All Time India XI: ಸಾರ್ವಕಾಲಿಕ​ ಟಿ20 ತಂಡಕ್ಕೆ ರೋಹಿತ್ ಕ್ಯಾಪ್ಟನ್, ಧೋನಿ, ಕೊಹ್ಲಿಗೆ ನೋ ಚಾನ್ಸ್! ಸ್ಟಾರ್ ಕ್ರಿಕೆಟರ್ ಅಚ್ಚರಿ ಆಯ್ಕೆ | Sikandar Raza’s T20I XI: No Room for Kohli and Dhoni, Rohit Sharma Leads the Charge | ಕ್ರೀಡೆ

Last Updated:

ನಾಯಕನಾಗಿ ಚೊಚ್ಚಲ T20 ವಿಶ್ವಕಪ್ ಗೆದ್ದ ಮತ್ತು ಫಿನಿಷರ್ ಆಗಿ ಅನೇಕ ಸ್ಮರಣೀಯ ಗೆಲುವುಗಳನ್ನು ನೀಡಿದ ಧೋನಿ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸಿಕಂದರ್ ರಾಜ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕ ಆಟಗಾರರಾಗಿ ಮತ್ತು ನಿಕೋಲಸ್ ಪೂರನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ

ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಜಾ (Sikandar Raza) ಸಾರ್ವಕಾಲಿಕ ಅತ್ಯುತ್ತಮ ಟಿ20 (All Time T20I) ತಂಡವನ್ನು ಘೋಷಿಸಿದ್ದು, ಅಂತರರಾಷ್ಟ್ರೀಯ ಟಿ20ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನ ಒಂದುಗೂಡಿಸಿ ಅವರು ಈ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ಈ ಸಾರ್ವಕಾಲಿಕ ಟಿ20 ಇಲೆವೆನ್‌ಗೆ ಮಾಜಿ ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಭಾರತದ ಮೂವರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದರೆ.. ದಕ್ಷಿಣ ಆಫ್ರಿಕಾದಿಂದ ಇಬ್ಬರು, ವೆಸ್ಟ್ ಇಂಡೀಸ್‌ನಿಂದ ಮೂವರು ಮತ್ತು ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ತಲಾ ಒಬ್ಬ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ಧೋನಿ-ಕೊಹ್ಲಿ ಹೆಸರು ಕೈಬಿಟ್ಟ ರಾಜಾ

ಆಶ್ಚರ್ಯಕರ ಸಂಗತಿ ಎಂದರೆ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ದಂತಕಥೆ ನಾಯಕ ಮಹೇಂದ್ರ ಸಿಂಗ್ ಧೋನಿ ಈ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ20ಗಳಲ್ಲಿ 125 ಪಂದ್ಯಗಳನ್ನಾಡಿ, 46.69 ಸರಾಸರಿಯಲ್ಲಿ 4,188 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ ಟಿ20 ಸ್ವರೂಪದಲ್ಲಿ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಟಿ20 ವಿಶ್ವಕಪ್ 2024 ರ ಗೆಲುವಿನ ನಂತರ, ಕೊಹ್ಲಿ ಈ ಸ್ವರೂಪಕ್ಕೆ ವಿದಾಯ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರೂ, ಕೊಹ್ಲಿ ಫ್ರಾಂಚೈಸಿ ಕ್ರಿಕೆಟ್‌ ಆಡುವುದನ್ನ ಮುಂದುವರಿಸಿದ್ದಾರೆ. ಸ್ಥಿರತೆಗೆ ಹೆಸರುವಾಸಿಯಾಗಿರುವ ಪದವಾಗಿದ್ದರೂ, ಕೊಹ್ಲಿ ಹೆಸರು ಸಾರ್ವಕಾಲಿಕ T20 XI ನಲ್ಲಿ ಇಲ್ಲದಿರುವುದು ಕೊಗ್ಲಿ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

ವಿಂಡೀಸ್ ದೈತ್ಯರಿಗೆ ಚಾನ್ಸ್

ನಾಯಕನಾಗಿ ಚೊಚ್ಚಲ T20 ವಿಶ್ವಕಪ್ ಗೆದ್ದ ಮತ್ತು ಫಿನಿಷರ್ ಆಗಿ ಅನೇಕ ಸ್ಮರಣೀಯ ಗೆಲುವುಗಳನ್ನು ನೀಡಿದ ಧೋನಿ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸಿಕಂದರ್ ರಾಜ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕ ಆಟಗಾರರಾಗಿ ಮತ್ತು ನಿಕೋಲಸ್ ಪೂರನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ.

ಮೂವರು ಬೆಸ್ಟ್ ಫಿನಿಶರ್

ಎಬಿ ಡಿವಿಲಿಯರ್ಸ್, ಹೆನ್ರಿಕ್ ಕ್ಲಾಸೆನ್ ಮತ್ತು ಕೀರನ್ ಪೊಲಾರ್ಡ್ ಅವರನ್ನು ಫಿನಿಷರ್ ಆಗಿ ಆಯ್ಕೆ ಮಾಡಿದ್ದಾರೆ. ಜಿಂಬಾಬ್ವೆ ಅನುಭವಿ ಆಲ್​ರೌಂಡರ್​ ಜಡೇಜಾ ಅವರನ್ನು ಆಲ್‌ರೌಂಡರ್ ಆಗಿ ಮತ್ತು ರಶೀದ್ ಖಾನ್ ಅವರನ್ನು ವಿಶೇಷ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದಾರೆ. ಅವರು ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್ ಮತ್ತು ಶಾಹಿದ್ ಅಫ್ರಿದಿ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಿದ್ದಾರೆ.

ರಾಜಾ ಘೋಷಿಸಿದ ಟಿ20 ತಂಡ

ರೋಹಿತ್ ಶರ್ಮಾ (ನಾಯಕ), ಕ್ರಿಸ್ ಗೇಲ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಎಬಿ ಡಿವಿಲಿಯರ್ಸ್, ಹೆನ್ರಿಚ್ ಕ್ಲಾಸೆನ್, ಕೀರಾನ್ ಪೊಲಾರ್ಡ್, ರವೀಂದ್ರ ಜಡೇಜಾ, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಶಾಹೀನ್ ಶಾ ಆಫ್ರಿದಿ, ಮಿಚೆಲ್ ಸ್ಟಾರ್ಕ್.