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ನಿರ್ವಹಿಸಲು ಶ್ರಮಿಸುತ್ತಿದ್ದರೆ, 5G ಡ್ಯುಯಲ್–ಸಿಮ್ ಡ್ಯುಯಲ್–ಆಕ್ಟಿವ್ (DSDA) ಬೆಂಬಲವು ಒಂದೇ ಸಮಯದಲ್ಲಿ ಎರಡು ಸಿಮ್ಗಳನ್ನು (5G+5G ಅಥವಾ 5G+4G) ಬಳಸಲು ನಿಮಗೆ ಅನುವು ಮಾಡಿಕೊಡುತ್ತದೆ – ಅದು ಕೂಡ ವೇಗ, ವಿಶ್ವಾಸಾರ್ಹತೆ, ಅಥವಾ ಲೇಟೆನ್ಸಿಯೊಂದಿಗೆ ರಾಜಿ ಮಾಡಿಕೊಳ್ಳದೆ. Snapdragon X63 Modem-RF system ಸೇರಿರುವುದರಿಂದ ನೀವು ಜನದಟ್ಟಣೆಯ ಪ್ರದೇಶಗಳಲ್ಲಿ, ರೈಲಿನಲ್ಲಿ, ಅಥವಾ ಮಾರುಕಟ್ಟೆಗಳಲ್ಲಿ, ಎಲ್ಲಿದ್ದರೂ ಬಲಿಷ್ಠವಾದ ಮಲ್ಟಿ–ಗಿಗಾಬಿಟ್ ಕನೆಕ್ಟಿವಿಟಿಯ ಅನುಭವವು ನಿಮ್ಮದಾಗುತ್ತದೆ.
ಈಗ OPPO F31 Pro 5G ವಿಷಯಕ್ಕೆ ಬರೋಣ, AI-ವರ್ಧಿತ ದೃಶ್ಯಗಳು ಮತ್ತು ಬ್ಯಾಕ್ಗ್ರೌಂಡ್ ಕಾರ್ಯಾಚರಣೆಗಳಿಗಾಗಿ ನೀವು ಅದೇ ಫ್ಲ್ಯಾಗ್ಶಿಪ್–ಮಟ್ಟದ ಪ್ರೊಸೆಸ್ – 4nm ಆರ್ಕಿಟೆಕ್ಚರ್, 8-core CPU ಮತ್ತು ಶಕ್ತಿಶಾಲಿ MediaTek NPU 655 ಅನ್ನು ಪಡೆಯುತ್ತೀರಿ. ಇವೆಲ್ಲದರ ಹಿಂದಿರುವುದು MediaTek Dimensity 7300 Energy ಪ್ಲಾಟ್ಫಾರ್ಮ್ ಎಂಬ ಇಂಜಿನ್, ಇದನ್ನು ದೈನಂದಿನ ಮಲ್ಟಿಟಾಸ್ಕಿಂಗ್ ಮತ್ತು ರಿಯಲ್–ಟೈಮ್ ಕಾರ್ಯಕ್ಷಮತೆಗಾಗಿ ನಿರ್ಮಿಸಲಾಗಿದೆ. 2.5GHz ವೇಗದ ಈ ಚಿಪ್ ಅಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತದೆ: ಹಿಂದಿನ ಜನರೇಶನ್ಗೆ ಹೋಲಿಸಿದರೆ, ಇದು 20% ಉತ್ತಮ ಶಕ್ತಿ ದಕ್ಷತೆ ಮತ್ತು 20% FPS ವೇಗ ವರ್ಧನೆಯನ್ನು ನೀಡುತ್ತದೆ. ನೀವು Zoom ಕರೆಗಳಲ್ಲಿರಲಿ, ಹೆವಿ ಆ್ಯಪ್ಗಳ ನಡುವೆ ಟಾಗಲ್ ಮಾಡುತ್ತಿರಲಿ, ಅಥವಾ ಗೇಮಿಂಗ್ನಲ್ಲಿರಲಿ, MediaTek HyperEngine ಆಪ್ಟಿಮೈಸೇಷನ್ಗಳು ಸುಗಮವಾದ, ಸ್ಥಿರವಾದ ಮತ್ತು ಸ್ಪಂದನಶೀಲ ಕಾರ್ಯಾಚರಣೆಯು ನಿಮ್ಮದಾಗುವಂತೆ ನೋಡಿಕೊಳ್ಳುತ್ತವೆ.
OPPO F31 5G ಅನ್ನು ನೋಡುವುದಾದರೆ, ಇದು ಈ ಸಿರೀಸ್ನ ಬಜೆಟ್ ಸ್ಮಾರ್ಟ್ ಮಾದರಿಯಾಗಿದೆ. ಇದರ ಬೆಲೆ ಕಡಿಮೆಯಿದೆ ಎಂದ ಮಾತ್ರಕ್ಕೆ ಗುಣಮಟ್ಟ ಕಡಿಮೆಯಿರುವುದೆಂದು ಭಾವಿಸಬೇಡಿ. ಇದನ್ನು MediaTek Dimensity 6300 Energy ಪ್ಲ್ಯಾಟ್ಫಾರ್ಮ್ನಿಂದ ಚಾಲಿತವಾದ 6nm ಪ್ರೊಸೆಸ್ನಲ್ಲಿ ಸಿದ್ಧಪಡಿಸಲಾಗಿದ್ದು, ಇದು 8-core ARM CPU ಮತ್ತು Mali GPU ಹೊಂದುವ ಮೂಲಕ ತನ್ನ ಹಿಂದಿನ ಆವೃತ್ತಿಗಿಂತ 50% ವೇಗವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. 2.4GHz ಗರಿಷ್ಠ ವೇಗವನ್ನು ಹೊಂದಿರುವ ಈ ಫೋನ್, ಬಳಕೆದಾರರಿಗೆ ಬ್ಯಾಟರಿ ಬೇಗ ಖಾಲಿಯಾಗುವ ಆತಂಕವನ್ನೂ ಬರಲು ಕೊಡುವುದಿಲ್ಲ ಜೊತೆಗೆ ವಿಶ್ವಾಸಾರ್ಹತೆಯನ್ನೂ ನೀಡುತ್ತದೆ. ಇದು WhatsApp, YouTube, ಮತ್ತು GPS ನ್ಯಾವಿಗೇಷನ್ ಅನ್ನು ಏಕಕಾಲದಲ್ಲಿ ಯಾವುದೇ ಲ್ಯಾಗ್ ಇಲ್ಲದೆ, ತೊಂದರೆಯಿಲ್ಲದೆ ನಿರ್ವಹಿಸಬಲ್ಲ ಸಾಧನವಾಗಿದೆ.
OPPO F31 ಸಿರೀಸ್ 5Gಯಲ್ಲಿನ ಪ್ರತಿಯೊಂದು ಫೋನ್ ಕೂಡ ವಿಭಿನ್ನ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ, ಆದರೆ ಎಲ್ಲ ಫೋನ್ಗಳಲ್ಲೂ ಒಂದು ಸಾಮಾನ್ಯ ವಿಷಯವಿದೆ: ಸ್ಥಿರವಾದ, ಸ್ಪಂದನಶೀಲ, ನೈಜ–ಜಗತ್ತಿನ ಕಾರ್ಯಕ್ಷಮತೆ. ನೀವು ಕ್ರಿಯೇಟರ್ ಆಗಿರಲಿ, ವಿದ್ಯಾರ್ಥಿಯಾಗಿರಲಿ, ಅಂಗಡಿಯವರಾಗಿರಲಿ, ಗಿಗ್ ಕೆಲಸಗಾರರಾಗಿರಲಿ, ಅಥವಾ ವೀಕೆಂಡ್ ಗೇಮರ್ ಆಗಿರಲಿ, ಈ ಫೋನ್ಗಳು ಮಳೆಯಲ್ಲೂ, ಬಿಸಿಲಿನಲ್ಲೂ ನಿಮ್ಮೊಂದಿಗೆ ನಿರಂತರವಾಗಿ ಸಾಗುತ್ತಿರುತ್ತವೆ.
ಸುದೀರ್ಘ ಬಾಳಿಕೆಗಾಗಿಯೇ ನಿರ್ಮಿಸಲಾಗಿದೆ: 7000mAh, 80W SUPERVOOC, 72-ತಿಂಗಳ ಸುಗಮ ಕಾರ್ಯಾಚರಣೆಯ ಪ್ರಮಾಣೀಕರಣ
ಅತ್ಯಂತ ಗಟ್ಟಿಮುಟ್ಟಾದ ಫೋನ್ಗಳೂ ಹಾಳಾಗುತ್ತವೆ… ಸರಿಯೇ?
ಭಾರತದಲ್ಲಿ, ಫೋನ್ ಎಂಬುದು ಕೇವಲ ಒಂದು ಸಾಧನವಲ್ಲ, ಅದು ಜನರ ಜೀವನಾಡಿ ಎಂದು OPPO ಗೆ ತಿಳಿದಿದೆ. ಸದಾ ಟ್ರಾಫಿಕ್ನಲ್ಲಿಯೇ ಓಡಾಡುವ ಡೆಲಿವರಿ ಪಾರ್ಟ್ನರ್ಗಳಿಗೆ, ಪೀಕ್–ಅವರ್ ಗದ್ದಲದಲ್ಲಿ ನ್ಯಾವಿಗೇಟ್ ಮಾಡುವ ರೈಡ್–ಶೇರ್ ಡ್ರೈವರ್ಗಳಿಗೆ, ಮತ್ತು ತಮ್ಮ ಇಡೀ ದಿನವನ್ನು 6-ಇಂಚಿನ ಸ್ಕ್ರೀನ್ ಮುಖಾಂತರವೇ ನಡೆಸುವ ಗಿಗ್ ಕೆಲಸಗಾರರಿಗೆ, ಕೆಲಸವನ್ನು ನಿಲ್ಲಿಸುವ ಆಯ್ಕೆಯೇ ಇರುವುದಿಲ್ಲ. ಹಾಗಾಗಿ ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರಲಿ ಎಂದು OPPO F31 ಸಿರೀಸ್ 5G ಅನ್ನು ವಿನ್ಯಾಸಗೊಳಿಸಲಾಗಿದೆ.
ಬ್ಯಾಟರಿಯಿಂದ ಪ್ರಾರಂಭಿಸೋಣ. OPPO F31 ಸಿರೀಸ್ 5G ಅಪಾರ ಶಕ್ತಿಯ 7000 mAh ಬ್ಯಾಟರಿಯನ್ನು ಹೊಂದಿದೆ – ಅದರ ವರ್ಗದ ಫೋನ್ಗಳಲ್ಲಿ ಭಾರೀ ಶಕ್ತಿಯುತವಾಗಿದ್ದು – ಅತಿಯಾಗಿ ಬಳಸಿದರೂ, ಇದು ಕೇವಲ ಒಂದು ದಿನವಲ್ಲ, ಸಾಮಾನ್ಯವಾಗಿ ಎರಡು ದಿನಗಳವರೆಗೆ ಚಾರ್ಜ್ ನಿಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. OPPO ಕೇವಲ ಅಂದಕ್ಕಾಗಿ ದೊಡ್ಡದಾದ ಬ್ಯಾಟರಿಯನ್ನು ನೀಡಿಲ್ಲ; ಈ ಬ್ಯಾಟರಿಯನ್ನು 5 ವರ್ಷಗಳ ದೈನಂದಿನ ಬಳಕೆಗಾಗಿ ನಿರ್ಮಿಸಲಾಗಿದೆ. ಇನ್ನು, ಚಾರ್ಜ್ ಇದೆಯೇ ಇಲ್ಲವೇ ಎಂದು ಪದೇ ಪದೇ ನೋಡುವ ಅಥವಾ ಚಿಂತಿಸುವ ಅಗತ್ಯವಿಲ್ಲ.
ಮತ್ತು ನೀವು ಚಾರ್ಜ್ ಮಾಡಬೇಕಾದಾಗ? ನಿಮ್ಮ ಬಳಿಯಿರುವ 80W SUPERVOOC ಫ್ಲ್ಯಾಶ್ ಚಾರ್ಜ್, ಕೇವಲ 61 ನಿಮಿಷಗಳಲ್ಲಿ ಚಾರ್ಜ್ ಅನ್ನು 0 ದಿಂದ 100% ವರೆಗೆ ತಲುಪಿಸುತ್ತದೆ. ಸಾಮಾನ್ಯವಾಗಿ, 30 ನಿಮಿಷಗಳಲ್ಲಿ 0 ದಿಂದ 58% ಗೆ ಚಾರ್ಜ್ ಏರುತ್ತದೆ. ಹೆಚ್ಚಿನ ಸಮಯದಲ್ಲಿ ಇದು ಬೇಕಾದಷ್ಟಾಗುತ್ತದೆ. ವಿಪರೀತ ಕೆಲಸದ ನಡುವೆ ತ್ವರಿತವಾಗಿ ಚಾರ್ಜ್ ಮಾಡಬೇಕಾಗಿದೆಯೇ? 5 ನಿಮಿಷಗಳ ಚಾರ್ಜ್ 14% ಗೆ ತಲುಪಿಸುತ್ತದೆ. ಆದರೂ, ನಿಮ್ಮ ಬಳಿ ಸ್ವಲ್ಪ ಹೆಚ್ಚಿನ ಸಮಯವಿದ್ದರೆ ಮತ್ತು ಚಾರ್ಜ್ ಆಗುವಾಗಲೇ ಗೇಮ್ ಆಡಲು ಬಯಸಿದರೆ, ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವು ನೇರವಾಗಿ ಮದರ್ಬೋರ್ಡ್ಗೆ ವಿದ್ಯುತ್ ಪ್ರವಹಿಸುವಂತೆ ಮಾಡಿ, ಬ್ಯಾಟರಿಯು ಬಿಸಿಯಾಗುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತದೆ. ಇದರರ್ಥ ಕಡಿಮೆ ತಾಪಮಾನ, ಸುಗಮವಾದ ಕಾರ್ಯನಿರ್ವಹಣೆ, ಮತ್ತು ಸುದೀರ್ಘ ಕಾಲದವರೆಗೂ ಚೆನ್ನಾಗಿರುವ ಬ್ಯಾಟರಿ ಆರೋಗ್ಯ.
ಇನ್ನು, ಶಾಖದ ಬಗ್ಗೆ ಹೇಳುವುದಾದರೆ, OPPO ದ 5,219mm² SuperCool VC System OPPO F31 ಸಿರೀಸ್ 5G ಅನ್ನು 45°C ತಾಪಮಾನದಲ್ಲೂ ಬಿಸಿಯಾಗಲು ಬಿಡುವುದಿಲ್ಲ ಮತ್ತು ಫೋನ್ ಅನ್ನು ಸ್ಥಿರವಾಗಿರಿಸುತ್ತದೆ, ಆದ್ದರಿಂದ ಬೇಸಿಗೆಯ ಶಾಖದ ಕಾರಣದಿಂದಾಗಿ ನಿಮ್ಮ ಕೆಲಸವು ಎಂದಿಗೂ ಅಡಚಣೆಗೆ ಒಳಗಾಗುವುದಿಲ್ಲ. ನೀವು ಸ್ವಿಗ್ಗಿ (Swiggy) ಯಲ್ಲಿ ಲೈವ್ ಆರ್ಡರ್ಗಳನ್ನು ಟ್ರ್ಯಾಕ್ ಮಾಡುತ್ತಿರಲಿ, ದೀರ್ಘಾವಧಿಯ ರೈಡ್ಗಳಿಗಾಗಿ ಮ್ಯಾಪ್ಸ್ (Maps) ಬಳಸುತ್ತಿರಲಿ, ಅಥವಾ ಇದ್ದಕ್ಕಿದ್ದಂತೆ ಗೂಗಲ್ ಟ್ರಾನ್ಸ್ಲೇಟ್ (Google Translate) ಬಳಸತೊಡಗಲಿ, ನಿಮ್ಮ ಫೋನ್ ತಂಪಾಗಿ, ಸ್ಥಿರವಾಗಿದ್ದು, ಸುಗಮವಾಗಿ ಕಾರ್ಯನಿರ್ವಹಿಸುತ್ತದೆ.
ಈಗ ದೀರ್ಘಾವಧಿಯ ಸುಗಮ ಕಾರ್ಯಾಚರಣೆಯ ಭರವಸೆಯನ್ನು ನೋಡೋಣ – ಹೆಚ್ಚಾಗಿ ಯಾವ ಬ್ರ್ಯಾಂಡ್ಗಳೂ ಈ ಭರವಸೆಯನ್ನು ನೀಡುವ ಧೈರ್ಯವನ್ನು ಮಾಡುವುದಿಲ್ಲ. OPPO F31 ಸಿರೀಸ್ 5G ಕನಿಷ್ಠ 72 ತಿಂಗಳುಗಳವರೆಗೆ ಸುಗಮ ಕಾರ್ಯಾಚರಣೆಯ ಮಾಡುತ್ತದೆ ಎಂದು OPPO ಭರವಸೆ ನೀಡುತ್ತದೆ. ಅಂದರೆ, 6 ವರ್ಷಗಳವರೆಗೆ ಕಾರ್ಯನಿರ್ವಹಣೆಯಲ್ಲಿ ಯಾವುದೇ ಅಡಚಣೆಗಳಿಲ್ಲ, ಲ್ಯಾಗ್ ಇಲ್ಲ, ಮತ್ತು “ನನ್ನ ಫೋನ್ ನಿಧಾನವಾಗಿದೆ” ಎಂದು ಹೇಳುವ ಪರಿಸ್ಥಿತಿ ಬರುವುದಿಲ್ಲ. ಒಂದು ವೇಳೆ ನಿಮ್ಮ ಫೋನ್ ಎಂದಾದರೂ ಸ್ವಲ್ಪ ನಿಧಾನವಾಗಿದೆಯೆಂದು ಅನಿಸಿದರೆ? One-Tap Rejuvenation ಫೀಚರ್ ಅನ್ನು ಟ್ಯಾಪ್ ಮಾಡಿದರಾಯಿತು, ಇದು RAM ಅನ್ನು ಆಪ್ಟಿಮೈಸ್ ಮಾಡುತ್ತದೆ, ಜಂಕ್ ಕ್ಲಿಯರ್ ಮಾಡುತ್ತದೆ, ಮತ್ತು ಸಂಪೂರ್ಣ ರೀಸೆಟ್ ಅಗತ್ಯವಿಲ್ಲದೆ ಫೋನ್ ಅನ್ನು ಮತ್ತೆ ಗರಿಷ್ಠ ವೇಗಕ್ಕೆ ತರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಒಂದೆರಡು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ, ಅಲ್ಲಲ್ಲ, ಐದು ವರ್ಷಕ್ಕೂ ನೀವು ಬದಲಾಯಿಸಬೇಕಾದ ಫೋನ್ ಅಲ್ಲ; ದೀರ್ಘಕಾಲದವರೆಗೆ ಬಾಳಲು ಮತ್ತು ಕಾರ್ಯನಿರ್ವಹಿಸುವುದಕ್ಕಾಗಿಯೇ ಪರೀಕ್ಷಿಸಿ ಸಿದ್ಧಪಡಿಸಿದ ಫೋನ್. ಇದು ಯಾರಿಗಾಗಿ ನಿರ್ಮಿಸಲ್ಪಟ್ಟಿದೆಯೋ ಅವರಷ್ಟೇ ಗಟ್ಟಿಮುಟ್ಟು.
ಸಹಾಯ ಮಾಡುವ AI, ಸೂಕ್ತವಾದ ಫೀಚರ್ಗಳು
ಶಕ್ತಿ ಮತ್ತು ಬಾಳಿಕೆಯ ವಿಷಯದಲ್ಲಂತೂ ಇದು ಟಾಪ್ ಪರ್ಫಾರ್ಮರ್ ಎಂಬುದು ತಿಳಿದಿರುವ ಸಂಗತಿ. OPPO F31 ಸಿರೀಸ್ 5G ಅನ್ನು ಎದ್ದು ಕಾಣುವಂತೆ ಮಾಡುವುದು ಅದರ ಚತುರತೆ: ನಿಮ್ಮ ದೈನಂದಿನ ಜೀವನದ ಸಣ್ಣಪುಟ್ಟ ಸಮಸ್ಯೆಗಳನ್ನು ಅದು ಹೇಗೆ ಸುಲಭವಾಗಿ ನಿವಾರಿಸುತ್ತದೆ ಎಂಬುದೇ ಅದರ ವೈಶಿಷ್ಟ್ಯ. ಏಕೆಂದರೆ, ವಾಸ್ತವವಾಗಿ ಯೋಚಿಸಿದರೆ, ಫೋನ್ ಎಂದರೆ ಅದರಲ್ಲಿ ಕೇವಲ ಶಕ್ತಿಶಾಲಿ ಹಾರ್ಡ್ವೇರ್ ಇರುವುದಷ್ಟೇ ಮುಖ್ಯವಲ್ಲ. ಅದು ನಿಮ್ಮ ದಿನವನ್ನು ಹೇಗೆ ಸುಲಭಗೊಳಿಸುತ್ತದೆ ಎಂಬುದು ಅತಿ ಮಹತ್ವದ್ದಾಗಿರುತ್ತದೆ.
AI VoiceScribe ಅನ್ನು ತೆಗೆದುಕೊಳ್ಳಿ. ನೀವು ಉಪನ್ಯಾಸದ ನೋಟ್ಸ್ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಯಾಗಿರಲಿ, ಕ್ಲೈಂಟ್ನಿಂದ ಸೂಚನೆಗಳನ್ನು ಪಡೆಯುತ್ತಿರುವ ಡೆಲಿವರಿ ಪಾರ್ಟ್ನರ್ ಆಗಿರಲಿ, ಅಥವಾ ಒಂದಾದ ಮೇಲೊಂದು ಕರೆಗಳನ್ನು ಸ್ವೀಕರಿಸುವ ವೃತ್ತಿಪರರಾಗಿರಲಿ, VoiceScribe ಮಾತುಗಳನ್ನು 30ಕ್ಕೂ ಹೆಚ್ಚು ಭಾಷೆಗಳಲ್ಲಿ ಅಚ್ಚುಕಟ್ಟಾಗಿ, ಓದಬಹುದಾದ ಪಠ್ಯವಾಗಿ ತಕ್ಷಣವೇ ಬರವಣಿಗೆ ರೂಪಕ್ಕೆ ಪರಿವರ್ತಿಸುತ್ತದೆ. ಇದು ನೈಜ ಸಮಯದಲ್ಲಿ ಅನುವಾದವನ್ನೂ ಮಾಡುತ್ತದೆ. ನೀವೇ ಕಲ್ಪಿಸಿಕೊಳ್ಳಿ, ನೀವು ಗ್ರಾಹಕರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತೀರಿ ಮತ್ತು ಕೆಲವೇ ಸೆಕೆಂಡ್ಗಳಲ್ಲಿ ಅದು ಇಂಗ್ಲಿಷ್ ಅಥವಾ ತಮಿಳಿನಲ್ಲಿ ಕಾಣಿಸಿಕೊಳ್ಳುತ್ತದೆ. ನಿಜವಾಗಿ ಅಗತ್ಯವಾಗಿರುವ AI ಎಂದರೆ ಇದು.
ಅಥವಾ AI Call Translator – ಒಂದೇ ಭಾಷೆ ಮಾತನಾಡದ ಗ್ರಾಹಕರು, ಸಹೋದ್ಯೋಗಿಗಳು, ಅಥವಾ ಸ್ನೇಹಿತರೊಂದಿಗೆ ವ್ಯವಹರಿಸುವ ಯಾರಿಗಾದರೂ ಇದು ದೇವರು ನೀಡಿದ ವರವೇ ಸರಿ. ಕರೆಗಳನ್ನು ಸ್ಕ್ರೀನ್ ಮೇಲೆ ಸಬ್ಟೈಟಲ್ಗಳೊಂದಿಗೆ ಅಥವಾ ವಾಯ್ಸ್ ಡಬ್ಬಿಂಗ್ನೊಂದಿಗೆ ನೈಜವಾಗಿ ಅರ್ಥೈಸಲಾಗುತ್ತದೆ. ಈ ಹಿಂದೆ ಅರ್ಥವಾಗದೇ ಇರುಸುಮುರುಸು ಉಂಟುಮಾಡುತ್ತಿದ್ದ ಸಂಭಾಷಣೆಗಳು ಈಗ ಇದ್ದಕ್ಕಿದ್ದಂತೆ ಸುಗಮ, ಸಹಜ, ಮತ್ತು ಅಡಚಣೆ–ಮುಕ್ತವಾಗಿವೆ.
ಇದರಲ್ಲಿ Outdoor Mode 2.0 ಲಭ್ಯವಿದ್ದು, ಇದನ್ನು ವಿಶೇಷವಾಗಿ ಭಾರತದ ಗಿಗ್ ಆರ್ಥಿಕತೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ರೈಡ್–ಹೈಲಿಂಗ್ ಡ್ರೈವರ್ಗಳು, ಡೆಲಿವರಿ ರೈಡರ್ಗಳು, ಮತ್ತು ಕೊರಿಯರ್ಗಳಿಗಾಗಿ, ಇದು ನೈಜ–ಪ್ರಪಂಚದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಆಪ್ಟಿಮೈಸೇಷನ್ಗಳ ಸೂಟ್ ಅನ್ನು ನೀಡುತ್ತದೆ. ಇದು ಪ್ರಖರ ಮಧ್ಯಾಹ್ನ ಬಿಸಿಲಿನಲ್ಲೂ ನಿಮಗೆ ಸ್ಕ್ರೀನ್ ಕಾಣಿಸುವಂತೆ ಬ್ರೈಟ್ನೆಸ್ ಅನ್ನು ಹೆಚ್ಚಿಸುತ್ತದೆ, ಮತ್ತು ನೀವು ಪ್ರಯಾಣದಲ್ಲಿರುವಾಗ ಸಮಯ–ಸೂಕ್ಷ್ಮ ಅಪ್ಡೇಟ್ಗಳನ್ನು ತಪ್ಪಿಸಿಕೊಳ್ಳದಂತೆ ಅಲರ್ಟ್ಗಳನ್ನು ಒದಗಿಸುತ್ತದೆ. ಝೊಮಾಟೊ (Zomato), ಸ್ವಿಗ್ಗಿ (Swiggy), ಮತ್ತು ಬ್ಲಿಂಕಿಟ್ (Blinkit) ನಂತಹ ಜನಪ್ರಿಯ ರೈಡರ್ ಆ್ಯಪ್ಗಳನ್ನು ತ್ವರಿತ ಆ್ಯಕ್ಸಸ್ ಮಾಡಲು ನಿಮ್ಮ ಹೋಮ್ ಸ್ಕ್ರೀನ್ಗೆ ಪಿನ್ ಮಾಡಲೂ ಅವಕಾಶವಿದೆ.
ಮತ್ತು Order Rush Boost ನೊಂದಿಗೆ, ಫೋನ್ ರೈಡರ್ ಅಪ್ಲಿಕೇಶನ್ಗಳಿಗೆ ಡೇಟಾ ಮತ್ತು ಬ್ಯಾಂಡ್ವಿಡ್ತ್ ಆದ್ಯತೆಯನ್ನು ನೀಡಿ ಲೇಟೆನ್ಸಿಯನ್ನು ಕಡಿಮೆ ಮಾಡುತ್ತದೆ ಮತ್ತು ಆರ್ಡರ್ ಪಡೆಯುವ ವೇಗವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, App Keep-Alive ವೈಶಿಷ್ಟ್ಯವು ಈ ಆ್ಯಪ್ಗಳು ಬ್ಯಾಕ್ಗ್ರೌಂಡ್ನಲ್ಲಿ ಆ್ಯಕ್ಟಿವ್ ಆಗಿ ಉಳಿಯುವಂತೆ ಮಾಡುತ್ತದೆ, ಆದ್ದರಿಂದ ನಿಮ್ಮ ಫೋನ್ ಸ್ಲೀಪ್ ಮೋಡ್ಗೆ ಹೋಯಿತು ಎಂಬ ಕಾರಣದಿಂದ ನೀವು ಡೆಲಿವರಿ ರಿಕ್ವೆಸ್ಟ್ ಅನ್ನು ತಪ್ಪಿಸಿಕೊಳ್ಳುವ ಪ್ರಸಂಗವೇ ಬರುವುದಿಲ್ಲ. Glove Mode ಮತ್ತು Splash Touch ವೈಶಿಷ್ಟ್ಯದ ಸಹಾಯದಿಂದ, 5mm ದಪ್ಪದ ಗ್ಲೋವ್ಸ್ ಹಾಕಿದ್ದರೂ ಮತ್ತು ಕೈಗಳು ಒದ್ದೆಯಾಗಿದ್ದರೂ ಸ್ಕ್ರೀನ್ ಸ್ಪಂದನಶೀಲವಾಗಿ ಇರುತ್ತದೆ – ನೀವು ಹೊರಗೆ ಮಳೆಯಲ್ಲಿದ್ದರೂ, ಚಳಿಯಲ್ಲಿದ್ದರೂ ಇದು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಹೆಚ್ಚುತ್ತಿರುವ ಫೋನ್ ಕಳ್ಳತನದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, OPPO Lock ವೈಶಿಷ್ಟ್ಯದೊಂದಿಗೆ OPPO ಭದ್ರತೆಗೆ ಭಾರೀ ಮಹತ್ವವನ್ನು ನೀಡಿದ್ದು, ಇದು ನಿಮ್ಮ ಡೇಟಾ ಗೌಪ್ಯತೆ ಮತ್ತು ನಿಮ್ಮ ಸಾಧನದ ಭೌತಿಕ ಭದ್ರತೆ ಎರಡನ್ನೂ ರಕ್ಷಿಸುವ ರಿಮೋಟ್ ಲಾಕ್ಡೌನ್ ವ್ಯವಸ್ಥೆಯಾಗಿದೆ. ನಿಮ್ಮ ಫೋನ್ ಎಂದಾದರೂ ಕಳೆದುಹೋದರೆ, ಅದನ್ನು ತಕ್ಷಣವೇ ಲಾಕ್ ಮಾಡಲು ನೀವು OPPO ಗ್ರಾಹಕ ಬೆಂಬಲವನ್ನು ಸಂಪರ್ಕಿಸಬಹುದು. ಲಾಕ್ ಆಗಿರುವಾಗ, ಸಿಸ್ಟಂ ಬಲವಂತವಾಗಿ ಮಾಡುವ ಶಟ್ಡೌನ್ ಅನ್ನು, USB ಡೇಟಾ ಕಳ್ಳತನವನ್ನು, ಫರ್ಮ್ವೇರ್ ಫ್ಲಾಶಿಂಗ್ ಅನ್ನು ತಡೆಯುತ್ತದೆ ಮತ್ತು NFC ಯನ್ನೂ ಡಿಸೇಬಲ್ ಮಾಡುತ್ತದೆ. ಸಿಮ್ ಕಾರ್ಡ್ ಹೊರತೆಗೆದ ತಕ್ಷಣವೇ ಇದು ಟೂ ಸ್ಟೆಪ್ ವೆರಿಫಿಕೇಶನ್ ಅನ್ನೂ ಸಕ್ರಿಯಗೊಳಿಸುತ್ತದೆ. ಅಂದರೆ, ನಿಮ್ಮ ಫೋನ್ ಕಳುವಾದರೂ, ನಿಮ್ಮ ಡೇಟಾ, ಹಣ, ಮತ್ತು ಗುರುತು ಸುರಕ್ಷಿತವಾಗಿ ಲಾಕ್ ಆಗಿ ಉಳಿಯುತ್ತವೆ. ಪೇಮೆಂಟ್ಗಳು, ಕಾಂಟ್ಯಾಕ್ಟ್ಗಳು, ಅಥವಾ ಬಿಸಿನೆಸ್ ಡೇಟಾವನ್ನು ತಮ್ಮ ಫೋನ್ನಲ್ಲಿ ಸ್ಟೋರ್ ಮಾಡುವ ಯಾರಿಗಾದರೂ – ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ನಮ್ಮೆಲ್ಲರಿಗೂ – ಈ ರೀತಿಯ ರಕ್ಷಣೆ ಅಮೂಲ್ಯವಾಗಿದೆ.
ಕೊನೆಯದಾಗಿ, ಇದು Google Gemini ಇಂಟಿಗ್ರೇಶನ್ ಅನ್ನೂ ಹೊಂದಿದೆ. ಡಾಕ್ಯುಮೆಂಟ್ಗಳ ಸಾರಾಂಶವನ್ನು ಪಡೆದುಕೊಳ್ಳಿ, ರಿಮೈಂಡರ್ಗಳನ್ನು ಸೆಟ್ ಮಾಡಿ, ಮೆಸೇಜ್/ಮೇಲ್ಗಳಿಗೆ ಉತ್ತರಗಳನ್ನು ಬರೆಯಿರಿ – ಇದು ನಿಮ್ಮ ಪ್ರತಿದಿನ ಬಳಸುವ ಆ್ಯಪ್ಗಳಲ್ಲಿ ಬಿಲ್ಟ್ ಇನ್ AI ಅಸಿಸ್ಟಂಟ್ ಅನ್ನು ಹೊಂದಿದಂತೆ. ಇದು ನಿಜವಾದ ಉತ್ಪಾದಕತೆಯ ವರ್ಧನೆಯಾಗಿದ್ದು, ವೇಗವಾಗಿ ಸಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸುತ್ತದೆ.
ಇವೆಲ್ಲವೂ ColorOS 15 ನಲ್ಲಿ ನಡೆಯುತ್ತದೆ ಮತ್ತು ಇದು ಎರಡು ವರ್ಷಗಳ OS ಅಪ್ಡೇಟ್ಗಳು ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ಗಳಿಂದ ಬೆಂಬಲಿತವಾಗಿದೆ. ಆದ್ದರಿಂದ ವರ್ಷಗಳು ಕಳೆದರೂ, ನಿಮ್ಮ ಫೋನ್ ಬಳಕೆಯ ಅನುಭವವು ಹೊಸದಾಗುತ್ತಿರುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ.
ಸಂಕ್ಷಿಪ್ತವಾಗಿ, OPPO F31 ಸಿರೀಸ್ 5G ಕೇವಲ ನಿಮ್ಮ ದಿನವನ್ನು ಪೂರ್ಣಗೊಳಿಸಲು ಸಹಾಯ ಮಾಡುವುದಷ್ಟೇ ಅಲ್ಲ – ನಿಮ್ಮ ಮೇಲಿರುವ ಹೊರೆಯನ್ನೂ ಹಗುರಗೊಳಿಸುತ್ತದೆ.
ಈಜಬಲ್ಲ ಕ್ಯಾಮೆರಾಗಳು
ಬಾಳಿಕೆಯು OPPO F31 ಸಿರೀಸ್ 5G ಯ ಮುಖ್ಯ ವೈಶಿಷ್ಟ್ಯವಾಗಿದ್ದರೂ, OPPO ಸೃಜನಶೀಲತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ನಿಜವಾಗಿ, ಈ ವಿಭಾಗದಲ್ಲಿ ನೀವು ಕಾಣಬಹುದಾದ ಅತ್ಯಂತ ಬಹುಮುಖ ಕ್ಯಾಮೆರಾ ಸಿಸ್ಟಂಗಳಲ್ಲಿ ಒಂದನ್ನು ಈ ಸಿರೀಸ್ ಹೊಂದಿದೆ.
OPPO F31 Pro+ 5G ಮತ್ತು OPPO F31 Pro 5G ಎರಡೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಒಳಗೊಂಡಿರುವ 50MP ಮುಖ್ಯ ಕ್ಯಾಮೆರಾದೊಂದಿಗೆ ಸನ್ನದ್ಧವಾಗಿದ್ದು, ಇವುಗಳು f/1.8 ಅಪರ್ಚರ್ ಲೆನ್ಸ್ನೊಂದಿಗೆ OmniVision 50D40 ಸೆನ್ಸಾರ್ ಅನ್ನು ಬಳಸುತ್ತವೆ. ಇದರಲ್ಲಿರುವ 1–10x ಝೂಮ್ ಮತ್ತು 30fpsನಲ್ಲಿ 4K ವೀಡಿಯೋ ಶೂಟ್ ಮಾಡುವ ಸಾಮರ್ಥ್ಯದ ನೆರವಿನಿಂದ ನೀವು ಸುಸ್ಪಷ್ಟ ಲೋ-ಲೈಟ್ ಫೋಟೋಗ್ರಫಿಯಿಂದ ಹಿಡಿದು ಕಂಪನವಿಲ್ಲದ ಸಿನಿಮ್ಯಾಟಿಕ್ ವೀಡಿಯೋವರೆಗೆ ಎಲ್ಲವನ್ನೂ ನಿಭಾಯಿಸುವ ಸೆಟಪ್ ಅನ್ನು ಹೊಂದುತ್ತೀರಿ. ನೀವು ಹೊಂಡಗುಂಡಿಗಳಿರುವ ರಸ್ತೆಯಲ್ಲಿ ಬೈಕ್ನ ಹಿಂಬದಿ ಕುಳಿತಿದ್ದರೂ, OIS ನಿಮ್ಮ ದೃಶ್ಯಾವಳಿಗಳನ್ನು ಸ್ಥಿರವಾಗಿರಿಸುತ್ತದೆ; ಮತ್ತು ನೀವು ರಾತ್ರಿಯಲ್ಲಿ ವೀಡಿಯೊ ಶೂಟ್ ಮಾಡುವಾಗ, ಬೆಳಕನ್ನು ಗೆರೆಗಳಾಗಿ ಪರಿವರ್ತಿಸದಂತೆ ಎಕ್ಸ್ಪೋಶರ್ಗಳು ದೀರ್ಘಕಾಲದವರೆಗೆ ಮತ್ತು ಸ್ಪಷ್ಟವಾಗಿ ಇರುತ್ತವೆ. ಇದರ ಜೊತೆಗೆ ಮುಖ್ಯ ಸೆನ್ಸಾರ್ ಅನ್ನು 2MP ಮೊನೊಕ್ರೋಮ್ ಕ್ಯಾಮೆರಾ ಬೆಂಬಲಿಸುತ್ತದೆ. ಮುಂಭಾಗದಲ್ಲಿ 32MP GalaxyCore 32E2 ಸೆಲ್ಫಿ ಕ್ಯಾಮೆರಾವನ್ನು ಪ್ರಸ್ತುತವಿದ್ದು – ಇದು ವ್ಲಾಗರ್ಗಳಿಗೆ, ವೀಡಿಯೋ ಕರೆಗಳಿಗೆ, ಅಥವಾ ನಿಮ್ಮನ್ನು ನೀವೇ ಅತ್ಯುತ್ತಮವಾಗಿ ಸೆರೆಹಿಡಿಯಲು ಸೂಕ್ತವಾಗಿದೆ.
OPPO F31 5G ಕೂಡ ತನ್ನ ವರ್ಗದ ಇತರ ಫೋನ್ಗಳಿಗಿಂತ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. OIS ಹೊಂದಿರುವ ಇದರ 50MP ಮುಖ್ಯ ಸೆನ್ಸಾರ್ ಮತ್ತು f/1.8 ಅಪಾರ್ಚರ್, ಫ್ಲ್ಯಾಗ್ಶಿಪ್–ಮಟ್ಟದ ಸ್ಪಷ್ಟ ದೃಶ್ಯಗಳನ್ನು ಸೆರೆಹಿಡಿದರೆ, 16MP Sony IMX480 ಫ್ರಂಟ್ ಕ್ಯಾಮೆರಾ, ಸೆಲ್ಫಿಗಳು ಮತ್ತು ವೀಡಿಯೋ ಕರೆಗಳು ಸುಂದರವಾಗಿ ಮತ್ತು ಸಹಜವಾಗಿ ಕಾಣುವಂತೆ ಮಾಡುತ್ತದೆ. 2MP ಪೋರ್ಟ್ರೇಟ್ ಲೆನ್ಸ್ ಚಿತ್ರಗಳಿಗೆ ವಿವರವಾದ ಪರಿಣಾಮಗಳನ್ನು ಸೇರಿಸಿ, ಪೋರ್ಟ್ರೇಟ್ಗಳು ಅತಿಯಾದ ಪ್ರೊಸೆಸಿಂಗ್ ಇಲ್ಲದೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಆದರೆ ಎಲ್ಲದಕ್ಕಿಂತ ವಿಶೇಷ ವೈಶಿಷ್ಟ್ಯವನ್ನು ಇನ್ನೂ ಹೇಳಬೇಕಿದೆ: F31 ಸಿರೀಸ್ ಅದರ ವರ್ಗದಲ್ಲಿ IP68 ಮತ್ತು IP69 ರೇಟಿಂಗ್ ಹೊಂದಿರುವ ಏಕೈಕ ಫೋನ್ ಸಿರೀಸ್ ಆಗಿದ್ದು, ಇದು ಒಂದು ದುಬಾರಿ ಅಂಡರ್ವಾಟರ್ ಕ್ಯಾಮೆರಾ ಮಾಡುವ ಕೆಲಸವನ್ನೇ ಸಮರ್ಥವಾಗಿ ಮಾಡುತ್ತದೆ. ಅಕ್ಷರಶಃ ನೀವು 1.5 ಮೀಟರ್ಗಳಷ್ಟು ಆಳದಲ್ಲಿ 30 ನಿಮಿಷಗಳವರೆಗೆ 4K ವೀಡಿಯೋವನ್ನು ಚಿತ್ರೀಕರಿಸಬಹುದು – ಯಾವುದೇ ಹಾನಿ, ತೊಂದರೆ ಹಾಗೂ ಭಯವಿಲ್ಲದೆ.
ಎಡಿಟಿಂಗ್ ವಿಷಯಕ್ಕೆ ಬಂದರೆ, OPPO ದ AI suite F31 ಸಿರೀಸ್ ಅನ್ನು ಪಾಕೆಟ್–ಗಾತ್ರದ ಕ್ರಿಯೇಟಿವ್ ಸ್ಟುಡಿಯೋ ಆಗಿ ಪರಿವರ್ತಿಸಿದೆ. AI Best Face ನಂತಹ ವೈಶಿಷ್ಟ್ಯಗಳು ಗ್ರೂಪ್ ಫೋಟೋಗಳಲ್ಲಿ ಎಲ್ಲರ ಅಭಿವ್ಯಕ್ತಿಗಳನ್ನು ಅತ್ಯುತ್ತಮವಾಗುವಂತೆ ಬದಲಾಯಿಸಿದರೆ, AI Eraser 2.0 ಫೋಟೊಬಾಂಬರ್ಗಳನ್ನು ಮತ್ತು ಅವ್ಯವಸ್ಥೆಯನ್ನು ಒಂದೇ ಟ್ಯಾಪ್ನಲ್ಲಿ ಅಳಿಸಿ ಹಾಕುತ್ತದೆ. AI Clarity Enhancer ಮತ್ತು AI Unblur ನಂತಹ ಟೂಲ್ಗಳು ಸಾಮಾನ್ಯವಾಗಿ ವ್ಯರ್ಥವಾಗುವ ಶಾಟ್ಗಳನ್ನು ಉಳಿಸಿದರೆ, AI Reflection Remover ಗ್ಲಾಸ್ನಿಂದ ಹೊರಹೊಮ್ಮಿದ ಹೊಳಪನ್ನು ಅಥವಾ ಮಿರರ್ ವಿಯರ್ಡ್ನೆಸ್ ಅನ್ನು ಸರಿಪಡಿಸುತ್ತದೆ. ವೀಡಿಯೊಗಳ ಗುಣಮಟ್ಟವೂ ಸುಧಾರಿಸುತ್ತದೆ – Ultra-Clear Frame Export ನಿಮ್ಮ ವೀಡಿಯೊ ಫೂಟೇಜ್ಗಳಿಂದ ನೇರವಾಗಿ ಸ್ಪಷ್ಟವಾದ ಚಿತ್ರಗಳನ್ನು ತೆಗೆದುಕೊಳ್ಳಲು ಅನುವಾಗುತ್ತದೆ.
ಅಂದರೆ, ಈಗ ಕಂಟೆಂಟ್ ಕ್ರಿಯೇಶನ್ ಬಹಳ ಸರಳವಾಗಿದೆ – ಕಷ್ಟಕರವಾದ ಎಡಿಟಿಂಗ್ ಕೆಲಸವಿಲ್ಲ. ಕ್ಯಾಮೆರಾ ಹಿಡಿಯಿರಿ, ಚಿತ್ರೀಕರಿಸಿ, ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ, ಮತ್ತು ಪೋಸ್ಟ್ ಮಾಡಿ. ಮುಗಿಯಿತು.
ಅಂತಿಮ ತೀರ್ಪು: ಭಾರತಕ್ಕಾಗಿಯೇ ನಿರ್ಮಿತ, ಎಲ್ಲ ಪರಿಸ್ಥಿತಿಗಳಿಗೂ ಸದಾ ಸಿದ್ಧ
ಭಾರತದ ಸ್ಮಾರ್ಟ್ಫೋನ್ ಬಳಕೆದಾರರಿಗೆ ತಮಗೆ ಏನು ಬೇಕು ಎಂದು ಸ್ಪಷ್ಟವಾಗಿ ತಿಳಿದಿದೆ: ಬೇಸಿಗೆಯ ಸುಡುಬಿಸಿಲು, ತಿಂಗಳುಗಟ್ಟಲೆ ಸುರಿಯುವ ನಿರಂತರ ಮಾನ್ಸೂನ್ ಮಳೆ, ಅತಿಯಾಗಿರುವ ದೈನಂದಿನ ಕೆಲಸದ ಹೊರೆ ಮತ್ತು ನಿರಂತರ ಹಲವು ವರ್ಷಗಳ ಬಳಕೆಯನ್ನು ತಡೆದುಕೊಳ್ಳಬಲ್ಲ ಫೋನ್ – ಅದು ಕೂಡ ಯಾವುದೇ ಅಡೆತಡೆಗಳಿಲ್ಲದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾದ ಸಾಧನವೇ OPPO F31 ಸಿರೀಸ್ 5G.
ಮಿಲಿಟರಿ–ದರ್ಜೆಯ ಬಾಳಿಕೆ, ಟ್ರಿಪಲ್ IP ರಕ್ಷಣೆ, ಮತ್ತು ದೈನಂದಿನ ಬಳಕೆಯ 18 ದ್ರವಗಳಿಗೆ ಪ್ರತಿರೋಧದೊಂದಿಗೆ OPPO F31 ಸಿರೀಸ್ 5G, ಹೆಚ್ಚಿನ ಸಾಧನಗಳು ತಡೆದುಕೊಳ್ಳಲು ಆಗದಂತಹ ಆಘಾತಗಳನ್ನು ಸಮರ್ಥವಾಗಿ ಎದುರಿಸುವಷ್ಟು ಗಟ್ಟಿಮುಟ್ಟಾಗಿದೆ. ಫ್ಲ್ಯಾಗ್ಶಿಪ್–ದರ್ಜೆಯ ಚಿಪ್ಸೆಟ್ಗಳು, ಐದು ವರ್ಷಗಳವರೆಗೆ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾದ 7000 mAh ಬ್ಯಾಟರಿ, ಮಿಂಚಿನ ವೇಗದ SUPERVOOC ಚಾರ್ಜಿಂಗ್, ಮತ್ತು OPPOದ 72-ತಿಂಗಳ ಸುಗಮ ಕಾರ್ಯಾಚರಣೆಯ ಭರವಸೆಯೊಂದಿಗೆ, ಇದನ್ನು ದೀರ್ಘಾವಧಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಮತ್ತು AI ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಅಕ್ಷರಶಃ ಈಜಬಲ್ಲ ಕ್ಯಾಮೆರಾಗಳೊಂದಿಗೆ, ಇದು ಕೇವಲ ಭಾರತದಲ್ಲಿ ಎದುರಾಗುವ ಗೊಂದಲವನ್ನು ನಿಭಾಯಿಸುವುದಷ್ಟೇ ಅಲ್ಲ – ಆ ಕೆಲಸದಲ್ಲಿ ಯಶಸ್ವಿಯೂ ಆಗುತ್ತದೆ.
ಸರಳವಾಗಿ ಹೇಳಬೇಕೆಂದರೆ: OPPO F31 ಸಿರೀಸ್ 5G ಇದುವರೆಗಿನ ಭಾರತದ ಅತ್ಯಂತ ಸೊಗಸಾದ ಗಟ್ಟಿಮುಟ್ಟಾದ ಫೋನ್ ಸಿರೀಸ್ ಆಗಿದೆ. ಇದು ಬೀಳುವುದರಿಂದ, ಧೂಳು, ಮತ್ತು ಮಳೆಯಿಂದ ರಕ್ಷಣೆ ನೀಡುವುದಷ್ಟೇ ಅಲ್ಲ; ಜೀವನದಲ್ಲಿ ಒದಗಿಬರುವ ಎಲ್ಲ ಸನ್ನಿವೇಶಗಳನ್ನೂ ವಿಶ್ವಾಸದಿಂದ, ಶಕ್ತಿಶಾಲಿಯಾಗಿ, ಮತ್ತು ಬುದ್ಧಿವಂತಿಕೆಯಿಂದ ಎದುರಿಸುತ್ತದೆ.
ಕೆಲಸ, ಆಟ, ಮತ್ತು ಎಲ್ಲ ವಿಷಯಗಳಿಗೂ ತಮ್ಮ ಫೋನ್ಗಳನ್ನೇ ಅವಲಂಬಿಸಿರುವ ಲಕ್ಷಾಂತರ ಜನರಿಗೆ, ಇದು ಕೇವಲ ಒಂದು ಅಪ್ಗ್ರೇಡ್ ಅಲ್ಲ. ಇದು ನಿಮ್ಮ ಜೇಬಿನಲ್ಲಿ ಕುಳಿತುಕೊಳ್ಳುವ ಮನಃಶಾಂತಿ.
New Delhi,New Delhi,Delhi
September 24, 2025 1:11 PM IST