Last Updated:
ಭಾರತ ಮತ್ತು ಶ್ರೀಲಂಕಾ ಆಯೋಜಿಸುತ್ತಿರುವ 2026 ರ ಟಿ20 ವಿಶ್ವಕಪ್ ಟೂರ್ನಿಗೆ ನಾಲ್ಕು ವರ್ಷಗಳ ನಂತರ ಜಿಂಬಾಬ್ವೆ ತಂಡ ಅರ್ಹತೆ ಪಡೆದಿದೆ.
ಭಾರತ ಮತ್ತು ಶ್ರೀಲಂಕಾ (India and Sri Lanka) ಟಿ20 ವಿಶ್ವಕಪ್ (T20 World Cup) 2026 ಟೂರ್ನಿಯನ್ನು ಆಯೋಜಿಸಲಿವೆ. ಮೊದಲ ಬಾರಿಗೆ 20 ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಇತ್ತೀಚೆಗೆ ನಮೀಬಿಯಾ (Namibia) ತಂಡವು ತಾಂಜಾನಿಯಾವನ್ನು ಸೋಲಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, ಈ ಮೂಲಕ 16ನೇ ತಂಡವಾಗಿದೆ. ಮತ್ತೊಂದೆಡೆ ಗುರುವಾರ ಜಿಂಬಾಬ್ವೆ (Zimbabwe) ತಂಡ ಕೀನ್ಯಾವನ್ನು (Kenya) ಸೋಲಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, 17ನೇ ತಂಡವಾಗಿದೆ. ಈಗ ಅರ್ಹತೆ ಪಡೆಯಲು ಇನ್ನೂ ಮೂರು ತಂಡಗಳು ಉಳಿದಿವೆ. ಟಿ20 ವಿಶ್ವಕಪ್ ಟೂರ್ನಿಯು 2026 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.
ನಾಲ್ಕು ವರ್ಷಗಳ ನಂತರ ನಮೀಬಿಯಾ ಮತ್ತು ಜಿಂಬಾಬ್ವೆ ತಂಡಗಳು ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಕಳೆದ ವರ್ಷ ಉಗಾಂಡಾ ವಿರುದ್ಧದ ಸೋಲಿನಿಂದ ಜಿಂಬಾಬ್ವೆ ಟಿ20 ವಿಶ್ವಕಪ್‌ನಿಂದ ಹೊರಗುಳಿದಿತ್ತು. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿರುವುದು ಗಮನಿಸಬೇಕಾದ ಸಂಗತಿ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೀನ್ಯಾ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ಕೇವಲ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಜಿಂಬಾಬ್ವೆ ಪರ ಬ್ರಿಯಾನ್ ಬೆನೆಟ್ 51 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗೆಲುವಿನೊಂದಿಗೆ ಜಿಂಬಾಬ್ವೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 17 ನೇ ತಂಡವಾಯಿತು.
ಜಿಂಬಾಬ್ವೆ ಮತ್ತು ಭಾರತ ನಡುವೆ 2024 ರಲ್ಲಿ ಟಿ20 ಸರಣಿ ನಡೆದಿತ್ತು. ಈ ಸರಣಿ ಮೊದಲ ಟಿ20 ಪಂದ್ಯದಲ್ಲಿಯೇ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿತು. ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ರಿಯಾನ್ ಪರಾಗ್ ಮತ್ತು ರಿಂಕು ಸಿಂಗ್ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ, ಭಾರತ ಪಂದ್ಯವನ್ನು ಸೋತಿತು. ಟೀಮ್ ಇಂಡಿಯಾ 115 ರನ್‌ಗಳನ್ನು ಗಳಿಸಲು ಸಹ ವಿಫಲವಾಗಿತ್ತು. ಭಾರತವನ್ನು ಸೋಲಿಸುವ ಮೂಲಕ ಜಿಂಬಾಬ್ವೆ ಗೆಲುವಿನ ನಗೆ ಬೀರಿತು. ಇದೀಗ ಜಿಂಬಾಬ್ವೆ 2026 ರ ಟಿ20 ವಿಶ್ವಕಪ್‌ನಲ್ಲಿ ವಿಶ್ವದ ಪ್ರಮುಖ ತಂಡಗಳೊಂದಿಗೆ ಸ್ಪರ್ಧಿಸಲು ಸಜ್ಜಾಗುತ್ತಿದೆ.
ಅಂತಿಮ ಮೂರು ಸ್ಥಾನಗಳನ್ನು ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆದ ತಂಡಗಳಿಂದ ತುಂಬಿಸಲಾಗುತ್ತದೆ. ಈ ಪಂದ್ಯಗಳು ಅಕ್ಟೋಬರ್ 8 ರಿಂದ ಒಮಾನ್‌ನಲ್ಲಿ ಪ್ರಾರಂಭವಾಗಲಿವೆ. ಜಪಾನ್, ಕುವೈತ್, ಮಲೇಷ್ಯಾ, ನೇಪಾಳ, ಓಮನ್, ಪಪುವಾ ನ್ಯೂಗಿನಿಯಾ, ಕತಾರ್, ಸಮೋವಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಅಂತಿಮ ಮೂರು ಸ್ಥಾನಗಳಿಗಾಗಿ ಸ್ಪರ್ಧಿಸಲಿವೆ.
ಟಿ20 ವಿಶ್ವಕಪ್‌ಗೆ ಈಗಾಗಲೇ 17 ತಂಡಗಳು ಅರ್ಹತೆ ಪಡೆದಿವೆ. ಇಲ್ಲಿಯವರೆಗೆ ಅರ್ಹತೆ ಪಡೆದ ತಂಡಗಳೆಂದರೆ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ನೆದರ್ಲ್ಯಾಂಡ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ದಕ್ಷಿಣ ಆಫ್ರಿಕಾ, ಇಟಲಿ, ನಮೀಬಿಯಾ, ಜಿಂಬಾಬ್ವೆ.
October 02, 2025 11:23 PM IST