Last Updated:
ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ ಮತ್ತು ಕೆಎಲ್ ರಾಹುಲ್ ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ಸ್ಪರ್ಧಿಗಳಾಗಿದ್ದಾರೆ. ಅಹಮದಾಬಾದ್ ಟೆಸ್ಟ್ ಪ್ರಾರಂಭವಾಗುವ ಮೊದಲು, ಡಕೆಟ್ 2025 ರಲ್ಲಿ 602 ರನ್ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
ಭಾರತದ ಟೆಸ್ಟ್ ತಂಡದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ (KL Rahul) ತವರಿನಲ್ಲೂ ತಮ್ಮ ಗೋಲ್ಡನ್ ಫಾರ್ಮ್ ಮುಂದುವರಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ, 2025ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಶತಕದೊಂದಿಗೆ, ಕೆಎಲ್ ರಾಹುಲ್ (KL Rahul) ಇಂಗ್ಲೆಂಡ್ನ ಬೆನ್ ಡಕೆಟ್ ಅವರನ್ನು ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ ಮತ್ತು ಕೆಎಲ್ ರಾಹುಲ್ ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ಸ್ಪರ್ಧಿಗಳಾಗಿದ್ದಾರೆ. ಅಹಮದಾಬಾದ್ ಟೆಸ್ಟ್ ಪ್ರಾರಂಭವಾಗುವ ಮೊದಲು, ಡಕೆಟ್ 2025 ರಲ್ಲಿ 602 ರನ್ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಶತಕ ಗಳಿಸಿದ ನಂತರ, ಅವರು ಒಟ್ಟು 649 ರನ್ಗಳೊಂದಿಗೆ ಅಗ್ರಸ್ಥಾನ ಪಡೆದರು. ಈ ಪ್ರದರ್ಶನದೊಂದಿಗೆ, ರಾಹುಲ್ ಅವರನ್ನು ಈ ವರ್ಷದ ಅತ್ಯುತ್ತಮ ಟೆಸ್ಟ್ ಆರಂಭಿಕ ಬ್ಯಾಟರ್ ಎಂದು ಪರಿಗಣಿಸಲಾಗಿದೆ.
ಕೆಎಲ್ ರಾಹುಲ್-649(ಭಾರತ)
ಬೆನ್ ಡಕೆಟ್-602(ಇಂಗ್ಲೆಂಡ್)
ಯಶಸ್ವಿ ಜೈಸ್ವಾಲ್-479(ಭಾರತ)
ಉಸ್ಮಾನ್ ಖವಾಜ-461(ಆಸ್ಟ್ರೇಲಿಯಾ)
ಜ್ಯಾಕ್ ಕ್ರಾಲಿ-414(ಇಂಗ್ಲೆಂಡ್)
ಅಹಮದಾಬಾದ್ ಟೆಸ್ಟ್ನ ಮೊದಲ ದಿನದ ಅಂತ್ಯದ ವೇಳೆಗೆ, ಕೆಎಲ್ ರಾಹುಲ್ 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 53 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಪಂದ್ಯದ ಎರಡನೇ ದಿನದಂದು ತಮ್ಮ ಅದ್ಭುತ ಆಟವನ್ನ ಮುಂದುವರಿಸಿದ ಕೆಎಲ್ ರಾಹುಲ್ ತಮ್ಮ ವೃತ್ತಿಜೀವನದ 11 ನೇ ಟೆಸ್ಟ್ ಶತಕವನ್ನು ಪೂರೈಸಿದರು. ಯುವ ಓಪನರ್ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 68 ರನ್ ಸೇರಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಜೈಸ್ವಾಲ್ 54 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 36 ರನ್ ಗಳಿಸಿ ಔಟಾದರು. ನಂತರ ಬಂದ ಸಾಯಿ ಸುದರ್ಶನ್ (7) ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲಲಿಲ್ಲ. 4ನೇ ಕ್ರಮಾಂಕದಲ್ಲಿ ಬಂದ ನಾಯಕ ಗಿಲ್ ಜೊತೆಗೂಡಿದ ರಾಹುಲ್ 98 ರನ್ಗಳ ಜೊತೆಯಾಟ ನೀಡಿ ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಗಿಲ್ 100 ಎಸೆತಗಳಲ್ಲಿ 50 ರನ್ಗಳಿಸಿ ಔಟ್ ಆದರು. ರಾಹುಲ್ 197 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 100 ರನ್ಗಳಿಸಿ ವಾರಿಕಾನ್ ಬೌಲಿಂಗ್ನಲ್ಲಿ ಗ್ರೀವ್ಸ್ಗೆ ಕ್ಯಾಚ್ ನೀಡಿ ಔಟ್ ಆದರು.
ಓಪನರ್ ಆಗಿ ಮಾತ್ರವಲ್ಲದೆ, 2025 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ 2ನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ಶುಭ್ 7 ಪಂದ್ಯಗಳಲ್ಲಿ 837 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ 7 ಪಂದ್ಯಗಳಿಂದ 649 ರನ್ಗಳಿಸಿದ್ದರೆ, ಜಿಂಬಾಬ್ವೆಯ ಸೀನ್ ವಿಲಿಯಮ್ಸ್ 8 ಪಂದ್ಯಗಳಿಂದ 648 ರನ್ಗಳಿಸಿದ್ದಾರೆ. ರವೀಂದ್ರ ಜಡೇಜಾ 603 ರನ್ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
October 03, 2025 2:21 PM IST