Asia Cup 2025: ‘Sorry’ ಎಂದ ಟ್ರೋಫಿ ಕಳ್ಳ ನಖ್ವಿ; ಆದರೆ ಇದೊಂದು ಕಂಡೀಷನ್, ಭಾರತಕ್ಕೆ ಸಿಗುತ್ತಾ ಕಪ್! | acc chairman mohsin naqvi new condition to give asia cup for team india | ಕ್ರೀಡೆ

Asia Cup 2025: ‘Sorry’ ಎಂದ ಟ್ರೋಫಿ ಕಳ್ಳ ನಖ್ವಿ; ಆದರೆ ಇದೊಂದು ಕಂಡೀಷನ್, ಭಾರತಕ್ಕೆ ಸಿಗುತ್ತಾ ಕಪ್! | acc chairman mohsin naqvi new condition to give asia cup for team india | ಕ್ರೀಡೆ

Last Updated:

ಬಿಸಿಸಿಐ ಮತ್ತು ಟೀಂ ಇಂಡಿಯಾ ಆಟಗಾರರು ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಬಳಿಕ ಎದುರಾದ ಟ್ರೋಫಿ ವಿವಾದ ಮತ್ತೊಂದು ಹಂತಕ್ಕೆ ಹೋಗಿದ್ದು, ಭಾರತಕ್ಕೆ ಕಪ್ ಹಸ್ತಾಂತರಿಸಲು ಮೊಹ್ಸಿನ್ ನಖ್ವಿ ಹೊಸ ಷರತ್ತು ಹಾಕಿದ್ದಾರಂತೆ.

ಮೊಹಿನ್ಸ್ ನಖ್ವಿ ಹೊಸ ಷರತ್ತು ಮೊಹಿನ್ಸ್ ನಖ್ವಿ ಹೊಸ ಷರತ್ತು
ಮೊಹಿನ್ಸ್ ನಖ್ವಿ ಹೊಸ ಷರತ್ತು

ಏಷ್ಯಾಕಪ್ ಮುಕ್ತಾಯಗೊಂಡರೂ (Asia Cup Controversy) ಟೂರ್ನಿಯಲ್ಲಿ ಆರಂಭವಾದ ವಿವಾದ ಮಾತ್ರ ಮುಂದುವರೆದಿದೆ. ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು (IND vs PAK) ಸೋಲಿಸಿದ ಭಾರತಕ್ಕೆ ಎಸಿಸಿ (ACC) ಇದುವರೆಗೂ ಟ್ರೋಫಿಯನ್ನು ನೀಡಿಲ್ಲ. ಮೊಹ್ಸಿನ್ ನಖ್ವಿ (Mohsin Naqvi) ಮತ್ತು ಟೀಂ ಇಂಡಿಯಾ ಪ್ಲೇಯರ್ಸ್ ನಡುವೆ ಗ್ರೌಂಡ್ ನಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು. ನಖ್ವಿ ಕೈಹಿಂದ ಟ್ರೋಫಿ ತೆಗೆದುಕೊಳ್ಳುವುದಿಲ್ಲ ಎಂದು ಭಾರತ ಆಟಗಾರರು (Team India Players) ನಿರಾಕರಿಸಿದ್ದರು. ಇದರೊಂದಿಗೆ ತಲೆಕೆಟ್ಟ ನಖ್ವಿ ಟ್ರೋಫಿಯನ್ನು ತನ್ನೊಂದಿಗೆ ಹೋಟೆಲ್ ರೂಮ್ ಗೆ ತೆಗೆದುಕೊಂಡು ಹೋಗಿದ್ದರು. ಆದರೆ, ಏಷ್ಯಾ ಕಪ್ ಟ್ರೋಫಿ ಕುರಿತಂತೆ ಹೊಸ ವಿವಾದ ಮುನ್ನೆಲೆಗೆ ಬಂದಿದೆ.

ಭಾರತ ತಂಡಕ್ಕೆ ಟ್ರೋಫಿ ನೀಡಲು ನಿರಾಕರಿಸಿದ್ದ ನಕ್ವಿ, ಟ್ರೋಪಿ ಬೇಕು ಎಂದರೆ ಒಂದು ಷರತ್ತು ಇದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ವಿವಾದ ಕುರಿತಂತೆ ಬಿಸಿಸಿಐ ಬಳಿ ಕ್ಷಮೆ ಕೇಳಿರುವ ನಕ್ವಿ, ಈ ಟ್ರೋಫಿಯನ್ನು ನೀಡಬೇಕು ಎಂದರೆ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಸ್ವತಃ, ಎಸಿಸಿ ಆಫೀಸ್​ಗೆ ಬರಬೇಕು ಎಂದು ಷರತ್ತು ಹಾಕಿದ್ದಾನಂತೆ. ನಖ್ವಿ ಹೇಳಿಕೆಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ.

ಏಷ್ಯಾ ಕಪ್ ಫೈನಲ್ ಪಂದ್ಯ ಮುಕ್ತಾಯದ ಬಳಿಕ ಎಸಿಸಿ ದುಬೈನಲ್ಲಿ ಸಮಾವೇಶ ನಡೆಸಿತ್ತು. ಈ ಸಮಾವೇಶದಲ್ಲಿ ಟ್ರೋಫಿ ವಿವಾದ ಮುನ್ನೆಲೆಗೆ ಬಂದಿತ್ತು. ಸಭೆಗೆ ವಿಡಿಯೋ ಕನ್ಫರೆನ್ಸ್ ಮೂಲಕ ಹಾಜರಾಗಿದ್ದ ಬಿಸಿಸಿಐ ವೈಸ್ ಪ್ರೆಸಿಡೆಂಟ್ ರಾಜೀವ್ ಶುಕ್ಲಾ ಹಲವು ಬಾರಿ ಟ್ರೋಫಿ ಅಂಶವನ್ನು ಪ್ರಸ್ತಾಪಿಸಿದ್ದರಂತೆ. ಆದರೆ ನಕ್ವಿ ಮಾತ್ರ, ಈ ಅಂಶ ಸಭೆಯ ಅಜೆಂಡಾಲದಲ್ಲಿ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರಂತೆ. ಟ್ರೋಫಿ ಬೇಕು ಎಂದರೆ ಭಾರತ ತಂಡದ ನಾಯಕ ನೇರವಾಗಿ ಎಸಿಸಿ ಕಾರ್ಯಾಲಯಕ್ಕೆ ಆಗಮಿಸಿ ತೆಗೆದುಕೊಂಡು ಹೋಗುವಂತೆ ನಖ್ವಿ ಹೇಳಿದ್ದಾಗಿ ಪಾಕಿಸ್ತಾನ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ.

ನಕ್ವಿ ಕೈಯಿಂದ ಟ್ರೋಫಿ ತೆಗೆದುಕೊಳ್ಳುದಿಲ್ಲ ಎಂದು ಬಿಸಿಸಿಐ ಮತ್ತು ಆಟಗಾರರು ಸ್ಪಷ್ಟಪಡಿಸಿದ್ದಾರೆ. ನಕ್ವಿ ಕೇವಲ ಎಸಿಸಿ ಚೀಫ್ ಮಾತ್ರ ಅಲ್ಲ, ಆತ ಪಾಕಿಸ್ತಾನದ ಮಂತ್ರಿಯಾಗಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಈ ಕಾರಣದಿಂದಲೇ ಆತನ ಕೈಯಿಂದ ಟ್ರೋಫಿ ಸ್ವೀಕರಿಸೋದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದರು. ಟೀಂ ಇಂಡಿಯಾಗೆ ಸೇರಬೇಕಾದ ಟ್ರೋಫಿ ಹಾಗೂ ಪದಕಗಳನ್ನ ಹೋಟೆಲ್ ರೂಮ್ ಗೆ ತೆಗೆದುಕೊಂಡು ಅಸಭ್ಯ ವರ್ತನೆ, ಕೂಡಲೇ ಅವುಗಳನ್ನು ಭಾರತ ತಂಡಕ್ಕೆ ನೀಡಬೇಕೆಂದು ಬಿಸಿಸಿಐ ಕಾರ್ಯದರ್ಶಿ ಒತ್ತಾಯಿಸಿದ್ದರು.

ಇದನ್ನೂ ಓದಿ: Vaibhav Suryavanshi: ಕಾಂಗರೂ ನೆಲದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ! ಮತ್ತೆ 2 ದಾಖಲೆ ಮುರಿದ 14ರ ಪೋರ

ಸದ್ಯ ನಖ್ವಿ ನೀಡಿರುವ ಹೇಳಿಕೆಗಳಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದ್ದು, ಟ್ರೋಫಿ ವಿವಾದವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಧಾನ ಕಾರ್ಯಾಲಯಕ್ಕೆ ಬದಲಿ ಮಾಡಬೇಖು ಎಂದು ಆಗ್ರಹಿಸಿದೆ. ಒಟ್ಟಾರೆ ಭಾರತ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಹ್ಯಾಟ್ರಿಕ್ ಸೋಲುಂಡರೂ ಕಪ್ ವಿವಾದ ಮೂಲಕ ನಖ್ವಿ ಕುಚೇಷ್ಟೆ ಮಾಡುತ್ತಿರೋದಂತು ಕ್ರಿಕೆಟ್ ಜಗತ್ತಿನಲ್ಲಿ ಅಸಹಸ್ಯದ ಭಾವನೆಯನ್ನು ಉಂಟು ಮಾಡಿದೆ.