Last Updated:
ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ ಟೆಸ್ಟ್ ಮತ್ತು ODI ತಂಡದ ನಾಯಕರಾಗಿ, ಐಪಿಎಲ್ನಲ್ಲಿ SRH ತಂಡದಿಂದ ವಾರ್ಷಿಕ ರೂ. 18 ಕೋಟಿ ವೇತನ ಪಡೆಯುತ್ತಾರೆ. 2024 ಐಪಿಎಲ್ ಹರಾಕಿನಲ್ಲಿ ಅವರು ರೂ. 20.5 ಕೋಟಿಗೆ ಖರೀದಿಯಾಗಿದ್ದರು, ಆದರೆ 2025ರಲ್ಲಿ 18 ಕೋಟಿಗೆ ಕಡಿತಗೊಳಿಸಲಾಗಿತ್ತು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಉಪನಾಯಕ ಟ್ರಾವಿಸ್ ಹೆಡ್ಗೆ (Pat Cummins And Travis) ಐಪಿಎಲ್ ಫ್ರಾಂಚೈಸಿಯೊಂದು ( IPL Franchise) ವರ್ಷಪೂರ್ತಿ ತಮ್ಮ ಫ್ರಾಂಚೈಸಿ ಪರ ಆಡುವುದಕ್ಕಾಗಿ ಭಾರೀ ಮೊತ್ತದ ಆಫರ್ ನೀಡಿರುವ ಬಗ್ಗೆ ವರದಿಯಾಗಿದೆ. ಮೂಲಗಳ ಪ್ರಕಾರ ಈ ಇಬ್ಬರು ಆಸೀಸ್ ಸ್ಟಾರ್ ಕ್ರಿಕೆಟಿಗರಿಗೆ ಫ್ರಾಂಚೈಸಿಯೊಂದು 10 ಮಿಲಿಯನ್ ಡಾಲರ್ ಅಂದರೆ ಸುಮಾರು 58 ಕೋಟಿ ರೂಪಾಯಿಗಳ ಆಫರ್ ನೀಡಿದೆ. ಆದರೆ ಕಾಂಗರೂ ಪಡೆಯ ಆಟಗಾರರು ಈ ಆಫರ್ ತಿರಸ್ಕರಿಸಿದ್ದು, ತಾವೂ ತಮ್ಮ ದೇಶದ ತಂಡಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
ದಿ ಏಜ್ ಪತ್ರಿಕೆಯ ವರದಿಯ ಪ್ರಕಾರ, ಈ ಇಬ್ಬರಿಗೂ ವಾರ್ಷಿಕ 10 ಮಿಲಿಯನ್ ಡಾಲರ್ಗಳ (ಸುಮಾರು ರೂ. 58.2 ಕೋಟಿ) ಆಫರ್ ನೀಡಿ, ಅಂತರರಾಷ್ಟ್ರೀಯ ಕ್ರಿಕೆಟ್ನ್ನು ಬಿಟ್ಟು ವಿಶ್ವದಾದ್ಯಂತ ನಡೆಯುವ ಟಿ20 ಫ್ರ್ಯಾಂಚೈಸಿ ಟೂರ್ನಿಗಳಲ್ಲಿ ಮಾತ್ರ ಆಡಲು ಡಿಮ್ಯಾಂಡ್ ಮಾಡಲಾಗಿದೆ. ಆದರೆ ಇಬ್ಬರೂ ಈ ಆಫರ್ ನಯವಾಗಿ ತಿರಸ್ಕರಿಸಿದ್ದಾರೆ. ಈ ದೊಡ್ಡ ಮೊತ್ತದ ಆಸೆಯನ್ನ ಐಪಿಎಲ್ ಫ್ರ್ಯಾಂಚೈಸಿಯೊಂದು ಅನಧಿಕೃತವಾಗಿ ಮಾಡಿದೆ. ಕಮಿನ್ಸ್ ಮತ್ತು ಹೆಡ್ ಇಬ್ಬರೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರಾಗಿದ್ದಾರೆ. ಈ ಘಟನೆಯು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ಅನ್ನು ಖಾಸಗಿ ಸ್ವಾಮ್ಯತ್ವಕ್ಕೆ ಒಳಪಡಿಸುವ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ಮಾಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾ (CA), ರಾಜ್ಯ ಸಂಘಗಳು ಮತ್ತು ಆಟಗಾರರ ಒಕ್ಕೂಟದ ನಡುವೆ ಈ ವಿಷಯದ ಚರ್ಚೆಗಳು ನಡೆದಿವೆ ಎಂದು ವರದಿ ತಿಳಿಸಿದೆ. ಆದರೆ ಯಾವುದೇ ಸಂಸ್ಥೆಗಳಿಗೆ ಔಪಚಾಸಿಕ ಹೇಳಿಕೆ ಬಂದಿಲ್ಲ.
ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ ಟೆಸ್ಟ್ ಮತ್ತು ODI ತಂಡದ ನಾಯಕರಾಗಿ, ಐಪಿಎಲ್ನಲ್ಲಿ SRH ತಂಡದಿಂದ ವಾರ್ಷಿಕ ರೂ. 18 ಕೋಟಿ ವೇತನ ಪಡೆಯುತ್ತಾರೆ. 2024 ಐಪಿಎಲ್ ಹರಾಕಿನಲ್ಲಿ ಅವರು ರೂ. 20.5 ಕೋಟಿಗೆ ಖರೀದಿಯಾಗಿದ್ದರು, ಆದರೆ 2025ರಲ್ಲಿ 18 ಕೋಟಿಗೆ ಕಡಿತಗೊಳಿಸಲಾಗಿತ್ತು. ಅವರ ನಾಯಕತ್ವದಲ್ಲಿ SRH ತಂಡವು 2024ರಲ್ಲಿ ಫೈನಲ್ ಪ್ರವೇಶಿಸಿತ್ತು. ಆಸ್ಟ್ರೇಲಿಯಾ ತಂಡದಿಂದ ಅವರು ವಾರ್ಷಿಕ ಸುಮಾರು 3 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳು (ರೂ. 17.48 ಕೋಟಿ) ವೇತನ ಪಡೆಯುತ್ತಾರೆ. ಇದರಲ್ಲಿ ನಾಯಕತ್ವ ಸ್ಟಿಪೆಂಡ್ ಸೇರಿದೆ.
ಆಸ್ಟ್ರೇಲಿಯಾದ ಮೇರಿ ಕ್ರಿಕೆಟರ್ಗಳು ಸಾಮಾನ್ಯವಾಗಿ 1.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳು (ರೂ. 8.74 ಕೋಟಿ) ಪಡೆಯುತ್ತಾರೆ. ಟ್ರಾವಿಸ್ ಹೆಡ್, ಆಸ್ಟ್ರೇಲಿಯಾ ತಂಡದ ಟಾಪ್-ಆರ್ಡರ್ ಬ್ಯಾಟರ್ ಮತ್ತು ಪವರ್ಫುಲ್ ಹಿಟರ್, 2024 ಐಪಿಎಲ್ ಹರಾಜಿನಲ್ಲಿ ರೂ. 6.8 ಕೋಟಿಗೆ SRH ತಂಡಕ್ಕೆ ಸೇರಿದ್ದರು. ಆದರೆ ಅವರ ಉತ್ತಮ ಪ್ರದರ್ಶನದಿಂದಾಗಿ 2025 ಹರಾಜಿನಲ್ಲಿ 14 ಕೋಟಿಗೆ ರಿಟೈನ್ ಆಗಿದ್ದಾರೆ. ಹೆಡ್ ಅವರ ವೇತನವು ಗಣನೀಯವಾಗಿ ಏರಿಕೆಯಾಗಿದ್ದು, ಇದು ಅವರ ಸಾಮರ್ಥ್ಯವನ್ನ ತೋರಿಸುತ್ತದೆ.
ಆಸ್ಟ್ರೇಲಿಯಾ ಕ್ರಿಕೆಟ್ನ ಸ್ಟಾರ್ ಕ್ರಿಕೆಟಿಗರ ವೇತನಗಳು ದೇಶದ ಇತರ ಕ್ರೀಡೆಗಳ ಆಟಗಾರರಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆಯೇ ಇರುತ್ತವೆ. ಫಾರ್ಮುಲಾ 1 ಡ್ರೈವರ್ ಒಸ್ಕರ್ ಪಿಯಾಸ್ಟ್ರಿ ಅವರು ಮೆಕ್ಲಾರೆನ್ ತಂಡದಿಂದ ವಾಲಿಯರ್ಷಿಕ ಸುಮಾರು 40 ಮಿನ್ ಆಸ್ಟ್ರೇಲಿಯನ್ ಡಾಲರ್ಗಳು (ರೂ. 220 ಕೋಟಿ) ಪಡೆಯುತ್ತಿದ್ದಾರೆ. ಅವರು ಆಸ್ಟ್ರೇಲಿಯಾದ ಅತ್ಯಂತ ಹೆಚ್ಚು ವೇತನ ಪಡೆಯುವ ಕ್ರೀಡಾಪಡುವಾಗಿದ್ದಾರೆ. ಎನ್ಬಿಎ ತಾರೆ ಜೋಶ್ ಗಿಡ್ಡಿ ಅವರು ಚಿಕಾಗೊ ಬುಲ್ಸ್ ತಂಡದಿಂದ ಸುಮಾರು 38 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳು (ರೂ. 210 ಕೋಟಿ) ವೇತನ ಪಡೆಯುತ್ತಿದ್ದಾರೆ. ಅಮೆರಿಕನ್ ಫುಟ್ಬಾಲ್ (ಎನ್ಎಫ್ಎಲ್) ಆಟಗಾರ ಜೋರ್ಡನ್ ಮೈಲಾಟಾ ಅವರು ಫಿಲಡೆಲ್ಫಿಯಾ ಈಗಲ್ಸ್ ತಂಡದಿಂದ 34 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳು (ರೂ. 187 ಕೋಟಿ) ಪಡೆಯುತ್ತಿದ್ದಾರೆ. ಈ ಮೂವರು ಆಸ್ಟ್ರೇಲಿಯಾದ ಅತ್ಯಂತ ಹೆಚ್ಚು ವೇತನ ಪಡೆಯುವ ಕ್ರೀಡಾಪಟುಗಳಾಗಿ ಟಾಪ್ ಮೂರು ಸ್ಥಾನಗಳನ್ನು ಆಕ್ರಮಿಸಿದ್ದಾರೆ.
ಈ ಘಟನೆಯು BBL ಲೀಗ್ ಅನ್ನು ಖಾಸಗಿ ಸ್ವಾಮ್ಯತ್ವಕ್ಕೆ ಒಳಪಡಿಸುವ ಅಗತ್ಯವನ್ನು ಒತ್ತಿ ಹೇಳಿದೆ. ಐಪಿಎಲ್, SA20 ಮತ್ತು ILT20ನಂತಹ ಲೀಗ್ಗಳಲ್ಲಿ ಖಾಸಗಿ ಮೂಲಧನದಿಂದ ಆಟಗಾರರ ವೇತನಗಳು ಹೆಚ್ಚುತ್ತಿವೆ. BBL ಅನ್ನು ಖಾಸಗೀಕರಿಸಿದರೆ, ಆಟಗಾರರ ವೇತನಗಳು ಏರಿಕೆಯಾಗಿ, ಅಂತರರಾಷ್ಟ್ರೀಯ ಆಟಗಾರರನ್ನು ಉಳಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಚರ್ಚೆಯಾಗುತ್ತಿದೆ. ಕಮಿನ್ಸ್ ಮತ್ತು ಹೆಡ್ ಅವರ ನಿರ್ಧಾರವು ಆಸ್ಟ್ರೇಲಿಯಾ ಕ್ರಿಕೆಟ್ಗೆ ‘ದೇಶ ಮೊದಲು’ ಎಂಬ ಸಂದೇಶವನ್ನು ನೀಡಿದೆ. ಇಬ್ಬರೂ ಆಟಗಾರರು ಐಪಿಎಲ್ ಮತ್ತು MLCಗಳಂತಹ ಲೀಗ್ಗಳಲ್ಲಿ ಆಡಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮೊದಲ ಆಧ್ಯತೆ ಇರಿಸಿಕೊಂಡಿದ್ದಾರೆ. ಈ ವರದಿಯು ಆಸ್ಟ್ರೇಲಿಯಾ ಕ್ರಿಕೆಟ್ನ ಭವಿಷ್ಯದಲ್ಲಿ ಹೊಸ ಬದಲಾವಣೆಗಳನ್ನು ಸೂಚಿಸುತ್ತದೆ.
October 08, 2025 8:07 PM IST