Yashaswi Jaiswal: ವಿಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಜೈಸ್ವಾಲ್! ಹಲವು ದಾಖಲೆ ಬ್ರೇಕ್ ಮಾಡಿದ 23ರ ಯಂಗ್​ಸ್ಟರ್ | Yashasvi Jaiswal Enters Elite Club: Equals Cook, Miandad with 7 Tons | ಕ್ರೀಡೆ

Yashaswi Jaiswal: ವಿಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಜೈಸ್ವಾಲ್! ಹಲವು ದಾಖಲೆ ಬ್ರೇಕ್ ಮಾಡಿದ 23ರ ಯಂಗ್​ಸ್ಟರ್ | Yashasvi Jaiswal Enters Elite Club: Equals Cook, Miandad with 7 Tons | ಕ್ರೀಡೆ

Last Updated:


ಭೋಜನ ವಿರಾಮದ ವೇಳೆ 40 ರನ್​ಗಳಿಸಿದ್ದ ಜೈಸ್ವಾಲ್ ನಂತರ ತಮ್ಮ 82ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಕೇವಲ 63 ಎಸೆತಗಳಲ್ಲಿ ಉಳಿದ 50 ರನ್ ಪೂರೈಸಿದರು. 145 ಎಸೆತಗಳಲ್ಲಿ ತಮ್ಮ ವೃತ್ತಿ ಜೀವನದ 7ನೇ ಟೆಸ್ಟ್ ಶತಕ ಪೂರೈಸಿದರು.

ಯಶಸ್ವಿ ಜೈಸ್ವಾಲ್ ಶತಕಯಶಸ್ವಿ ಜೈಸ್ವಾಲ್ ಶತಕ
ಯಶಸ್ವಿ ಜೈಸ್ವಾಲ್ ಶತಕ

ಭಾರತ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashaswi Jaiswal) ತಮ್ಮ ಎರಡು ವರ್ಷಗಳ ವೃತ್ತಿಜೀವನದಲ್ಲಿ ಏಳನೇ ಶತಕ ಗಳಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ (Arun Jaitley) ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಅವರು 145 ಎಸೆತಗಳಲ್ಲಿ ಶತಕ ಪೂರೈಸಿದರು. ಭೋಜನ ವಿರಾಮದ ಬಳಿಕ ಅರ್ಧಶತಕ ಗಳಿಸಿದ ಜೈಸ್ವಾಲ್ ನಂತರ ತಮ್ಮ ಗೇರ್ ಬದಲಾಯಿಸಿ ವೇಗವಾಗಿ ಶತಕ ಪೂರೈಸಿದರು.

ಭೋಜನ ವಿರಾಮದ ವೇಳೆ 40 ರನ್​ಗಳಿಸಿದ್ದ ಜೈಸ್ವಾಲ್ ನಂತರ ತಮ್ಮ 82ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಕೇವಲ 63 ಎಸೆತಗಳಲ್ಲಿ ಉಳಿದ 50 ರನ್ ಪೂರೈಸಿದರು. 145 ಎಸೆತಗಳಲ್ಲಿ ತಮ್ಮ ವೃತ್ತಿ ಜೀವನದ 7ನೇ ಟೆಸ್ಟ್ ಶತಕ ಪೂರೈಸಿದರು. ಇದರೊಂದಿಗೆ 23 ವರ್ಷದೊಳಗೆ ಹೆಚ್ಚು ಶತಕ ಸಿಡಿಸಿದ ಭಾರತ 2ನೇ ಬ್ಯಾಟರ್ ಎಂಬ ಹೆಗ್​ಗಳಿಕೆಗೆ ಪಾತ್ರರಾದರು.

23 ವರ್ಷದೊಳಗಿನ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯರು

ಸಚಿನ್ ತೆಂಡೂಲ್ಕರ್ – 11

ಯಶಸ್ವಿ ಜೈಸ್ವಾಲ್ – 7*

ರವಿ ಶಾಸ್ತ್ರಿ – 5,

ದಿಲೀಪ್ ವೆಂಗ್‌ಸರ್ಕರ್ – 5

23 ವರ್ಷದೊಳಗಿನ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್ಸ್

ವಿಶ್ವದಾದ್ಯಂತ ಈ ದಾಖಲೆ ಆಸ್ಟ್ರೇಲಿಯಾದ ಡೊನಾಲ್ಡ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ ಈ ವಯಸ್ಸಲ್ಲಿ 12 ಶತಕ ಸಿಡಿಸಿದ್ದರು. ನಂತರ ಸಚಿನ್ ತೆಂಡೂಲ್ಕರ್ (11), ವೆಸ್ಟ್ ಇಂಡೀಸ್​ನ ಗ್ಯಾರಿ ಸೋಬರ್ಸ್ (9) ಇದ್ದಾರೆ. ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್)​, ಅಲೈಸ್ಟರ್ ಕುಕ್ (ಇಂಗ್ಲೆಂಡ್), ಜಾವೇದ್ ಮಿಯಾಂದಾದ್(ಪಾಕಿಸ್ತಾನ) 7 ಶತಕ ಡಿಸಿದ್ದಾರೆ.

ಹೆಚ್ಚು ಅಂತಾರಾಷ್ಟ್ರೀಯ ಶತಕ

ಎಲ್ಲಾ ಮಾದರಿಯಲ್ಲಿ ಗಮನಿಸಿದರೆ ಸಚಿನ್ ತೆಂಡೂಲ್ಕರ್ ಅವರೇ 23ರೊಳಗೆ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿದ್ದಾರೆ. ಸಚಿನ್ ತಮ್ಮ 23ನೇ ವಯಸ್ಸಲ್ಲಿ 220 ಇನ್ನಿಂಗ್ಸ್​ಗಳನ್ನಾಡಿ 22 ಶತಕ ಸಿಡಿಸಿದ್ದರು. ನಂತರ ವಿರಾಟ್ ಕೊಹ್ಲಿ 119 ಇನ್ನಿಂಗ್ಸ್​ಗಳಲ್ಲಿ 15 ಶತಕ ಸಿಡಿಸಿದ್ದರು. ಇದೀಗ 3ನೇ ಸ್ಥಾನದಲ್ಲಿರುವ ಜೈಸ್ವಾಲ್ 71 ಇನ್ನಿಂಗ್ಸ್​ಗಳಲ್ಲಿ 8 ಶತಕ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ. ರವಿ ಶಾಸ್ತ್ರಿ 110 ಇನ್ನಿಂಗ್ಸ್​ಗಳಲ್ಲಿ 7 ಶತಕ, ಶುಭ್​ಮನ್ ಗಿಲ್ 73 ಇನ್ನಿಂಗ್ಸ್​ಗಳಲ್ಲಿ 7 ಶತಕ ಸಿಡಿಸಿದ್ದರು.

3000 ರನ್​ ಪೂರ್ಣ

ಈ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ಅವರು ಕೇವಲ 50 ಪಂದ್ಯಗಳಲ್ಲಿ 3,000 ಅಂತರರಾಷ್ಟ್ರೀಯ ರನ್‌ಗಳನ್ನು ತಲುಪಿದರು. 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೈಸ್ವಾಲ್, ಭಾರತದ ಅತ್ಯಂತ ಭರವಸೆಯ ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ.