Women’s WC: ಆಸ್ಟ್ರೇಲಿಯಾ ಸೋಲಿನ ಆಘಾತದ ಹೊರತಾಗಿಯೂ ಭಾರತಕ್ಕಿದೆ ಸೆಮಿಫೈನಲ್‌ ಚಾನ್ಸ್! ಇಲ್ಲಿದೆ ನೋಡಿ ನಾಕೌಟ್ ಲೆಕ್ಕಾಚಾರ | Qualifying for Semifinals: India’s Next Steps After Back-to-Back Defeats | ಕ್ರೀಡೆ

Women’s WC: ಆಸ್ಟ್ರೇಲಿಯಾ ಸೋಲಿನ ಆಘಾತದ ಹೊರತಾಗಿಯೂ ಭಾರತಕ್ಕಿದೆ ಸೆಮಿಫೈನಲ್‌ ಚಾನ್ಸ್! ಇಲ್ಲಿದೆ ನೋಡಿ ನಾಕೌಟ್ ಲೆಕ್ಕಾಚಾರ | Qualifying for Semifinals: India’s Next Steps After Back-to-Back Defeats | ಕ್ರೀಡೆ
ಸೆಮಿಫೈನಲ್​ ಸೆನಾರಿಯೋ

ಈಗ ತಂಡವು ಪಾಯಿಂಟ್‌ಗಳ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದು, ನೆಟ್ ರನ್ ರೇಟ್ (NRR) ಸಹ ಉತ್ತಮವಾಗಿದೆ.ವಿಶ್ವಕಪ್ 2025ರ ಲೀಗ್ ಹಂತದಲ್ಲಿ ಎಲ್ಲಾ 8 ತಂಡಗಳು ಒಂದೊಂದು ಪಂದ್ಯಗಳನ್ನು ಆಡುತ್ತವೆ. ಗೆಲುವಿಗೆ 2 ಪಾಯಿಂಟ್‌ಗಳು, ಡ್ರಾ ಅಥವಾ ರಿಂಗ್ ಮ್ಯಾಚ್‌ಗೆ 1 ಪಾಯಿಂಟ್ ಸಿಗುತ್ತದೆ. ಟಾಪ್-4 ತಂಡಗಳು ಸೆಮಿಫೈನಲ್‌ಗೆ ಅರ್ಹರಾಗುತ್ತವೆ.

ಭಾರತ ಈಗ 4 ಪಂದ್ಯಗಳಿಂದ 2 ಗೆಲುವುಗಳು ಮತ್ತು 2 ಸೋಲುಗಳೊಂದಿಗೆ 4 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, NRR 0.682 ಆಗಿದೆ. ಆಸ್ಟ್ರೇಲಿಯಾ (7 ಪಾಯಿಂಟ್‌ಗಳು) ಮತ್ತು ಇಂಗ್ಲೆಂಡ್ (6 ಪಾಯಿಂಟ್‌ಗಳು) ಮುಂದೆ ಇದ್ದರೂ, ದಕ್ಷಿಣ ಆಫ್ರಿಕಾ (4 ಪಾಯಿಂಟ್‌ಗಳು) ನೆಟ್​ ರನ್​ರೇಟ್​​ನಲ್ಲಿ ಹಿನ್ನಡೆಯಲ್ಲಿದೆ.

ಭಾರತದ ಉಳಿದ ಪಂದ್ಯಗಳು ಯಾರ ವಿರುದ್ಧ?

ಟೀಮ್ ಇಂಡಿಯಪಾ ತನ್ನ ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್ , ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ.ಭಾರತಕ್ಕೆ ಸೆಮಿಫೈನಲ್ ಅರ್ಹತೆಯ ಖಚಿತ ಮಾರ್ಗವೆಂದರೆ ಉಳಿದ ಮೂರು ಪಂದ್ಯಗಳನ್ನೂ ಗೆಲ್ಲುವುದು. ಇದರಿಂದ ತಂಡ 10 ಪಾಯಿಂಟ್‌ಗಳಿಗೆ ತಲುಪುತ್ತದೆ, ಇದು ಟಾಪ್-4 ಸ್ಥಾನವನ್ನು ಖಚಿತಪಡಿಸುತ್ತದೆ.

ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧ್ಯವಿದೆಯಾದರೂ, ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧದ ಗೆಲುವುಗಳು ಸುಲಭವಲ್ಲ, ಏಕೆಂದರೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಭಾರತದ ವಿರುದ್ಧ ಕಠಿಣ ಫೈಟ್ ನೀಡಬಲ್ಲ ತಂಡಗಳು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಈಗ ದೊಡ್ಡ ಮಾರ್ಜಿನ್ ಗೆಲುವುಗಳ ಮೇಲೆ ಗಮನ ಹರಿಸಬೇಕು. ಆದರೆ, ಎಲ್ಲಾ ಮೂರು ಪಂದ್ಯಗಳನ್ನೂ ಗೆಲ್ಲದಿದ್ದರೂ ಭಾರತ ಅರ್ಹತೆ ಪಡೆಯಬಹುದು, ಆದರೆ ಇತರ ಫಲಿತಾಂಶಗಳು ಅವಲಂಭಿಸಬೇಕಾಗಿದೆ.

ಬೇರೆ ತಂಡಗಳ ಫಲಿತಾಂಶ

ಎರಡು ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾ 8 ಪಾಯಿಂಟ್‌ಗಳು ಸಿಗುತ್ತವೆ. ಇದು ಸೆಮಿಫೈನಲ್ ಸ್ಥಾನಕ್ಕೆ ಸಾಕಾಗಬಹುದು, ಏಕೆಂದರೆ ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್ ತಂಡಗಳಲ್ಲಿ ಒಂದು ತಂಡ 8 ಪಾಯಿಂಟ್‌ಗಳಿಸಬಾರದು. ಹಾಗಾದರೆ ಮಾತ್ರ ಭಾರತ ಮೂರರಲ್ಲಿ 2ರಲ್ಲಿ ಗೆದ್ದರೂ ಸೆಮಿಫೈನಲ್ ತಲುಪಬಹುದು.

ಅಲ್ಲದೆ ಈ ಎರಡು ತಂಡಗಳಿಗಿಂತ ಭಾರತದ NRR ಉತ್ತಮವಾಗಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದ್ದು, ಇದರಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವು ಭಾರತಕ್ಕೆ ಲಾಭವಾಗಬಹುದು. ಇಂಗ್ಲೆಂಡ್-ನ್ಯೂಜಿಲೆಂಡ್ ಪಂದ್ಯದ ಫಲಿತಾಂಶವು ನಿರ್ಣಾಯಕವಾಗಲಿದೆ. ಇಂಗ್ಲೆಂಡ್ ಕಿವೀಸ್ ಮಣಿಸಿದರೆ ಭಾರತಕ್ಕೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

ಕಿವೀಸ್ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಸೆಮಿಸ್ ಕನಸು

ಈಗಾಗಲೆ ನ್ಯೂಜಿಲ್ಯಾಂಡ್ ತಂಡ 2 ಸೋಲು, 1 ಗೆಲುವು ಪಡೆದಿದೆ. ಉಳಿದ 4 ಪಂದ್ಯಗಳಲ್ಲಿ ಭಾರತ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಇದರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್ ತಂಡ ಗೆಲ್ಲುವು ಸಾಧ್ಯತೆ ಇದೆ. ಇನ್ನೆರಡು ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

ಮತ್ತೊಂದು ಅವಕಾಶ ವೆಂದರೆ ದಕ್ಷಿಣ ಆಫ್ರಿಕಾ ತಂಡ 3 ಪಂದ್ಯಗಳನ್ನಾಡಿ 4 ಅಂಕ ಪಡೆದಿದೆ. ಉಳಿದ 4 ಪಂದ್ಯಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಈ 4 ಪಂದ್ಯಗಳಲ್ಲಿ ಹರಿಣ ಪಡೆ 2ರಲ್ಲಿ ಸೋಲು ಕಂಡರೆ ಭಾರತದ ಸೆಮಿಫೈನಲ್ ಹಾದಿಗೆ ಯಾವುದೇ ಭಂಗವಿರುವುದಿಲ್ಲ. ಆದರೆ ಆಸ್ಟ್ರೇಲಿಯಾ ಹೊರೆತುಪಡಿಸಿದರೆ, ಉಳಿದ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವೇ ಬಲಿಷ್ಠವಾಗಿದೆ. ಹಾಗಾಗಿ ನ್ಯೂಜಿಲ್ಯಾಂಡ್ ತಂಡವನ್ನ ಮಣಿಸಿ, ಇಂಗ್ಲೆಂಡ್ ತಂಡವೂ ಕಿವೀಸ್ ಮಣಿಸಲೆಂದು ಕೋರುವುದೇ ಸುಲಭದ ಮಾರ್ಗವಾಗಿದೆ.

ಭಾರತದ ಅತ್ಯುತ್ತಮ ಮಾರ್ಗವೆಂದರೆ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಕನಸು ನನಸಾಗಲಿದೆ. ಬೇರೆ ತಂಡಗಳನ್ನ ಅವಲಂಭಿಸದೆ ಉತ್ತಮ ಪ್ರದರ್ಶನ ತೋರಿ ತವರಿನಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ಅವಕಾಶವನ್ನ ಟೀಮ್ ಇಂಡಿಯಾ ನನಸು ಮಾಡಿಕೊಳ್ಳುವತ್ತಾ ಪ್ರಯತ್ನಿಸಬೇಕೆಂದು ಅಭಿಮಾನಿಗಳ ಆಶಯವಾಗಿದೆ.