Asia Cup 2025: ಏಷ್ಯಾಕಪ್ ಟಿ20ಯಲ್ಲಿ ಗರಿಷ್ಠ ಮೊತ್ತ! ಟೂರ್ನಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ತಂಡ ಭಾರತ | India Makes History in Asia Cup 2025: First Team to Achieve this Milestone | ಕ್ರೀಡೆ

Asia Cup 2025: ಏಷ್ಯಾಕಪ್ ಟಿ20ಯಲ್ಲಿ ಗರಿಷ್ಠ ಮೊತ್ತ! ಟೂರ್ನಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ತಂಡ ಭಾರತ | India Makes History in Asia Cup 2025: First Team to Achieve this Milestone | ಕ್ರೀಡೆ

Last Updated:


ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 20 ಓವರ್‌ಗಳಲ್ಲಿ 202/5 ರನ್‌ಗಳನ್ನು ಗಳಿಸಿತು. ಈ ಮೂಲಕ ಟೂರ್ನಿಯಲ್ಲಿ 2 ಬಾರಿ 200ರ ಗಡಿ ದಾಟಿದ ತಂಡ ಎಂಬ ದಾಖಲೆಗೆ ಪಾತ್ರರಾದರು.

ಭಾರತ ತಂಡಭಾರತ ತಂಡ
ಭಾರತ ತಂಡ

ಏಷ್ಯಾ ಕಪ್ 2025ರ (Asia Cup) ಸೂಪರ್ 4 ಕೊನೆಯ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ (India vs Sri Lanka) ವಿರುದ್ಧ 20 ಓವರ್‌ಗಳಲ್ಲಿ 202/5 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಈ ಟೂರ್ನಿಯಲ್ಲಿ ಮೊದಲ ಬಾರಿಗೆ 200+ ರನ್‌ಗಳ ಸ್ಕೋರ್ ಆಗಿದೆ. ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) 31 ಬಾಲ್‌ಗಳಲ್ಲಿ 61 ರನ್‌ಗಳ ಭರ್ಜರಿ ಇನ್ನಿಂಗ್ಸ್ ಮತ್ತು ತಿಲಕ್ ವರ್ಮಾ 34 ಬಾಲ್‌ಗಳಲ್ಲಿ ಅಜೇಯ 49 ರನ್‌ ಈ ಸಾಧನೆಗೆ ಕಾರಣವಾಯಿತು. ಈ ಗೆಲುವು ಭಾರತವನ್ನು ಸೆಪ್ಟೆಂಬರ್ 28ರ ಫೈನಲ್‌ಗೆ (ಪಾಕಿಸ್ತಾನ ವಿರುದ್ಧ) ಇನ್ನಷ್ಟು ಬಲಿಷ್ಠಗೊಳಿಸಿದೆ.

ಶ್ರೀಲಂಕಾ ವಿರುದ್ಧ ಭಾರತದ ಬ್ಯಾಟಿಂಗ್

ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ಭಾರತ ತಂಡವು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 20 ಓವರ್‌ಗಳಲ್ಲಿ 202/5 ರನ್‌ಗಳನ್ನು ಗಳಿಸಿತು. ಈ 202/5 ರನ್‌ಗಳು ಏಷ್ಯಾ ಕಪ್ 2025ರಲ್ಲಿ ಯಾವುದೇ ತಂಡ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಈ ಟೂರ್ನಿಯ ಈ ಹಿಂದಿನ ಅತ್ಯಧಿಕ ಮೊತ್ತವೆಂದರೆ ಅಫ್ಘಾನಿಸ್ತಾನದ 188/6 (ಹಾಂಗ್ ಕಾಂಗ್ ವಿರುದ್ಧ, ಸೆಪ್ಟೆಂಬರ್ 9) ಮತ್ತು ಭಾರತದ 188/8 (ಒಮಾನ್ ವಿರುದ್ಧ, ಸೆಪ್ಟೆಂಬರ್ 19) ಆಗಿತ್ತು.

ಏಷ್ಯಾ ಕಪ್ 2025ರ ಅತ್ಯಧಿಕ ತಂಡದ ಮೊತ್ತಗಳು

ಭಾರತ – 202/5 vs ಶ್ರೀಲಂಕಾ – ದುಬೈ

ಅಫ್ಘಾನಿಸ್ತಾನ-188/6 vs ಹಾಂಗ್ ಕಾಂಗ್

ಭಾರತ- 188/8 vs ಒಮಾನ್

ಭಾರತ -174/4 vs ಪಾಕಿಸ್ತಾನ

ಯುಎಇ – 172/5 vs ಒಮಾನ್

ಏಷ್ಯಾ ಕಪ್ T20 ಇತಿಹಾಸದಲ್ಲಿ 200+ ರನ್‌ಗಳು

ಏಷ್ಯಾ ಕಪ್ T20 ಇತಿಹಾಸದಲ್ಲಿ ಕೇವಲ ಎರಡು ಬಾರಿ ತಂಡವೊಂದು 200+ ರನ್‌ಗಳನ್ನು ಗಳಿಸಿದ್ದು, ಎರಡೂ ಬಾರಿ ಭಾರತವೇ ಈ ಸಾಧನೆ ಮಾಡಿದೆ. 2022ರ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಈ ಸಾಧನೆ ಮಾಡಿತ್ತು. ವಿರಾಟ್ ಕೊಹ್ಲಿ 61 ಬಾಲ್‌ಗಳಲ್ಲಿ ಅಜೇಯ 122 ರನ್‌ಗಳು ಮತ್ತು ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿದ್ದರು. ಇದೀಗ ಶ್ರೀಲಂಕಾ ವಿರುದ್ಧ ಭಾರತ 202/5 ರನ್​ಗಳಿಸಿದೆ. ಅಭಿಷೇಕ್ ಶರ್ಮಾ (61) ಮತ್ತು ತಿಲಕ್ ವರ್ಮಾ (49*) ರನ್‌ಗಳಿಸಿ ಈ ವಿಶೇಷ ದಾಖಲೆಗೆ ಕಾರಣರಾದರು.

ಏಷ್ಯಾ ಕಪ್ T20 ಇತಿಹಾಸದ ಅತ್ಯಧಿಕ ಮೊತ್ತ

ಭಾರತ – 212/2 vs   ಅಫ್ಘಾನಿಸ್ತಾನ -2022

ಭಾರತ | 202/5 vs ಶ್ರೀಲಂಕಾ-2025

ಪಾಕಿಸ್ತಾನ | 193/2 vsಹಾಂಗ್ ಕಾಂಗ್- 2022

ಭಾರತ | 192/2 vsಹಾಂಗ್ ಕಾಂಗ್-, 2022

ಅಫ್ಘಾನಿಸ್ತಾನ| 188/6 vs ಹಾಂಗ್ ಕಾಂಗ್ -2025

ಭಾರತ | 188/8 vs ಒಮಾನ್ – 2025

ಶ್ರೀಲಂಕಾ | 184/8 vs ಬಾಂಗ್ಲಾದೇಶ- 2022

ಬಾಂಗ್ಲಾದೇಶ | 183/7 vs ಶ್ರೀಲಂಕಾ-2022

ಪಾಕಿಸ್ತಾನ | 182/5 vs ಭಾರತ- 2022

ಭಾರತ | 181/7 vs ಪಾಕಿಸ್ತಾನ-2022

ಆತ್ಮವಿಶ್ವಾಸದಲ್ಲಿ ಭಾರತ

ಈ 202/5 ರನ್‌ಗಳ ದಾಖಲೆ ಭಾರತಕ್ಕೆ ಫೈನಲ್‌ಗೂ ಮುನ್ನ ದೊಡ್ಡ ಆತ್ಮವಿಶ್ವಾಸ ನೀಡಿದೆ. ಅಭಿಷೇಕ್ ಶರ್ಮಾರ 309 ರನ್‌ಗಳ ಟೂರ್ನಿ ದಾಖಲೆ (3 ಅರ್ಧಶತಕಗಳು) ಮತ್ತು ತಿಲಕ್ ವರ್ಮಾರ ಸ್ಥಿರ ಪ್ರದರ್ಶನ ಭಾರತದ ಬ್ಯಾಟಿಂಗ್‌ನ್ನು ಬಲಗೊಳಿಸಿದೆ. ಆದರೆ, ಫೀಲ್ಡಿಂಗ್ ದೋಷಗಳು (12 ಕೈಚೆಲ್ಲಿದ ಕ್ಯಾಚ್‌ಗಳು) ಮತ್ತು ಹಾರ್ದಿಕ್ ಪಾಂಡ್ಯರ ಫಿಟ್‌ನೆಸ್ ಆತಂಕ ಸವಾಲಾಗಿದೆ.