IND vs WI: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್! ಬುಮ್ರಾ ಕಮ್​ಬ್ಯಾಕ್, ಇಬ್ಬರು ಕನ್ನಡಿಗರಿಗೆ ಸಿಗಲಿಲ್ಲ ಚಾನ್ಸ್ | ಕ್ರೀಡೆ

IND vs WI: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್! ಬುಮ್ರಾ ಕಮ್​ಬ್ಯಾಕ್, ಇಬ್ಬರು ಕನ್ನಡಿಗರಿಗೆ ಸಿಗಲಿಲ್ಲ ಚಾನ್ಸ್ | ಕ್ರೀಡೆ

” ಇದು ಉತ್ತಮ ಪಿಚ್‌ನಂತೆ ಕಾಣುತ್ತದೆ, ಸ್ವಲ್ಪ ತೇವವಾಗಿದೆ. ಎಲ್ಲಾ ಆಟಗಾರರು ಸಕಾರಾತ್ಮಕ ಕ್ರಿಕೆಟ್ ಆಡಬೇಕೆಂದು ನಾನು ಬಯಸುತ್ತೇನೆ ಮತ್ತು ಈ ಭಾರತೀಯ ತಂಡಕ್ಕೆ ಹೆದರಬಾರದು. ನಾವು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲವು ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತೇವೆ. ನಾವು ಈ ವಿಕೆಟ್‌ನಲ್ಲಿ ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ಬಯಸುವುದಿಲ್ಲ. ಆಟಗಾರರು ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ನಾನು ಇಬ್ಬರು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳು, ಇಬ್ಬರು ಪೂರ್ಣ ಪ್ರಮಾಣದ ಸೀಮರ್‌ಗಳು, ಆಲ್‌ರೌಂಡರ್ [ಜಸ್ಟಿನ್ ಗ್ರೀವ್ಸ್] ಜೊತೆ ಆಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ನಾಲ್ಕು ಟೆಸ್ಟ್ ಗೆಲ್ಲುವ ಆಸೆ

ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. “ಈ ವರ್ಷಾಂತ್ಯದ ಮೊದಲು ನಮಗೆ ನಾಲ್ಕು ಟೆಸ್ಟ್‌ಗಳು (ತವರಣದಲ್ಲಿ) ಇವೆ. ನಾಲ್ಕನ್ನೂ ಗೆಲ್ಲುವ ಆಸೆ ಇದೆ. ಸಿದ್ಧತೆಗಳು ಉತ್ತಮವಾಗಿವೆ. ಎಲ್ಲರೂ ಉತ್ತಮ ಟಚ್​ ನಲ್ಲಿದ್ದಾರೆ. ಇದು ತುಂಬಾ ಉತ್ತಮ ಪಿಚ್‌ನಂತೆ ಕಾಣುತ್ತದೆ. ಟಾಸ್ ಸೋತರೂ ನಮಗೆ ಅಭ್ಯಂತರವಿರಲಿಲ್ಲ, ಇದು ಕವರ್‌ಗಳ ಅಡಿಯಲ್ಲಿದೆ, ಆದ್ದರಿಂದ ವೇಗದ ಬೌಲರ್‌ಗಳಿಗೆ ಆರಂಭದಲ್ಲಿ ಸ್ವಲ್ಪ ಸಹಾಯ ಸಿಗಬಹುದು. ನಾವು ಇಬ್ಬರು ಸೀಮರ್‌ಗಳೊಂದಿಗೆ ಹೋಗುತ್ತಿದ್ದೇವೆ – ಬುಮ್ರಾ, ಸಿರಾಜ್ ಜೊತೆಗೆ ಮೂವರು ಸ್ಪಿನ್ನರ್‌ಗಳಾದ ಜಡ್ಡು ಭಾಯ್ (ರವೀಂದ್ರ ಜಡೇಜ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಹಾಗೂ ಆಲ್‌ರೌಂಡರ್ ನಿತೀಶ್ ರೆಡ್ಡಿಡಂಡದಲ್ಲಿದ್ದಾರೆ” ಎಂದು ತಿಳಿಸಿದರು.

ಆ ನಾಲ್ವರಿಗೆ ಕೊಕ್

ತಂಡದ ಸ್ಟಾರ್ ಸ್ಪಿನ್ನರ್ ಅಕ್ಷರ್ ಪಟೇಲ್​ಗೆ ಅಹಮದಾಬಾದ್ ತವರು ಮೈದಾನವಾಗಿದ್ದರೂ ಅವರನ್ನು ಆಡುವ XIನಲ್ಲಿ ಸೇರಿಸದ ಕಾರಣ ಈ ನಿರ್ಧಾರ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಅವರ ಜೊತೆಗೆ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಡ್ರಾಗೊಳಿಸಲು ಕಾರಣರಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಎನ್. ಜಗದೀಶನ್ ಹಾಗೂ ದೇವದತ್ ಪಡಿಕ್ಕಲ್ ಕೂಡ ತಂಡದಲ್ಲಿ ಅವಕಾಶ ಪಡೆದಿಲ್ಲ.

ಪ್ಲೇಯಿಂಗ್ ಇಲೆವೆನ್

ಭಾರತ ತಂಡ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ವೆಸ್ಟ್ ಇಂಡೀಸ್ ತಂಡ: ತ್ಯಾಗನರೇನ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾನಜೆ, ಬ್ರಾಂಡನ್ ಕಿಂಗ್, ಶಾಯ್ ಹೋಪ್ (ವಿಕೆಟ್ ಕೀಪರ್), ರೋಸ್ಟನ್ ಚೇಸ್ (ನಾಯಕ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೇನ್, ಜೇಡನ್ ಸೀಲ್ಸ್