ಟೀಮ್ ಇಂಡಿಯಾ 2025-27ರ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 7 ಪಂದ್ಯಗಳನ್ನಾಡಿದ್ದು 61.90 ಗೆಲುವಿನ ಶೇಕಡಾವಾರು ಹೊಂದಿದೆ. ಆಸ್ಟ್ರೇಲಿಯಾ 100% ಗೆಲುವಿನ ಶೇಕಡಾವಾರು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ 66.67% ಶೇಕಡಾವಾರು ಸಾಧಿಸಿ ಎರಡನೇ ಸ್ಥಾನದಲ್ಲಿದೆ.
WTC 2025-27 ಸೈಕಲ್ ಜೂನ್ 2025ರಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಸರಣಿಯೊಂದಿಗೆ ಆರಂಭವಾಗಿದ್ದು, 2027ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಫೈನಲ್ ನಡೆಯಲಿದೆ. 8 ತಂಡಗಳಲ್ಲಿ ಟಾಪ್-2 ತಂಡಗಳು ಫೈನಲ್‌ಗೆ ಅರ್ಹರಾಗುತ್ತವೆ. ಭಾರತ ತಂಡವು ಈಗಾಗಲೇ 7 ಪಂದ್ಯಗಳನ್ನು ಆಡಿದ್ದು, ನಾಲ್ಕು ಗೆಲುವುಗಳು, ಎರಡು ಸೋಲುಗಳು, ಮತ್ತು ಒಂದು ಡ್ರಾ ಸಾಧಿಸಿದ್ದು, ಒಟ್ಟು 52 ಪಾಯಿಂಟ್‌ಗಳನ್ನು ಪಡೆದಿದೆ. ವೆಸ್ಟ್ ಇಂಡೀಸ್ ಸರಣಿಯ ಗೆಲುವು ಭಾರತದ ಗೆಲುವಿನ ಶೇಕಡಾವಾರನ್ನು ಸುಧಾರಿಸಿದ್ದರೂ, ಇಂಗ್ಲೆಂಡ್ ವಿರುದ್ಧದ ಸೋಲುಗಳು (ಎರಡು) ಟಾಪ್-2 ಸ್ಥಾನಕ್ಕೆ ತಡೆಯಾಗಿವೆ.
ಆಸ್ಟ್ರೇಲಿಯಾ ತಂಡವು WTC 2025-27 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದು, 3 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 36 ಪಾಯಿಂಟ್‌ಗಳು ಮತ್ತು 100% ಗೆಲುವಿನ ಶೇಕಡಾವಾರು ಸಾಧಿಸಿದೆ. ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಸ್ವೀಪ್ ಮಾಡಿತ್ತು.
ಎರಡನೇ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು ಮತ್ತು 1 ಡ್ರಾ ಸಾಧಿಸಿ 16 ಪಾಯಿಂಟ್‌ಗಳೊಂದಿಗೆ 66.67% ಗೆಲುವಿನ ಶೇಕಡಾವಾರು ಹೊಂದಿದೆ. ಸಿಂಹಳೀಯ ಪಡೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಡ್ರಾ ಮಾಡಿಕೊಂಡು, 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.ಭಾರತ ತಂಡವು ಮೂರನೇ ಸ್ಥಾನದಲ್ಲಿದ್ದು, 7 ಪಂದ್ಯಗಳ ನಂತರ 52 ಪಾಯಿಂಟ್‌ಗಳೊಂದಿಗೆ 61.90% ಗೆಲುವಿನ ಶೇಕಡಾವಾರು ಅಂಕಗಳನ್ನ ಹೊಂದಿದೆ.
ಇಂಗ್ಲೆಂಡ್ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, 5 ಪಂದ್ಯಗಳಲ್ಲಿ 2 ಗೆಲುವುಗಳು, 2 ಸೋಲುಗಳು, ಮತ್ತು 1 ಡ್ರಾ ಸಾಧಿಸಿ 26 ಪಾಯಿಂಟ್‌ಗಳೊಂದಿಗೆ 43.33% ಗೆಲುವಿನ ಶೇಕಡಾವಾರು ಹೊಂದಿದೆ. ಐದನೇ ಸ್ಥಾನದಲ್ಲಿ ಬಾಂಗ್ಲಾದೇಶ ತಂಡವಿದ್ದು, 2 ಪಂದ್ಯಗಳಲ್ಲಿ 1 ಸೋಲು ಮತ್ತು 1 ಡ್ರಾ ಸಾಧಿಸಿ 4 ಪಾಯಿಂಟ್‌ಗಳೊಂದಿಗೆ 16.67% ಗೆಲುವಿನ ಶೇಕಡಾವಾರು ಹೊಂದಿದ್ದು. ವೆಸ್ಟ್ ಇಂಡೀಸ್ ತಂಡವು ಆರನೇ ಸ್ಥಾನದಲ್ಲಿದ್ದು, 5 ಪಂದ್ಯಗಳಲ್ಲಿ ಒಂದು ಗೆಲುವುವಿಲ್ಲದೆ 0 ಪಾಯಿಂಟ್‌ಗಳೊಂದಿಗೆ 0% ಗೆಲುವಿನ ಶೇಕಡಾವಾರು ಹೊಂದಿದೆ.
ನ್ಯೂಜಿಲೆಂಡ್, ಪಾಕಿಸ್ತಾನ, ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇನ್ನೂ ಯಾವುದೇ ಪಂದ್ಯಗಳನ್ನು ಆಡಿಲ್ಲ, ಆದ್ದರಿಂದ ಅವುಗಳು 0 ಪಾಯಿಂಟ್‌ಗಳೊಂದಿಗೆ ಕೊನೆಯಲ್ಲಿವೆ. ಪ್ರಸ್ತುತ ಪಾಕಿಸ್ತಾನ-ದಕ್ಷಿಣ ಆಫ್ರಿಕಾ ನಡುವಿನ ಒಂದು ಪಂದ್ಯ ನಡೆಯುತ್ತಿದ್ದು, ಇದರ ಫಲಿತಾಂಶವು ಟೇಬಲ್ ಅನ್ನು ಬದಲಾಯಿಸಬಹುದು.
ಭಾರತ ತಂಡ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ 6 ಸರಣಿಗಳಲ್ಲಿ ತಲಾ 1 ತವರು ಮತ್ತು ವಿದೇಸಿ ಸರಣಿಯನ್ನ ಪೂರ್ಣಗೊಳಿಸಿದೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಟೆಸ್ಟ್ ಸರಣಿಯನ್ನಾಡಲಿದೆ. ಆ ನಂತರ ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ವಿದೇಶಿ ಸರಣಿ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ಆಡಲಿದೆ.
October 14, 2025 12:09 PM IST