Last Updated:
ಪಾಕಿಸ್ತಾನದ 147 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದಲ್ಲಿ ತಿಲಕ್ ವರ್ಮಾ 53 ಎಸೆತಗಳಲ್ಲಿ 69 ರನ್ಗಳ (3 ಬೌಂಡರಿ, 4 ಸಿಕ್ಸರ್) ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಆರಂಭಿಕ ವಿಕೆಟ್ಗಳು ಬೇಗ ಬಿದ್ದ ನಂತರದ ಒತ್ತಡದಲ್ಲಿ ಸಂಜು ಸ್ಯಾಮ್ಸನ್ರೊಂದಿಗೆ 57 ರನ್ಗಳ ಜೊತೆಯಾಟ ನಡೆಸಿದರು. ನಂತರ ಶಿವಂ ದುಬೆಯೊಂದಿಗೆ ವೇಗವಾಗಿ 60 ರನ್ಗಳ ಜೊತೆಯಾಟ ನಿರ್ವಹಿಸಿ, ಪಾಕಿಸ್ತಾನದ ಬೌಲರ್ಗಳ ಮೇಲೆ ಒತ್ತಡ ಏರುವಲ್ಲಿ ಯಶಸ್ವಿಯಾಗಿ ಗೆಲುವು ತಂದುಕೊಟ್ಟರು.
ಏಷ್ಯಾ ಕಪ್ 2025ರ ಫೈನಲ್ನಲ್ಲಿ (Asia Cup Final) ಪಾಕಿಸ್ತಾನ ವಿರುದ್ಧ ಭಾರತದ (India vs Pakistan) 5 ವಿಕೆಟ್ಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವ ಬ್ಯಾಟ್ಸ್ಮನ್ ತಿಲಕ್ ವರ್ಮಾ (Tilak Varma) ಅವರ ಕೋಚ್ ಸಲಾಂ ಬಯಾಶ್ ಅವರು ಅವರ ಯಶಸ್ಸಿನ ಹಿಂದಿನ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ತಿಲಕ್ ಅವರ ಅಭ್ಯಾಸದಿಂದ ಹುಟ್ಟಿದ ಸ್ಥಿರತೆ ಮತ್ತು ಹೊಂದಾಣಿಕೆಯು ಫೈನಲ್ನಲ್ಲಿ ಭಾರತವನ್ನು ಚಾಂಪಿಯನ್ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ 147 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದಲ್ಲಿ ತಿಲಕ್ ವರ್ಮಾ 53 ಎಸೆತಗಳಲ್ಲಿ 69 ರನ್ಗಳ (3 ಬೌಂಡರಿ, 4 ಸಿಕ್ಸರ್) ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಆರಂಭಿಕ ವಿಕೆಟ್ಗಳು ಬೇಗ ಬಿದ್ದ ನಂತರದ ಒತ್ತಡದಲ್ಲಿ ಸಂಜು ಸ್ಯಾಮ್ಸನ್ರೊಂದಿಗೆ 57 ರನ್ಗಳ ಜೊತೆಯಾಟ ನಡೆಸಿದರು. ನಂತರ ಶಿವಂ ದುಬೆಯೊಂದಿಗೆ ವೇಗವಾಗಿ 60 ರನ್ಗಳ ಜೊತೆಯಾಟ ನಿರ್ವಹಿಸಿ, ಪಾಕಿಸ್ತಾನದ ಬೌಲರ್ಗಳ ಮೇಲೆ ಒತ್ತಡ ಏರುವಲ್ಲಿ ಯಶಸ್ವಿಯಾಗಿ ಗೆಲುವು ತಂದುಕೊಟ್ಟರು. ಈ ಇನ್ನಿಂಗ್ಸ್ ತಿಲಕ್ ಅವರ ವೃತ್ತಿಜೀವನದ ಅತ್ಯಂತ ವಿಶೇಷ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ ಎಂದು ಸ್ವತಃ ತಿಲಕ್ ಹೇಳಿದ್ದಾರೆ.
ತಿಲಕ್ ಅವರ ಬಾಲ್ಯ ಕೋಚ್ ಸಲಾಂ ಬಯಾಶ್ ಅವರು ಲೆಗಾಲಾ ಕ್ರಿಕೆಟ್ ಅಕಾಡೆಮಿಯಲ್ಲಿ ತಿಲಕ್ಗೆ ತರಬೇತಿ ನೀಡಿ ಪ್ರತಿಭಾನ್ವಿತ ಕ್ರಿಕೆಟರ್ ಆಗಿ ರೂಪಿಸಿದ್ದರು. “ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಅದ್ಭುತ ಇನ್ನಿಂಗ್ಸ್ ಆಡುವುದು ಅತ್ಯಂತ ಸಂತೋಷಕರ. ತಿಲಕ್ ಈ ಇನ್ನಿಂಗ್ಸ್ನಿಂದ ರಾಷ್ಟ್ರೀಯ ಹೀರೋ ಆಗಿ ಹೊರಹೊಮ್ಮಿದ್ದಾರೆ,” ಎಂದು ಬಯಾಶ್ ಹೇಳಿದ್ದಾರೆ.
ಇದು ತಿಲಕ್ ಅವರ ದೀರ್ಘಕಾಲದ ಅಭ್ಯಾಸದ ಫಲವಾಗಿದೆ ಎಂದು ಅವರು ಸೇರಿಸಿದರು. ಫೈನಲ್ಗೂ ಮುನ್ನ ತಿಲಕ್ ಅವರು ಹ್ಯಾಂಪ್ಶೈರ್ ಕೌಂಟಿ ಕ್ಲಬ್ಗಾಗಿ ರೆಡ್ ಬಾಲ್ ಕ್ರಿಕೆಟ್ ಆಡುತ್ತಿದ್ದರು, ಹಾಗಾಗಿ ವೈಟ್ ಬಾಲ್ ಕ್ರಿಕೆಟ್ಗೆ ಹೊಂದಿಕೊಳ್ಳಲು ಸಮಯ ಕಡಿಮೆಯಿತ್ತು. ಆದರೆ, ದುಬೈ ಪಿಚ್ಗಳಿಗೆ ಸರಿಹೊಂದುವಂತೆ ಎರಡು ದಿನಗಳ ಅಭ್ಯಾಸದಲ್ಲಿ ಬ್ಯಾಕ್-ಫುಟ್ ಶಾಟ್ಗಳ ಮೇಲೆ ಗಮನ ಹರಿಸಿದ್ದರು. “ಪಂದ್ಯಕ್ಕೂ ಮುನ್ನ ನಾನು ಅವರೊಂದಿಗೆ ಮಾತನಾಡಿ, ‘ಪಂದ್ಯವನ್ನು ಫಿನಶ್ ಮಾಡದೇ ಔಟ್ ಆಗಬೇಡ’ ಎಂದು ಹೇಳಿದ್ದೆ. ಅವರ ಕಠಿಣ ಪರಿಶ್ರಮದ ಫಲ ಇಂದು ಜಗತ್ತಿಗೆ ಕಾಣುತ್ತಿದೆ,” ಎಂದು ಬಯಾಶ್ ಹೇಳಿದರು.
ತಿಲಕ್ ಅವರ ಆರಂಭಿಕ ದಿನಗಳಲ್ಲಿ ಅವರು ತೀವ್ರ ಆಕ್ರಮಣಕಾರಿ ಬ್ಯಾಟಿಂಗ್ಗಾಗಿ ಹೆಸರುವಾಸಿಯಾಗಿದ್ದರು, ಆದರೆ ಇದರಿಂದಾಗಿ ಬೇಗ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆದರೆ ಅವರು ಫಿನಿಷರ್ ಆಗಿ ಬ್ಯಾಟ್ ಮಾಡುವ ಸ್ಥಾನದಲ್ಲಿದ್ದರಿಂದ, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಟವಾಡುವುದನ್ನು ಶೀಘ್ರವಾಗಿ ಕಲಿತಿಕೊಂಡರು. ಇದೇ ಅವರ ಇನ್ನಿಂಗ್ಸ್ನಲ್ಲಿ ಕಂಡ ಬಂದ ಸ್ಥಿರತೆಯ ರಹಸ್ಯವಾಗಿದೆ. ತಿಲಕ್ ಅವರ ಫೈನಲ್ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ ಬೌಲರ್ಗಳ ಒತ್ತಡವನ್ನ ಮೀರುವಲ್ಲಿ ಯಶಸ್ವಿಯಾದರು. ತಾಳ್ಮೆಯ ಆಟದ ಮೂಲಕ ಮೊದಲು ವಿಕೆಟ್ ಉಳಿಸಿಕೊಂಡು, ಸೆಟ್ಲ್ ಆದರು. ನಂತರ ಕಳಪೆ ಎಸೆತಗಳನ್ನ ದಂಡಿಸುತ್ತಾ, ರನ್ಗತಿ ಹೆಚ್ಚಿಸಿದರು. ಒಂದೇ ಒಂದು ಕೆಟ್ಟ ಹೊಡೆತ ಪ್ರಯೋಗಿಸದೇ ತಂಡವನ್ನ ಗೆಲುವಿನ ಗಡಿ ದಾಟಿಸಿದರು ಎಂದು ಬಯಾಶ್ ತಿಳಿಸಿದ್ದಾರೆ.
ತಿಲಕ್ ಏಷ್ಯಾ ಕಪ್ನಲ್ಲಿ ತಿಲಕ್ 6 ಇನ್ನಿಂಗ್ಸ್ಗಳಲ್ಲಿ 213 ರನ್ಗಳನ್ನು (ಸ್ಟ್ರೈಕ್ ರೇಟ್ 131.48) ಗಳಿಸಿ, ಅಭಿಷೇಕ್ ಶರ್ಮಾ (314 ರನ್) ನಂತರ ಭಾರತದ ಎರಡನೇ ಅತಿ ದೊಡ್ಡ ಸ್ಕೋರರ್ ಆಗಿದ್ದಾರೆ. ಟಿ20ಐ ಚೇಸ್ಗಳಲ್ಲಿ 11 ಇನ್ನಿಂಗ್ಸ್ಗಳಲ್ಲಿ 370 ರನ್ಗಳೊಂದಿಗೆ ಸರಾಸರಿ 92.50 ಮತ್ತು ಸ್ಟ್ರೈಕ್ ರೇಟ್ 134.54 ಸಾಧಿಸಿದ್ದಾರೆ. ಐಪಿಎಲ್ ನಾಕ್ಔಟ್ಗಳಲ್ಲಿ ಮೂಂಬೈ ಇಂಡಿಯನ್ಸ್ಗಾಗಿ 5 ಇನ್ನಿಂಗ್ಸ್ಗಳಲ್ಲಿ 207 ರನ್ಗಳನ್ನು (ಸ್ಟ್ರೈಕ್ ರೇಟ್ 160ಕ್ಕೂ ಹೆಚ್ಚು) ಗಳಿಸಿ ಒತ್ತಡದಲ್ಲೂ ಮಿಂಚಿದ್ದರು. ತಿಲಕ್ ಅವರ ಕೋಚ್ ಬಯಾಶ್ ಅವರು ಅವರನ್ನು ಎಲ್ಲ ಫಾರ್ಮ್ಯಾಟ್ಗಳ ಆಟಗಾರನೆಂದು ಕರೆದಿದ್ದಾರೆ.
September 30, 2025 6:27 PM IST