Shubman Gill: ಐ ಲವ್​ ಯೂ ಶುಭ್​ಮನ್​! ಲೈವ್ ಪಂದ್ಯದ ವೇಳೆ ಗಿಲ್‌ಗೆ ಲವ್ ಪ್ರಪೋಸ್ ಮಾಡಿದ ಫ್ಯಾನ್! / Fan proposes to Shubman Gill during the second Test between India and West Indies | ಕ್ರೀಡೆ

Shubman Gill: ಐ ಲವ್​ ಯೂ ಶುಭ್​ಮನ್​! ಲೈವ್ ಪಂದ್ಯದ ವೇಳೆ ಗಿಲ್‌ಗೆ ಲವ್ ಪ್ರಪೋಸ್ ಮಾಡಿದ ಫ್ಯಾನ್! / Fan proposes to Shubman Gill during the second Test between India and West Indies | ಕ್ರೀಡೆ

Last Updated:

ಭಾರತ ಮತ್ತು ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಪಂದ್ಯದ ವೇಳೆ ಶುಭಮನ್ ಗಿಲ್‌ಗೆ ಲೇಡಿ ಫ್ಯಾನ್​ ಒಬ್ಬರು ಲವ್ ಪ್ರಪೋಸ್ ಮಾಡಿದ್ದಾರೆ

Shubman GillShubman Gill
Shubman Gill

ದೆಹಲಿ (Delhi)ಯ ಅರುಣ್ ಜೇಟ್ಲಿ (Arun Jaitley) ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (India and West Indies) ನಡುವಿನ ಟೆಸ್ಟ್ ಸರಣಿ (Test serie)ಯ ಅಂತಿಮ ಮತ್ತು ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಎರಡನೇ ದಿನದಾಟ ಅಂತ್ಯಕ್ಕೆ ಭಾರತ ತಂಡ (Team India) ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ಸ್‌ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು 2ನೇ ದಿನ 4 ವಿಕೆಟ್ ನಷ್ಟಕ್ಕೆ 140 ರನ್​ಗಳಿಸಿದೆ. ಇನ್ನೂ 378 ರನ್ಸ್‌ಗಳ ಹಿನ್ನಡೆಯಲ್ಲಿದೆ.

ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅದ್ಭುತ ಶತಕಗಳನ್ನು ಸಿಡಿಸಿ ಮಿಂಚಿದರು. ಪಂದ್ಯದ ಎರಡನೇ ದಿನದಂದು ಗಿಲ್ ತಮ್ಮ ಶತಕದೊಂದಿಗೆ ಸದ್ದು ಮಾಡುವುದಲ್ಲದೆ, ಅಭಿಮಾನಿಯೊಬ್ಬರಿಂದ ಲವ್ ಪ್ರಪೋಸ್ ಪಡೆದ ಕೂಡ ಸುದ್ದಿಯಾದರು. ಇದು ಎಲ್ಲರ ಗಮನ ಸೆಳೆಯಿತು. ಲೈವ್ ಪಂದ್ಯದ ವೇಳೆ ಶುಭಮನ್ ಗಿಲ್‌ಗೆ ಲವ್ ಪ್ರಪೋಸ್ ಮಾಡಿದ ಅಭಿಮಾನಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಗಿಲ್‌ಗೆ ಲವ್ ಪ್ರಪೋಸ್

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಶುಭ್‌ಮನ್ ಗಿಲ್ ಅದ್ಭುತ ಜೊತೆಯಾಟ ಆಡಿದರು. ಈ ವೇಳೆ ಕ್ಯಾಮೆರಾಗಳು ಅಭಿಮಾನಿಗಳತ್ತ ಗಮನ ಹರಿಸಿದವು. ಒಬ್ಬ ಮಹಿಳಾ ಅಭಿಮಾನಿ “ಐ ಲವ್ ಯು ಶುಭ್‌ಮನ್” ಎಂದು ಬರೆದಿರುವ ಬೋರ್ಡ್ ಅನ್ನು ಹಿಡಿದಿದ್ದರು. ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು.

ರೋಹಿತ್ ದಾಖಲೆ ಬ್ರೇಕ್

ದೆಹಲಿ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಭಾರತ ಟೆಸ್ಟ್ ತಂಡದ ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ, ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದರು. 26 ವರ್ಷದ ಗಿಲ್ ತಮ್ಮ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರೆಸುವ ಮೂಲಕ ನಾಯಕನಾಗಿ ತಮ್ಮ ಐದನೇ ಶತಕವನ್ನು ಗಳಿಸಿದರು.

ಕೊಹ್ಲಿ ರೆಕಾರ್ಡ್ ಸರಿಗಟ್ಟಿದ ಗಿಲ್

ಒಂದು ವರ್ಷದಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಗಿಲ್ ಸರಿಗಟ್ಟಿದರು. 2017 ಮತ್ತು 2018 ರಲ್ಲಿ ತಲಾ ಐದು ಶತಕಗಳನ್ನು ಗಳಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಗಿಲ್ 196 ಎಸೆತಗಳಲ್ಲಿ 16 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 129 ರನ್ ಗಳಿಸಿ ಅಜೇಯರಾಗಿ ಉಳಿದರು.