ಟೀಂ ಇಂಡಿಯಾ ಫೈನಲ್ ತಲುಪಿದ್ದರೂ, ಎಲ್ಲವೂ ಸರಿ ಇಲ್ಲ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪ್ರತಿ ಪಂದ್ಯದಲ್ಲೂ ಅಬ್ಬರಿಸುತ್ತಿರುವುದರಿಂದ, ತಂಡಕ್ಕೆ ಉತ್ತಮ ಆರಂಭ ಸಿಗುತ್ತಿದೆ. ಆದರೆ, ಅವರು ಬೇಗ ಔಟಾದರೆ ತಂಡದ ಕಥೆ ಏನು? ಯಾಕಂದ್ರೆ, ಸೂರ್ಯಕುಮಾರ್ ಯಾದವ್ ಫಾರ್ಮ್ನಲ್ಲಿಲ್ಲ, ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಒದ್ದಾಡುತ್ತಿದ್ದಾರೆ. ಗಿಲ್ ಚೆನ್ನಾಗಿ ಆಡಿದರೂ, ವಿಕೆಟ್ ಒಪ್ಪಿಸುತ್ತಿದ್ದಾರೆ. ಈ ದೌರ್ಬಲ್ಯಗಳನ್ನು ಫೈನಲ್ಗೂ ಮುನ್ನ ಸರಿಪಡಿಸಿಕೊಳ್ಳಬೇಕಿದೆ.