India vs Pakistan: ಥೂ ನಿಮ್ಮ, ಪಾಕಿಗಳ ನೀಚತನ! ಭಾರತದ ರಾಷ್ಟ್ರಗೀತೆ ಹಾಡುವಾಗ ಅಫ್ರಿದಿ-ರೌಫ್ ಅತಿರೇಕದ ವರ್ತನೆ!Asia Cup 2025 Final: Shaheen Afridi & Haris Rauf’s Controversial Gesture During India’s National Anthem Sparks Outrage | ಕ್ರೀಡೆ

India vs Pakistan: ಥೂ ನಿಮ್ಮ, ಪಾಕಿಗಳ ನೀಚತನ! ಭಾರತದ ರಾಷ್ಟ್ರಗೀತೆ ಹಾಡುವಾಗ ಅಫ್ರಿದಿ-ರೌಫ್ ಅತಿರೇಕದ ವರ್ತನೆ!Asia Cup 2025 Final: Shaheen Afridi & Haris Rauf’s Controversial Gesture During India’s National Anthem Sparks Outrage | ಕ್ರೀಡೆ

Last Updated:

Asia Cup Final: ರಾಷ್ಟ್ರಗೀತೆ ಅಂದ್ರೆ ಅದಕ್ಕೊಂದು ಗೌರವ, ದೇಶಭಕ್ತಿಯ ಸಂಕೇತ. ಟಾಸ್ ಆದ್ಮೇಲೆ ಎರಡೂ ತಂಡದ ಆಟಗಾರರು ಮೈದಾನಕ್ಕೆ ಬಂದು ಮೊದಲು ಪಾಕಿಸ್ತಾನದ ರಾಷ್ಟ್ರಗೀತೆ ನುಡಿಸುವಾಗ ನಮ್ಮ ಟೀಮ್ ಇಂಡಿಯಾ ಆಟಗಾರರು ಗೌರವಯುತವಾಗಿ ನಿಂತಿದ್ದರು.

ಪಾಕ್‌ ಆಟಗಾರರ ಅತಿರೇಕದ ವರ್ತನೆಪಾಕ್‌ ಆಟಗಾರರ ಅತಿರೇಕದ ವರ್ತನೆ
ಪಾಕ್‌ ಆಟಗಾರರ ಅತಿರೇಕದ ವರ್ತನೆ

ಈ ವರ್ಷದ ಏಷ್ಯಾ ಕಪ್ (Asia Cup) ಅಂದ್ರೆ ಬರೀ ಕ್ರಿಕೆಟ್ ಆಟ ಆಗಿರಲಿಲ್ಲ, ಬದಲಿಗೆ ವಿವಾದಗಳ ಸರಣಿನೇ ಆಗಿತ್ತು! ಅದರಲ್ಲೂ, ಫೈನಲ್‌ನಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನದ ಮೇಲೆ ರೋಚಕ ಗೆಲುವು ಸಾಧಿಸಿ ಕಪ್ ಎತ್ತಿದ್ರೂ, ಪಂದ್ಯಕ್ಕೂ ಮೊದಲು ನಡೆದ ಕೆಲವು ಘಟನೆಗಳು ಅಭಿಮಾನಿಗಳ ರಕ್ತ ಕುದಿಯುವಂತೆ ಮಾಡಿವೆ. ಈ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನಾಡಿದ ಭಾರತ, ಮೂರರಲ್ಲೂ ಪಾಕ್ (IND vs PAK) ತಂಡಕ್ಕೆ ಸೋಲುಣಿಸಿದೆ ನಿಜ. ಆದ್ರೆ, ಈ ಮೂರೂ ಪಂದ್ಯಗಳಲ್ಲಿ ಹೈ-ವೋಲ್ಟೇಜ್ ಡ್ರಾಮಾಗಳು ನಡೆದಿದ್ದು ಸುಳ್ಳಲ್ಲ.

ಅದರಲ್ಲೂ ಫೈನಲ್ ಪಂದ್ಯದ ಆರಂಭದಲ್ಲೇ ನಡೆದ ಎರಡು ದೊಡ್ಡ ವಿವಾದಗಳ ಬಗ್ಗೆ ಭಾರತೀಯ ಫ್ಯಾನ್ಸ್ ಸಿಕ್ಕಾಪಟ್ಟೆ ಕೆಂಡಕಾರುತ್ತಿದ್ದಾರೆ.

ರಾಷ್ಟ್ರಗೀತೆಗೆ ಅವಮಾನ: ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಆಟಾಟೋಪ!

ರಾಷ್ಟ್ರಗೀತೆ ಅಂದ್ರೆ ಅದಕ್ಕೊಂದು ಗೌರವ, ದೇಶಭಕ್ತಿಯ ಸಂಕೇತ. ಟಾಸ್ ಆದ್ಮೇಲೆ ಎರಡೂ ತಂಡದ ಆಟಗಾರರು ಮೈದಾನಕ್ಕೆ ಬಂದು ಮೊದಲು ಪಾಕಿಸ್ತಾನದ ರಾಷ್ಟ್ರಗೀತೆ ನುಡಿಸುವಾಗ ನಮ್ಮ ಟೀಮ್ ಇಂಡಿಯಾ ಆಟಗಾರರು ಗೌರವಯುತವಾಗಿ ನಿಂತಿದ್ದರು. ನಿಯಮದ ಪ್ರಕಾರ ಗೌರವ ಸೂಚಿಸುವುದು ಕಡ್ಡಾಯ. ಆದ್ರೆ, ಭಾರತದ ರಾಷ್ಟ್ರಗೀತೆ ಶುರುವಾದಾಗ ಪಾಕಿಸ್ತಾನದ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಮಾಡಿದ ಕಿತಾಪತಿ ನೋಡಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.

ಕ್ಯಾಮೆರಾಗಳ ಮುಂದೆ ಇವರಿಬ್ಬರೂ ಒಬ್ಬರಿಗೊಬ್ಬರು ಗುಟ್ಟಾಗಿ ಮಾತನಾಡುತ್ತಾ ಮತ್ತು ಕದಲುತ್ತಾ ಇರೋದು ಸ್ಪಷ್ಟವಾಗಿ ಸೆರೆಯಾಗಿದೆ. ರಾಷ್ಟ್ರಗೀತೆ ನುಡಿಸುವಾಗ ಒಬ್ಬ ಕ್ರೀಡಾಪಟುವಿನಿಂದ ಈ ರೀತಿ ವರ್ತನೆ ಅಪೇಕ್ಷಣೀಯ ಅಲ್ಲ. ಇವರ ಈ ವರ್ತನೆ ‘ರಾಷ್ಟ್ರಗೀತೆಗೆ ಮಾಡಿದ ಅವಮಾನ’ ಅಂತ ಭಾರತದಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. “ನಿಮ್ಮ ರಾಷ್ಟ್ರಗೀತೆಗೆ ನಾವು ಗೌರವ ಕೊಡ್ತೀವಿ, ಆದ್ರೆ ನಿಮಗೆ ನಮ್ಮ ದೇಶದ ಗೀತೆಗೆ ಗೌರವ ಕೊಡೋಕೆ ಬರಲ್ವಾ?” ಅಂತ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ರವಿಶಾಸ್ತ್ರಿ ಜೊತೆ ಮಾತನಾಡಲ್ಲ ಎಂದ ಪಾಕ್ ಕ್ಯಾಪ್ಟನ್!

ರಾಷ್ಟ್ರಗೀತೆ ಡ್ರಾಮಾ ಆಗೋಕು ಮೊದಲು, ಟಾಸ್ ಸಮಯದಲ್ಲೂ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿತ್ತು! ಸಾಮಾನ್ಯವಾಗಿ ಟಾಸ್ ಗೆದ್ದ ಕ್ಯಾಪ್ಟನ್‌ನ ಸಂದರ್ಶನ ಮಾಡಲು ಒಬ್ಬರೇ ನಿರೂಪಕರು ಇರ್ತಾರೆ. ಆದ್ರೆ ಫೈನಲ್‌ನಲ್ಲಿ ಇಬ್ಬರು ನಿರೂಪಕರು ಬಂದಿದ್ರು!

ಭಾರತದ ಪ್ರಸಾರಕ ರವಿಶಾಸ್ತ್ರಿ ಅವರು ನಮ್ಮ ನಾಯಕ ಸೂರ್ಯಕುಮಾರ್ ಯಾದವ್ (ಸೂರ್ಯ) ಅವರಿಗೆ ಪ್ರಶ್ನೆ ಕೇಳಿದ್ರು. ಆದ್ರೆ, ಪಾಕಿಸ್ತಾನದ ಕ್ಯಾಪ್ಟನ್ ಸಲ್ಮಾನ್ ಆಘಾ, ಶಾಸ್ತ್ರಿಯವರ ಜೊತೆ ಮಾತನಾಡಲು ನಿರಾಕರಿಸಿದ್ರು ಎನ್ನಲಾಗಿದೆ. ಬಹುಶಃ ಟೂರ್ನಿಯಲ್ಲಿ ಹಿಂದಿನ ಘಟನೆಗಳು, ಕೋಪ-ತಾಪಗಳು ಇದಕ್ಕೆ ಕಾರಣ ಇರಬಹುದು.

ಹಾಗಾಗಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಅವರು ಮೈದಾನಕ್ಕೆ ಬಂದು, ಪಾಕ್ ಕ್ಯಾಪ್ಟನ್‌ಗೆ ಪ್ರಶ್ನೆಗಳನ್ನು ಕೇಳಬೇಕಾಯ್ತು. ಟಾಸ್ ವೇಳೆ ಒಬ್ಬ ಭಾರತೀಯ ಮತ್ತು ಒಬ್ಬ ಪಾಕಿಸ್ತಾನಿ ನಿರೂಪಕರು ಇರುವುದು ಕ್ರಿಕೆಟ್ ಇತಿಹಾಸದಲ್ಲೇ ಬಹಳ ವಿರಳ!

ಕೋಟ್ಯಂತರ ಭಾರತೀಯರಿಗೆ ಖುಷಿ ಕೊಟ್ಟಿದೆ!

ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಹಿಂದಿನ ಪಂದ್ಯಗಳಂತೆ ‘ನೋ ಹ್ಯಾಂಡ್‌ಶೇಕ್’ ನೀತಿಯನ್ನು ಮುಂದುವರೆಸಿದ್ದು ಕೂಡ ಸಾಕಷ್ಟು ಸುದ್ದಿಯಾಗಿತ್ತು. ವಕಾರ್ ಯೂನಿಸ್ ಜೊತೆ ಕೈಕುಲುಕುವುದನ್ನೂ ಅವರು ತಪ್ಪಿಸಿದ್ರು. ಇದೆಲ್ಲಾ ನೋಡ್ತಿದ್ರೆ, ಏಷ್ಯಾ ಕಪ್ ಫೈನಲ್ ಕೇವಲ ಕ್ರಿಕೆಟ್ ಪಂದ್ಯ ಆಗಿರಲಿಲ್ಲ, ಬದಲಿಗೆ ಮೆಗಾ ವಿವಾದಗಳ ಹಬ್ಬ ಆಗಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಕೊನೆಗೂ ನಮ್ಮ ಟೀಮ್ ಇಂಡಿಯಾ ಗೆದ್ದಿರೋದು  ಮಾತ್ರ ಕೋಟ್ಯಂತರ ಭಾರತೀಯರಿಗೆ ಖುಷಿ ಕೊಟ್ಟಿದೆ!