Clean City: ಕಲರ್‌ ಸಿಟಿಯಾಗಲಿದೆ ದಕ್ಷಿಣ ಕನ್ನಡದ ಈ ಊರು! ಕಾರಣ ಇಲ್ಲಿದೆ ನೋಡಿ | Puttur team transforms garbage area into beautiful spot through cleanliness drive | ದಕ್ಷಿಣ ಕನ್ನಡ

Clean City: ಕಲರ್‌ ಸಿಟಿಯಾಗಲಿದೆ ದಕ್ಷಿಣ ಕನ್ನಡದ ಈ ಊರು! ಕಾರಣ ಇಲ್ಲಿದೆ ನೋಡಿ | Puttur team transforms garbage area into beautiful spot through cleanliness drive | ದಕ್ಷಿಣ ಕನ್ನಡ

Last Updated:

ಪುತ್ತೂರಿನಲ್ಲಿ ಬೆಂಗಳೂರಿನ ಸಾಹಸ ಸಂಸ್ಥೆ ತಂಡ, ಪುತ್ತೂರು ನಗರ ಸಭೆ ಸಹಯೋಗದಲ್ಲಿ ಐದು ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಕಸದ ಜಾಗಗಳನ್ನು ಬಣ್ಣ ಬಳಿದು ಗಿಡ ನೆಟ್ಟು ಸುಂದರ ತಾಣವನ್ನಾಗಿ ಮಾಡಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣಕನ್ನಡ: ಎಲ್ಲೆಂದರಲ್ಲಿ ಕಸ (Garbage) ಎಸೆದು ಕೊಳಚೆ ಪ್ರದೇಶವನ್ನು ಮಾಡುವವರೇ ಹೆಚ್ಚಾಗಿರುವ ಕಾಲದಲ್ಲಿ, ಹೀಗೆ ಕೊಳಚೆಯಾದ ಪ್ರದೇಶವನ್ನು ಸುಂದರ ತಾಣವನ್ನಾಗಿ ಸದ್ದಿಲ್ಲದೆ ಮಾಡುವ ತಂಡವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Putturu) ಕಾರ್ಯಾಚರಣೆ ಮಾಡುತ್ತಿದೆ.

ಬೆಂಗಳೂರು ತಂಡದಿಂದ ಮಂಗಳೂರು ಸ್ವಚ್ಛತೆ

ಪುತ್ತೂರು ನಗರ ಸಭೆ, ಸಾಹಸ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಕಸದ ರಾಶಿ ತುಂಬಿದ್ದ ಪುತ್ತೂರಿನ ಐದು ಕಡೆಗಳಲ್ಲಿ ಈ ತಂಡ ಸ್ವಚ್ಛತಾ ಕಾರ್ಯ ಕೈಗೊಂಡು ಕಸದ ಬೆಟ್ಟದಂತಿದ್ದ ಜಾಗಕ್ಕೆ ಆಕರ್ಷಕ‌ ಬಣ್ಣ ಬಳಿದು, ಗಿಡಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡಲಾಗುತ್ತಿದೆ.

ಇನ್ಮೇಲೆ ಕಸ ಎಸೆಯೋಕೆ ಮನಸ್ಸೂ ಮಾಡಲ್ಲ ಜನರು!

ಪುತ್ತೂರು ನಗರದ ಎಂ.ಟಿ‌. ರಸ್ತೆ, ಸಿಟಿ‌ ಹಾಸ್ಪಿಟಲ್ ರಸ್ತೆ, ಬ್ರಹ್ಮನಗರ ಮತ್ತು ಅಶ್ವಿನಿ ಸರ್ಕಲ್ ಬಳಿ ಸಾರ್ವಜನಿಕರು ಕಸಗಳನ್ನು ಎಸೆದು ಆ ಪ್ರದೇಶವನ್ನೇ ಕೊಳಚೆ ಕೂಪವನ್ನಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಈ ತಂಡ ಅಂತಹ‌ ಜಾಗಗಳನ್ನ ಗುರುತಿಸಿ ಸ್ವಚ್ಛ ಮಾಡುವುದರ ಜೊತೆಗೆ‌ ಮತ್ತೆ ಆ ಜಾಗದಲ್ಲಿ ಕಸ ಸುರಿಯಬೇಕು ಎನ್ನುವ ಮನಸ್ಸೂ ಬಾರದಂತಹ ಬದಲಾವಣೆಗಳನ್ನು ಮಾಡಲಾಗುತ್ತಿದೆ!

ಸ್ವಚ್ಛ ಪುತ್ತೂರಿಗೆ ದಿಟ್ಟ ಹೆಜ್ಜೆ ಇಟ್ಟ ತಂಡ

ಸ್ವಚ್ಛತಾ ಹೀ ಸೇವಾ 2025 ಸಪ್ತಾಹದ ಅಂಗವಾಗಿ ಈ ಕಾರ್ಯ ಮಾಡಲಾಗುತ್ತಿದ್ದು, ಈ ತಂಡಕ್ಕೆ ಪುತ್ತೂರು ನಗರ ಸಭೆಯ ಪೌರಾಯುಕ್ತ ಮತ್ತು ಅಧ್ಯಕ್ಷರ ಮಾರ್ಗದರ್ಶನದಂತೆ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರಿನಲ್ಲಿ ಇನ್ನೂ ಹಲವು ಕಡೆಗಳಲ್ಲಿ ಕಸದ ರಾಶಿಗಳು ಬೀಳುವ ಪ್ರದೇಶವನ್ನು ಗುರುತಿಸಿಕೊಂಡಿರುವ ಈ ತಂಡ ಐದು ಪ್ರದೇಶಗಳನ್ನು ಈಗಾಗಲೇ ಸ್ವಚ್ಛಗೊಳಿಸಿದೆ.

ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಪುತ್ತೂರಿನ ಬೀದಿಗಳು