Last Updated:
ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತ ತಂಡ (Team India)ವನ್ನು ಮೂರು ಐಸಿಸಿ (ICC) ಟ್ರೋಫಿಗಳಿಗೆ ಮುನ್ನಡೆಸಿದ ದಿಗ್ಗಜ ನಾಯಕ (Captain) ಎಂಎಸ್ ಧೋನಿ (MS Dhoni) ಅವರನ್ನು ನೋಡಲು ಐಪಿಎಲ್ (IPL) 2026ರ ಟೂರ್ನಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಐಪಿಎಲ್ 2026ರ ಟೂರ್ನಿಯಲ್ಲಿ ಆಡುವ ಬಗ್ಗೆ ಧೋನಿ ಇನ್ನೂ ದೃಢಪಡಿಸಿಲ್ಲ. ಇದರ ಮಧ್ಯೆ ಮುಂಬೈ ಇಂಡಿಯನ್ಸ್ (Mumbai Indians) ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಜೆರ್ಸಿ (Jersey) ಧರಿಸಿರುವ ಧೋನಿಯ ಫೋಟೋ ವೇಗವಾಗಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳನ್ನು ಎಂಎಸ್ ಧೋನಿ ಹೆಚ್ಚು ಬಳಕೆ ಮಾಡುವುದಿಲ್ಲ. ಜೊತೆಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಿಲ್ಲ. ಆದರೂ, ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿರುವ ಧೋನಿಯ ವೈರಲ್ ಫೋಟೋ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಐಪಿಎಲ್ 2025 ರ ನಂತರ ಧೋನಿ ಮುಂದಿನ ವರ್ಷ ಆಡುವ ಬಗ್ಗೆ ಅಭಿಮಾನಿಗಳಗೆ ಅನುಮಾನವಿದೆ. ಮುಂದಿನ ಐಪಿಎಲ್ ಸೀಸನ್ನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿರುವ ಧೋನಿಯ ಫೋಟೋ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿರುವ ಧೋನಿಯ ಫೋಟೋ ವೈರಲ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟು ಮುಂಬೈ ಇಂಡಿಯನ್ಸ್ ಸೇರುತ್ತಾರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರುವುದು ಬೇರೆ ಸಂಗತಿ.
ಫ್ರೆಂಡ್ಲಿ ಫುಟ್ಬಾಲ್ ಪಂದ್ಯದ ಸಮಯದಲ್ಲಿ ಧೋನಿ ಅವರು ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿದ್ದಾರೆ. ಅವರು ತೋಳಿಲ್ಲದ ಮುಂಬೈ ಇಂಡಿಯನ್ಸ್ ತಂಡದ ಟ್ಯಾಂಕ್ ಟಾಪ್ ಅನ್ನು ಧರಿಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ. ಧೋನಿ ಒಂದು ದಶಕಕ್ಕೂ ಹೆಚ್ಚು ಕಾಲ ಐಪಿಎಲ್ನಲ್ಲಿ ಚೆನ್ನೈ ತಂಡದ ಭಾಗವಾಗಿದ್ದಾರೆ. ಆದರೆ ಅವರನ್ನು ಮುಂಬೈ ಜೆರ್ಸಿಯಲ್ಲಿ ನೋಡಿದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.
ಹಲವು ವಾರಗಳ ಹಿಂದೆ ರೋಹಿತ್ ಶರ್ಮಾ ಮತ್ತು ಕಪಿಲ್ ದೇವ್ ಅವರೊಂದಿಗೆ ಧೋನಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮೂವರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಈ ಕಾರ್ಯಕ್ರಮದ ವೀಡಿಯೊ ವೈರಲ್ ಆಗಿತ್ತು. ಏಕೆಂದರೆ ಮೂವರೂ ಟೀಮ್ ಇಂಡಿಯಾದ ನಾಯಕರು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ ಮೊದಲ ನಾಯಕ ಕಪಿಲ್ ದೇವ್. ಧೋನಿ ಟೀಮ್ ಇಂಡಿಯಾವನ್ನು ಮೂರು ಐಸಿಸಿ ಟ್ರೋಫಿಗಳಿಗೆ ಮುನ್ನಡೆಸಿದ ಮೊದಲ ನಾಯಕ. ರೋಹಿತ್ ಶರ್ಮಾ ಕೂಡ 2 ಐಸಿಸಿ ಟ್ರೋಫಿ ಗೆಲುವಿಗೆ ಕಾರಣವಾಗಿದ್ದಾರೆ.
October 07, 2025 7:23 PM IST