Last Updated:
ಭಾರತ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ಜೊತೆಗೆ ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಭಾಗವಹಿಸುವ ಇತರ ತಂಡಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಾಲಿ ಟಿ20 ಚಾಂಪಿಯನ್ ಭಾರತ ತಂಡ (Team India) ಮುಂದಿನ ವಿಶ್ವಕಪ್ (World Cup) ಟೂರ್ನಿಗೆ ಸಜ್ಜಾಗುತ್ತಿದೆ. 2024 ರ ಟಿ20 ವಿಶ್ವಕಪ್ (T20 World Cup) ಗೆಲುವಿನ ಬಳಿಕ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಮತ್ತು ರವೀಂದ್ರ ಜಡೇಜಾ (Ravindra Jadeja) ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಈ ಮೂವರ ಅನುಪಸ್ಥಿತಿಯಲ್ಲಿ ಯಂಗ್ ಟೀಮ್ ಇಂಡಿಯಾ 2026 ರ ಟಿ 20 ವಿಶ್ವಕಪ್ ಆಡಲು ಕಾತುರದಿಂದ ಕಾಯುತ್ತಿದೆ. ಮತ್ತೊಮ್ಮೆ ಚಾಂಪಿಯನ್ ಆಗುವ ಭರವಸೆಯಲ್ಲಿರುವ ಟೀಮ್ ಇಂಡಿಯಾವನ್ನು ಮತ್ತಷ್ಟು ಬಲಿಷ್ಠ ತಂಡವನ್ನಾಗಿಸಲು ಹೆಡ್ಕೋಚ್ ಗೌತಮ್ ಗಂಭೀರ್ (Gautam Gambhir) ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಇದರ ನಡುವೆ ಮುಂದಿನ ವಿಶ್ವಕಪ್ ಟೂರ್ನಿಗೆ ಆರ್ಹತೆ ಪಡೆಯಲು ಹಲವು ತಂಡಗಳ ನಡುವೆ ಪೈಪೋಟಿ ನಡೆಸುತ್ತಿವೆ.
ಟಿ20 ವಿಶ್ವಕಪ್ 2026 ರ ಟೂರ್ನಿಯ ಪಂದ್ಯಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಬರೋಬ್ಬರಿ 20 ತಂಡಗಳು ಭಾಗವಹಿಸುತ್ತಿವೆ. ಇಷ್ಟೊಂದು ತಂಡಗಳು ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಏಷ್ಯಾ ಕಪ್ 2025 ರಲ್ಲಿ ತನ್ನ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡ ಇತ್ತೀಚೆಗೆ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿಶ್ವದ ನಂಬರ್ ಒನ್ ತಂಡವಾಗಿದೆ.
ಗುರುವಾರ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ತಂಡ ತಾಂಜಾನಿಯಾವನ್ನು 63 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಶ್ರೀಲಂಕಾ ಮತ್ತು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 16ನೇ ತಂಡವಾಗಿ ನಮೀಬಿಯಾ ಸೇರ್ಪಡೆಯಾಗಿದೆ. ಎರಡನೇ ಸೆಮಿಫೈನಲ್ ಜಿಂಬಾಬ್ವೆ ಮತ್ತು ಕೀನ್ಯಾ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವವರು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ 17 ನೇ ತಂಡವಾಗಲಿದೆ.
ಟಿ20 ವಿಶ್ವಕಪ್ 2026 ರ ಟೂರ್ನಿ ಭಾರೀ ಕುತೂಹಲ ಮೂಡಿಸಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯೊಂದರಲ್ಲಿ 20 ತಂಡಗಳು ಪೈಪೋಟಿ ನಡೆಸಲಿವೆ. ಈಗಾಗಲೇ 16 ತಂಡಗಳು ಟಿ20 ವಿಶ್ವಕಪ್‌ಗೆ ಆರ್ಹತೆ ಪಡೆದಿದ್ದು, ಉಳಿದ ನಾಲ್ಕು ಸ್ಥಾನಗಳು ಮಾತ್ರ ಬಾಕಿ ಉಳಿದಿವೆ. ಈ ಅಂತಿಮ ಸ್ಥಾನಗಳನ್ನು ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆದ ತಂಡಗಳಿಂದ ತುಂಬಿಸಲಾಗುತ್ತದೆ. ಈ ಪಂದ್ಯಗಳು ಅಕ್ಟೋಬರ್ 8 ರಿಂದ ಒಮಾನ್‌ನಲ್ಲಿ ಪ್ರಾರಂಭವಾಗಲಿವೆ. ಜಪಾನ್, ಕುವೈತ್, ಮಲೇಷ್ಯಾ, ನೇಪಾಳ, ಓಮನ್, ಪಪುವಾ ನ್ಯೂಗಿನಿಯಾ, ಕತಾರ್, ಸಮೋವಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಅಂತಿಮ ಮೂರು ಸ್ಥಾನಗಳಿಗಾಗಿ ಸ್ಪರ್ಧಿಸಲಿವೆ.
ಟಿ20 ವಿಶ್ವಕಪ್‌ಗೆ ಈಗಾಗಲೇ 16 ತಂಡಗಳು ಅರ್ಹತೆ ಪಡೆದಿವೆ. ಇಲ್ಲಿಯವರೆಗೆ ಅರ್ಹತೆ ಪಡೆದ ತಂಡಗಳೆಂದರೆ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ನೆದರ್ಲ್ಯಾಂಡ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ದಕ್ಷಿಣ ಆಫ್ರಿಕಾ, ಇಟಲಿ, ನಮೀಬಿಯಾ.
October 02, 2025 7:44 PM IST