IND vs WI, 2nd Test: ಕೆರಿಬಿಯನ್ ಬೌಲಿಂಗ್ ಧೂಳೀಪಟ ಮಾಡಿದ ಜೈಸ್ವಾಲ್! ಮೊದಲ ದಿನ ಟೀಮ್ ಇಂಡಿಯಾ 318/2 | ಕ್ರೀಡೆ

IND vs WI, 2nd Test: ಕೆರಿಬಿಯನ್ ಬೌಲಿಂಗ್ ಧೂಳೀಪಟ ಮಾಡಿದ ಜೈಸ್ವಾಲ್! ಮೊದಲ ದಿನ ಟೀಮ್ ಇಂಡಿಯಾ 318/2 | ಕ್ರೀಡೆ

Last Updated:

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ಮೊದಲ ದಿನದಾಟದ ಅಂತ್ಯದ ವೇಳೆಗೆ ಯಶಸ್ವಿ ಜೈಸ್ವಾಲ್ (Yashaswi Jaiswal) 173 ರನ್ ಮತ್ತು ನಾಯಕ ಶುಭ್ಮನ್ ಗಿಲ್ (Shubman Gill) 20 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಯಶಸ್ವಿ ಜೈಸ್ವಾಲ್ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್

ಭಾರತ vs ವೆಸ್ಟ್ ಇಂಡೀಸ್ (India vs West Indies) ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಶುಕ್ರವಾರ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ಮೊದಲ ದಿನದಾಟದ ಅಂತ್ಯದ ವೇಳೆಗೆ ಯಶಸ್ವಿ ಜೈಸ್ವಾಲ್ (Yashaswi Jaiswal) 173 ರನ್ ಮತ್ತು ನಾಯಕ ಶುಭ್ಮನ್ ಗಿಲ್ (Shubman Gill) 20 ರನ್ ಗಳಿಸಿದ್ದು, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಮೊದಲ ದಿನದಂದು ಭಾರತ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಅವರ ವಿಕೆಟ್‌ಗಳನ್ನು ಮಾತ್ರ ಕಳೆದುಕೊಂಡಿತು. ವೆಸ್ಟ್ ಇಂಡೀಸ್ ಪರ ವಾರಿಕನ್ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಜೈಸ್ವಾಲ್-ಸುದರ್ಶನ್ ದಾಖಲೆಯ ಜೊತೆಯಾಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾಗೆ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೊತೆ ಸ್ಥಿರ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 58 ರನ್‌ಗಳನ್ನು ಸೇರಿಸಿತು. ಈ ಹಂತದಲ್ಲಿ ವಾರಿಕನ್ ಕನ್ನಡಿಗ ಕೆ.ಎಲ್. ರಾಹುಲ್ (38) ಅವರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿ ಮತ್ತು ಸಾಯಿ ಸುದರ್ಶನ್ 306 ಎಸೆತಗಳಲ್ಲಿ 193 ರನ್‌ಗಳ ದೊಡ್ಡ ಜೊತೆಯಾಟ ನೀಡಿದರು. 165 ಎಸೆತಗಳಲ್ಲಿ 87 ರನ್ ಗಳಿಸಿದ್ದ ಸಾಯಿ ಸುದರ್ಶನ್​ ಔಟಾದರು. ನಂತರ ಯಶಸ್ವಿ ಮತ್ತು ಗಿಲ್ ಜೊತೆಯಾಗಿ 67 ರನ್​ಗಳ ಜೊತೆಯಾಟ ನಡೆಸಿದ್ದಾರೆ.

ಜೈಸ್ವಾಲ್ 7ನೇ ಶತಕ

ಮೊದಲ ತಮ್ಮ ನೈಸರ್ಗಿಕ ಸ್ಫೋಟಕ ಬ್ಯಾಟಿಂಗ್ ಬದಲಿಗೆ ಜವಾಬ್ದಾರಿಯುವ ಇನ್ನಿಂಗ್ಸ್ ಆಡಿದ ಜೈಸ್ವಾಲ್ ಟೆಸ್ಟ್ ವೃತ್ತಿ ಜೀವನದ 7ನೇ ಟೆಸ್ಟ್ ಶತಕ ಸಿಡಿಸಿದರು. ಮೊದಲ ದಿನ 253 ಎಸೆತಗಳಲ್ಲಿ 22 ಬೌಂಡರಿಗಳ ನೆರವಿನಿಂದ ಅಜೇಯ 173 ರನ್​ಗಳಿಸಿದ್ದಾರೆ. ಈ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ಶಿಪ್​ನಲ್ಲಿ 5ನೇ 150+ ಸ್ಕೋರ್ ಸಿಡಿಸಿದರು. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಹಾಗೂ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ ಜೊತೆಗೆ WTCಯಲ್ಲಿ ಹೆಚ್ಚು 150+ ಸ್ಕೋರ್ ಸಿಡಿಸಿದ 2ನೇ ಆಟಗಾರ ಎನಿಸಿಕೊಂಡರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.