Last Updated:
ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ವಲ್ಡ್ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ (Virat kholi) ಮೈದಾನಕ್ಕೆ ಬಂದಾಗಲೆಲ್ಲಾ ದಾಖಲೆ (Record) ಪುಸ್ತಕಗಳು ಅಲುಗಾಡುತ್ತವೆ. ಕೊಹ್ಲಿ ದೊಡ್ಡ ದಾಖಲೆಗಳನ್ನು ಸರಿಗಟ್ಟಿ ಅವುಗಳನ್ನು ಮುರಿಯುವುದರಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ. ಆದರೆ ಹಲವು ತಿಂಗಳುಗಳಿಂದ ಕ್ರಿಕೆಟ್ (Cricket) ಜಗತ್ತಿನಲ್ಲಿ ಮೌನ ಆವರಿಸಿದೆ. ಟೀಮ್ ಇಂಡಿಯಾ (Team India)ದ ಸ್ಟಾರ್ ಬ್ಯಾಟರ್ಸ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಟೆಸ್ಟ್ (Test) ಮತ್ತು ಟಿ20 (T20)ಯಿಂದ ನಿವೃತ್ತರಾಗಿದ್ದಾರೆ. ಇದರಿಂದಾಗಿ ಟೀಮ್ ಇಂಡಿಯಾ ಅಭಿಮಾನಿಗಳು ಈ ಜೋಡಿಯನ್ನು ನೋಡಲು ತಿಂಗಳುಗಟ್ಟಲೆ ಕಾಯಬೇಕಾಗಿದೆ. ಆದರೆ ಈಗ ಶೀಘ್ರದಲ್ಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ. ವಿರಾಟ್ ಕೊಹ್ಲಿ ಗಮನ ಮಾತ್ರ ಏಕದಿನ ಕ್ರಿಕೆಟ್ ಇತಿಹಾಸದ ಅತಿದೊಡ್ಡ ದಾಖಲೆಯನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಅಕ್ಟೋಬರ್ 19 ರಿಂದ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ (ODI) ಸರಣಿಯಲ್ಲಿ ವಿರಾಟ್ ಮತ್ತು ರೋಹಿತ್ ಕಾಣಿಸಿಕೊಳ್ಳಲಿದ್ದಾರೆ.
ವೈಟ್-ಬಾಲ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಗಳು ಗಗನಕ್ಕೇರುತ್ತಿರುವಂತೆ ಕಾಣುತ್ತಿದೆ. ಕೊಹ್ಲಿ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನಲ್ಲಿ ಗಳಿಳಿಸಿದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ಹೆಸರಿನಲ್ಲಿ 50 ಕ್ಕೂ ಹೆಚ್ಚು ಶತಕಗಳಿವೆ. ಆದರೆ, ವಿರಾಟ್ ಇನ್ನೂ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ಸಚಿನ್ಗಿಂತ ಬಹಳ ಹಿಂದುಳಿದಿದ್ದಾರೆ. ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ವಿಶ್ವದ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆದರೆ ಈಗ ಕೊಹ್ಲಿಗೆ ಈ ದಾಖಲೆ ಪಟ್ಟಿಯಲ್ಲಿ ಸಚಿನ್ಗೆ ಹತ್ತಿರವಾಗುವ ಸುವರ್ಣಾವಕಾಶ ಸಿಕ್ಕಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಕೇವಲ ಒಂದು ಅರ್ಧಶತಕದ ಅಗತ್ಯವಿದೆ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 2000 ಮತ್ತು 2015 ರ ನಡುವೆ 404 ಏಕದಿನ ಪಂದ್ಯಗಳಲ್ಲಿ 14234 ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕನ ಹೆಸರಿನಲ್ಲಿ 25 ಶತಕಗಳು ಮತ್ತು 93 ಅರ್ಧಶತಕಗಳಿವೆ. ಸಂಗಕ್ಕಾರ 2015 ರ ಏಕದಿನ ವಿಶ್ವಕಪ್ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಅಲ್ಲಿ ಅವರು ಸತತ ನಾಲ್ಕು ಶತಕಗಳನ್ನು ಗಳಿಸಿದರು.
ಸಚಿನ್ ತೆಂಡೂಲ್ಕರ್ (ಭಾರತ): 18426 ರನ್
ಕುಮಾರ್ ಸಂಗಕ್ಕಾರ (ಶ್ರೀಲಂಕಾ): 14234 ರನ್
ವಿರಾಟ್ ಕೊಹ್ಲಿ (ಭಾರತ): 14181 ರನ್
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 13704 ರನ್
ಸನತ್ ಜಯಸೂರ್ಯ (ಶ್ರೀಲಂಕಾ): 13430 ರನ್
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆಯೂ ಚರ್ಚೆಗಳು ತೀವ್ರಗೊಂಡಿವೆ. ರೋಹಿತ್ ಬದಲಿಗೆ ಶುಭಮನ್ ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಭಾರತೀಯ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದೆ. ಆಸ್ಟ್ರೇಲಿಯಾ ಸರಣಿಯ ನಂತರ ರೋಹಿತ್ ಮತ್ತು ವಿರಾಟ್ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಹಲವು ವರದಿಗಳಿವೆ.
October 07, 2025 6:34 PM IST