Women’s ODI World Cup: ಪ್ರತೀಕಾ-ಮಂದಾನ ಜುಗಲ್‍ಬಂದಿ; ಆಸ್ಟ್ರೇಲಿಯಾ ಬೌಲರ್ಸ್ ಪರದಾಟ! / ICC Womens ODI World Cup 2025 Australia vs India first innings | ಕ್ರೀಡೆ

Women’s ODI World Cup: ಪ್ರತೀಕಾ-ಮಂದಾನ ಜುಗಲ್‍ಬಂದಿ; ಆಸ್ಟ್ರೇಲಿಯಾ ಬೌಲರ್ಸ್ ಪರದಾಟ! / ICC Womens ODI World Cup 2025 Australia vs India first innings | ಕ್ರೀಡೆ

Last Updated:

ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ಸ್ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂದಾನ ಅಬ್ಬರಿಸಿದ್ದಾರೆ. ಪರಿಣಾಮ ಭಾರತ ತಂಡ ಬೃಹತ್ ಮೊತ್ತ ಕಲೆ ಹಾಕಿದೆ.

Smriti Mandhana and Pratika RawalSmriti Mandhana and Pratika Rawal
Smriti Mandhana and Pratika Rawal

ಐಸಿಸಿ (ICC) 2025 ರ ಮಹಿಳಾ ಏಕದಿನ ವಿಶ್ವಕಪ್ (ODI World Cup) ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ (India vs Australia) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ (High voltage match) ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ (Cricket Stadium)ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು ಅದ್ಭುತ ಪ್ರದರ್ಶನ ನೀಡಿದರು. ಆರಂಭಿ ಬ್ಯಾಟರ್ಸ್ ಪ್ರತೀಕಾ ರಾವಲ್ (Pratika Rawal) ಮತ್ತು ಸ್ಮೃತಿ ಮಂದಾನ (Smriti Mandhana) ಜೋಡಿ ಆಸ್ಟ್ರೇಲಿಯಾ ಬೌಲರ್ಸ್​ಗೆ ಬೆವರಿಳಿಸಿದ್ದಾರೆ. ಈ ಇಬ್ಬರೂ ಸ್ಪೋಟಕ ಬ್ಯಾಟರ್ಸ್ ಅರ್ಧಶತಕ ಸಿಡಿಸಿ ಭಾರತ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾದರು.

ಪಂದ್ಯದಲ್ಲಿ ಟಾಸ್ ಸೋತು ಭಾರತ ವನಿತೆಯರು ಮೊದಲು ಬ್ಯಾಟಿಂಗ್ ಮಾಡಿದರು. ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂದಾನ ಅವರ ಅರ್ಧಶತಕಗಳ ನೆರವಿನಿಂದ ಭಾರತ 300 ರನ್​ಗಳ ಗಡಿ ದಾಟಿತು. ಆದರೆ, ಉಳಿದ ಬ್ಯಾಟರ್ಸ್​ನಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಪರಿಣಾಮ ಭಾರತ 48.5 ಓವರ್​ಗಳಲ್ಲಿ ಆಲೌಟ್ ಆಗುವ ಮೂಲಕ 330 ರನ್ ಕಲೆ ಹಾಕಿತು. ಇದು ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.