Narendra Modi: ಆಟದ ಮೈದಾನದಲ್ಲೂ ಆಪರೇಷನ್​ ಸಿಂಧೂರ್ ಸಕ್ಸಸ್​! ಏಷ್ಯಾಕಪ್​ ಗೆದ್ದ ಭಾರತ ತಂಡಕ್ಕೆ ಪಿಎಂ ಮೋದಿ ಅಭಿನಂದನೆ | PM Modi’s ‘Operation Sindoor’ Tweet Scores Big After India Beats Pakistan in Asia Cup Final | ಕ್ರೀಡೆ

Narendra Modi: ಆಟದ ಮೈದಾನದಲ್ಲೂ ಆಪರೇಷನ್​ ಸಿಂಧೂರ್ ಸಕ್ಸಸ್​! ಏಷ್ಯಾಕಪ್​ ಗೆದ್ದ ಭಾರತ ತಂಡಕ್ಕೆ ಪಿಎಂ ಮೋದಿ ಅಭಿನಂದನೆ | PM Modi’s ‘Operation Sindoor’ Tweet Scores Big After India Beats Pakistan in Asia Cup Final | ಕ್ರೀಡೆ

Last Updated:

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್‌ಗಳು ಪಾಕಿಸ್ಥಾನದ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಪಾಕಿಸ್ಥಾನ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲ್‌ಔಟ್ ಆಯಿತು, ಭಾರತವು ಸಾಧಾರಣ ಗುರಿಯನ್ನ 5 ವಿಕೆಟ್‌ಗಳು ಕಳೆದುಕೊಂಡು 19.4 ಓವರ್‌ಗಳಲ್ಲಿ ಸಾಧಿಸಿತು.

ಭಾರತ ತಂಡಕ್ಕೆ ಮೋದಿ ಅಭಿನಂದನೆಭಾರತ ತಂಡಕ್ಕೆ ಮೋದಿ ಅಭಿನಂದನೆ
ಭಾರತ ತಂಡಕ್ಕೆ ಮೋದಿ ಅಭಿನಂದನೆ

ಭಾರತ ತಂಡವು ಏಷ್ಯಾ ಕಪ್ 2025ರ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್‌ಗಳು ಪಾಕಿಸ್ಥಾನದ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಪಾಕಿಸ್ಥಾನ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲ್‌ಔಟ್ ಆಯಿತು, ಭಾರತವು ಸಾಧಾರಣ ಗುರಿಯನ್ನ 5 ವಿಕೆಟ್‌ಗಳು ಕಳೆದುಕೊಂಡು 19.4 ಓವರ್‌ಗಳಲ್ಲಿ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 9ನೇ ಏಷ್ಯಾಕಪ್ ತನ್ನದಾಗಿಸಿಕೊಂಡಿತು.

ಪಾಕಿಸ್ತಾನ ನೀಡಿದ್ದ 147 ರನ್​ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 20 ರನ್​ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಅಭಿಷೇಕ್ ಶರ್ಮಾ (5), ಶುಭ್​ಮನ್ ಗಿಲ್ 12, ನಾಯಕ ಸೂರ್ಯಕುಮಾರ್ ಯಾದವ್ 1 ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ 57 ರನ್​ಗಳ ಜೊತೆಯಾಟ ನೀಡಿದರು. ಸಂಜು 24 ರನ್​ಗಳಿಸಿ ಔಟಾದರು. ನಂತರ ಬಂದ ದುಬೆ ತಿಲಕ್ ಜೊತೆ ಸೇರಿ 60ರನ್ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ತೋರಿದರು. ದುಬೆ 22 ಎಸೆತಗಳಲ್ಲಿ 33 ರನ್​ಗಳಿಸಿ 19ನೇ ಓವರ್​ನಲ್ಲಿ ಔಟಾದರು. ಕೊನೆಯ ಓವರ್​ನಲ್ಲಿ ಗೆಲುವಿಗೆ ಬೇಕಿದ್ದ 10 ರನ್​ಗಳನ್ನ ತಿಲಕ್​ ಹಾಗೂ ರಿಂಕು 4 ಎಸೆತಗಳಲ್ಲಿ ಸಿಡಿಸಿ ಗೆಲುವು ತಂದುಕೊಟ್ಟರು.

ಮೋದಿ ಅಭಿನಂದನೆ

ಭಾರತ ತಂಡದ ಪಾಕಿಸ್ತಾವನ್ನ ಬಗ್ಗುಬಡಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡಿ ಭಾರತ ತಂಡವನ್ನ ವಿಶೇಷ ರೀತಿಯಲ್ಲಿ ಅಭಿನಂದಿಸಿದ್ದಾರೆ. ಈ ಗೆಲುವನ್ನು “ಆಟದ ಕ್ಷೇತ್ರದಲ್ಲಿ ಆಪರೇಷನ್ ಸಿಂದೂರ್” ಎಂದು ಕರೆದಿದ್ದಾರೆ. ಗೇಮ್​ ಫೀಲ್ಡ್​​ನಲ್ಲೂ ಆಫರೇಷನ್​ ಸಿಂಧೂರ್, ” ಫಲಿತಾಂಶ ಎರಡರಲ್ಲೂ ಒಂದೇ – ಭಾರತಕ್ಕೆ ಗೆಲುವು” ಎಂದು ಮೋದಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧವಾಗಿ ಭಾರತ ಸೇನೆ ಪಾಕಿಸ್ತಾನದಲ್ಲಿದ್ದ ಉಗ್ರರ ಹಡಗುತಾಣಗಳ ಮೇಲೆ ದಾಳಿಗೆ ಉಗ್ರನೆಲೆಗಳನ್ನ ಧ್ವಂಸ ಮಾಡಿತ್ತು. ಇದಕ್ಕೆ ಭಾರತ ಸರ್ಕಾರ ಆಫರೇಷನ್ ಸಿಂಧೂರ ಎಂದು ಹೆಸರಿಟ್ಟಿತ್ತು. ಈ ದಾಳಿಯ ವೇಳೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನ ಭಾರತ ವಾಯು ಸೇನ್ ಧ್ವಂಸಗೊಳಿಸಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾ (LeT) ನಂತಹ ಉಗ್ರ ಸಂಘಟನೆಗಳ 9 ತರಬೇತಿ ಶಿಬಿರಗಳನ್ನು ನಾಶಪಡಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಭಾರತದ ಮೇಲೆ ದಾಳಿ ನಡೆಸಿತ್ತು. ಇದಕ್ಖೂ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆ ಹಲವು ಪಾಕಿಸ್ತಾನದ ವಾಯುನೆಲೆಗಳನ್ನ ಧ್ವಂಸ ಮಾಡಿತ್ತು.