Last Updated:
ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ನಾಯಕತ್ವದ ದಾಖಲೆಗಳ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ.
ಟೀಮ್ ಇಂಡಿಯಾ (Team India) ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ರೋಹಿತ್ ಶರ್ಮಾ (Rohit Sharma) ಕೂಡ ಒಬ್ಬರು. ಆರಂಭದಲ್ಲಿ ರೋಹಿತ್ ತಮ್ಮ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಛಾಪು ಮೂಡಿಸಿದರು. ಬಳಿಕ ಭಾರತ ತಂಡ (Team India)ದ ನಾಯಕನ್ನಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹತ್ತಿರವಾದರು. ಈಗ ರೋಹಿತ್ ಶರ್ಮಾ ನಾಯಕತ್ವದ ಯುಗ ಮುಗಿದಿದೆ. ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಏಕದಿನ ( India ODI) ತಂಡ ಘೋಷಣೆ ಆಗಿದೆ. ಈ ಪ್ರವಾಸದಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ (Shubman Gill) ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಹಿತ್ ಶರ್ಮಾ ಅವರ ನಾಯಕತ್ವದ ಪ್ರಯಾಣ ಹೇಗಿತ್ತು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ವಿರಾಟ್ ಕೊಹ್ಲಿ 2021 ರಲ್ಲಿ ನಾಯಕತ್ವದಿಂದ ಕೆಳಗಿಳಿದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ತಂದಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ಅವರನ್ನು ತಂಡದ ನಾಯಕತ್ವಕ್ಕೆ ನೇಮಿಸಲಾಯಿತು. ರೋಹಿತ್ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಮೂರು ಮಾದರಿ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ರೋಹಿತ್ ನಾಯಕತ್ವದಲ್ಲಿ ಭಾರತ ಒಟ್ಟು 142 ಪಂದ್ಯಗಳನ್ನು ಆಡಿದ್ದು, ಗೆಲುವಿನ ಶೇಕಡಾವಾರು 72.53 ರಷ್ಟಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾವನ್ನು ಎದುರಾಳಿ ತಂಡಗಳಿಂದ ಸೋಲಿಸಲು ಸಾಧ್ಯವಾಗಿರಲಿಲ್ಲ. 2023 ರ ಏಕದಿನ ವಿಶ್ವಕಪ್ ಆಗಿರಲಿ, ಟಿ 20 ವಿಶ್ವಕಪ್ ಆಗಿರಲಿ ಅಥವಾ ಚಾಂಪಿಯನ್ಸ್ ಟ್ರೋಫಿಯಾಗಿರಲಿ ಎಲ್ಲಾ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಅದ್ಭುತವಾಗಿತ್ತು. ಮೂರು ಐಸಿಸಿ ಟೂರ್ನಿಗಳಲ್ಲಿ, ಭಾರತ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿತು. ಅದು 2023 ರ ವಿಶ್ವಕಪ್ ಫೈನಲ್. ಆ ಸೋಲು ರೋಹಿತ್ ಶರ್ಮಾ ಅವರನ್ನು ತೀವ್ರ ಆಘಾತಗೊಳಿಸಿತು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 142 ಪಂದ್ಯಗಳಲ್ಲಿ 103 ರಲ್ಲಿ ಗೆದ್ದಿದೆ. ಇದರಲ್ಲಿ ಟಿ20, ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಸೇರಿವೆ. ಈ ದಾಖಲೆ ಏಕದಿನ ಮಾದರಿಯಲ್ಲಿ ಇನ್ನೂ ಅದ್ಭುತವಾಗಿದೆ. ರೋಹಿತ್ ನಾಯಕತ್ವದಲ್ಲಿ, ಟೀಮ್ ಇಂಡಿಯಾ 56 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 42 ಗೆಲುವು, 12 ಸೋಲು ಮತ್ತು ಒಂದು ಟೈ ಆಗಿದೆ. ಇಲ್ಲಿ ಗೆಲುವಿನ ಶೇಕಡಾವಾರು 75%. ಇನ್ನೂ ಅಂತಾರಾಷ್ಟ್ರೀಯ ಟಿ20, ರೋಹಿತ್ ಭಾರತವನ್ನು 62 ಪಂದ್ಯಗಳಲ್ಲಿ 49 ಗೆಲುವುಗಳಿಗೆ ಮುನ್ನಡೆಸಿದ್ದಾರೆ. ಗೆಲುವಿನ ಶೇಕಡಾವಾರು 74.41 ರಷ್ಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023- ಫೈನಲ್ ಸೋಲು
ಏಕದಿನ ವಿಶ್ವಕಪ್ 2023- ಫೈನಲ್ ಸೋಲು
ಟಿ20 ವಿಶ್ವಕಪ್ 2024- ಗೆಲುವು
ಚಾಂಪಿಯನ್ ಟ್ರೋಫಿ 2025- ಗೆಲುವು
ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಏಕದಿನ ತಂಡ : ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
October 04, 2025 8:30 PM IST