John Campbell: ಭಾರತದ ನೆಲದಲ್ಲಿ 23 ವರ್ಷಗಳ ಬಳಿಕ ಶತಕ! ಆದ್ರೂ ಕಳಪೆ ದಾಖಲೆಗೆ ತುತ್ತಾದ ವಿಂಡೀಸ್ ಓಪನರ್ | John Campbell Avoids Unwanted Record, Scores Maiden Century Against India | ಕ್ರೀಡೆ

John Campbell: ಭಾರತದ ನೆಲದಲ್ಲಿ 23 ವರ್ಷಗಳ ಬಳಿಕ ಶತಕ! ಆದ್ರೂ ಕಳಪೆ ದಾಖಲೆಗೆ ತುತ್ತಾದ ವಿಂಡೀಸ್ ಓಪನರ್ | John Campbell Avoids Unwanted Record, Scores Maiden Century Against India | ಕ್ರೀಡೆ

Last Updated:


ವೆಸ್ಟ್ ಇಂಡೀಸ್ ಆರಂಭಿಕ ಜಾನ್ ಕ್ಯಾಂಪ್ಬೆಲ್ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ವೆಸ್ಟ್ ಇಂಡೀಸ್ ತಂಡ ಮತ್ತೊಂದು ಇನ್ನಿಂಗ್ಸ್ ಸೋಲಿನ ಸಂಕಷ್ಟದಲ್ಲಿದ್ದಾಗ ಕ್ಯಾಂಪ್ಬೆಲ್ ಶಾಯ್ ಹೋಪ್ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್​​ ಸೋಲು ತಪ್ಪಿಸಲು ನೆರವಾದರು.

ಜಾನ್ ಕ್ಯಾಂಪ್​ಬೆಲ್ಜಾನ್ ಕ್ಯಾಂಪ್​ಬೆಲ್
ಜಾನ್ ಕ್ಯಾಂಪ್​ಬೆಲ್

ಭಾರತದ ವಿರುದ್ಧದ (India vs West Indies) 2ನೇ ಟೆಸ್ಟ್ ಪಂದ್ಯದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಓಪನರ್​ ಜಾನ್ ಕ್ಯಾಂಪ್ಬೆಲ್ (Jhon Campbell) ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಸಿಡಿಸಿದರು. ಇದರೊಂದಿಗೆ, ಅವರು ಮುಜುಗರದ ದಾಖಲೆಗೆ ಪಾತ್ರರಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಮೊದಲ ಶತಕ ಸಿಡಿಸಲಯ ಅತಿ ಹೆಚ್ಚು ಇನ್ನಿಂಗ್ಸ್ ಆಡಿದ ವಿಶ್ವದ ಎರಡನೇ ಆರಂಭಿಕ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾದರು. ಭಾರತದ ವಿರುದ್ಧ ಶತಕ ಗಳಿಸಿದ ನಂತರ ಜಾನ್ ಕ್ಯಾಂಪ್ಬೆಲ್ ಈ ನಾಚಿಕೆಗೇಡಿನ ಪಟ್ಟಿಗೆ ಸೇರಿದರು.

ಮೊದಲ ಶತಕ ಸಿಡಿಸಿದ ಕ್ಯಾಂಪ್​ಬೆಲ್

ವೆಸ್ಟ್ ಇಂಡೀಸ್ ಆರಂಭಿಕ ಜಾನ್ ಕ್ಯಾಂಪ್ಬೆಲ್ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ವೆಸ್ಟ್ ಇಂಡೀಸ್ ತಂಡ ಮತ್ತೊಂದು ಇನ್ನಿಂಗ್ಸ್ ಸೋಲಿನ ಸಂಕಷ್ಟದಲ್ಲಿದ್ದಾಗ ಕ್ಯಾಂಪ್ಬೆಲ್ ಶಾಯ್ ಹೋಪ್ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್​​ ಸೋಲು ತಪ್ಪಿಸಲು ನೆರವಾದರು. ಭಾರತದ 518 ರನ್‌ಗಳ ವಿರುದ್ಧ ವೆಸ್ಟ್ ಇಂಡೀಸ್‌ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 248 ರನ್‌ಗಳಿಸಿತು. ಇದರಿಂದಾಗಿ ಪ್ರವಾಸಿ ತಂಡವು ಫಾಲೋ ಆನ್‌ಗೆ ತುತ್ತಾಯಿತು.

ಕಳಪೆ ದಾಖಲೆ ಸೇರಿದ ಕ್ಯಾಂಪ್​ಬೆಲ್

ಫಾಲೋ ಆನ್​​ನಲ್ಲಿ ತಂಡದ ಮೊತ್ತ 32 ಇದ್ದಾಗ ಒಂದಾದ ಕ್ಯಾಂಪ್​ಬೆಲ್ ಹಾಗೂ ಶಾಯ್ ಹೋಪ್​ 3ನೇ ವಿಕೆಟ್ ಜೊತೆಯಾಟದಲ್ಲಿ 177 ರನ್​ ಸೇರಿಸಿ ವಿಂಡೀಸ್​ಗೆ ಚೇತರಿಕೆ ನೀಡಿದರು. ಕಠಿಣ ಪರಿಸ್ಥಿತಿಯಲ್ಲಿ ಭಾರತೀಯ ಬೌಲರ್​​ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕ್ಯಾಂಪ್​ಬೆಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದ್ದು ಶ್ಲಾಘನೀಯ. ಆದರೆ, ಈ ಶತಕದೊಂದಿಗೆ ಕ್ಯಾಂಪ್ಬೆಲ್ ಹೆಸರು ಬೇಡದ ಪಟ್ಟಿಗೆ ಸೇರಿಕೊಂಡಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಮೊದಲ ಶತಕ ಗಳಿಸಲು ಆರಂಭಿಕ ಆಟಗಾರ ಎಂಬ ಕಳಪೆ ದಾಖಲೆಗೆ ಜಾನ್ ಕ್ಯಾಂಪ್‌ಬೆಲ್ ಪಾತ್ರರಾದರು. ಕ್ಯಾಂಪ್​ಬೆಲ್ ತಮ್ಮ 48ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಟ್ರೆವರ್ ಗೊಡ್ಡಾರ್ಡ್ ತಮ್ಮ 58 ನೇ ಇನ್ನಿಂಗ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

3ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್​ನ ಡ್ಯಾರೆನ್ ಗಂಗಾ ಇದ್ದು, 44 ಇನ್ನಿಂಗ್ಸ್ ತೆಗೆದುಕೊಂಡರೆ, 32 ಇನ್ನಿಂಗ್ಸ್ ಬಳಿಕ ಶತಕ ಸಿಡಿಸಿದ್ದ ಬಾಂಗ್ಲಾದೇಶ ಇಮ್ರುಲ್ ಕಾಯಿಸ್ 4ರಲ್ಲಿ, ಆಸ್ಟ್ರೇಲಿಯಾದ ಬಾಬ್ ಸಿಂಪ್ಸನ್ 31 ಇನ್ನಿಂಗ್ಸ್ ತೆಗೆದುಕೊಂಡು ಈ ಕಳಪೆ ದಾಖಲೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

19 ವರ್ಷಗಳ ಬಳಿಕ ಮೊದಲ ಶತಕ

ಜಾನ್ ಕ್ಯಾಂಪ್‌ಬೆಲ್ ತಮ್ಮ ಶತಕದೊಂದಿಗೆ ಹಲವಾರು ಇತರ ದಾಖಲೆಗಳನ್ನು ಸಹ ಸ್ಥಾಪಿಸಿದ್ದಾರೆ. 2023 ರ ನಂತರ ವೆಸ್ಟ್ ಇಂಡೀಸ್ ಪರ ಶತಕ ಬಾರಿಸಿದ ಮೊದಲ ಆರಂಭಿಕ ಆಟಗಾರ ಮತ್ತು 2006ರ ನಂತರ ಭಾರತ ವಿರುದ್ಧ ಶತಕ ಬಾರಿಸಿದ ಮೊದಲ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗಿಂತ ಮೊದಲು, ಡ್ಯಾರನ್ ಗಂಗಾ ಬಾಸ್ಸೆಟೆರೆಯಲ್ಲಿ 135 ರನ್ ಗಳಿಸಿದ್ದೆ, ವಿಂಡೀಸ್ ಆರಂಭಿಕ ಬ್ಯಾಟರ್​​ ಭಾರತದಲ್ಲಿ ಸಿಡಿಸಿದ ಕೊನೆಯ ಶತಕವಾಗಿತ್ತು.

23 ವರ್ಷಗಳ ಬಳಿಕ ಭಾರತದಲ್ಲಿ ಶತಕ

ಭಾರತದಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಶತಕ ಬಾರಿಸಿ 23 ವರ್ಷಗಳಾಗಿತ್ತು. ಇದೀಗ ದೆಹಲಿಯಲ್ಲಿ ಕ್ಯಾಂಪ್‌ಬೆಲ್‌ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ವೇವೆಲ್ ಹಿಂಡ್ಸ್ 2002 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಶತಕ ಸಿಡಿಸಿದ್ದೇ ಕೊನೆಯ ಆರಂಭಿಕ ಬ್ಯಾಟರ್ ಸೆಂಚುರಿಯಾಗಿತ್ತು.

ಸಿಕ್ಸರ್‌ನೊಂದಿಗೆ ತಮ್ಮ ಮೊದಲ ಟೆಸ್ಟ್ ಶತಕ ಗಳಿಸಿದ ವೆಸ್ಟ್ ಇಂಡೀಸ್ ಆಟಗಾರರು

ಕಾಲಿನ್ಸ್ ಕಿಂಗ್

ರಾಬರ್ಟ್ ಸ್ಯಾಮ್ಯುಯೆಲ್ಸ್

ರಿಡ್ಲಿ ಜೇಕಬ್ಸ್

ಶೇನ್ ಡೌರಿಚ್

ಜಾನ್ ಕ್ಯಾಂಪ್‌ಬೆಲ್