Inspirational Story: ಇದು ಬಡವರು ಖುಷಿ ಪಡುವ ಸುದ್ದಿ, ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಈ ಸೌಕರ್ಯ ಉಚಿತ! | wenlock Hospital launches Batte Bank to help poor | ದಕ್ಷಿಣ ಕನ್ನಡ

Inspirational Story: ಇದು ಬಡವರು ಖುಷಿ ಪಡುವ ಸುದ್ದಿ, ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಈ ಸೌಕರ್ಯ ಉಚಿತ! | wenlock Hospital launches Batte Bank to help poor | ದಕ್ಷಿಣ ಕನ್ನಡ

Last Updated:

ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ʼಕರುಣೆಯ ತೊಟ್ಟಿಲುʼ ಬಟ್ಟೆ ಬ್ಯಾಂಕ್ ಆರಂಭಿಸಿ ಬಡ ರೋಗಿಗಳು ಮತ್ತು ಅವರ ಜೊತೆಗಾರರಿಗೆ ಉಚಿತ ಬಟ್ಟೆ ವಿತರಣೆ ಮಾಡುತ್ತಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ನಗರದಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆ ಬಡವರ ಆಸ್ಪತ್ರೆ. ದಿನಗೂಲಿ‌ ಮಾಡಿ ಬದುಕು ಸಾಗಿಸುತ್ತಿರುವವರು, ಅಶಕ್ತರು ಚಿಕಿತ್ಸಾ ವೆಚ್ಚ ಇಲ್ಲದ ಕಾರಣ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ, ಹೊರ ಜಿಲ್ಲೆಗಳ, ಹೊರ ರಾಜ್ಯಗಳ ಬಡವರೂ ಚಿಕಿತ್ಸೆಗೆ (Treatment) ಬರುತ್ತಾರೆ. ಇಂತಹ ಬಡವರಿಗೆ ಹೊಟ್ಟೆಗೆ ಆಧಾರವಾಗಿದ್ದ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (Charitable Trust) ಇದೀಗ ಬಟ್ಟೆಗೂ ಆಧಾರವಾಗುವ ಕಾರ್ಯದಲ್ಲಿ (Work) ತೊಡಗಿದೆ.

ಕಳೆದ 12 ವರ್ಷದಿಂದ ಸಾಮಾಜಿಕ ಸೇವೆ

ಕಳೆದ 12 ವರ್ಷಗಳ‌ ಹಿಂದೆ ಸ್ಥಾಪನೆಯಾಗಿದ್ದ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಎಂಟು ವರ್ಷಗಳಿಂದ ನಿರಂತರ ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ವಿತರಿಸುತ್ತಿದೆ. ಇದರಿಂದ ಒಪ್ಪತ್ತಿನ ಊಟಕ್ಕೆ ತೊಂದರೆ ಪಡುವ ಬಡವರ ಹೊಟ್ಟೆ ತಣಿಸುವ ಕಾರ್ಯ ಆಗುತ್ತಿದೆ. ಹೊಟ್ಟೆಗಾದರೆ ಆಯಿತೇ?, ಬಟ್ಟೆಗೇನು ಗತಿ ಎಂಬ ಬಡವರು ಇಂದಿಗೂ ಇದ್ದಾರೆ. ಇಂತಹ ಬಡಜನತೆಯ ಕಷ್ಟಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಎಂಫ್ರೆಂಡ್ಸ್ ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಕರುಣೆಯ ತೊಟ್ಟಿಲು‌ ಎಂಬ ಬಟ್ಟೆ ಬ್ಯಾಂಕ್ ಅನ್ನು ಆರಂಭಿಸಿದೆ.

ದಿನಬಳಕೆಯ ಬಟ್ಟೆ ಇಲ್ಲಿ ರೋಗಿಗಳಿಗೆ ಮಾತ್ರವಲ್ಲ ಅವರ ಜೊತೆಗಾರರಿಗೂ ಫ್ರೀ

ರೋಗಿಗಳು ಅಥವಾ ರೋಗಿಗಳ ಶುಶ್ರೂಷೆಗೆ ಇರುವ ಮನೆಮಂದಿಗೆ ದಿನಬಳಕೆಯ ಬಟ್ಟೆಗಳನ್ನು ಉಚಿತವಾಗಿ ನೀಡಲು ಈ ಬಟ್ಟೆ ಬ್ಯಾಂಕ್ ಅನ್ನು ತೆರೆಯಲಾಗಿದೆ. ಇದರ ಖರ್ಚು ವೆಚ್ಚವನ್ನು ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿ ಶರೀಫ್ ವೈಟ್‌ಸ್ಟೋನ್ ಭರಿಸಿದ್ದಾರೆ. ಎಂಫ್ರೆಂಡ್ಸ್ ಈಗಾಗಲೇ ಟ್ರಸ್ಟಿಗಳ, ದಾನಿಗಳ ನೆರವಿನಿಂದ ಪುರುಷರ, ಮಹಿಳೆಯರ ದಿನಬಳಕೆಯ ನೈಟ್ ಪ್ಯಾಂಟ್, ಬರ್ಮುಡಾ, ಪ್ಯಾಂಟ್, ಶರ್ಟ್, ಟವಲ್, ಬೆಡ್‌ಶೀಟ್‌, ಸೀರೆ, ರವಿಕೆ, ನೈಟಿಗಳನ್ನು ಶೇಖರಿಸಿಟ್ಟಿದೆ‌. ಅವಶ್ಯವಿರುವ ಯಾವುದೇ ರೋಗಿಗಳು, ರೋಗಿಗಳ ಸಂಬಂಧಿಗಳು ಇಲ್ಲಿಂದ ಉಚಿತವಾಗಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.

ಬಡವರು ಖುಷಿ ಪಡುವ ಸುದ್ದಿ