Abhishek Sharma: ಅಭಿಷೇಕ್ ಶರ್ಮಾಗೆ ಸಿಕ್ಕ ಹವಾಲ್ ಕಂಪನಿಯ H9 SUV ಕಾರಿನ ವಿಶೇಷತೆಗಳೇನು? / What are the special features of the Haval H9 SUV car that Team India star batter Abhishek Sharma got? | ಕ್ರೀಡೆ

Abhishek Sharma: ಅಭಿಷೇಕ್ ಶರ್ಮಾಗೆ ಸಿಕ್ಕ ಹವಾಲ್ ಕಂಪನಿಯ H9 SUV ಕಾರಿನ ವಿಶೇಷತೆಗಳೇನು? / What are the special features of the Haval H9 SUV car that Team India star batter Abhishek Sharma got? | ಕ್ರೀಡೆ

Last Updated:

ಏಷ್ಯಾಕಪ್ 2025 ರ ಆವೃತ್ತಿಯಲ್ಲಿ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಸಿಕ್ಕ ಹವಾಲ್ ಕಂಪನಿಯ H9 SUV ಕಾರಿನ ವಿಶೇಷತೆಗಳೇನು?. ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Abhishek SharmaAbhishek Sharma
Abhishek Sharma

ಏಷ್ಯಾ ಕಪ್‌ 2025 ರ (Asia Cup 2025) ಆವೃತ್ತಿಯಲ್ಲಿ ಭಾರತ ತಂಡ ಅಜೇಯವಾಗಿ ಉಳಿಯಿತು. ಭಾರತ ತಂಡವು (Team India) ಸತತ ಏಳು ಪಂದ್ಯಗಳನ್ನು ಗೆದ್ದು ಫೈನಲ್‌ನಲ್ಲಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿತು. ಟೀಮ್ ಇಂಡಿಯಾ ಸ್ಟಾರ್ ಯುವ ಯುವ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ದುಬೈನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಆದರೆ, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಆದರೂ ಟೂರ್ನಿಯುದ್ದಕ್ಕೂ ಅಬ್ಬರದ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಏಷ್ಯಾಕಪ್ 2025 ರಲ್ಲಿ ಅಭಿಷೇಕ್ ಶರ್ಮಾ 314 ರನ್ ಗಳಿಸಿದರು. ಇದರೊಂದಿಗೆ ಅವರು ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸೃಷ್ಟಿಸಿದರು. ಈ ಸಾಧನೆಗಾಗಿ ಅವರಿಗೆ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಮತ್ತು 15,000 ಯುಎಸ್ ಡಾಲರ್ (13.30 ಲಕ್ಷ ರೂ) ಜೊತೆಗೆ ಉಡುಗೊರೆಯಾಗಿ ಹವಾಲ್ ಕಂಪನಿಯ ಐಷಾರಾಮಿ H9 SUV ಕಾರು ಸಿಕ್ಕಿತು. ಈ ಕಾರು ಅನೇಕ ಅಭಿಮಾನಿಗಳಿಗೆ ತಿಳಿದಿಲ್ಲ. ಹಾಗಾಗಿ ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಆಫ್-ರೋಡಿಂಗ್‌ನ ರಾಣಿ

ಹವಾಲ್ ಕಂಪನಿಯ H9 SUV ಕಾರನ್ನು ದುಬೈನ ಫಾರ್ಚೂನರ್ ಎಂದು ಕರೆದರೆ ತಪ್ಪಾಗಲಾರದು. ಹವಾಲ್ H9 ತನ್ನ ಲುಕ್ ಮತ್ತು ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಇದು 4×4 ಸಾಮರ್ಥ್ಯವನ್ನು ಹೊಂದಿದ್ದು, ಆಫ್-ರೋಡಿಂಗ್‌ನ ರಾಣಿ ಎಂದೂ ಹೆಸರುವಾಸಿಯಾಗಿದೆ.

ಕಾರಿನ ಪರ್ಫಾರ್ಮೆನ್ಸ್‌

ಹವಾಲ್ H9 ಒಂದು ದೊಡ್ಡ-ವಿಭಾಗದ SUV ಆಗಿದ್ದು, ಇದು 2.0-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಶಕ್ತಿಯನ್ನು 8-ಸ್ಪೀಡ್ ಸ್ವಯಂಚಾಲಿತ ZF ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲಾಗುತ್ತದೆ. H9 ಅನ್ನು ಆಫ್-ರೋಡ್​ಗೆ ಮಾತ್ರವಲ್ಲದೆ ಐಷಾರಾಮಿಗಾಗಿಯೂ ವಿನ್ಯಾಸಗೊಳಿಸಲಾಗಿದೆ. ಇದು ಬೆಟ್ಟಗುಡ್ಡ ಪ್ರದೇಶಗಳು ಅಥವಾ ನಗರದ ಬೀದಿಗಳಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್‌ ಅನ್ನು ಹೊಂದಿದೆ. ಇದು 4950 mm ಉದ್ದ ಮತ್ತು 1976 mm ಅಗಲವನ್ನು ಅಳೆಯುತ್ತದೆ.

ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ಎಷ್ಟು?

ಹವಾಲ್ H9 ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳಿಂದ ತುಂಬಿದೆ. ಆರು ಏರ್‌ಬ್ಯಾಗ್‌ಗಳು ಲಭ್ಯವಿದ್ದು, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಟ್ರಾಫಿಕ್ ಪರಿಸ್ಥಿತಿಗಳ ಆಧಾರದ ಮೇಲೆ ವಾಹನದ ವೇಗವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಲಾಂಗ್ ಡ್ರೈವ್ ಮಾಡುವಾಗ ಆಯಾಸ ಕಡಿಮೆ ಇರಲಿದೆ. ಟ್ರಾಫಿಕ್ ಜಾಮ್ ಅಸಿಸ್ಟ್ ಕೂಡ ಈ ಅತ್ಯುತ್ತಮ SUV ಯಲ್ಲಿರುವ ಒಂದು ವೈಶಿಷ್ಟ್ಯವಾಗಿದ್ದು, ಸ್ಟಾಪ್-ಅಂಡ್-ಗೋ ಟ್ರಾಫಿಕ್‌ನಲ್ಲಿಯೂ ಅದ್ಭುತವಾಗಿದೆ.

ಆರು ಡ್ರೈವ್ ಮೋಡ್‌

ಕಾರಿನ 360-ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸರ್‌ಗಳು ಚಾಲನೆಯನ್ನು ಇನ್ನಷ್ಟು ಸುಲಭಗೊಳಿಸಿವೆ. ಇದು ಆರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಆಟೋ, ಇಕೋ, ಸ್ಪೋರ್ಟ್, ಸ್ಯಾಂಡ್, ಸ್ನೋ, ಮಡ್ ಮತ್ತು 4L ಮೋಡ್​ಗಳಿವೆ. ಹವಾಲ್ H9 ಕಾರಿನ ಹೊರಗಿನ ವಿನ್ಯಾಸವು ಆಕರ್ಷಕ ಮತ್ತು ಕ್ರಿಯಾತ್ಮಕವಾಗಿದೆ. ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಸೈಡ್‌ಸ್ಟೆಪ್‌ಗಳು, ಮುಂಭಾಗ ಮತ್ತು ಹಿಂಭಾಗದ ಫಾಗ್ ಲ್ಯಾಂಪ್‌ಗಳು ಕಾರಿನ ಸೌಂದರ್ಯವನ್ನು ಹೆಚ್ಚಿಸಿವೆ. ಜೊತೆಗೆ ಹವಾಲ್ H9 ದೊಡ್ಡ 265/55 R19 ಟೈರ್‌ಗಳನ್ನು ಒಳಗೊಂಡಿದೆ.

ಕಾರಿನ ಒಳ ಗಿನ ವಿನ್ಯಾಸ ಹೇಗಿದೆ?

ಹವಾಲ್ H9 ಕಾರಿನ ಒಳಭಾಗವು ಬಹಳ ಅದ್ಭುತವಾಗಿದೆ. ಇದು 14.6-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. 10-ಸ್ಪೀಕರ್ ಸೌಂಡ್ ಸಿಸ್ಟಮ್ ಸಹ ಇವೆ. ವೈರ್‌ಲೆಸ್ ಚಾರ್ಜರ್, ಎಸಿ ಮತ್ತು ಹಾಟ್ ಎರಡೂ ಮೋಡ್​ಗಳಿವೆ. ಚಾಲಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲೆದರ್ ಮೆಮೊರಿ ಸೀಟುಗಳು. ಮಸಾಜ್ ಸೌಲಭ್ಯವೂ ಇದೆ. ಬೆಲೆಯ ಬಗ್ಗೆ ಹೇಳುವುದಾದರೆ, ಹವಾಲ್ H9 SUV ಯ ಪ್ರಸ್ತುತ ಬೆಲೆ 142,199.8 ಸೌದಿ ರಿಯಾಲ್‌ಗಳು, ಇದು ಭಾರತದ ರೂಪಾಯಿಗಳಲ್ಲಿ ಸರಿಸುಮಾರು 33,60,658 ಲಕ್ಷ ರೂ.