Last Updated:
ಅಕ್ಟೋಬರ್ 5 ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಐಸಿಸಿ ಮಹಿಳಾ ವಿಶ್ವಕಪ್ 2025 ರ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದೊಂದಿಗೆ ಭಾರತ ವನಿಯತೆಯರು ಹ್ಯಾಂಡ್‌ಶೇಕ್ ಮಾಡುತ್ತಾರಾ? ಎಂಬುದರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
ಭಾರತ ಮತ್ತು ಶ್ರೀಲಂಕಾ (India vs Sri Lanka) ಆತಿಥ್ಯದಲ್ಲಿ ಐಸಿಸಿ (ICC) ಮಹಿಳಾ ಏಕದಿನ ವಿಶ್ವಕಪ್ (Womens World Cup) 2025 ಟೂರ್ನಿ ನಡೆಯುತ್ತಿದೆ. ಮಹಿಳಾ ವಿಶ್ವಕಪ್ ಸೆಪ್ಟೆಂಬರ್ 30 ರಂದು ಪ್ರಾರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 59 ರನ್‌ಗಳ ಅಮೋಘ ಜಯ ಸಾಧಿಸಿದೆ. ಭಾನುವಾರ ಅಂದರೆ ಅಕ್ಟೋಬರ್ 5 ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್ 2025 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹಲವು ವಿವಾದಗಳು ಹುಟ್ಟುಕೊಂಡಿದ್ದವು. ಇದೀಗ ಐಸಿಸಿ ಮಹಿಳಾ ವಿಶ್ವಕಪ್ 2025 ರ ಟೂರ್ನಿಗೂ ಭಾರತ ಮತ್ತು ಪಾಕಿಸ್ತಾನ ನಡುವಿ ವಿವಾದ ಹೆಜ್ಜೆಯನ್ನಿಟ್ಟಿದೆ.
ಏಷ್ಯಾಕಪ್ 2025 ರ ಟೂರ್ನಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದರು. ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ದೂರು ನೀಡಿತು. ಅಲ್ಲದೆ, ಫೈನಲ್ ಗೆದ್ದ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಟೀಮ್ ಇಂಡಿಯಾ ನಿರಾಕರಿಸಿತು.
ಇದೀಗ ಐಸಿಸಿ ಮಹಿಳಾ ವಿಶ್ವಕಪ್ 2025 ರ ಪಂದ್ಯದಲ್ಲಿ ಪಾಕಿಸ್ತಾನ ತಂಡದೊಂದಿಗೆ ಭಾರತ ವನಿಯತೆಯರು ಹ್ಯಾಂಡ್‌ಶೇಕ್ ಮಾಡುತ್ತಾರಾ? ಎಂಬ ಚರ್ಚೆ ಶುರುವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಭಾರತ ತಂಡವು ಪಾಕಿಸ್ತಾನದೊಂದಿಗೆ ಹ್ಯಾಂಡ್‌ಶೇಕ್ ಮಾಡುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ಭಾರತದ ರಾಜತಾಂತ್ರಿಕ ಅಥವಾ ಕ್ರೀಡಾ ಸಂಬಂಧಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೂ ಎಲ್ಲಾ ಅಧಿಕೃತ ಕ್ರಿಕೆಟ್ ನಿಯಮಗಳನ್ನು ಗೌರವಿಸಲಾಗುವುದು. ನಾನು ಏನನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ದೇಶದೊಂದಿಗಿನ ನಮ್ಮ ಸಂಬಂಧ ಒಂದೇ ಆಗಿರುತ್ತದೆ. ಕಳೆದ ವಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸೈಕಿಯಾ ತಿಳಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತವು ಕೊಲಂಬೊದಲ್ಲಿ ಪಂದ್ಯವನ್ನು ಆಡಲಿದೆ. ಈ ವೇಳೆ ಕ್ರಿಕೆಟ್‌ನ ಎಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತದೆ. ಕ್ರಿಕೆಟ್‌ನ ನಿಯಮಗಳಲ್ಲಿ ಏನೇ ಇರಲಿ, ಹ್ಯಾಂಡ್‌ಶೇಕ್ ಮತ್ತು ಅಪ್ಪುಗೆಯನ್ನು ಮಾಡಲಾಗುತ್ತದೆ ಎಂದು ನಾನು ಯಾವ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.
ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ನಡೆದಿತ್ತು. ಶ್ರೀಲಂಕಾ ತಂಡವನ್ನು ಭಾರತ 59 ರನ್ಗಳಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, 47 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತ್ತು. ಮಳೆಯಿಂದಾಗಿ ಪಂದ್ಯವನ್ನು 47 ಓವರ್ಗಳಿಗೆ ಇಳಿಸಲಾಗಿತ್ತು. ಭಾರತ ನೀಡಿದ 269 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ
ತಂಡ 45.4 ಓವರ್ಗಳಲ್ಲಿ ಆಲೌಟ್ ಆಗಿತ್ತು.
ಮಹಿಳಾ ಏಕದಿನ ವಿಶ್ವಕಪ್ 2025 ರಲ್ಲಿ ಎಂಟು ತಂಡಗಳು ರೌಂಡ್-ರಾಬಿನ್ ಸ್ವರೂಪದಲ್ಲಿ ಪರಸ್ಪರ ಆಡಲಿವೆ. ಅಂದರೆ, ಗುಂಪುಗಳನ್ನಾಗಿ ವಿಂಗಡಿಸದೆ ಪ್ರತಿ ತಂಡವು ಟೂರ್ನಿಯಲ್ಲಿ ಇತರ ತಂಡವನ್ನು ಒಮ್ಮೆ ಎದುರಿಸಲಿದೆ. ಪ್ರತಿ ತಂಡವು ಅಕ್ಟೋಬರ್ 26 ರವರೆಗೆ ಏಳು ಪಂದ್ಯಗಳನ್ನು ಆಡಲಿದ್ದು, ಒಟ್ಟು 28 ಪಂದ್ಯಗಳನ್ನು ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳ ನಡುವೆ ಸೆಮಿಫೈನಲ್‌ಗೆ ಮುನ್ನಡೆಯಲಿವೆ. ಮೊದಲ ಸ್ಥಾನದಲ್ಲಿರುವ ತಂಡವು ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಎರಡನೇ ಸ್ಥಾನದಲ್ಲಿರುವ ತಂಡವು ಮೂರನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ನವೆಂಬರ್ 2 ರಂದು ಫೈನಲ್‌ನಲ್ಲಿ ಮುಖಮುಖಿಯಾಗಲಿವೆ.
October 02, 2025 5:43 PM IST