Last Updated:
ಭಾರತ ತಂಡ ದಯನೀಯ ವೈಫಲ್ಯ ಅನಿಭವಿಸಿ 150 ರನ್ ಕೂಡ ಅನುಮಾನ ಎನ್ನುವ ಸ್ಥಿತಿ ತಲುಪಿತ್ತು. ಆದರೆ ರಿಚಾ ಘೋಷ್ ಕೇವಲ 77 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ಗಳ ಸಹಿತ 94 ರನ್ಗಳಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿ ಸವಾಲಿನ ಗುರಿಗೆ ನೆರವಾದರು.
ವಿಶಾಖಪಟ್ಟದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಯಂಗ್ ವಿಕೆಟ್ ಕೀಪರ್ ರಿಚಾ ಘೋಷ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 252 ರನ್ಗಳ ಸವಾಲಿನ ಗುರಿ ನೀಡಿದೆ. ಭಾರತ ತಂಡ ದಯನೀಯ ವೈಫಲ್ಯ ಅನಿಭವಿಸಿ 150 ರನ್ ಕೂಡ ಅನುಮಾನ ಎನ್ನುವ ಸ್ಥಿತಿ ತಲುಪಿತ್ತು. ಆದರೆ ರಿಚಾ ಘೋಷ್ ಕೇವಲ 77 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ಗಳ ಸಹಿತ 94 ರನ್ಗಳಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿ ಸವಾಲಿನ ಗುರಿಗೆ ನೆರವಾದರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ವಿಕೆಟ್ಗೆ 55 ರನ್ಗಳ ಉತ್ತಮ ಜೊತೆಯಾಟ ನೀಡಿತು. ವಿಶ್ವಕಪ್ನಲ್ಲಿ ನಿರೀಕ್ಷಿತ ಪ್ರದರ್ಸನ ತೋರಿವಲ್ಲಿ ವಿಫಲರಾಗುತ್ತಿರುವ ಸ್ಮೃತಿ ಮಂಧಾನ ಇಂದೂ ಕೂಡ ವಿಫಲರಅದರು. ಕೇವಲ 23 ರನ್ಗಳಿಸಿ ನಾನ್ಕುಲುಲೆಕೊ ಮ್ಲಾಬಾ ಬೌಲಿಂಗ್ನಲ್ಲಿ ಸುನೆ ಲುಸ್ಗೆ ಕ್ಯಾಚ್ ನೀಡಿದರು. ಮೊದಲ ವಿಕೆಟ್ ಬಿದ್ದ ಬಳಿಕ ಟೀಮ್ ಇಂಡಿಯಾ ದಿಢೀರ್ ಕುಸಿತ ಕಂಡಿತು.
ಹರ್ಲೀನ್ ಡಿಯೋಲ್ 13 ರನ್ಗಳಿಸಿ ಔಟಾದರೆ, ಉತ್ತಮವಾಗಿ ಆಡುತ್ತಿದ್ದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 56 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದೊಂದಿಗೆ 37 ರನ್ ಗಳಿಸಿ ಔಟ್ ಆದರು. ನಂತರ ಬಂದ ಜೆಮಿಮಾ ರೋಡ್ರಿಗಸ್ ಶೂನ್ಯಕ್ಕೆ ಔಟ್ ಆದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 24 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ ಮತ್ತೊಮ್ಮೆ ವಿಫಲರಾದರು. ನಂತರ ದೀಪ್ತಿ ಶರ್ಮಾ ಕೇವಲ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
October 09, 2025 7:49 PM IST