Women’s World Cup: ದೀಪ್ತಿ-ಕ್ರಾಂತಿ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ, ಭಾರತಕ್ಕೆ ಭರ್ಜರಿ ಗೆಲುವು / India defeats Pakistan in ICC Women’s World Cup 2025 match | ಕ್ರೀಡೆ

Women’s World Cup: ದೀಪ್ತಿ-ಕ್ರಾಂತಿ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ, ಭಾರತಕ್ಕೆ ಭರ್ಜರಿ ಗೆಲುವು / India defeats Pakistan in ICC Women’s World Cup 2025 match | ಕ್ರೀಡೆ

Last Updated:

ವೇಗದ ಬೌಲರ್ ಕ್ರಾಂತಿ ಗೌಡ್ ಮತ್ತು ಆಲ್​ರೌಂಡರ್ ದೀಪ್ತಿ ಶರ್ಮಾ ಅವರ ಕೆಚ್ಚೆದೆಯ ಪ್ರದರ್ಶನದಿಂದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದೆ.

Team India Team India
Team India

ಪಾಕಿಸ್ತಾನ (Pakistan)ದ ಕ್ರಿಕೆಟ್ ಗ್ರಾಫ್ ಪ್ರತಿದಿನ ಕುಸಿಯುತ್ತಿರುವಂತೆ ಕಾಣುತ್ತಿದೆ. ಏಷ್ಯಾ ಕಪ್ (Asia Cup) 2025 ರಲ್ಲಿ ಭಾರತ ಎದುರು ಪಾಕಿಸ್ತಾನ (India vs Pakistan) ಹೀನಾಯವಾಗಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ಮತ್ತೊಮ್ಮೆ ಭಾರತ ಮುಂದೆ ಪಾಕಿಸ್ತಾನ ಮುಂಡಿಯೂರಿದೆ. ಈ ಮೂಲಕ ಪಾಕಿಸ್ತಾನವು ಒಂದು ತಿಂಗಳೊಳಗೆ ನಾಲ್ಕು ಸೋಲಗಳನ್ನು ಎದುರಿಸಿದೆ. ಮೊದಲು, ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದಲ್ಲಿ ಭಾರತ ತಂಡ ಮೂರು ಬಾರಿ ಏಷ್ಯಾ ಕಪ್​ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಈಗ ಪಾಕಿಸ್ತಾನ ವಿರುದ್ಧ ಹರ್ಮನ್ಪ್ರೀತ್ ಕೌರ್ (Harmanpreet Kaur) ಪಡೆ ಪ್ರತಿದಾಳಿ ಮಾಡಿದೆ. ಕೊಲಂಬೊದಲ್ಲಿ ನಡೆದ 2025 ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವನಿತೆಯರ ತಂಡ 88 ರನ್‌ಗಳ ಅದ್ಭುತ ಜಯ ಸಾಧಿಸಿದೆ. ಇದು ಏಕದಿನ ವಿಶ್ವಕಪ್ (Womens ODI World Cup) 2025 ರಲ್ಲಿ ಭಾರತಕ್ಕೆ ಸತತ ಎರಡನೇ ಗೆಲುವು.

ಕೊಲಂಬೊದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಪಂದ್ಯ ಆರಂಭಕ್ಕೂ ಮುನ್ನ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ವನಿತೆಯರು ಹೀನಾಯವಾಗಿ ಸೋಲಿಸಿದ್ದಾರೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಪ್ರತೀಕಾ ರಾವಲ್ ಮತ್ತು ಮಂಧಾನಾ ಅವರ 48 ರನ್​ಗಳ ಜೊತೆಯಾಟವನ್ನು ಕಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ಹರ್ಲೀನ್ ಡಿಯೋಲ್ ತನ್ನ ಬ್ಯಾಟಿಂಗ್ ಮೂಲಕ ಪಾಕಿಸ್ತಾನವನ್ನು ಕಾಡಿದರು. ಹರ್ಲೀನ್ ಡಿಯೋಲ್ 65 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 46 ರನ್ ಕಲೆ ಹಾಕಿದರು. ಜೊತೆಗೆ ಜೆಮಿಮಾ ಅವರ 32 ಮತ್ತು ರಿಚಾ ಘೋಷ್ ಅವರ 35 ರನ್‌ಗಳು ಕೊಡುಗೆ ನೀಡಿದರು. ಇದರ ಫಲವಾಗಿ ಭಾರತ ನಿಗದಿತ 50 ಓವರ್​ಗಳಲ್ಲಿ ಆಲೌಟ್ ಆಗುವ ಮೂಲಕ 247 ರನ್‌ಗಳನ್ನು ಗಳಿಸಿತು.

ಸಿದ್ರಾ ಅಮೀನ್ ಹೋರಾಟ

ಪಾಕಿಸ್ತಾನ ಪರ ಸಿದ್ರಾ ಅಮೀನ್ ಅದ್ಭುತ ಇನ್ನಿಂಗ್ಸ್ ಆಡಿದರು. ಏಕಾಂಗಿಯಾಗಿ ಸಿದ್ರಾ ಪಾಕಿಸ್ತಾನ ತಂಡಕ್ಕೆ ಗೆಲುವು ತಂದು ಕೊಡಲು ಹೋರಾಟ ನಡೆಸಿದರು. ಆದರೆ ಟೀಮ್ ಇಂಡಿಯಾ ಬೌಲರ್ಸ್ ಮುಂದೆ ಸಿದ್ರಾ ಆಟ ಹೆಚ್ಚು ನಡೆಯಲಿಲ್ಲ. ಸಿದ್ರಾ ಅವರು 106 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟಾದರು.