IND vs WI: ಮಿಂಚಿದ ಸಿರಾಜ್, ರಾಹುಲ್ ಅಜೇಯ ಅರ್ಧಶತಕ! ವಿಂಡೀಸ್ ವಿರುದ್ಧ ಮೊದಲ ದಿನ ಭಾರತ ಸಂಪೂರ್ಣ ಪ್ರಾಬಲ್ಯ | bumrah siraj shining with ball kl rahul fifty india dominate in first day in ahmedabad | ಕ್ರೀಡೆ

IND vs WI: ಮಿಂಚಿದ ಸಿರಾಜ್, ರಾಹುಲ್ ಅಜೇಯ ಅರ್ಧಶತಕ! ವಿಂಡೀಸ್ ವಿರುದ್ಧ ಮೊದಲ ದಿನ ಭಾರತ ಸಂಪೂರ್ಣ ಪ್ರಾಬಲ್ಯ | bumrah siraj shining with ball kl rahul fifty india dominate in first day in ahmedabad | ಕ್ರೀಡೆ

Last Updated:

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸಿರಾಜ್ -ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೇ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 162 ರನ್​ಗಳಿಗೆ ಆಲೌಟ್ ಆಗಿದೆ.

ಕೆಎಲ್ ರಾಹುಲ್ಕೆಎಲ್ ರಾಹುಲ್
ಕೆಎಲ್ ರಾಹುಲ್

ಅಹಮದಾಬಾದ್: ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಕೇವಲ 162ಕ್ಕೆ ಆಲೌಟ್ ಆಗಿತ್ತು. ಇದೀಗ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯದ ವೇಳೆ 38 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 121 ರನ್​ಗಳಿಸಿ ಪ್ರಾಬಲ್ಯ ಮೆರೆದಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸಿರಾಜ್ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕವನ್ನು ಧೂಳೀಪಟ ಮಾಡಿರು. ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ತೇಜ್​ನಾರಾಯಣ್​ ಚಂದ್ರಪಾಲ್ ಖಾತೆ ತೆರೆಯದೇ ಜುರೆಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸಿರಾಜ್ ಬೆನ್ನಲ್ಳೇ ಬುಮ್ರಾ ವಿಂಡೀಸ್​ಗೆ 2ನೇ ಶಾಕ್ ಕೊಟ್ಟರು. 7ನೇ ಓವರ್​ನಲ್ಲಿ ಬುಮ್ರಾ 8 ರನ್​ಗಳಿಸಿದ್ದ ಕ್ಯಾಂಪ್​ಬೆಲ್​ರನ್ನ ಪೆವಿಲಿಯನ್​ಗಟ್ಟಿದರು. ಮತ್ತೆ ಸಿರಾಜ್ ತಮ್ಮ 10 ಮತ್ತು 12 ನೇ ಓವರ್‌ಗಳಲ್ಲಿ 13 ರನ್​ಗಳಿಸಿದ್ದ ಬ್ರಾಂಡನ್ ಕಿಂಗ್ ಮತ್ತು 12ರನ್​ಗಳಿಸಿದ್ದ ಅಲಿಕ್ ಅಥಾಂಜೆ ವಿಕೆಟ್ ಪಡೆದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

6ನೇ ಕ್ರಮಾಂಕದಲ್ಲಿ ಬಂದ ವಿಕೆಟ್ ಕೀಪರ್ ಶಾಯ್ ಹೋಪ್ ಹಾಗೂ ನಾಯಕ ಚೇಸ್ ಜೊತೆ ಸೇರಿ​ 5ನೇ ವಿಕೆಟ್​ ಜೊತೆಯಾಟದಲ್ಲಿ 48 ರನ್​ ಸೇರಿಸಿ ಚೇತರಿಕೆ ನೀಡಿದರು. ಆದರೆ ಈ ಜೋಡಿಯನ್ನ ಕುಲ್ದೀಪ್ ಬೇರ್ಪಡಿಸಿದರು. 26 ರನ್​ಗಳಿಸಿದ್ದ ಶಾಯ್ ಹೋಪರ್​ರನ್ನ ಏಷ್ಯಾಕಪ್ ಹೀರೋ ಕುಲ್ದೀಪ್ ಯಾದವ್​ ಬೌಲ್ಡ್ ಮಾಡಿದರು. 15 ರನ್​ಗಳ ಅಂತರದಲ್ಲಿ ನಾಯಕ ರೋಸ್ಟನ್ ಚೇಸ್ ಕೂಡ 43 ಎಸೆತಗಳಲ್ಲಿ 24 ರನ್​ಗಳಿಸಿ ಸಿರಾಜ್​ಗೆ 4ನೇ ಬಲಿಯಾದರು.

ಈ ಹಂತದಲ್ಲಿ ಒಂದಾದ ಜಸ್ಟಿನ್ ಗ್ರೀವ್ಸ್ ಹಾಗೂ ಖಾರಿ ಪಿಯರ್ 7ನೇ ವಿಕೆಟ್​ ಜೊತೆಯಾಟದಲ್ಲಿ39 ರನ್​ ಜೊತೆಯಾಟ ನೀಡಿ ತಂಡದ ಮೊತ್ತವನ್ನ 150ರ ಗಡಿದಾಟಿಸಿದರು. ಈ ಹಂತದಲ್ಲಿ ಬೌಲಿಂಗ್​​ಗೆ ಆಗಮಿಸಿದ ವಾಷಿಂಗ್ಟನ್ ಸುಂದರ್ 34 ಎಸೆತಗಳಲ್ಲಿ 11 ರನ್​ಗಳಿಸಿದ್ದ ಪಿಯರ್​ರನ್ನ ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. 48 ಎಸೆತಗಳಲ್ಲಿ 4 ಬೌಂಡರಿ ಸಹಿತ 32 ರನ್​ಗಳಿಸಿದ ತಂಡದ ಗರಿಷ್ಠ ಸ್ಕೋರರ್ ಆಗಿದ್ದ ಗ್ರೀವ್ಸ್ ಬುಮ್ರಾ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ಜೊಮೆಲ್ ವಾರಿಕನ್ 8 ರನ್, ಜಹಾನ್ ಲೇನ್ 1ನರ್ಗಳಿಗೆ ನಿರ್ಗಮಿಸಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 42ಕ್ಕೆ3, ಮೊಹಮ್ಮದ್ ಸಿರಾಜ್ 40ಕ್ಕೆ4, ಕುಲ್ದೀಪ್ ಯಾದವ್ 25ಕ್ಕೆ2, ವಾಷಿಂಗ್ಟನ್ ಸುಂದರ್ 9ಕ್ಕೆ1 ವಿಕೆಟ್ ಪಡೆದು ವೆಸ್ಟ್ ಇಂಡೀಸ್ ತಂಡವನ್ನ ಮೊದಲೆರೆಡು ಸೆಷನ್​​ನಲ್ಲೇ ಆಲೌಟ್ ಮಾಡಲು ನೆರವಾದರು.

ಭಾರತ ಉತ್ತಮ ಆರಂಭ

ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ ಜೊತೆಯಾಟದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ 68 ರನ್​ ಸೇರಿಸಿದರು. ಯಶಸ್ವಿ ಜೈಸ್ವಾಲ್ 54 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 36 ರನ್​ಗಳಿಸಿ ಜೇಡನ್ ಸೀಲ್ಸ್​ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಅವರು 19 ಎಸೆತಗಳಲ್ಲಿ 7 ರನ್​ಗಳಿಸಿ ರೋಸ್ಟನ್ ಚೇಸ್​ಗೆ ವಿಕೆಟ್ ಒಪ್ಪಿಸಿದರು.

ಕನ್ನಡಿಗ ಕೆಎಲ್ ರಾಹುಲ್ ಹಾಗೂ ನಾಯಕ ಶುಭ್​ಮನ್ ಗಿಲ್ 3ನೇ ವಿಕೆಟ್ ಜೊತೆಯಾಟದಲ್ಲಿ 31 ರನ್​ ಸೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ರಾಹುಲ್ 114 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 53 ರನ್​ಗಳಿಸಿದ್ದರೆ, ಶುಭ್​ಮನ್ ಗಿಲ್ 42 ಎಸೆತಗಳಲ್ಲಿ ಅಜೇಯ 18 ರನ್​ಗಳಿಸಿದ್ದಾರೆ.