Women’s WC: ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಸೋಲು! ಆದ್ರೂ ಇನ್ನೂ ಇದೆ ಸೆಮಿಫೈನಲ್ ಪ್ರವೇಶಿಸುವ ಚಾನ್ಸ್! ಇಲ್ಲಿದೆ ನೋಡಿ ನೌಕೌಟ್ ಲೆಕ್ಕಾಚಾರ | India’s Road to Semifinals: How the Team Can Qualify Despite Loss to South Africa | ಕ್ರೀಡೆ

Women’s WC: ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಸೋಲು! ಆದ್ರೂ ಇನ್ನೂ ಇದೆ ಸೆಮಿಫೈನಲ್ ಪ್ರವೇಶಿಸುವ ಚಾನ್ಸ್! ಇಲ್ಲಿದೆ ನೋಡಿ ನೌಕೌಟ್ ಲೆಕ್ಕಾಚಾರ | India’s Road to Semifinals: How the Team Can Qualify Despite Loss to South Africa | ಕ್ರೀಡೆ

Last Updated:

ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಟೀಮ್ ಇಂಡಿಯಾ ಅನಿರೀಕ್ಷಿತ ಆಘಾತ ಎದುರಾಗಿದೆ. ಅಗ್ರ ಕ್ರಮಾಂಕದ ವೈಫಲ್ಯ, ಕಳಪೆ ಡೆತ್ ಬೌಲಿಂಗ್ ಟೀಮ್ ಇಂಡಿಯಾದ ಗೆಲುವಿನ ಸಾಧ್ಯತೆಗಳನ್ನು ನಾಶಮಾಡಿದವು. ಈ ಸೋಲಿನೊಂದಿಗೆ, ಟೀಮ್ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಭಾರತ ಮಹಿಳೆಯರ ತಂಡಭಾರತ ಮಹಿಳೆಯರ ತಂಡ
ಭಾರತ ಮಹಿಳೆಯರ ತಂಡ

2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (Women’s ODI) ಟೀಮ್ ಇಂಡಿಯಾ ತನ್ನ ಮೊದಲ ಸೋಲನ್ನು ಅನುಭವಿಸಿತು. ಗುರುವಾರ ವಿಶಾಖಪಟ್ಟಣದಲ್ಲಿ ನಡೆದ ಕಠಿಣ ಹೋರಾಟದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (India women vs South Africa Women) ತಂಡದ ವಿರುದ್ಧ 3 ವಿಕೆಟ್‌ಗಳಿಂದ ಸೋಲಲ್ಪಟ್ಟಿತು. ಇದರೊಂದಿಗೆ, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಟೀಮ್ ಇಂಡಿಯಾ ಅನಿರೀಕ್ಷಿತ ಆಘಾತ ಎದುರಾಗಿದೆ. ಅಗ್ರ ಕ್ರಮಾಂಕದ ವೈಫಲ್ಯ, ಕಳಪೆ ಡೆತ್ ಬೌಲಿಂಗ್ ಟೀಮ್ ಇಂಡಿಯಾದ ಗೆಲುವಿನ ಸಾಧ್ಯತೆಗಳನ್ನು ನಾಶಮಾಡಿದವು. ಈ ಸೋಲಿನೊಂದಿಗೆ, ಟೀಮ್ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಭಾರತದ ಮುಂದೆ ಕಠಿಣ ಸವಾಲು

ಆದಾಗ್ಯೂ, ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಟೂರ್ನಮೆಂಟ್ ಸ್ವರೂಪದ ಪ್ರಕಾರ, ಪಾಯಿಂಟ್ಸ್ ಟೇಬಲ್‌ನಲ್ಲಿರುವ ಟಾಪ್ -4 ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಈ ಕ್ರಮದಲ್ಲಿ, ಸೆಮಿಫೈನಲ್ ತಲುಪಲು ಟೀಮ್ ಇಂಡಿಯಾ ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆಲ್ಲಬೇಕಾಗಿದೆ. ಅವರು ಎರಡು ಪಂದ್ಯಗಳನ್ನು ಸೋತರೆ ಸೆಮಿಫೈನಲ್ ಲೆಕ್ಕಾಚಾರ ಕಠಿಣವಾಗುತ್ತದೆ. ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನ ಸೋತರೆ ಇತರೆ ತಂಡಗಳ ಫಲಿತಾಂಶಗಳು ಮತ್ತು ನೆಟ್​ ರನ್​ರೇಟ್​ ಅವಲಂಬಿಸಬೇಕಾಗುತ್ತದೆ.

ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು ಹೇಗೆ?

ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತರೆ, ಸೆಮಿಫೈನಲ್ ತಲುಪುವ ಅವರ ಆಸೆ ಭಗ್ನಗೊಳ್ಳುತ್ತದೆ. ಹೀಗಾದರೆ ಟೀಮ್ ಇಂಡಿಯಾ ಮತ್ತೊಂದು ಅವಕಾಶವಿಲ್ಲದೆ ಮನೆ ಸೇರಲಿದೆ. ಹಾಗಾಗಿ 4 ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನಾದರು ಗೆಲ್ಲಲೇಬೇಕು. ಆದರೆ ಬಾಂಗ್ಲಾದೇಶವನ್ನು ಹೊರತುಪಡಿಸಿ, ಮೂರು ತಂಡಗಳನ್ನ ಸೋಲಿಸುವುದು ಟೀಮ್ ಇಂಡಿಯಾಗೆ ಕಠಿಣವಾಗಿವೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ಅದರ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ. ಮತ್ತೊಂದೆಡೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ, ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಕಠಿಣವಾಗಲಿದೆ.

ಅಗ್ರಕ್ರಮಾಂಕದ ಕೊಡುಗೆ ಅಗತ್ಯ

ಟೀಮ್ ಇಂಡಿಯಾ ಯಾವುದೇ ಒಬ್ಬ ಪ್ಲೇಯರ್ ಪ್ರದರ್ಶನವನ್ನು ಅವಲಂಬಿಸದೆ ಸಾಮೂಹಿಕವಾಗಿ ಪ್ರದರ್ಶನ ನೀಡಿದರೆ ಮಾತ್ರ ಸೆಮಿಫೈನಲ್ ಸ್ಥಾನವನ್ನು ಪಡೆಯುತ್ತದೆ. ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಪ್ರತೀಕಾ ರಾವಲ್, ಜೆಮಿಮಾ ರೋಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಗಳಿಸಿಲ್ಲ. ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ ಅವರ ಸೂಪರ್ ಫಾರ್ಮ್ ಮತ್ತು ರಿಚಾ ಸ್ನೇಹ್ ರಾಣಾ ಪ್ರದರ್ಶನ ನೀಡುತ್ತಿರುವುದು ಟೀಮ್ ಇಂಡಿಯಾಕ್ಕೆ ಕಳೆದ ಮೂರು ಪಂದ್ಯಗಳಲ್ಲೂ ನೆರವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಕೆಳ ಕ್ರಮಾಂಕದ ಪ್ರದರ್ಶನದೊಂದಿಗೆ ಭಾರತ ಫೈಟಿಂಗ್ ನೀಡಿದೆ. ಇದೀಗ ನಿರ್ಣಾಯಕ ಹಂತದಲ್ಲಿ ಅಗ್ರ ಕ್ರಮಾಂಕ ಮಿಂಚಬೇಕಾಗಿದೆ.

ವೇಗದ ಬೌಲಿಂಗ್ ಸುಧಾರಣೆ ಅಗತ್ಯ

ಬೌಲಿಂಗ್ ಉತ್ತಮವಾಗಿದ್ದರೂ, ಹರ್ಮನ್ ಬಳಗ ಸಂಪೂರ್ಣವಾಗಿ ಸ್ಪಿನ್ನರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ, ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಮತ್ತು ಸ್ನೇಹ್ ರಾಣಾ ಅವರ ಕೋಟಾ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಿದ ನಂತರ ಉಳಿದ ಬೌಲರ್‌ಗಳು ಒತ್ತಡಕ್ಕೆ ಒಳಗಾದರು. ಕ್ರಾಂತಿ ಗೌಡ್ ಮತ್ತು ಅಮನ್​ಜೋತ್ ಕೌರ್ ಡೆತ್ ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಮಾಡಿ 18 ಎಸೆತಗಳಲ್ಲಿ 41 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್‌ಗಳ ಜೊತೆಗೆ ವೇಗಿಗಳು ಸಹ ಜವಾಬ್ದಾರಿಯುತವಾಗಿ ಪ್ರದರ್ಶನ ನೀಡಬೇಕಾಗಿದೆ.

2025ರ ವಿಶ್ವಕಪ್ ಅಂಕಪಟ್ಟಿ

ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೆಲಿಯಾ 3 ಪಂದ್ಯಗಳಲ್ಲಿ 2 ಜಯ, 1 ರದ್ದು ಸೇರಿ 5 ಅಂಕ ಹೊಂದಿದೆ. ಆಡಿರುವ 2ಕ್ಕೆ 2 ಪಂದ್ಯ ಗೆದ್ದಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದರೆ, 2 ಗೆಲುವು, 1 ಸೋಲಿನೊಂದಿಗೆ ಭಾರತ 3ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಕೂಡ 2 ಗೆಲುವು, 1 ಸೋಲಿನೊಂದಿಗೆ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 2 ಪಂದ್ಯಗಳಲ್ಲಿ ತಲಾ 1 ಗೆಲುವು-ಸೋಲಿನೊಂದಿಗೆ 5ರಲ್ಲಿದ್ದರೆ, ಶ್ರೀಲಂಕಾ 2 ಪಂದ್ಯಗಳಲ್ಲಿ 1 ಅಂಕದೊಂದಿಗೆ 6ರಲ್ಲಿದೆ. ನ್ಯೂಜಿಲ್ಯಾಂಡ್ ತಂಡ 2 ಸೋಲು ಹಾಗೂ ಪಾಕಿಸ್ತಾನ 3 ಸೋಲುಗಳೊಂದಿಗೆ ಕ್ರಮವಾಗಿ 7 ಮತ್ತು 8ರಲ್ಲಿವೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s WC: ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಸೋಲು! ಆದ್ರೂ ಭಾರತಕ್ಕೆ ಇನ್ನೂ ಇದೆ ಸೆಮಿಫೈನಲ್ ಪ್ರವೇಶಿಸುವ ಚಾನ್ಸ್! ಇಲ್ಲಿದೆ ನೋಡಿ ಲೆಕ್ಕಾಚಾರ