ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕವನ್ನು ಸಿರಾಜ್ ಧೂಳೀಪಟ ಮಾಡಿದರು. ಆರಂಭಿಕ ಆಟಗಾರ ತೇಜ್ ನನಾರಾಯಣ್ ಚಂದ್ರಪಾಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಅವರು ವೆಸ್ಟ್ ಇಂಡೀಸ್‌ಗೆ ಮೊದಲ ಹೊಡೆತ ನೀಡಿದರು.
ಸಿರಾಜ್ ಬೆನ್ನಲ್ಳೇ ಬುಮ್ರಾ ವಿಂಡೀಸ್ಗೆ 2ನೇ ಆಘಾತ ನೀಡಿದರು. 7ನೇ ಓವರ್‌ನಲ್ಲಿ ಬುಮ್ರಾ 8 ರನ್ಗಳಿಸಿದ್ದ ಕ್ಯಾಂಪ್‌ಬೆಲ್ ವಿಕೆಟ್ ಉಡಾಯಿಸಿದರು. 10 ಮತ್ತು 12 ನೇ ಓವರ್‌ಗಳಲ್ಲಿ ಹೈದರಾಬಾದ್ ಸೆನ್ಷೇಷನ್ ಸಿರಾಜ್ 2 ವಿಕೆಟ್ ಪಡೆದು ವಿಂಡೀಸ್ ಚೇತರಿಸಿಕೊಳ್ಳದಂತೆ ಮಾಡಿದರು. ಮೊದಲು ಬ್ರಾಂಡನ್ ಕಿಂಗ್ (13) ಅವರನ್ನು ಬೌಲ್ಡ್ ಮಾಡಿದ ಮಿಜಾಭಾಯ್, ನಂತರ ಅಲಿಕ್
ಅಥಾಂಜೆ 12ರನ್ಗಳಿಸಿ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ವಿಕೆಟ್ ಕೀಪರ್ ಶಾಯ್ ಹೋಪ್ 26 ರನ್ಗಳಿಸಿ ಏಷ್ಯಾಕಪ್ ಹೀರೋ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಏಷ್ಯಾ ಕಪ್ ಗೆದ್ದ ತಂಡದ ಭಾಗವಾಗಿರಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಎಲ್ಲಾ ಐದು ಟೆಸ್ಟ್‌ಗಳನ್ನು ಆಡಿದ ನಂತರ, ಅವರನ್ನು ಏಷ್ಯಾ ಕಪ್ ತಂಡದಿಂದ ಹೊರಗಿಡಲಾಗಿತ್ತು. ಆದರೆ ಟೆಸ್ಟ್ ಸರಣಿಯ ಮೊದಲು, ಅವರು ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ಪರ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಿದರು. ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ, ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು.
ಅನನುಭವಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ ಅಪ್ ಭಾರತೀಯ ಬೌಲರ್‌ಗಳಿಗೆ ಸಂಪೂರ್ಣವಾಗಿ ಶರಣಾಯಿತು. ಊಟದ ಸಮಯದ ವೇಳೆಗೆ, ವೆಸ್ಟ್ ಇಂಡೀಸ್ ಕೇವಲ 90 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಸಿರಾಜ್ 19 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಬುಮ್ರಾ 24 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಭಾರತದ ಆಡುವ XI: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ತೇಜ್‌ನಾರಾಯಣ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾಂಜೆ, ಬ್ರಾಂಡನ್ ಕಿಂಗ್, ಶಾಯ್ ಹೋಪ್ (ವಿಕೀ), ರೋಸ್ಟನ್ ಚೇಸ್ (ನಾಉಲ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೈನ್ ಮತ್ತು ಜೇಡನ್ ಸೀಲ್ಸ್.
October 02, 2025 12:31 PM IST