IND vs AUS: ವೈಭವ್, ವೇದಾಂತ್ ಸ್ಫೋಟಕ ಶತಕ, ದೀಪೇಶ್ ಮಾರಕ ದಾಳಿ! ಆಸೀಸ್ ವಿರುದ್ಧ ಇನ್ನಿಂಗ್ಸ್ ಜಯ ಸಾಧಿಸಿದ ಭಾರತ U19 | Devendran’s 8-Fer, Centuries from Suryavanshi and Trivedi Propel India to Dominant Win | ಕ್ರೀಡೆ

IND vs AUS: ವೈಭವ್, ವೇದಾಂತ್ ಸ್ಫೋಟಕ ಶತಕ, ದೀಪೇಶ್ ಮಾರಕ ದಾಳಿ! ಆಸೀಸ್ ವಿರುದ್ಧ ಇನ್ನಿಂಗ್ಸ್ ಜಯ ಸಾಧಿಸಿದ ಭಾರತ U19 | Devendran’s 8-Fer, Centuries from Suryavanshi and Trivedi Propel India to Dominant Win | ಕ್ರೀಡೆ

Last Updated:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 243 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 428 ರನ್​ಗಳಿಸಿತ್ತು. 185 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಕೇವಲ 127ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 58 ರನ್​ಗಳಿಂದ ಗೆದ್ದು ಬೀಗಿತು.

ಭಾರತ ತಂಡಕ್ಕೆ ಜಯಭಾರತ ತಂಡಕ್ಕೆ ಜಯ
ಭಾರತ ತಂಡಕ್ಕೆ ಜಯ

ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಅಂಡರ್-19 (India U19) ತಂಡದ ಪ್ರಾಬಲ್ಯ ಮುಂದುವರೆದಿದೆ. ಬ್ರಿಸ್ಬೇನ್‌ನಲ್ಲಿ (Brisbane) ನಡೆದ ಆಸೀಸ್ ಅಂಡರ್-19 (Australi U19) ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 58 ರನ್‌ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಏಕದಿನ ಸರಣಿಯನ್ನ 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 243 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 428 ರನ್​ಗಳಿಸಿತ್ತು. 185 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಕೇವಲ 127ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 58 ರನ್​ಗಳಿಂದ ಗೆದ್ದು ಬೀಗಿತು.

185ರನ್​ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಭಾರತೀಯ ಬೌಲಿಂಗ್ ದಾಳಿಗೆ ಧೂಳೀಪಟವಾಯಿತು. ಆಸ್ಟ್ರೇಲಿಯಾ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಆರ್ಯನ್ ಶರ್ಮಾ 43 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 22 ರನ್​ಗಳಿಸಿದ ನಾಯಕ ವಿಲ್ ಮಲಾಕ್​ಜುಕ್ 22 ರನ್​ಗಳಿಸಿದರು. ಖಿಲಾನ್ ಪಟೇಲ್ 19ಕ್ಕೆ3, ಅನ್ಮೋಲ್​ಜಿತ್ ಸಿಂಗ್ 55ಕ್ಕೆ2, ದೀಪೇಶ್ 16ಕ್ಕೆ3, ಕಿಶನ್ ಕುಮಾರ್ 26ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಸ್ಟೀವನ್ ಹೋಗನ್ (92) ಹೊರತುಪಡಿಸಿ, ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಭಾರತೀಯ ಬೌಲರ್‌ಗಳಲ್ಲಿ ದೀಪೇಶ್ ದೇವೇಂದ್ರನ್ 5 ವಿಕೆಟ್ ಪಡೆದರೆ,ಕಿಶನ್ ಕುಮಾರ್ 3 ವಿಕೆಟ್ ಹಾಗೂ ಅನ್ಮೋಲ್​ಜಿತ್ ಸಿಂಗ್, ಖಿಲಾನ್ ಪಟೇಲ್ ತಲಾ 1 ವಿಕೆಟ್ ಪಡೆದರು.

ಭಾರತದ ಮೊದಲ ಇನ್ನಿಂಗ್ಸ್

ಆಸ್ಟ್ರೇಲಿಯಾದ 243 ರನ್​ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (86 ಎಸೆತಗಳಲ್ಲಿ 113; 9 ಬೌಂಡರಿ, 8 ಸಿಕ್ಸರ್) ಮತ್ತು ವೇದಾಂತ್ ತ್ರಿವೇದಿ (192 ಎಸೆತಗಳಲ್ಲಿ 140; 19 ಬೌಂಡರಿ) ಅದ್ಭುತ ಶತಕಗಳೊಂದಿಗೆ ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಐಪಿಎಲ್‌ನಲ್ಲಿ ಈಗಾಗಲೇ ಪ್ರಭಾವಿ ಪ್ರದರ್ಶನ ನೀಡಿರುವ 14 ವರ್ಷದ ವೈಭವ್ ಟೆಸ್ಟ್ ಏಕದಿನ ಕ್ರಿಕೆಟ್​ನಲ್ಲೂ ಟಿ20 ಮಾದರಿಯಂತೆ ಸಿಡಿಲಬ್ಬರಿಸುತ್ತಿದ್ದಾರೆ.

ವೈಭವ್, ವೇದಾಂತ್ ಜೊತೆಗೆ ಮೂರನೇ ವಿಕೆಟ್‌ಗೆ 152 ರನ್ ಸೇರಿಸಿದರು. ವೇದಾಂತ್ 192 ಎಸೆತಗಳಲ್ಲಿ 19 ಬೌಂಡರಿಗಳ ಸಹಿತ 140 ರನ್​ಗಳಿಸಿದರು. ಖಿಲಾನ್ ಪಟೇಲ್ (49 ಎಸೆತಗಳಲ್ಲಿ 49; 7 ಬೌಂಡರಿ, 2 ಸಿಕ್ಸರ್), ಆಯುಷ್ ಮಾತ್ರೆ (21), ಅಭಿಗ್ಯ ಕುಂದು (26), ಮತ್ತು ರಾಹುಲ್ ಕುಮಾರ್ (23) ಉತ್ತಮ ಪ್ರದರ್ಶನ ನೀಡಿದರು. ಇದರೊಂದಿಗೆ, ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 428 ರನ್​ಗಳಿಸಿ 185 ರನ್‌ಗಳ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ, ಹೇಡನ್ ಮತ್ತು ವಿಲ್ ಮಲಾಚುಕ್ ತಲಾ 3 ವಿಕೆಟ್‌ಗಳನ್ನು ಪಡೆದರು.

ಅಕ್ಟೋಬರ್ 7 ರಿಂದ ಮೆಕೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಆರಂಭವಾಗಲಿದೆ. ಭಾರತ ಮೂರು ಪಂದ್ಯಗಳ ಏಕದಿನ ಯುವ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಈ ಪಂದ್ಯವನ್ನ ಗೆದ್ದರೆ, ಟೆಸ್ಟ್ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಲಿದೆ.