ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದು, ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಸತತ ಸರಣಿ ಗೆಲುವಿನ ದಾಖಲೆಯಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ವಿಶ್ವದಾಖಲೆಯನ್ನ ಹಂಚಿಕೊಂಡಿದೆ. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು 121 ರನ್ಗಳ ಗುರಿಯನ್ನು 35.2 ಓವರ್ಗಳಲ್ಲಿ 3 ವಿಕೆಟ್ಗೆ ಚೇಸ್ ಮಾಡಿತು. ಕೆ.ಎಲ್. ರಾಹುಲ್ ಅವರ ಅಜೇಯ ಅರ್ಧಶತಕ (58* ರನ್ಗಳು) ಈ ಗೆಲುವಿನಲ್ಲಿ ನಿರ್ಣಾಯಕವಾಯಿತು.
ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುವ ಮೂಲಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಭಾರತ ತಂಡ ಮೊದಲ ಟೆಸ್ಟ್ ಸರಣಿ ಗೆದ್ದಿದೆ. ಈ ಸರಣಿಯಲ್ಲಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿತು. 2ನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಭಾರತ 518 ರನ್ಗಳಿಗೆ ಡಿಕ್ಲೇರ್ ಮಾಡಿತು, ಯಶಸ್ವಿ ಜೈಸ್ವಾಲ್ (175) ಮತ್ತು ಗಿಲ್ (129) ಶತಕಗಳೊಂದಿಗೆ ಮಿಂಚಿದರೆ. ಕುಲದೀಪ್ ಯಾದವ್ 8 ವಿಕೆಟ್, ಜಡೇಜಾ 4, ಬುಮ್ರಾ 4, ಸಿರಾಜ್ 3 ವಿಕೆಟ್ ಪಡೆದು ಬೌಲಿಂಗ್ನಲ್ಲಿ ಮಿಂಚಿದರು.
ಈ ಗೆಲುವಿನೊಂದಿಗೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 2000ರಿಂದ 2025ರವರೆಗೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದಿದೆ, ಇದು ದಕ್ಷಿಣ ಆಫ್ರಿಕಾದ 1998-2024ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 10 ಸರಣಿ ಗೆಲುವಿನ ದಾಖಲೆಗೆ ಸಮನಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವೂ ಇದೆ. ಕಾಂಗರೂ ಪಡೆ ವೆಸ್ಟ್ ಇಂಡೀಸ್ ವಿರುದ್ಧ 2000-2022ರ ಅವಧಿಯಲ್ಲಿ 9 ಸರಣಿ ಗೆದ್ದಿದೆ. 4ನೇ ಸ್ಥಾನದಲ್ಲೂ ಆಸ್ಟ್ರೇಲಿಯಾ ತಂಡವೇ ಇದ್ದು, ಇಂಗ್ಲೆಂಡ್ ವಿರುದ್ಧ 1989-2003ರ ಅವಧಿಯಲ್ಲಿ ಸತತ 8 ಸರಣಿಗಳಗಳನ್ನ ಗೆದ್ದ ದಾಖಲೆ ಹೊಂದಿದೆ. ಶ್ರೀಲಂಕಾ 5ನೇ ಸ್ಥಾನದಲ್ಲಿದ್ದು, ಜಿಂಬಾಬ್ವೆ ವಿರುದ್ಧ , 1996-2020ರ ಸಮಯದಲ್ಲಿ 8 ಸರಣಿಗಳನ್ನ ಗೆದ್ದಿದೆ.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 2002ರಿಂದ ಇಲ್ಲಿಯವರೆಗೆ 27 ಪಂದ್ಯಗಳಿಂದ (17 ಜಯ, 10 ಡ್ರಾ) ಅಜೇಯವಾಗಿದೆ. ಇಂಗ್ಲೆಂಡ್ ನ್ಯೂಜಿಲ್ಯಾಂಡ್ ವಿರುದ್ಧ ಸೋಲಿಲ್ಲದೆ 47 ಪಂದ್ಯಗಳನ್ನಾಡಿರುವುದು ವಿಶ್ವದಾಖಲೆಯಾಗಿದೆ. 1930 ರಿಂದ-1975ರವರೆಗೆ ನ್ಯೂಜಿಲ್ಯಾಂಡ್ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಭಾರತದ ವೆಸ್ಟ್ ಇಂಡೀಸ್ ವಿರುದ್ಧ 2002ರ ಮೇ ತಿಂಗಳಲ್ಲಿ ಜಮೈಕಾದ ಕಿಂಗ್ಸ್ಟನ್ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಸೋತಿತ್ತು. ಆ ನಂತರ ಈ 27 ಪಂದ್ಯಗಳಲ್ಲಿ 17ರಲ್ಲಿ ಜಯ ಸಾಧಿಸಿದರೆ, 10 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಇಂಗ್ಲೆಂಡ್ vs ನ್ಯೂಜಿಲೆಂಡ್ – 47 ಪಂದ್ಯ- 1930-1975
ಇಂಗ್ಲೆಂಡ್ vs ಪಾಕಿಸ್ತಾನ- 30 ಪಂದ್ಯ-1961-1982
ವೆಸ್ಟ್ ಇಂಡೀಸ್ vs ಇಂಗ್ಲೆಂಡ್ -29 ಪಂದ್ಯ- 1976-1988
ಭಾರತ vs ವೆಸ್ಟ್ ಇಂಡೀಸ್ – 27 ಪಂದ್ಯ- 2002-2025
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ- 24 ಪಂದ್ಯ- 1911-1952
2002-03 >>>ಭಾರತದಲ್ಲಿ ನಡೆದ ಸರಣಿ >>> 2-0
2006 >>>ವೆಸ್ಟ್ ಇಂಡೀಸ್ನಲ್ಲಿ ನಡೆದ ಸರಣಿ>>> 1-0,
2011 >>> ವೆಸ್ಟ್ ಇಂಡೀಸ್ನಲ್ಲಿ ನಡೆದ ಸರಣಿ>>> 1-0
2011-12>>>ಭಾರತದಲ್ಲಿ ನಡೆದ ಸರಣಿ>>> 2-0 ,
2013-14>>>ಭಾರತದಲ್ಲಿ ನಡೆದ ಸರಣಿ>>> 2-0
2016>>>ವೆಸ್ಟ್ ಇಂಡೀಸ್ನಲ್ಲಿ ನಡೆದ ಸರಣಿ>>> 2-0
2018-19>>>ಭಾರತದಲ್ಲಿ ನಡೆದ ಸರಣಿ>>> 2-0
2019>>>ವೆಸ್ಟ್ ಇಂಡೀಸ್ನಲ್ಲಿ ನಡೆದ ಸರಣಿ>>> 2-0
2023>>>ವೆಸ್ಟ್ ಇಂಡೀಸ್ನಲ್ಲಿಸ್ ನಡೆದ ಸರಣಿ>>> 1-0
2025>>>ಭಾರತದಲ್ಲಿ ನಡೆದ ಸರಣಿ>>> 2-0
ಈ ಗೆಲುವುಗಳು ಭಾರತದ ಸ್ಥಿರತೆ ಮತ್ತು ಆಧಿಪತ್ಯವನ್ನು ತೋರಿಸುತ್ತವೆ. ವೆಸ್ಟ್ ಇಂಡೀಸ್ ತಂಡವು ಭಾರತದಲ್ಲಿ ತನ್ನ ಕೊನೆಯ 6 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ಬೇಡದ ದಾಖಲೆಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಭಾರತದ ನೆಲದಲ್ಲಿ ಸತತ 7 ಪಂದ್ಯಗಳನ್ನ ಸೋತ ದಾಖಲೆ ಹೊಂದಿದೆ.
October 14, 2025 1:18 PM IST