Last Updated:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ 13 ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಕಳಪೆ ಬೌಲಿಂಗ್ ಪದರ್ಶನದಿಂದ ಮತ್ತೊಂದು ಸೋಲು ಕಂಡಿದೆ. ಈ ಸೋಲಿನೊಂದಿಗೆ ಭಾರತ ತಂಡದ ಸೆಮಿಸ್ ಹಾದಿ ಕಷ್ಟಕರವಾಗಿದೆ.
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ (Cricket Stadium)ನಲ್ಲಿ ನಡೆದ ಐಸಿಸಿ (ICC) 2025 ರ ಮಹಿಳಾ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ 13ನೇ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ (India) ತಂಡದ ಗೆಲುವನ್ನು ಆಸ್ಟ್ರೇಲಿಯಾ (Australia) ಕಸಿದುಕೊಂಡಿದೆ. ಕಳಪೆ ಬೌಲಿಂಗ್ (Bowling) ಪ್ರದರ್ಶನದಿಂದಾಗಿ ಭಾರತ ತಂಡ ಮತ್ತೊಂದು ಎದುರಿಸಿದೆ. ಭರ್ಜರಿ ಗೆಲುವು (Victory) ಸಾಧಿಸಿದ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾದ ಸೆಮಿಫೈನಲ್ (Semi-final) ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಪಂದ್ಯದಲ್ಲಿ ಮೊದಲು ಭಾರತ ವನಿತೆಯರು ಬ್ಯಾಟಿಂಗ್ ಮಾಡಿದರು. ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂದಾನ ಅವರ ಭರ್ಜರಿ ಜೊತೆಯಾಟ ನೆರವಿನಿಂದ ಭಾರತ 330 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಭಾರತ ತಂಡದಿಂದ 331 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ಒಂದು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
October 12, 2025 10:51 PM IST
Women’s ODI World Cup: ಕಳಪೆ ಬೌಲಿಂಗ್ನಿಂದ ಭಾರತಕ್ಕೆ ಮತ್ತೊಂದು ಸೋಲು! ಟೀಮ್ ಇಂಡಿಯಾ ಸೆಮಿಸ್ ಹಾದಿಯನ್ನ ಮತ್ತಷ್ಟು ಕಠಿಣಗೊಳಿಸಿದ ಆಸೀಸ್