Mohammed Siraj: ಮುಂದುವರಿದ ಸಿರಾಜ್ ಬೌಲಿಂಗ್ ಅಬ್ಬರ! 2025ರಲ್ಲಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ ಬೌಲರ್ | Siraj Takes the Lead: Becomes Highest Wicket-Taker in Test Cricket for 2025 | ಕ್ರೀಡೆ

Mohammed Siraj: ಮುಂದುವರಿದ ಸಿರಾಜ್ ಬೌಲಿಂಗ್ ಅಬ್ಬರ! 2025ರಲ್ಲಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ ಬೌಲರ್ | Siraj Takes the Lead: Becomes Highest Wicket-Taker in Test Cricket for 2025 | ಕ್ರೀಡೆ

Last Updated:


214 ಬ್ಯಾಲ್‌ಗಳಲ್ಲಿ 12 ಬೌಂಡರಿ, 2 ಸಿಕ್ಸರ್ಗಳ ಸಹಿತ 103 ರನ್ಸ್ ಗಳಿಸಿದ್ದ ಶಾಯ್ ಹೋಪ್​ ವಿಕೆಟ್ ಪಡೆಯುತ್ತಿದ್ದಂತೆ ಸಿರಾಜ್ ಅವರ ಈ ವರ್ಷದ ವಿಕೆಟ್ ಸಂಖ್ಯೆ 37ಕ್ಕೆ ತಲುಪಿತು. ಈ ಮೂಲಕ 2025ರಲ್ಲಿ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜಾರಬಾನಿಯನ್ನ ಹಿಂದಿಕ್ಕಿದರು

Mohammed SirajMohammed Siraj
Mohammed Siraj

ಭಾರತದ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ಇನಿಂಗ್ಸ್‌ನ 84ನೇ ಓವರ್‌ನ ಐದನೇ ಎಸೆತದಲ್ಲಿ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಶಾಯ್ ಹೋಪ್ (Shai Hope) ಅವರನ್ನು ಬೌಲ್ಡ್ ಮಾಡಿ, ಈ ವರ್ಷದ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಅತಿ ಹೆಚ್ಚು ವಿಕೆಟ್‌ಗಳ ದಾಖಲೆಯನ್ನು ನಿರ್ಮಿಸಿದ್ದಾರೆ.

ಮುಜರಬನಿ ಹಿಂದಿಕ್ಕಿದ ಸಿರಾಜ್

214 ಬ್ಯಾಲ್‌ಗಳಲ್ಲಿ 12 ಬೌಂಡರಿ, 2 ಸಿಕ್ಸರ್ಗಳ ಸಹಿತ 103 ರನ್ಸ್ ಗಳಿಸಿದ್ದ ಶಾಯ್ ಹೋಪ್​ ವಿಕೆಟ್ ಪಡೆಯುತ್ತಿದ್ದಂತೆ ಸಿರಾಜ್ ಅವರ ಈ ವರ್ಷದ ವಿಕೆಟ್ ಸಂಖ್ಯೆ 37ಕ್ಕೆ ತಲುಪಿತು. ಈ ಮೂಲಕ 2025ರಲ್ಲಿ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜಾರಬಾನಿಯನ್ನ ಹಿಂದಿಕ್ಕಿದರು. ಮುಜರಬನಿ 36 ವಿಕೆಟ್‌ ಪಡೆದು ಅಗ್ರಸ್ಥಾನದಲ್ಲಿದ್ದರು. ಇದೀಗ ಸಿರಾಜ್ 8 ಟೆಸ್ಟ್ ಪಂದ್ಯಗಳಲ್ಲಿ (15 ಇನಿಂಗ್ಸ್‌ಗಳು) 37 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಟೇಕರ್ ಆಗಿದ್ದಾರೆ. ಮುಜಾರಬಾನಿ 9 ಪಂದ್ಯಗಳಲ್ಲಿ 36 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (7 ಪಂದ್ಯಗಳಲ್ಲಿ 29 ವಿಕೆಟ್‌ಗಳು) ಮತ್ತು ನಾಥನ್ ಲಿಯನ್ (6 ಪಂದ್ಯಗಳಲ್ಲಿ 24 ವಿಕೆಟ್‌ಗಳು) ಮುಂದಿನ ಸ್ಥಾನಗಳಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಜೊಮೆಲ್ ವ್ಯಾರಿಕನ್ 6 ಪಂದ್ಯಗಳಲ್ಲಿ 23 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್

ಭಾರತದ ಬೌಲರ್‌ಗಳಲ್ಲಿ ಸಿರಾಜ್ ಹೊರೆತುಪಡಿಸಿದರೆ, ಜಸ್‌ಪ್ರೀತ್ ಬುಮ್ರಾ 6 ಪಂದ್ಯಗಳಲ್ಲಿ 20 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ಪ್ರಸಿದ್ಧ್ ಕೃಷ್ಣ 4 ಪಂದ್ಯಗಳಲ್ಲಿ 20 ವಿಕೆಟ್‌ಗಳು (ಬೆಸ್ಟ್ 4/62) ಗಳಿಸಿದ್ದಾರೆ, ರವಿಂದ್ರ ಜಡೇಜಾ 8 ಪಂದ್ಯಗಳಲ್ಲಿ 15 ವಿಕೆಟ್‌ಗಳು (ಬೆಸ್ಟ್ 4/54) ತೆಗೆದುಕೊಂಡಿದ್ದಾರೆ. ಆಕಾಶ್ ದೀಪ್ 3 ಪಂದ್ಯಗಳಲ್ಲಿ 13 ವಿಕೆಟ್‌ಗಳು (ಬೆಸ್ಟ್ 6/99) ಮತ್ತು ವಾಷಿಂಗ್ಟನ್ ಸುಂದರ್ 7 ಪಂದ್ಯಗಳಲ್ಲಿ 10 ವಿಕೆಟ್‌ಗಳು (ಬೆಸ್ಟ್ 4/22) ಗಳಿಸಿದ್ದಾರೆ. ಸಿರಾಜ್‌ರ ಬೆಸ್ಟ್ ಫಿಗರ್ಸ್ 6/70 ಆಗಿದ್ದು, ಇದು ಭಾರತದ ಬೌಲಿಂಗ್ ಬಳಗದಲ್ಲಿ ಟಾಪ್ ಬೌಲರ್ ಆಗಿದ್ದಾರೆ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ 10 ವಿಕೆಟ್

ಸಿರಾಜ್ ಅವರ ಈ ವರ್ಷದ ಟೆಸ್ಟ್ ಪ್ರದರ್ಶನ ಅದ್ಭುತವಾಗಿದೆ. ಇಂಗ್ಲೆಂಡ್ ವಿರುದ್ಧ 5 ಟೆಸ್ಟ್‌ಗಳಲ್ಲಿ 23 ವಿಕೆಟ್‌ಗಳನ್ನು ಪಡೆದು ಟೂರ್ನಿ ಶ್ರೇಷ್ಠ ಬೌಲರ್ ಆಗಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳು ಮತ್ತು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದು ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು.

ಇದನ್ನೂ ಓದಿ: John Campbell: ಭಾರತದ ನೆಲದಲ್ಲಿ 23 ವರ್ಷಗಳ ಬಳಿಕ ಶತಕ! ಆದ್ರೂ ಕಳಪೆ ದಾಖಲೆಗೆ ತುತ್ತಾದ ವಿಂಡೀಸ್ ಓಪನರ್

ಒಟ್ಟು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್ + ODI + T20I) 2025ರಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪಟ್ಟಿಯಲ್ಲಿ ಸಿರಾಜ್ 13ನೇ ಸ್ಥಾನದಲ್ಲಿದ್ದಾರೆ. ಜಿಮ್ಬಾಬ್ವೆಯ ಮುಜಾರಬಾನಿ 29 ಪಂದ್ಯಗಳಲ್ಲಿ 57 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ 19 ಪಂದ್ಯಗಳಲ್ಲಿ 53 ವಿಕೆಟ್‌ಗಳು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಬಹಾರೈನ್‌ರ ರಿಜ್ವಾನ್ ಬುಟ್ 29 T20I ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಭಾರತದ ಕುಲ್‌ದೀಪ್ ಯಾದವ್ 16 ಪಂದ್ಯಗಳಲ್ಲಿ 35 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಭಾರತದ ಪರ ಉತ್ತಮ ಸ್ಥಾನದಲ್ಲಿದ್ದಾರೆ.

ಇನ್ನು ನವೆದೆಹಲಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 518 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ 248ಕ್ಕೆ ಆಲೌಟ್ ಆಗಿ ಫಾಲೋ ಆನ್​ಗೆ ಒಳಪಟ್ಟಿತ್ತು. ಇದೀಗ 2ನೇ ಇನ್ನಿಂಗ್ಸ್​​ನಲ್ಲಿ 390ಕ್ಕೆ ಆಲೌಟ್ ಆಗುವ ಮೂಲಕ ಭಾರತಕ್ಕೆ 121 ರನ್​ಗಳ ಸಾಧಾರಣ ಗುರಿ ನೀಡಿದೆ.